ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Devoleena Bhattacharjee: ಏಳು ತಿಂಗಳ ಮಗುವಿನ ಬಣ್ಣದ ಕುರಿತು ಅಶ್ಲೀಲ ಕಮೆಂಟ್‌; ದೂರು ನೀಡಿದ ಖ್ಯಾತ ನಟಿ

ತಮ್ಮ ಏಳು ತಿಂಗಳ ಮಗ ಜಾಯ್ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಹಿಂದಿ ಕಿರುತೆರೆಯ ಖ್ಯಾತ ನಟಿ, ದೇವೋಲೀನಾ ಭಟ್ಟಾಚಾರ್ಜಿ ನಿರ್ಧರಿಸಿದ್ದಾರೆ. ಸೋಮವಾರ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಸರಣಿ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ.

ಮುಂಬೈ: ತಮ್ಮ ಏಳು ತಿಂಗಳ ಮಗ ಜಾಯ್ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಹಿಂದಿ ಕಿರುತೆರೆಯ ಖ್ಯಾತ ನಟಿ, ದೇವೋಲೀನಾ ಭಟ್ಟಾಚಾರ್ಜಿ (Devoleena Bhattacharjee) ನಿರ್ಧರಿಸಿದ್ದಾರೆ. ಸೋಮವಾರ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಸರಣಿ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡ ನಟಿ, ತಮ್ಮ ಮಗನ ಚಿತ್ರಗಳ ಮೇಲೆ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ ಟ್ರೋಲ್‌ಗಳ ಸ್ಕ್ರೀನ್‌ಶಾಟ್‌ಗಳು ಮತ್ತು ಖಾತೆಗಳನ್ನು ಭಾರತೀಯ ಸೈಬರ್ ಪೊಲೀಸರೊಂದಿಗೆ ಹಂಚಿಕೊಂಡು ಸಹಾಯ ಕೋರಿದ್ದಾರೆ. ಅವಹೇಳನಕಾರಿ ಕಮೆಂಟ್‌ ಮಾಡಿದವರ ವಿರುದ್ಧ ನಟಿ ಕಿಡಿ ಕಾರಿದ್ದಾರೆ.

ದೇವೋಲೀನಾ ಸೈಬರ್‌ ಕ್ರೈಂ ಪೊಲೀಸರಿಗೆ ಟ್ಯಾಗ್‌ ಮಾಡಿ ನಂತರ ಅವರೊಂದಿಗಿನ ಸಂಭಾಷಣೆಯ ಸ್ಕ್ರೀನ್‌ಶಾಟ್ ಅನ್ನು ಪೋಸ್ಟ್ ಮಾಡಿದ್ದಾರೆ. ಮೈಬಣ್ಣ ಮತ್ತು ಅಂತರ್ಧರ್ಮೀಯ ವಿವಾಹಕ್ಕಾಗಿ ಏಳು ತಿಂಗಳ ಮಗುವನ್ನು ಟ್ರೋಲ್ ಮಾಡಲಾಗುತ್ತಿದೆ ಎಂದು ದೇವೋಲೀನಾ ಹೇಳಿಕೊಂಡಿದ್ದಾರೆ. ಶೀಘ್ರದಲ್ಲೇ ಅಧಿಕೃತ ದೂರು ದಾಖಲಿಸುತ್ತೇನೆ. ತ್ವರಿತ ಪ್ರತಿಕ್ರಿಯೆಗಾಗಿ ಭಾರತೀಯ ಸೈಬರ್ ಪೊಲೀಸರಿಗೆ ಧನ್ಯವಾದಗಳು" ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಇನ್ನೊಂದು ಪೋಸ್ಟ್‌ನಲ್ಲಿ, ನಿಮ್ಮಲ್ಲಿ ಈಗಾಗಲೇ ಕೆಟ್ಟ ಕಮೆಂಟ್‌ ಮಾಡುವವರ ಖಾತೆಗಳನ್ನು ಡಿಲಿಟ್‌ ಮಾಡಿದ್ದೀರಿ. ಯಾರಾದರೂ ಅವರ ಪ್ರೊಫೈಲ್ ಅನ್ನು ನನಗೆ ಕಳುಹಿಸಿದರೆ ನನಗೆ ತಂಬಾ ಸಹಾಯವಾಗುತ್ತದೆ ಎಂದು ನಟಿ ಹೇಳಿದ್ದಾರೆ. ದೇವೋಲೀನಾ ಸಾಥ್ ನಿಭಾನ ಸಾಥಿಯಾ ಚಿತ್ರದಲ್ಲಿ ಗೋಪಿ ಬಹು ಪಾತ್ರದಲ್ಲಿ ನಟಿಸುವ ಮೂಲಕ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಡಿಸೆಂಬರ್ 2022 ರಲ್ಲಿ, ಜಿಮ್ ತರಬೇತುದಾರ ಮತ್ತು ದೀರ್ಘಕಾಲದ ಸ್ನೇಹಿತ ಶಹನವಾಜ್ ಶೇಖ್ ಅವರೊಂದಿಗೆ ವಿವಾಹವಾಗಿದ್ದಾರೆ. ಡಿಸೆಂಬರ್ 2024 ರಲ್ಲಿ, ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Actress Ramya: ರಮ್ಯಾಗೆ ಅಶ್ಲೀಲ ಮೆಸೇಜ್‌, ಮತ್ತಿಬ್ಬರು ಡಿ ಬಾಸ್‌ ಫ್ಯಾನ್ಸ್‌ ಬಂಧನ

ನಟಿ ರಮ್ಯಾಗೆ (Actress Ramya) ಅಶ್ಲೀಲ ಮೆಸೇಜ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದೆ. ಸಾಮಾಜಿಕ ಜಾಲತಾಣದಲ್ಲಿ ನಟಿಗೆ ಅಶ್ಲೀಲ ಮೆಸೇಜ್ ಮಾಡಿದ್ದ ಇಬ್ಬರು ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದರು. ನಟ ದರ್ಶನ್ ಅಭಿಮಾನಿಗಳ ವಿರುದ್ಧ ನಟಿ ರಮ್ಯಾ ನೀಡಿರುವ ದೂರಿನ ಬಗ್ಗೆ ಸಿಸಿಬಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಒಟ್ಟಾರೆ ಐವರು ಕಿಡಿಗೇಡಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ದರ್ಶನ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ತೀರ್ಪಿಗೆ ಸಂಬಂಧಿಸಿ ರಮ್ಯಾ ಪೋಸ್ಟ್‌ ಮಾಡಿದ್ದರು.