ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Ambarish: ಸ್ಯಾಂಡಲ್‌ವುಡ್‌ ಜಲೀಲನಿಗೆ ಇಂದು 73 ನೇ ವರ್ಷದ ಜನ್ಮದಿನ; ಪತಿ ನೆನೆದು ಭಾವುಕ ಪೋಸ್ಟ್‌ ಹಾಕಿದ ಸುಮಲತಾ

ಕನ್ನಡ ಚಿತ್ರರಂಗದ ಅದ್ಬುತ ನಟ ರೆಬೆಲ್‌ ಸ್ಟಾರ್‌ ಅಂಬರೀಶ್‌ ಅವರು ಇಂದು ಬದುಕಿದ್ದಿದ್ದರೆ, ಇಂದಿಗೆ 73 ನೇ ವರ್ಷ. ಮೇ 29 ಅಂಬರೀಷ್‌ ಅಭಿಮಾನಿಗಳಿಗೆ ಹಬ್ಬದ ದಿನ. ಇಂದು ರೆಬಲ್‌ ಸ್ಟಾರ್‌ ಅಂಬರೀಷ್‌ ಅವರ ಹುಟ್ಟಿದ ದಿನ. ಅಂಬರೀಷ್‌ ನಮ್ಮ ಜೊತೆಗಿಲ್ಲ. ಅದೆಷ್ಟೋ ಅಭಿಮಾನಿಗಳು ಅಂಬರೀಷ್‌ ಅವರ ನೆನಪಿನಲ್ಲಿಯೇ ಇದ್ದಾರೆ.

ಬೆಂಗಳೂರು: ಕನ್ನಡ ಚಿತ್ರರಂಗದ ಅದ್ಬುತ ನಟ ರೆಬೆಲ್‌ ಸ್ಟಾರ್‌ ಅಂಬರೀಶ್‌ (Dr Ambarish) ಅವರು ಇಂದು ಬದುಕಿದ್ದಿದ್ದರೆ, ಇಂದಿಗೆ 73 ನೇ ವರ್ಷ. ಮೇ 29 ಅಂಬರೀಷ್‌ ಅಭಿಮಾನಿಗಳಿಗೆ ಹಬ್ಬದ ದಿನ. ಇಂದು ರೆಬಲ್‌ ಸ್ಟಾರ್‌ ಅಂಬರೀಷ್‌ ಅವರ ಹುಟ್ಟಿದ ದಿನ. ಅಂಬರೀಷ್‌ ನಮ್ಮ ಜೊತೆಗಿಲ್ಲ. ಅದೆಷ್ಟೋ ಅಭಿಮಾನಿಗಳು ಅಂಬರೀಷ್‌ ಅವರ ನೆನಪಿನಲ್ಲಿಯೇ ಇದ್ದಾರೆ. ಅಂಬರೀಷ್‌ ಸಿನಿಮಾಗಳು ಎಂದರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಇಂದು ಅವರ ಅಭಿಮಾನಿಗಳು ಹಲವೆಡೆ ಹುಟ್ಟು ಹಬ್ಬವನ್ನು ಆಚರಿಸಲಿದ್ದಾರೆ. ಅಂಬರೀಷ್‌ ಪತ್ನಿ ಸುಮಲತಾ (Sumalata) ಅವರು ಅಂಬಿ ಹುಟ್ಟಿದ ದಿನಕ್ಕೆ ವಿಶೇಷವಾಗಿ ಪೋಸ್ಟ್‌ ಒಂದನ್ನು ಹಾಕಿದ್ದಾರೆ.

