ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hanumantha: ಬಾಯ್ಸ್ vs ಗರ್ಲ್ಸ್ ಶೋನಿಂದ ಹನುಮಂತ ಮಿಸ್ಸಿಂಗ್: ಹೊರ ನಡೆದ್ರಾ ಬಿಗ್ ಬಾಸ್ ವಿನ್ನರ್?

ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಸೀಸನ್ 11 ಕಾರ್ಯಕ್ರಮ ಮುಗಿದ ಬಳಿಕ ಹೊಸದಾಗಿ ವೀಕೆಂಡ್ನಲ್ಲಿ ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋ ಶುರುವಾಗಿರುವುದು ಗೊತ್ತೇ ಇದೆ. ಈ ಶೋನ ಓಪನಿಂಗ್ ಎಪಿಸೋಡ್‌ನಲ್ಲಿ ಹನುಮಂತು ಕಾಣಿಸಿಕೊಂಡಿದ್ದು ಬಿಟ್ಟರೆ ಎರಡನೇ ವಾರದಿಂದಲೇ ನಾಪತ್ತೆಯಾಗಿದ್ದಾರೆ.

Hanumantha Lamani

ಹಳ್ಳಿ ಹೈದ ಹನುಮಂತ ಲಮಾಣಿ ಬಿಗ್ ಬಾಸ್ ಕನ್ನಡ ಸೀಸನ್ 11 ಟ್ರೋಫಿ ಗೆದ್ದ ಬಳಿಕ ಬೇಡಿಕೆ ಹೆಚ್ಚಾಗಿದೆ. ಎಲ್ಲೇ ಕಂಡರು ಸೆಲ್ಫಿಗಾಗಿ ಫ್ಯಾನ್ಸ್ ಮುಗಿಬೀಳುತ್ತಿದ್ದಾರೆ. ಮೊನ್ನೆಯಷ್ಟೆ ಟ್ರೋಫಿ ಹಿಡಿದುಕೊಂಡು ಹುಟ್ಟೂರಿಗೆ ಹೋದಾಗ ಇವರನ್ನು ನೋಡಲು ಜನಸಾಗರವೇ ಬಂದಿತ್ತು. ಹೀಗೆ ಹನುಮಂತನ ಹವಾ ಕರುನಾಡಲ್ಲಿ ಭರ್ಜರಿ ಆಗೇ ಇದೆ. ಸಿನಿಮಾ ಆಫರ್​ಗಳು ಕೂಡ ಬರುತ್ತಿವೆಯಂತೆ. ಇವರು ರಾಜಕೀಯಕ್ಕೂ ಬರುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಇವೆಲ್ಲದರ ಮಧ್ಯೆ ಬಾಯ್ಸ್ vs ಗರ್ಲ್ಸ್ ಶೋನಲ್ಲಿ ಭಾಗವಹಿಸಿದ್ದ ಹನುಮಂತ ಈಗ ಕಳೆದ ಎರಡು ವಾರಗಳ ಕಾರ್ಯಕ್ರಮದಿಂದ ಮಿಸ್ ಆಗಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಸೀಸನ್ 11 ಕಾರ್ಯಕ್ರಮ ಮುಗಿದ ಬಳಿಕ ಹೊಸದಾಗಿ ವೀಕೆಂಡ್​ನಲ್ಲಿ ಬಾಯ್ಸ್ vs ಗರ್ಲ್ಸ್​ ರಿಯಾಲಿಟಿ ಶೋ ಶುರುವಾಗಿರುವುದು ಗೊತ್ತೇ ಇದೆ. ಈಗಾಗಲೇ ಮೂರು ವಾರ ಈ ಪ್ರೊಗ್ರಾಂ ಟೆಲಿಕಾಸ್ಟ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ. ಬಹುತೇಕ ಬಿಗ್ ಬಾಸ್ ಸ್ಪರ್ಧಿಗಳಿಂದಲೇ ಕೂಡಿರುವ ಈ ಶೋ ಸಖತ್ ಕಿಕ್ ಕೊಡುತ್ತಿದೆ. ಹುಡುಗರು ಹುಡುಗಿಯರಿಗೆ ಹಾಕುವ ಚಾಲೆಂಜ್ ಮತ್ತು ಹುಡುಗಿಯರು ಹುಡುಗರಿಗೆ ಹಾಕುವ ಚಾಲೆಂಜ್ ಪ್ರೇಕ್ಷಕರನ್ನು ನಕ್ಕು ನಗಿಸುತ್ತಿದೆ.

