ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಡ್ಯೂಟಿ ವೇಳೆ ಸೆಕ್ಯೂರಿಟಿ ಗಾರ್ಡ್‌ ನಿದ್ದೆ-ಸಿಟ್ಟಿಗೆದ್ದ ಮಹಿಳೆಯಿಂದ ಗಾಜಿನ ಬಾಗಿಲು ಪುಡಿ ಪುಡಿ!

ಗ್ರೇಟರ್ ನೋಯ್ಡಾದಲ್ಲಿ ಹೌಸಿಂಗ್ ಸೊಸೈಟಿಗಳ ನಿವಾಸಿಗಳು ಮತ್ತು ಸೆಕ್ಯೂರಿಟಿ ಗಾರ್ಡ್‌ ನಡುವೆ ಆಗಾಗ ಮಾರಾಮಾರಿ ನಡೆಯುತ್ತಿದೆ. ಇತ್ತೀಚೆಗೆ ಮಹಿಳೆಯೊಬ್ಬಳು ಕರ್ತವ್ಯದಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಮಲಗಿದ್ದನ್ನು ಕಂಡು ಕೋಪಗೊಂಡು ಸೊಸೈಟಿಯ ಪ್ರವೇಶದ್ವಾರದ ಗಾಜಿನ ಬಾಗಿಲನ್ನು ಎಳೆದು ಒಡೆದು ಹಾಕಿದ್ದಾಳೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ.

women breaks the door

ನೊಯ್ಡಾ: ಸೆಕ್ಯೂರಿಟಿ ಗಾರ್ಡ್‌ ನಿದ್ದೆ ಮಾಡುತ್ತಿದ್ದದ್ದನ್ನು ಕಂಡು ಮಹಿಳೆಯೊಬ್ಬಳು ಅಪಾರ್ಟ್‌ಮೆಂಟ್‌ನ ಗಾಜಿನ ಬಾಗಿಲನ್ನು ಒಡೆದು ಹಾಕಿರುವ ಘಟನೆ ನೊಯ್ಡಾದಲ್ಲಿ ನಡೆದಿದೆ. ಗ್ರೇಟರ್ ನೊಯ್ಡಾದಲ್ಲಿ ಹೌಸಿಂಗ್ ಸೊಸೈಟಿಗಳ ನಿವಾಸಿಗಳು ಮತ್ತು ಸೆಕ್ಯೂರಿಟಿ ಗಾರ್ಡ್‌ಗಳ ಆಗಾಗ ಜಗಳ ನಡೆಯುತ್ತಿತ್ತು. ಅದರ ಮುಂದುವರಿದ ಭಾಗ ಎಂಬಂತೆ ಪಶ್ಚಿಮದ ಹೌಸಿಂಗ್ ಸೊಸೈಟಿಯಲ್ಲಿ ಸೆಕ್ಯುರಿಟಿ ಗಾರ್ಡ್ ಮಲಗಿದ್ದಾಗ ಮಹಿಳೆಯೊಬ್ಬಳು ದೊಡ್ಡ ಗಾಜಿನ ಬಾಗಿಲನ್ನು ಒಡೆದು ಹಾಕಿದ ವಿಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಗ್ರೇಟರ್ ನೋಯ್ಡಾ ಪಶ್ಚಿಮದ ಬಿಸಾರ್ಖ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಪ್ರದೇಶದಲ್ಲಿರುವ ನಿರಾಲಾ ಎಸ್ಟೇಟ್ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮಹಿಳೆ ಬುಧವಾರ (ಜನವರಿ 22) ಮುಂಜಾನೆ ಕಟ್ಟಡದ ಒಳಗೆ ಬಂದಿದ್ದಾಳೆ. ಸಿಸಿಟಿವಿ ವಿಡಿಯೊದಲ್ಲಿ ಮಹಿಳೆ ಕಟ್ಟಡದ ಪ್ರವೇಶ ದ್ವಾರದ ಬಳಿ ಬಂದಾಗ ತಡರಾತ್ರಿ ಸುಮಾರು 2 ಗಂಟೆಯಾಗಿದ್ದು, ಆ ವೇಳೆ ಕರ್ತವ್ಯದಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಮಲಗಿದ್ದಾನಂತೆ.



ಆಗ ಮಹಿಳೆ ಮಲಗಿದ್ದ ಸೆಕ್ಯೂರಿಟಿ ಗಾರ್ಡ್ ಅನ್ನು ನೋಡಿ ಕೋಪಗೊಂಡು ಸಿಬ್ಬಂದಿಯನ್ನು ಎಬ್ಬಿಸುವ ಬದಲು, ಉದ್ದೇಶಪೂರ್ವಕವಾಗಿ ಕಟ್ಟಡದ ಪ್ರವೇಶದ್ವಾರದಲ್ಲಿರುವ ದೊಡ್ಡ ಗಾಜಿನ ಬಾಗಿಲನ್ನು ರಭಸದಲ್ಲಿ ಎಳೆದು ಅದನ್ನು ಒಡೆದು ಹಾಕಿದ್ದಾಳೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಮಹಿಳೆ ಎರಡು ಮೂರು ಬಾರಿ ರಭಸವಾಗಿ ಎಳೆಯುತ್ತಾ ಬಾಗಿಲು ತೆರೆಯುವುದು ಸೆರೆಯಾಗಿದೆ. ನಂತರ ಗಾಜಿನ ಬಾಗಿಲು ಒಡೆದು ಚೂರಾಗಿದೆ ಕೆಳಗೆ ಬಿದ್ದಿವೆ.

ಗಾಜಿನ ಬಾಗಿಲು ಒಡೆದ ಶಬ್ದ ಕೇಳಿದ ನಂತರ ಸೆಕ್ಯೂರಿಟಿ ಗಾರ್ಡ್ ಎಚ್ಚರಗೊಂಡಿದ್ದಾನೆ. ಆಗ ಮಹಿಳೆ ಸ್ಥಳದಿಂದ ಪರಾರಿಯಾಗಿದ್ದಾಳೆ. ವೈರಲ್ ವಿಡಿಯೊದಲ್ಲಿ ಸೆಕ್ಯುರಿಟಿ ಗಾರ್ಡ್ ಅವರು ಕರ್ತವ್ಯದ ವೇಳೆ ಮಲಗಿದ್ದಾನೆ ಎಂದು ಆರೋಪಿಸಲಾಗಿದೆ. ಮತ್ತೊಂದು ವಿಡಿಯೊದಲ್ಲಿ, ಅದೇ ಮಹಿಳೆ ಲಿಫ್ಟ್‌ನೊಳಗೆ ನಿಂದಿಸುವುದು ಮತ್ತು ಕಿರುಚುವುದು ಸೆರೆಯಾಗಿದೆ.

ಈ ಸುದ್ದಿಯನ್ನೂ ಓದಿ:Assault Case: ಇಟ್ಟಿಗೆ ಭಟ್ಟಿಯಲ್ಲಿ ಕಾರ್ಮಿಕರ ಮೇಲೆ ಹಲ್ಲೆ ಪ್ರಕರಣ; ಮತ್ತೊಂದು ವಿಡಿಯೊ ವೈರಲ್

ಪೊಲೀಸರು ವೈರಲ್ ಆಗಿರುವ ವಿಡಿಯೊವನ್ನು ಪರಿಶೀಲಿಸಿದ್ದಾರೆ. ಹಾಗೂ ಈ ಬಗ್ಗೆ ಬಿಸ್ರಾಖ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.