ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actress Ramya: D ಬಾಸ್‌ ಫ್ಯಾನ್ಸ್‌ Vs ರಮ್ಯಾ ಪೋಸ್ಟ್‌ ವಾರ್‌; ʼಪದ್ಮಾವತಿʼಗೆ ರಕ್ಷಿತಾ, ವಿಜಯಲಕ್ಷ್ಮಿ ಟಾಂಗ್‌

ದರ್ಶನ್‌ ಫ್ಯಾನ್ಸ್‌ ಹಾಗೂ ನಟಿ ರಮ್ಯಾ ನಡುವಿನ ವಾರ್‌ ಜೋರಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ನಟಿ ರಮ್ಯಾ (Actress Ramya) ಮಾಡಿದ ಆ ಒಂದು ಪೋಸ್ಟ್‌ನಿಂದಾಗಿ ಸದ್ಯ ದರ್ಶನ್‌ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ರೇಣುಕಾ ಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂಬ ಬರಹದಡಿಯಲ್ಲಿ ರಮ್ಯಾ ಪೋಸ್ಟ್‌ ಹಾಕಿದ್ದರು.

ಬೆಂಗಳೂರು: ದರ್ಶನ್‌ ಫ್ಯಾನ್ಸ್‌ ಹಾಗೂ ನಟಿ ರಮ್ಯಾ ನಡುವಿನ ವಾರ್‌ ಜೋರಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ನಟಿ ರಮ್ಯಾ (Actress Ramya) ಮಾಡಿದ ಆ ಒಂದು ಪೋಸ್ಟ್‌ನಿಂದಾಗಿ ಸದ್ಯ ದರ್ಶನ್‌ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ರೇಣುಕಾ ಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂಬ ಬರಹದಡಿಯಲ್ಲಿ ರಮ್ಯಾ ಪೋಸ್ಟ್‌ ಹಾಕಿದ್ದರು. ಈ ಪೋಸ್ಟ್‌ ಮಾಡಿದಾಗಿನಿಂದ ರಮ್ಯಾಗೆ ದರ್ಶನ್‌ ಫ್ಯಾನ್ಸ್‌ ಅಶ್ಲೀಲ ಹಾಗೂ ಅಸಹ್ಯವಾಗಿ ಕಮೆಂಟ್‌ ಹಾಕಿದ್ದರು. ಇದೀಗ, ರಮ್ಯಾ ಈ ಕುರಿತು ಪ್ರತಿಕ್ರಿಯೆ ನೀಡಿ, ರೇಣುಕಾಸ್ವಾಮಿ ಮೆಸೇಜ್‌ಗೂ, ಇವರಿಗೂ ವ್ಯತ್ಯಾಸ ಇಲ್ಲ ಎಂದು ಕಿಡಿಕಾರಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ನಟಿ ಸ್ಕ್ರೀನ್‌ಶಾಟ್‌ ಹಂಚಿಕೊಂಡಿದ್ದಾರೆ. ಇಂತವರ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ರಮ್ಯಾ ಸೈಬರ್‌ ಕ್ರೈಂಗೆ ದೂರು ನೀಡಲು ಸಜ್ಜಾಗಿದ್ದಾರೆ.

ಕಳೆದ ಎರಡು ದಿನದಿಂದ ನಟಿ ರಮ್ಯ ಹಾಗೂ ದರ್ಶನ್‌ ಫ್ಯಾನ್ಸ್‌ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಾರ್‌ ನಡೆಯುತ್ತಿದೆ. ಭಾನುವಾರ ಸಂಜೆ ತನ್ನ ಇನ್‌ಸ್ಟಾಗ್ರಾಮ್‌ ಅಧಿಕೃತ ಪುಟದಲ್ಲಿ ಅವರ ಇನ್‌ಬಾಕ್ಸ್‌ಗೆ ಬಂದ ಮೆಸೇಜ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ತೆಗೆದು ಸ್ಟೇಟಸ್‌ ಹಾಕಿಕೊಂಡಿದ್ದಾರೆ. "ರೇಣುಕಾಸ್ವಾಮಿ ಮಾಡಿದ್ದ ಮೆಸೇಜ್‌ಗಳಿಗೂ ಡಿ ಬಾಸ್‌ ಫ್ಯಾನ್ಸ್‌ ಮಾಡುತ್ತಿರುವ ಮೆಸೇಜ್‌ಗಳ ನಡುವೆ ಯಾವುದೇ ವ್ಯತ್ಯಾಸ ಇಲ್ಲ. ಈ ರೀತಿಯ ಸ್ತ್ರೀದ್ವೇಷದ ಮನಸ್ಥಿತಿಯನ್ನು ಹೊಂದಿರುವ ಟ್ರೋಲ್‌ಗಳಿಂದಾಗಿ ಮಹಿಳೆಯರು ಮತ್ತು ಯುವತಿಯರು ಕಿರುಕುಳ, ಅತ್ಯಾಚಾರ ಮತ್ತು ಕೊಲೆಗೆ ಒಳಗಾಗುತ್ತಾರೆ ಎಂದು ಹೇಳಿದ್ದರು.