ಈ ಶೋನ ಓಪನಿಂಗ್ ಎಪಿಸೋಡ್‌ನಲ್ಲಿ ದೋಸ್ತಾ ಧನರಾಜ್‌ ಆಚಾರ್ ಜೊತೆ ಮಜಾ ಮಾಡ್ಕೊಂಡು, ಹುಡುಗಿಯರ ಕಾಲು ಎಳೆಯುತ್ತಿದ್ದ ಹನುಮಂತು ಎರಡನೇ ವಾರದಿಂದಲೇ ಕಾಣಿಸುತ್ತಿಲ್ಲ. ಬಿಗ್ ಬಾಸ್ ವಿನ್ನರ್ ಅಲ್ವಾ.. ಅಲ್ಲಿ-ಇಲ್ಲಿ ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ಹೋಗಿರಬಹುದು.. ಬ್ಯುಸಿ ಇರಬೇಕು ಅಂದುಕೊಂಡರೆ ಮೂರನೇ ವಾರ ಕೂಡ ಇವರು ಬಂದಿಲ್ಲ. ಹೀಗಾಗಿ ಇವರು ಬಾಯ್ಸ್ vs ಗರ್ಲ್ಸ್ ಶೋನಿಂದ ಹೊರನಡೆದಿದ್ದಾರ ಎಂದು ವೀಕ್ಷಕರಿಗೆ ಅನುಮಾನಗಳು ಹುಟ್ಟಿಕೊಂಡಿದೆ.



ಮೂಲಗಳ ಪ್ರಕಾರ, ಎರಡನೇ ವಾರದ ಎಪಿಸೋಡ್‌ಗೆ ನಾನು ಇರುವುದಿಲ್ಲ ಎಂದು ಹನುಮಂತ ಮೊದಲೇ ಟೀಮ್​ಗೆ ಮಾಹಿತಿ ನೀಡಿದ್ದರಂತೆ. ಆದರೆ, ಮೂರನೇ ವಾರದ ಎಪಿಸೋಡ್‌ಗೂ ಹನುಮಂತ ಲಮಾಣಿ ಹಾಜರಿ ಹಾಕಿಲ್ಲ. ಆದರೆ, ಇವರು ಬಾಯ್ಸ್ ವರ್ಸಸ್ ಗರ್ಲ್ಸ್ ಶೋಗೆ ಗುಡ್‌ ಬೈ ಹೇಳಿಲ್ಲ ಎಂದು ಕೂಡ ಹೇಳಲಾಗಿದೆ.

ಹನುಮಂತು ವಿನ್ನರ್ ಆಗಿರುವ ಕಾರಣ ತಮ್ಮ ಹುಟ್ಟೂರು ಹಾಗೂ ಉತ್ತರ ಕರ್ನಾಟಕದಲ್ಲಿ ಅನೇಕ ಕಾರ್ಯಕ್ರಮಗಳಿಗೆ ವಿಶೇಷ ಅತಿಥಿಯಾಗಿ ಹೋಗುತ್ತಿದ್ದಾರೆ ಹಾಗೂ ಹಾಡುತ್ತಿದ್ದಾರೆ. ಬೀದರ್ ಹಾಗೂ ಕಲಬುರ್ಗಿಯಲ್ಲಿ ಹನುಮಂತ ಲಮಾಣಿ ಅನೇಕ ಕಾರ್ಯಕ್ರಮಗಳನ್ನ ನೀಡಿದ್ದಾರೆ. ಈ ಕಾರ್ಯಕ್ರಮಗಳಿಗೆ ಹಾಜರ್ ಆಗಬೇಕಿದ್ದ ಕಾರಣ ಬಾಯ್ಸ್ ವರ್ಸಸ್ ಗರ್ಲ್ಸ್ ಶೋಗೆ ಗೈರಾಗಿದ್ದಾರೆ ಎಂದು ಹೇಳಲಾಗಿದೆ. ಈ ಶೋನಿಂದ ಹನುಮಂತನನ್ನು ಅಭಿಮಾನಿಗಳಂತು ತುಂಬಾನೆ ಮಿಸ್ ಮಾಡಿಕೊಳ್ಳುತ್ತಿದ್ದಾರೆ.

Divya Uruduga-Aravind KP: ಹಸೆಮಣೆ ಏರಲು ಸಜ್ಜಾದ ಅರವಿಂದ್-ದಿವ್ಯಾ ಉರುಡುಗ: ಮದುವೆ ಯಾವಾಗ?