ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actress Ramya: ರಮ್ಯಾಗೆ ಅಶ್ಲೀಲ ಮೆಸೇಜ್‌, ಮತ್ತಿಬ್ಬರು ಡಿ ಬಾಸ್‌ ಫ್ಯಾನ್ಸ್‌ ಬಂಧನ

Actor Darshan: ನಟ ದರ್ಶನ್ ಅಭಿಮಾನಿಗಳ ವಿರುದ್ಧ ನಟಿ ರಮ್ಯಾ ನೀಡಿರುವ ದೂರಿನ ಬಗ್ಗೆ ಸಿಸಿಬಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಒಟ್ಟಾರೆ ಐವರು ಕಿಡಿಗೇಡಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ದರ್ಶನ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ತೀರ್ಪಿಗೆ ಸಂಬಂಧಿಸಿ ರಮ್ಯಾ ಪೋಸ್ಟ್‌ ಮಾಡಿದ್ದರು.

ರಮ್ಯಾಗೆ ಅಶ್ಲೀಲ ಮೆಸೇಜ್‌, ಮತ್ತಿಬ್ಬರು ಡಿ ಬಾಸ್‌ ಫ್ಯಾನ್ಸ್‌ ಬಂಧನ

ಹರೀಶ್‌ ಕೇರ ಹರೀಶ್‌ ಕೇರ Aug 4, 2025 11:35 AM

ಬೆಂಗಳೂರು: ನಟಿ ರಮ್ಯಾಗೆ (Actress Ramya) ಅಶ್ಲೀಲ ಮೆಸೇಜ್ (Obscene message) ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ (CCB police) ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದೆ. ಸಾಮಾಜಿಕ ಜಾಲತಾಣದಲ್ಲಿ ನಟಿಗೆ ಅಶ್ಲೀಲ ಮೆಸೇಜ್ ಮಾಡಿದ್ದ ಇಬ್ಬರು ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದರು.

ನಟ ದರ್ಶನ್ ಅಭಿಮಾನಿಗಳ ವಿರುದ್ಧ ನಟಿ ರಮ್ಯಾ ನೀಡಿರುವ ದೂರಿನ ಬಗ್ಗೆ ಸಿಸಿಬಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಒಟ್ಟಾರೆ ಐವರು ಕಿಡಿಗೇಡಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ದರ್ಶನ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ತೀರ್ಪಿಗೆ ಸಂಬಂಧಿಸಿ ರಮ್ಯಾ ಪೋಸ್ಟ್‌ ಮಾಡಿದ್ದರು. ನ್ಯಾಯ ಸಿಗುವ ಭರವಸೆ ಮೂಡುತ್ತಿದೆ ಎಂದು ಬರೆದಿದ್ದರು. ಇದರಿಂದ ರೊಚ್ಚಿಗೆದ್ದ ಕೆಲವರು ಡಿ ಬಾಸ್‌ ಅಭಿಮಾನಿಗಳ ಹೆಸರಿನಲ್ಲಿ ರಮ್ಯಾಗೆ ಅಶ್ಲೀಲ ಸಂದೇಶಗಳ ಮೂಲಕ ದಾಳಿ ನಡೆಸಿದ್ದರು.

43 ಇನ್ಸ್ಟಾಗ್ರಾಂ ಅಕೌಂಟ್ ಬೆನ್ನತ್ತಿರುವ ಸಿಸಿಬಿ ಪೊಲೀಸರು, ನಟಿ ರಮ್ಯಾ ಬಳಿ ಅಶ್ಲೀಲ ಮೆಸೇಜ್ ಅಕೌಂಟ್‌ಗಳ ಕುರಿತು ಮಾಹಿತಿ ಪಡೆದಿದ್ದಾರೆ. ಯಾವ ಪೇಜ್‌ಗಳಿಂದ ಅಶ್ಲೀಲ ಮೆಸೇಜ್‌ಗಳು ಬಂದಿದ್ದವು? ಯಾವ ನಂಬರ್‌ಗಳಿಂದ ಬೆದರಿಕೆ ಕರೆ ಬಂದಿತ್ತು ಇತ್ಯಾದಿ ಎಲ್ಲದರ ಕುರಿತು ಪೊಲೀಸರು ಮಾಹಿತಿ ಸಂಗ್ರಹಿದ್ದಾರೆ.