ಮಾಧ್ಯಮದೊಂದಿಗೆ ಮಾತನಾಡಿದ ರಮ್ಯಾ ದರ್ಶನ್‌ ಫ್ಯಾನ್ಸ್‌ ಅತಿರೇಕತೆ ಹೆಚ್ಚುತ್ತಿದೆ. ಅವರ ವಿರುದ್ಧ ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡುತ್ತೇನೆಂದು ಹೇಳಿದ್ದಾರೆ. ಈ ಕುರಿತು ವಕೀಲರ ಜೊತೆ ಚರ್ಚಿಸಿ ನಿರ್ಧರಿ ನಂತರ ಯಾವ ರೀತಿ ದೂರು ಕೊಡಬೇಕು ಎಂದು ಯೋಚಿಸುತ್ತೇನೆ ಎಂದು ಹೇಳಿದರು. ಸದ್ಯಕ್ಕೆ ಈ ಸಮರ ನಿಲ್ಲುವ ರೀತಿಯಲ್ಲಿ ಕಾಣಿಸುತ್ತಿಲ್ಲ.

ರಮ್ಯಾಗೆ ರಕ್ಷಿತಾ ಟಾಂಗ್‌

ಇದೀಗ ರಮ್ಯಾ ಹೇಳಿಕೆಗೆ ರಕ್ಷಿತಾ ಪ್ರೇಮ್‌ ಟಾಂಗ್‌ ನೀಡಿದ್ದಾರೆ. ದರ್ಶನ್ ಪರ ನಟಿ ರಕ್ಷಿತಾ ಇದೀಗ ಬ್ಯಾಟ್ ಬೀಸಿದ್ದಾರೆ. ದಯವಿಟ್ಟು ಯಾವಾಗಲೂ ದಯೆಯಿಂದ ಇರಿ ಎಂದು ರಕ್ಷಿತಾ ಪ್ರೇಮಾ ಅವರು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಖಾತೆಯಲ್ಲಿ ಸ್ಟೋರಿ ಹಾಕಿದ್ದಾರೆ. ಜನರ ಮಾನಸಿಕ ಆರೋಗ್ಯ ನೋಡೋಕೆ ಸಾಧ್ಯವಿಲ್ಲ, ದಯವಿಟ್ಟು ಯಾವಾಗಲೂ ದಯೆಯಿಂದಿರಿ ಎಂದು ರಕ್ಷಿತಾ ಕಿವಿಮಾತು ಹೇಳಿದ್ದಾರೆ.

ದೂರು ಕೊಟ್ಟರೆ ಕ್ರಮ

ರಮ್ಯಾ ಅವರು ಸೈಬರ್‌ ಕ್ರೈಂಗೆ ದೂರು ನೀಡುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಪರಮೇಶ್ವರ್‌ ರಮ್ಯಾ ದೂರು ಕೊಡಲಿ ಆಮೇಲೆ ಕ್ರಮ ಕೈಗೊಳ್ಳುತ್ತೇವೆ ದೂರು ಕೊಟ್ಟರೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ. ಸೊಮೊಟೊ ಕೇಸ್ ದಾಖಲಿಸಲು ಅವಕಾಶ ಇದ್ದರೆ ಪರಿಶೀಲನೆ ಮಾಡುತ್ತಾರೆ ಆದರೆ ಮೊದಲು ರಮ್ಯಾ ದೂರು ಕೊಡಲಿ. ಯಾವುದು ಸೆನ್ಸೆಟಿವ್ ಆಗಿರುವಂತಹ ವಿಚಾರಗಳು ಇರುತ್ತೆ ಅವುಗಳನ್ನೆಲ್ಲ ಬ್ಲಾಕ್ ಮಾಡುತ್ತಾರೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Actress Ramya: ಡಿ ಬಾಸ್‌ ಫ್ಯಾನ್ಸ್‌ ಮೇಲೆ ಕಿಡಿ ಕಾರಿದ ನಟಿ ರಮ್ಯಾ; ನೊಂದವರಿಗೆ ನ್ಯಾಯ ಸಿಗಬೇಕು ಎಂದು ಪೋಸ್ಟ್‌

ಪೋಸ್ಟ್‌ ಮೂಲಕ ತಿವಿದ ವಿಜಯ ಲಕ್ಷ್ಮಿ

ರಮ್ಯಾ ದೂರನ್ನು ನೀಡುತ್ತೇನೆ ಎಂದು ಹೇಳಿದ ಬೆನ್ನಲ್ಲೇ ದರ್ಶನ್‌ ಪತ್ನಿ ವಿಜಯ ಲಕ್ಷ್ಮಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದು, ಮೂರ್ಖರನ್ನು ಮಾತಿನಿಂದ, ಬುದ್ಧಿವಂತರನ್ನು ಮೌನದಿಂದ ಗುರುತಿಸಬಹುದು ಎಂದು ಪೋಸ್ಟ್‌ ಮಾಡಿದ್ದಾರೆ.