ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sunita Ahuja: ಬಾಲಿವುಡ್ ನಟ ಗೋವಿಂದಾ ವಿಚ್ಛೇದನ ವದಂತಿಗೆ ಬ್ರೇಕ್‌? ಪತ್ನಿ ಸುನೀತಾ ಸ್ಪಷ್ಟನೆ ಏನು?

Actor Govinda's divorce rumors: ಪತ್ನಿ ಸುನೀತಾ ಅವರಿಂದ ನಟ ಗೋವಿಂದಾ ಅವರು ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿ ವೈರಲ್ ಕೂಡ ಆಗಿತ್ತು..ಮುಂಬೈನ ನಿವಾಸದಲ್ಲಿ ಇಬ್ಬರು ಒಟ್ಟಿಗೆ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ತಮ್ಮ ಮನೆಯ ಹೊರಗೆ ಪತ್ನಿ ಸುನೀತಾ ಅವರ ಜೊತೆ ನಿಂತು ಫೋಟೊಗೆ ಪೋಸ್ ನೀಡಿದ್ದಾರೆ. ಎಲ್ಲರಿಗೂ ಗಣೇಶೋತ್ಸವದ ಶುಭಾಶಯಗಳನ್ನು ಕೋರಿದ್ದಾರೆ. ಈ ಮೂಲಕ ಗೋವಿಂದಾ ಅವರ ಪತ್ನಿ ಸುನೀತಾ ಅವರು ಹೇಳಿಕೆಯೊಂದನ್ನು ನೀಡಿದ್ದಾರೆ.

ನವದೆಹಲಿ: ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಹಿಟ್ ಸಿನಿಮಾ ನೀಡಿ ಖ್ಯಾತಿ ಪಡೆದ ನಟ ಗೋವಿಂದಾ (Govinda) ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಇಲ್ಜಾಮ್', 'ಮಾರ್ಟೆ ದಮ್ ತಕ್', 'ಸ್ವರ್ಗ್', 'ರಾಜಾಬಾಬು' , 'ದೀವಾನ ಮಸ್ತಾನಾ', 'ಹೀರೋ ನಂ.1', 'ಪಾರ್ಟ್ ನರ್', 'ಹಾಲಿ ಡೇ' ಸಿನಿಮಾ ಮೂಲಕ ಖ್ಯಾತರಾದ ನಟ ಗೋವಿಂದಾ ಅವರು ತಮ್ಮ ಅದ್ಭುತವಾದ ಹಾಸ್ಯ ಮಿಶ್ರಿತ ಅಭಿನಯದಿಂದಲೇ ಮನೆ ಮಾತಾಗಿದ್ದಾರೆ. ಬಳಿಕ ಸಿನಿಮಾ ರಂಗದ ಆಫರ್ ಕಡಿಮೆಯಾಗಿದ್ದು ನಟನೆಯಿಂದ ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತಾವು ಸಕ್ರಿ ಯವಾಗಿ ತೊಡಗಿಸಿಕೊಂಡರು. ತಮ್ಮ ಪತ್ನಿ ಸುನೀತಾ ಅವರಿಂದ ನಟ ಗೋವಿಂದ ಅವರು ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿ ವೈರಲ್ ಕೂಡ ಆಗಿತ್ತು. ಇದರ ಬೆನ್ನಲ್ಲೆ ನಟ ಗೋವಿಂದಾ ಹಾಗೂ ಅವರ ಪತ್ನಿ ಸುನೀತಾ ಗಣೇಶ ಹಬ್ಬದ ದಿನ ಜೊತೆಯಲ್ಲಿ ಕಾಣಿಸಿಕೊಂಡಿದ್ದು ಅವರ ಕೆಲ ಫೋಟೊ ಕೂಡ ವೈರಲ್ ಆಗಿದೆ. ಈ‌ ಮೂಲಕ ಅವರ ವಿವಾಹ ವಿಚ್ಛೇದನ ವಿಚಾರವು ಮತ್ತೆ ಮುನ್ನಲೆಗೆ ಬಂದಿದ್ದು ಬಿಗ್ ಅಪ್ಡೇಟ್ ಮಾಹಿತಿ ಒಂದು ತಿಳಿದುಬಂದಿದೆ.

ನಟ ಗೋವಿಂದಾ ಮತ್ತು ಅವರ ಪತ್ನಿ ಸುನೀತಾ ಅವರು ಮುಂಬೈನ ತಮ್ಮ ನಿವಾಸದಲ್ಲಿ ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಗೋವಿಂದ ಮತ್ತು ಸುನೀತಾ ಅವರು ಒಟ್ಟಿಗೆ ಗಣೇಶೋತ್ಸವ ಆಚರಿಸಿಕೊಂಡಿದ್ದು ಕೆಲವು ವಿಡಿಯೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದನ್ನು ಕಾಣಬಹುದು. ಈ ಮೂಲಕ ಇವರಿಬ್ಬರು ಮತ್ತೆ ಒಂದಾಗಿದ್ದಾರೆ. ಈಗ ಅವರ ಬದುಕಲ್ಲಿ ಉಂಟಾದ ವೈಮನಸ್ಸು ದೂರಾಗಿದೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.

ನಟ ಗೋವಿಂದಾ ಅವರು ಸುನೀತಾ ಅಹುಜಾ ಅವರನ್ನು 1987ರಲ್ಲಿ ವಿವಾಹವಾಗಿದ್ದು ಅವರಿಬ್ಬರು ಅನೇಕ ವರ್ಷ ಅನ್ಯೋನ್ಯ ವಾಗಿ ಇದ್ದರು. ಆದರೆ ಬಳಿಕ ವೈಮನಸ್ಸು ಉಂಟಾಗಿ ಇಬ್ಬರು ಕೂಡ ದೂರಾಗುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಮುಂಬೈನ ನಿವಾಸದಲ್ಲಿ ಇಬ್ಬರು ಒಟ್ಟಿಗೆ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ತಮ್ಮ ಮನೆಯ ಹೊರಗೆ ಪತ್ನಿ ಸುನೀತಾ ಅವರ ಜೊತೆ ನಿಂತು ಫೋಟೊಗೆ ಪೋಸ್ ನೀಡಿದ್ದಾರೆ. ಎಲ್ಲ ರಿಗೂ ಗಣೇಶೋತ್ಸವದ ಶುಭಾಶಯ ಗಳನ್ನು ಕೋರಿದ್ದಾರೆ. ಈ ಮೂಲಕ ಗೋವಿಂದ ಅವರ ಪತ್ನಿ ಸುನೀತಾ ಅವರು ಹೇಳಿಕೆ ಯೊಂದನ್ನು ನೀಡಿದ್ದಾರೆ.

ಇದನ್ನು ಓದಿ:Su From So Movie: ಬಾಕ್ಸ್ ಆಫೀಸ್‌ನಲ್ಲಿ ರಕ್ಷಿತ್‌ ಶೆಟ್ಟಿ ಸಿನಿಮಾ ಹಿಂದಿಕ್ಕಿದ ʼಸು ಫ್ರಮ್ ಸೋʼ

ಗಣೇಶೋತ್ಸವ ವೇಳೆಯಲ್ಲಿ ಸುನೀತಾ ಅವರು ಮಾತನಾಡಿ, ಈಗ ನಾವು ಚೆನ್ನಾಗಿ ಇದ್ದೇವೆ. ನಮ್ಮನ್ನು ಯಾರು ಕೂಡ ಬೇರ್ಪಡಿಸಲು ಸಾಧ್ಯವಿಲ್ಲ. ಗೋವಿಂದಾ ಅವರು ನನ್ನವರು ನಾವು ಈಗ ಬಹಳ ಖುಷಿಯಿಂದ ಇದ್ದೇವೆ. ಹೀಗಾಗಿ ನಮ್ಮ ಬಗ್ಗೆ ಯಾರು ಕೆಟ್ಟದಾಗಿ ಮಾತನಾಡಬೇಡಿ. ನನಗಿಂತ ಸುಂದರವಾದ ಹೆಂಡತಿ ನಟ ಗೋವಿಂದ ಅವರಿಗೆ ಸಿಗುತ್ತಾರಾ? ಎಂದು ಸುನೀತಾ ಅವರು ಹೇಳಿಕೆ ನೀಡಿದ್ದಾರೆ. ಈ ಮೂಲಕ ಇವರಿಬ್ಬರು ಮ್ಯಾಚಿಂಗ್ ಬಟ್ಟೆ ತೊಟ್ಟು ಖುಷಿ ಪಟ್ಟ ವಿಡಿಯೊ ಕೂಡ ಹೈಲೈಟ್ ಆಗಿದೆ.

ನಟ ಗೋವಿಂದಾ ಅವರು ಕಾಮಿಡಿ ಕಿಕ್ ಇರುವ ಇವರ ಸಿನಿಮಾ ಗಳು 80-90ರ ದಶಕದಲ್ಲಿ ಬ್ಲಾಕ್ ಬಸ್ಟರ್ ಸಕಸ್ಸ್ ಕೂಡ ನೀಡುತ್ತಿತ್ತು. ಹೀಗಾಗಿ ಇವರ ಅಭಿನಯಕ್ಕೆ ಅನೇಕ ಗೌರವ ಪುರಸ್ಕಾರ ಕೂಡ ಲಭಿಸಿತ್ತು. ಕಾಲ ಕ್ರಮೇಣ ಇವರಿಗೆ ಸಿನಿಮಾ ಆಫರ್ ಬರುವ ಪ್ರಮಾಣ ಕಡಿಮೆಯಾಗಿದ್ದು ರಿಯಾಲಿಟಿ ಶೋ ಜಡ್ಜ್ ಆಗಿ ಖ್ಯಾತಿ ಪಡೆದರು. ಅನಂತರ ರಾಜಕೀಯ ಕ್ಷೇತ್ರದಲ್ಲಿ ಕೂಡ ಇವರು ಬಹಳ ಸಕ್ರಿಯವಾಗಿ ಪಾಲ್ಗೊಂಡು ಫೇಮಸ್ ಆದರು. ವಿಚ್ಛೇದನ ವದಂತಿ ದೂರಾಗಿದ್ದು ಅವರ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.