ಇಂದು, ನಿಮ್ಮ 73ನೇ ಜನ್ಮದಿನ... ನಿಮ್ಮೊಂದಿಗೆ ಕಳೆದ ಪ್ರತಿ ಕ್ಷಣ, ಪ್ರತಿದಿನ ನನ್ನ ಸ್ಮೃತಿ ಪಟಲದಲ್ಲಿ ಅಚ್ಚಳಿಯದೇ ಉಳಿದಿದೆ... ಒಟ್ಟಿಗೆ ಕಳೆದ ಆಯಾ ದಿನಗಳ ನೆನಪುಗಳ ಜೊತೆ ಇಂದು ನಿಮ್ಮ ಅನುಪಸ್ಥಿತಿಯ ಅತೀವ ದುಃಖವನ್ನು ಉಂಟು ಮಾಡುತ್ತಿದೆ... ಆದರೆ, ನೀವು ತೋರಿದ ಪ್ರೀತಿ ಎಂದೆಂದಿಗೂ ನನ್ನ ಮನದಲ್ಲಿ ಜೀವಂತವಾಗಿದೆ. ಅನು ಕ್ಷಣವೂ ನೀವು ನಮ್ಮೊಂದಿಗೆ ಇದ್ದೀರಿ ಎನ್ನುವ ನಂಬಿಕೆಯೊಂದಿಗೆ ಬದುಕುತ್ತಿದ್ದೇವೆ. ಈ ನಂಬಿಕೆಯೇ ನನಗೆ ಸ್ಫೂರ್ತಿ ಹಾಗೂ ಸಾಂತ್ವನ ನೀಡುತ್ತದೆ. ದಿನಗಳು ಕಳೆದಿದ್ದರೂ, ನಿಮ್ಮಲ್ಲಿದ್ದ ಪ್ರೀತಿ, ದಯೆ, ಸಹಾನುಭೂತಿ, ಔದಾರ್ಯತೆಯ ಗುಣ ನನಗೆ ಸದಾ ಸ್ಫೂರ್ತಿ ನೀಡುತ್ತಲೇ ಇದೆ. ನೀವು ನನ್ನ ಜೀವನಕ್ಕೆ ತಂದ ಪ್ರತಿ ನಗು, ಪ್ರತಿ ಸಂತೋಷದ ಕ್ಷಣಕ್ಕಾಗಿ ನಾನು ಕೃತಜ್ಞನಾಗಿದ್ದೇನೆ.

ಈ ನಿಮ್ಮ ಜೀವನಕ್ಕೆ ಅಂತ್ಯವಿಲ್ಲ, ನಿಮ್ಮ ನೆನಪುಗಳ ನಗುವಿನಲ್ಲಿ, ಅಳುವಿನಲ್ಲಿ, ನಿಮ್ಮನ್ನು ಪ್ರೀತಿಸುವ-ಆರಾಧಿಸುವ ಹೃದಯಗಳಲ್ಲಿ, ಕೋಟ್ಯಂತರ ಕನ್ನಡಿಗರ ಮನದಲ್ಲಿ ಮತ್ತು ಜೀವನಗಳಲ್ಲಿ ಸದಾ ಜೀವಂತವಾಗಿರುತ್ತದೆ. ಅಂಬಿ ಅಮರ ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.



ಈ ಸುದ್ದಿಯನ್ನೂ ಓದಿ: Ambareesh Grandson: ಅಂಬರೀಶ್‌-ಸುಮಲತಾ ಮೊಮ್ಮಗನಿಗೆ ನಾಮಕರಣ; ಅಭಿಷೇಕ್‌ ಪುತ್ರನ ಹೆಸರೇನು?

ಮಂಡ್ಯ ಜಿಲ್ಲೆ ದೊಡ್ಡರಸನ ಕೆರೆ ಗ್ರಾಮದಲ್ಲಿ 1952 ಮೇ 29ರಂದು ತಂದೆ ಹುಚ್ಚೇಗೌಡ, ತಾಯಿ ಪದ್ಮಮ್ಮ ಅವರ ಮಗನಾಗಿ ಮಳವಳ್ಳಿ ಹುಚ್ಚೇಗೌಡ ಅಮರನಾಥ್ ಅವರು ಅಂಬರೀಶ್ ಜನಿಸಿದರು. ಕನ್ನಡ ಚಲನಚಿತ್ರ ರಂಗಕ್ಕೆ 1972ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ "ನಾಗರಹಾವು" ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಜಲೀಲನ ಪಾತ್ರ ಮೂಲಕ ಪರಿಚಿತರಾದರು. ರಾಜ್‌ ಕುಮಾರ್‌, ವಿಷ್ಣುವರ್ಧನ್‌ ಸೇರಿದಂತೆ ಹಲವು ಗಣ್ಯರ ಜೊತೆಯಲ್ಲಿ ಅಂಬರೀಷ್‌ ಉತ್ತಮ ಸ್ನೇಹವನ್ನು ಹೊಂದಿದ್ದರು. ಅದರಲ್ಲಿ ಅಂಬರೀಶ್ ಮತ್ತು ಡಾ. ವಿಷ್ಣುವರ್ಧನ್ ಅವರ ಸ್ನೇಹ ಚಿತ್ರರಂಗದಲ್ಲಿ ಒಂದು ಮಾದರಿಯಾಗಿತ್ತು. ಇವರಿಬ್ಬರ ನಡುವಿನ ಸ್ನೇಹ ಅದೆಷ್ಟೊ ಅಭಿಮಾನಿಗಳಿಗೆ ಮೆಚ್ಚುಗೆಯಾಗಿತ್ತು. ಇವರಿಬ್ಬರೂ ಇಂದು ನಮ್ಮನ್ನು ಅಗಲಿದ್ದರೂ ಇಂದು ಎಲ್ಲರ ಮನದಲ್ಲಿ ಇದ್ದಾರೆ. ಅಂಬಿ ಸುಮಾರು 200ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ.