Divya Uruduga-Aravind KP: ಹಸೆಮಣೆ ಏರಲು ಸಜ್ಜಾದ ಅರವಿಂದ್-ದಿವ್ಯಾ ಉರುಡುಗ: ಮದುವೆ ಯಾವಾಗ?
ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿಗಳಾದ ಅರವಿಂದ್ ಕೆಪಿ ಹಾಗೂ ದಿವ್ಯಾ ಉರುಡುಗ ಹಾಗಿಲ್ಲ, ಇವರ ಸ್ಟೋರಿ ಎಲ್ಲದಕ್ಕಿಂತ ಭಿನ್ನವಾಗಿದೆ. ಇವರ ಲವ್ಗೆ ಈಗ ನಾಲ್ಕು ವರ್ಷಗಳು ತುಂಬಿವೆ. ಪ್ರತಿಬಾರಿ ಇವರ ಸಿಕ್ಕಾಗೆಲ್ಲ ಕೇಳುವ ಒಂದೇ ಪ್ರಶ್ನೆ ಮದುವೆ ಯಾವಾಗೆಂದು. ಇದಕ್ಕೀಗ ಈ ಜೋಡಿ ಉತ್ತರ ಕೊಟ್ಟಿದೆ.

divya uruduga aravind kp

ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಹುಟ್ಟುವುದು ಕಾಮನ್. ಆದರೆ ಅದನ್ನು ಮುಂದುವರೆಸಿಕೊಂಡು ಹೋಗುವವರು ಕೆಲವೇ ಮಂದಿ. ಹೀಗೆ ಲವ್ ಮಾಡಿ ಯಶಸ್ವಿಯಾದವರ ಸಂಖ್ಯೆ ತೀರಾ ಕಡಿಮೆ. ಒಳಗಿರುವಾಗ ಸದಾ ಜೊತೆಗಿದ್ದ ಜೋಡಿ ಬಿಗ್ ಬಾಸ್ ಶೋ ಮುಗಿದ್ಮೇಲೆ ಮಾತುಕತೆ ಇಲ್ಲದೇ, ದೂರ ಆಗಿರುವ ಸಾಕಷ್ಟು ಉದಾಹರಣೆಗಳಿವೆ. ಆದರೆ, ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿಗಳಾದ ಅರವಿಂದ್ ಕೆಪಿ ಹಾಗೂ ದಿವ್ಯಾ ಉರುಡುಗ ಹಾಗಿಲ್ಲ, ಇವರ ಸ್ಟೋರಿ ಎಲ್ಲದಕ್ಕಿಂತ ಭಿನ್ನವಾಗಿದೆ. ಇವರ ಲವ್ಗೆ ಈಗ ನಾಲ್ಕು ವರ್ಷಗಳು ತುಂಬಿವೆ. ಪ್ರತಿಬಾರಿ ಇವರ ಸಿಕ್ಕಾಗೆಲ್ಲ ಕೇಳುವ ಒಂದೇ ಪ್ರಶ್ನೆ ಮದುವೆ ಯಾವಾಗೆಂದು. ಇದಕ್ಕೀಗ ಈ ಜೋಡಿ ಉತ್ತರ ಕೊಟ್ಟಿದೆ.
ಬಿಗ್ ಬಾಸ್ ಮುಗಿದ ಬಳಿಕ ಕಿರುತೆರೆಯ ಯಾವುದೇ ಕಾರ್ಯಕ್ರಮ ಇರಲಿ, ಮದುವೆ ಇರಲಿ, ಕ್ರಿಕೆಟ್ ಇರಲಿ, ಸಿನಿಮಾ ಸಂಬಂಧ ಯಾವುದೇ ಕಾರ್ಯಕ್ರಮ ಇರಲಿ, ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ. ಪಿ ಇಬ್ಬರು ಜೊತೆಯಾಗಿ ಭಾಗಿಯಾಗುತ್ತಿದ್ದರು. ಅಲ್ಲದೇ ಇಬ್ಬರು ಜೊತೆಯಾಗಿ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. ಇನ್ನು ಇಬ್ಬರ ಹುಟ್ಟುಹಬ್ಬ ಆಚರಣೆ ಹಾಗೂ ಸೋಶಿಯಲ್ ಮೀಡಿಯಾದ ಪೋಸ್ಟ್ನಲ್ಲಿ ದಿವ್ಯಾ ಜೊತೆ ಅರವಿಂದ್ ಇದ್ದೇ ಇರುತ್ತಾರೆ.
ಇದೀಗ ದಿವ್ಯಾ ಉರುಡುಗ ಹಾಗೂ ಅರವಿಂದ್ ಫ್ಯಾನ್ಸ್ಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಅರ್ವ್ಯಾ ಜೋಡಿ ಯಾವಾಗ ಮದುವೆ ಆಗ್ತಾರೆ ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ನಟ ಡಾಲಿ ಧನಂಜಯ ಹಾಗೂ ಧನ್ಯತಾ ಮದುವೆಗೆ ದಿವ್ಯಾ ಉರುಡುಗ ಹಾಗೂ ಅರವಿಂದ್ ಜೋಡಿಯಾಗಿ ಕೈ ಹಿಡಿದುಕೊಂಡು ಬಂದಿದ್ದರು. ಅವರ ಮದುವೆಯಲ್ಲಿ ಭಾಗಿಯಾದ ಈ ಜೋಡಿ ಮದುವೆ ಯಾವಾಗ ಎಂದು ಹೇಳಿಕೊಂಡಿದ್ದಾರೆ. "ಮದುವೆ ಯಾವಾಗ" ಅನ್ನೋ ಪ್ರಶ್ನೆ ಮಾಧ್ಯಮದವರಿಂದ ಎದುರಾದಾಗ ಇದಕ್ಕೆ "ಶೀಘ್ರದಲ್ಲಿಯೇ ಇದೆ, ನಿಮಗೆ ಹೇಳದೇ ಮದುವೆ ಆಗುವುದಿಲ್ಲ. ಅತೀ ಶೀಘ್ರದಲ್ಲೆ ಮದುವೆಯಾಗಲಿದ್ದೇವೆ" ಎಂದು ದಿವ್ಯಾ ಉರುಡುಗ ಮತ್ತು ಅರವಿಂದ್ ನಗುತ್ತಲೇ ಉತ್ತರಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಾಗಲಿ, ಯಾವುದೇ ಕಾರ್ಯಕ್ರಮದಲ್ಲಾಗಲಿ ಈ ಜೋಡಿ ಜೊತೆಯಾಗಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಅರವಿಂದ್ ಕೆಪಿ ಬೈಕ್ ರ್ಯಾಲಿಗಳಲ್ಲೂ ದಿವ್ಯಾ ಹಾಜರಿರುತ್ತಾರೆ. ಇಬ್ಬರು ಜೊತೆಯಾಗಿ ಅರ್ಧಂಬರ್ಧ ಪ್ರೇಮ ಕಥೆ ಎನ್ನುವ ಸಿನಿಮಾ ಕೂಡ ಮಾಡಿದ್ದರು. ದಿವ್ಯಾ ಉರುಡುಗ ಸದ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ನಿನಗಾಗಿ ಧಾರಾವಾಹಿಯಲ್ಲಿ ಸೂಪರ್ ಸ್ಟಾರ್ ರಚನಾ ಆಗಿ ಅಭಿನಯಿಸುತ್ತಿದ್ದಾರೆ. ಇನ್ನು ಅರವಿಂದ್ ಕೆಪಿ ಸದ್ಯ ಬೈಕ್ ರ್ಯಾಲಿಗಳಲ್ಲೇ ಬ್ಯುಸಿಯಾಗಿದ್ದಾರೆ.
Ugramm Manju: ಎಲ್ಲವೂ ಸುದೀಪ್ ಕೃಪೆ: ಹೆಸರು ಬದಲಾಯಿಸಿಕೊಂಡ ಉಗ್ರಂ ಮಂಜು