ಅನ್ಯಕೋಮಿನ ಯುವತಿಯನ್ನು ಪ್ರೀತಿಸಿದ ಯುವಕನ ಕೊಲೆ

ಕೊಪ್ಪಳ: ಅನ್ಯಕೋಮಿನ ಯುವತಿಯನ್ನು ಪ್ರೀತಿಸುತ್ತಿದ್ದ (love) ಯುವಕನನ್ನು ಬರ್ಬರವಾಗಿ ಹತ್ಯೆ (Murder Case) ಮಾಡಲಾಗಿದೆ. ಕೊಪ್ಪಳ (Koppla) ಜಿಲ್ಲೆಯ ಬರದ್ದೂರು ಬಂಡಿ ರಸ್ತೆ ಬಳಿಕ ನಿರ್ಮಿತಿ ಕೇಂದ್ರದ ಬಳಿ ಯುವಕನನ್ನು ಕೊಲೆ ಮಾಡಲಾಗಿದೆ. 30 ವರ್ಷದ ಗವಿಸಿದ್ದಪ್ಪ ನಾಯಕ್ ಎಂಬಾತನೇ ಹತ್ಯೆಯಾದ ಯುವಕ. ಅನ್ಯಕೋಮಿನ ಹುಡುಗಿಯನ್ನು ಗವಿಸಿದ್ದಪ್ಪ ನಾಯಕ್ ಪ್ರೀತಿಸುತ್ತಿದ್ದು, ಪ್ರೇಮ ಪ್ರಕರಣ ಹಿನ್ನೆಲೆಯಲ್ಲಿ ಹತ್ಯೆಯಾಗಿರುವ ಶಂಕೆ ವ್ಯಕ್ತವಾಗಿದೆ. ಹತ್ಯೆ ಬಳಿಕ ಸಾದಿಕ್ ಎಂಬ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.

ಕೊಪ್ಪಳದ ಬಹದ್ದೂರು ಬಂಡಿ ರಸ್ತೆಯ ನಿರ್ಮಿತಿ ಕೇಂದ್ರದ ಬಳಿ ರಸ್ತೆಯ ಮಧ್ಯೆಯೇ ಗವಿಸಿದ್ದಪ್ಪ ನಾಯಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕುರುಬರ ಓಣಿಯ ನಿವಾಸಿ 30 ವರ್ಷದ ಗವಿಸಿದ್ದಪ್ಪ ನಾಯಕ ಅನ್ಯಕೋಮಿನ ಯುವತಿಯೊಬ್ಭಳನ್ನು ಪ್ರೀತಿಸುತ್ತಿದ್ದ. ಈ ವಿಚಾರವಾಗಿ ಹುಡುಗಿಯ ಕಡೆಯವರಿಗೂ ಈತನಿಗೂ ಬಿಸಿಬಿಸಿ ಮಾತುಕತೆ ನಡೆದಿತ್ತು ಎನ್ನಲಾಗಿದೆ. ಮೂರು ಜನರು ಮಾರಕಾಸ್ತ್ರಗಳನ್ನು ಬಳಸಿ ಗವಿಸಿದ್ದಪ್ಪನ ಮೇಲೆ ದಾಳಿ ಮಾಡಿದ್ದಾರೆ ಎಂದು ಗೊತ್ತಾಗಿದೆ.

ಮಾರಕ ಹಲ್ಲೆಗೊಳಗಾದ ಗವಿಸಿದ್ದಪ್ಪನನ್ನು ಆಸ್ಪತ್ರೆಗೆ ಸೇರಿಸಿದರೂ ಜೀವ ಉಳಿಯಲಿಲ್ಲ. ಗವಿಸಿದ್ದಪ್ಪನನ್ನು ಕೊಲೆ ಮಾಡಿದ ಮೂವರ ತಂಡದಲ್ಲಿದ್ದ ಕೊಪ್ಪಳದ ಸಾದಿಕ್ ಎಂಬ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ. ಇನ್ನಿಬ್ಬರು ಪರಾರಿಯಾಗಿದ್ದು, ಅವರ ಬಂಧನಕ್ಕಾಗಿ ಬಲೆ ಬೀಸಲಾಗಿದೆ.

ಇದನ್ನೂ ಓದಿ: Actress Ramya: ಪ್ರಜ್ವಲ್‌ ರೇವಣ್ಣಗೆ ಶಿಕ್ಷೆ; ಕಾನೂನು ಎಲ್ಲರಿಗೂ ಒಂದೇ ಎಂದ ನಟಿ ರಮ್ಯಾ