ಬೆಂಗಳೂರು: ನವ ನಿರ್ದೇಶಕ ಮಾನಸ ಯು ಶರ್ಮಾ ಆಕ್ಷನ್-ಕಟ್ ಹೇಳುತ್ತಿರುವ ಬಹುನಿರೀಕ್ಷಿತ ಚಿತ್ರ 'ಚಿಂಟು ಸನ್ ಆಫ್ ವಿಶಾಲಾಕ್ಷಿ' (Chintu Son of Vishalakshi) ಸಿನಿಮಾದ ಚಿತ್ರೀಕರಣ ಇತ್ತೀಚೆಗೆ ಶುರುವಾಗಿದೆ. ಚಿತ್ರತಂಡವು ಯಾವುದೇ ಅದ್ದೂರಿ ಸಮಾರಂಭ ಕೈಗೊಳ್ಳ ಮೊದಲ ದಿನದ ಶೂಟಿಂಗ್ ಸೆಟ್‌ನಲ್ಲೇ ಸರಳವಾಗಿ ಪೂಜೆ ನೆರವೇರಿಸುವ ಮೂಲಕ ಸಿನಿಮಾಕ್ಕೆ ಚಾಲನೆಯನ್ನು ನೀಡಿದೆ. ಚಿತ್ರೀಕರಣ ಆರಂಭಕ್ಕೂ ಮುನ್ನ, ಇಡೀ ಚಿತ್ರತಂಡದ ಸಮ್ಮುಖದಲ್ಲಿ ಸಾಂಪ್ರದಾಯಿಕ ಸರಳ ಪೂಜಾ ಕಾರ್ಯಕ್ರಮ ಗಳೊಂದಿಗೆ ಸಿನಿಮಾ ಯಶಸ್ವಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು.
ಈ ಚಿತ್ರದ ಮುಖ್ಯ ಪಾತ್ರದಲ್ಲಿ ಲಕ್ಷ್ಮಿ ಪ್ರಕಾಶ್ ಬೆಳವಾಡಿ, ಹರ್ಷಿಲ್ ಕೌಶಿಕ್, ಸ್ಪರ್ಶ, ಆರ್ ಕೆ ಕಾರ್ತಿಕ್, ನಾಗಾರ್ಜುನ್ ಶಾಲಿನಿ ಸತ್ಯನಾರಾಯಣ್, ಶ್ರೀನಿವಾಸ್ ಪ್ರಭು ಮುಂತಾದವರು ನಟಿ ಸಲಿದ್ದಾರೆ. ಈ ಚಿತ್ರದ ಚಿತ್ರೀಕರಣವು 35 ದಿನ ಬೆಂಗಳೂರು ಕಾಶಿ ಮತ್ತು ರಿಷಿಕೇಶದ ಸುತ್ತಮುತ್ತ ನಡೆಯಲಿದೆ.ನಿರ್ದೇಶಕ ಮಾನಸ ಯು ಶರ್ಮಾ 'ಚಿಂಟು ಸನ್ ಆಫ್ ವಿಶಾಲಾಕ್ಷಿ' ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ಕಥೆಯುಳ್ಳ ಸಿನಿಮಾವನ್ನು ಪರಿಚಯಿಸಲು ಮುಂದಾಗಿದ್ದಾರೆ.
ಇದನ್ನು ಓದಿ:Varna Movie: ಟೀಸರ್‌ನಲ್ಲೇ ಕುತೂಹಲ ಮೂಡಿಸಿದೆ ಅರ್ಜುನ್ ಯೋಗಿ ನಟನೆಯ ʼವರ್ಣʼ
ಸದ್ಯ ಶೂಟಿಂಗ್ ಪ್ರಾರಂಭಿಸಿರುವ ಚಿತ್ರತಂಡವು ಕೆಲಸವನ್ನು ಆರಂಭಿಸಿದೆ. ಯುವ ಪ್ರತಿಭೆಗಳನ್ನು ಒಳಗೊಂಡಿರುವ ಈ ಚಿತ್ರವು ಪ್ರೇಕ್ಷಕರಿಗೆ ಹೊಸ ಅನುಭವ ನೀಡುವ ನಿರೀಕ್ಷೆಯಿದೆ. ಚಿತ್ರದ ಪಾತ್ರವರ್ಗ ಮತ್ತು ಕಥೆಯ ವಿವರಗಳು ಸದ್ಯಕ್ಕೆ ಗೌಪ್ಯವಾಗಿದ್ದು, ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ಗಳನ್ನು ಹಂಚಿಕೊಳ್ಳುವುದಾಗಿ ಚಿತ್ರತಂಡ ತಿಳಿಸಿದೆ. ಇನ್ನು ವಿಜಯ್ ಟಾಟಾ ಅವರ ಕನ್ನಡ ಚಿತ್ರರಂಗದ ಸರಣಿ ನಿರ್ಮಾಣದ ಕನಸಿನ ಮೊದಲನೇ ಚಿತ್ರಕ್ಕೆ ಚಾಲನೆ ನೀಡಿದ್ದು ಈ ಸಂದರ್ಭದಲ್ಲಿ ನಿರ್ದೇಶಕಿ ಮಾನಸ ಯು ಶರ್ಮ ವಿಜಯ್ ಟಾಟಾ ಅವರ ಪತ್ನಿ ಅಮೃತ ಉಪಸ್ಥಿತರಿದ್ದರು.