ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actress Ramya: ಡಿ ಬಾಸ್‌ ಫ್ಯಾನ್ಸ್‌ ಮೇಲೆ ಕಿಡಿ ಕಾರಿದ ನಟಿ ರಮ್ಯಾ; ನೊಂದವರಿಗೆ ನ್ಯಾಯ ಸಿಗಬೇಕು ಎಂದು ಪೋಸ್ಟ್‌

ಸದ್ಯ ಸುಪ್ರೀಂ ಕೋರ್ಟ್‌ನಲ್ಲಿರುವ ನಟ ದರ್ಶನ್‌ ಜಾಮೀನು ಕೇಸ್‌ಗೆ ಸಂಬಂಧಿಸಿದಂತೆ ನಟಿ ರಮ್ಯಾ (Actress Ramya) ಅವರು ಹೇಳಿಕೆ ಒಂದನ್ನು ನೀಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿಯೊಂದನ್ನು ಹಂಚಿಕೊಂಡಿರುವ ನಟಿ, ಎಲ್ಲಾ ಡಿಬಾಸ್ ಅಭಿಮಾನಿಗಳಿಗೆ ನನ್ನ ಇನ್ ಸ್ಟಾಗ್ರಾಂಗೆ ಸ್ವಾಗತ ಎಂದು ಬರೆದುಕೊಂಡಿದ್ದಾರೆ.

ಡಿ ಬಾಸ್‌ ಫ್ಯಾನ್ಸ್‌  ಮೇಲೆ ಕಿಡಿ ಕಾರಿದ ನಟಿ ರಮ್ಯಾ

Vishakha Bhat Vishakha Bhat Jul 27, 2025 9:44 AM

ಬೆಂಗಳೂರು: ಸದ್ಯ ಸುಪ್ರೀಂ ಕೋರ್ಟ್‌ನಲ್ಲಿರುವ ನಟ ದರ್ಶನ್‌ ಜಾಮೀನು ಕೇಸ್‌ಗೆ ಸಂಬಂಧಿಸಿದಂತೆ ನಟಿ ರಮ್ಯಾ (Actress Ramya) ಅವರು ಹೇಳಿಕೆ ಒಂದನ್ನು ನೀಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿಯೊಂದನ್ನು ಹಂಚಿಕೊಂಡಿರುವ ನಟಿ, ಎಲ್ಲಾ ಡಿಬಾಸ್ ಅಭಿಮಾನಿಗಳಿಗೆ ನನ್ನ ಇನ್ ಸ್ಟಾಗ್ರಾಂಗೆ ಸ್ವಾಗತ ಎಂದು ಬರೆದುಕೊಂಡಿದ್ದಾರೆ. ರೇಣುಸ್ವಾಮಿ ಕೊಲೆ ಕೇಸ್‌ಗೆ ಸಂಬಂಧಸಿದಂತೆ ಮಾತನಾಡಿ, ಆತನ ಕುಟುಂಬಕ್ಕೆ ನ್ಯಾಯ ಸಿಗಬಹುದು ಎಂದು ನಾನು ನಂಬಿದ್ದೇನೆ. ಭಾರತದ ಸಾಮಾನ್ಯ ಪ್ರಜೆಗೂ ಸುಪ್ರೀಂ ಕೋರ್ಟ್ ಆಶಾಕಿರಣʼ ಎಂದು ತಮ್ಮ ಇನ್‌ಸ್ಟಾ ಸ್ಟೇಟಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು. ನಟಿ ರಮ್ಯಾ ಪೋಸ್ಟ್ ವೈರಲ್ ಆಗ್ತಿದ್ದಂತೆ ದರ್ಶನ್ ಅಭಿಮಾನಿಗಳು ಕೆಟ್ಟ ಪದಗಳಿಂದ ರಮ್ಯಾ ವಿರುದ್ದ ಸೋಶಿಯಲ್ ಮಿಡಿಯಾದಲ್ಲಿ ನಿಂದಿಸಿದ್ದರು.

ಪೋಸ್ಟ್‌ನಲ್ಲೇನಿದೆ?

ʻಕೇಸ್‌ ಯಾವುದೇ ಇರಲಿ, ಯಾರದ್ದೇ ಇರಲಿ, ಸದಾ ನ್ಯಾಯದ ಪರ, ʻತೆರೆಯಮೇಲಷ್ಟೇ ಅಲ್ಲ ನಿಜ ಜೀವನದಲ್ಲೂ ರಮ್ಯಾ ಹಿರೋಯಿನ್‌ ಎಂದು ಬರೆಯಲಾಗಿದೆ. ನಂತರ ಮೊತ್ತೊಂದು ಪೋಸ್ಟ್‌ನಲ್ಲಿ ನಟಿ ಡಿ ಬಾಸ್‌ ಫ್ಯಾನ್ಸ್‌ಗಳಿಗೆ ಓಪನ್‌ ಚಾಲೆಂಜ್‌ ಹಾಕಿದ್ದಾರೆ. ಎಲ್ಲಾ ಡಿಬಾಸ್ ಅಭಿಮಾನಿಗಳಿಗೆ ನನ್ನ ಇನ್ ಸ್ಟಾಗ್ರಾಂಗೆ ಸ್ವಾಗತ… ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ಯಾಕೆ ನ್ಯಾಯ ಸಿಗಬೇಕು ಅನ್ನೋದಕ್ಕೇ ನಿಮ್ಮ ಕಾಮೆಂಟ್ಸ್‌ಗಳೇ ಸಾಕ್ಷಿʼಎಂದು ಬರೆದಿದ್ದಾರೆ.

ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್, ಪವಿತ್ರಾಗೌಡ ಸೇರಿ 17 ಆರೋಪಿಗಳು ಬಂಧನವಾಗಿದ್ದರು. ಜೈಲುವಾಸದ ನಂತರ ಎಲ್ಲಾ ಆರೋಪಿಗಳು ಜಾಮೀನು ಪಡೆದು ಆಚೆ ಬಂದಿದ್ದರು. ಇದೀಗ ದರ್ಶನ್‌ಗೆ ರಾಜ್ಯ ಹೈಕೋರ್ಟ್‌ ನೀಡಿ‌ದ್ದ ಜಾಮೀನು ಆದೇಶ ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಗಿದಿದೆ. ಹೈಕೋರ್ಟ್‌ ರೀತಿ ತರಾತುರಿಯಲ್ಲಿ ಆದೇಶ ನೀಡುವುದಿಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್‌ ಒಂದು ವಾರದಲ್ಲಿ ಆದೇಶ ಪ್ರಕಟಿಸುವುದಾಗಿ ಹೇಳಿದೆ. ಒಂದೂವರೆ ಗಂಟೆಗಳ ಕಾಲ ವಾದ-ಪ್ರತಿವಾದ ಆಲಿಸಿ ಕಡೆಯಲ್ಲಿ ಇತರೇ ಆರೋಪಿಗಳ ಪರ ವಕೀಲರ ಮಾಹಿತಿ ಕೇಳಿದೆ. ಎಲ್ಲ ಆರೋಪಿಗಳ ಪರ ವಕೀಲರು ಲಿಖಿತ ವಾದ ಮಂಡಿಸಬಹುದು. ಒಂದು ವಾರದಲ್ಲಿ ಮೂರು ಪುಟಗಳ ಮಾಹಿತಿ ನೀಡಬೇಕು. ಬಳಿಕ ಆದೇಶ ನೀಡುವುದಾಗಿ ಕೋರ್ಟ್‌ ಹೇಳಿದೆ.

ಈ ಸುದ್ದಿಯನ್ನೂ ಓದಿ: Actor Darshan: ಜಾಮೀನು ಟೆನ್ಷನ್‌ನಲ್ಲಿ ಥಾಯ್ಲೆಂಡ್‌ನಿಂದ ವಾಪಸಾದ ದರ್ಶನ್‌

ಇತ್ತೀಚೆಗಷ್ಟೇ ‘ದಿ ಡೆವಿಲ್’ ಚಿತ್ರೀಕರಣದ ನಿಮಿತ್ತ ದರ್ಶನ್‌ ಥೈಲ್ಯಾಂಡ್‌ಗೆ ಹಾರಿದ್ದರು. ಶೂಟಿಂಗ್ ಮುಗಿಸಿದ ನಟ ದರ್ಶನ್‌ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಅಂದ್ಹಾಗೆ, ಥೈಲ್ಯಾಂಡ್‌ಗೆ ದರ್ಶನ್‌ ಜೊತೆ ವಿಜಯಲಕ್ಷ್ಮೀ ಹಾಗೂ ಧನ್ವೀರ್ ಸಹ ತೆರಳಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಪ್ರಕಟಿಸಲಿದೆ.