ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dolly Singh: ಲಿಪ್‌ ಲಾಕ್‌ ಮಾಡಿ, ಶರ್ಟ್‌ ಒಳಗೆ ಕೈ ಹಾಕಿದ್ದ... ಬಾಲಿವುಡ್‌ನ ಕರಾಳತೆ ಬಿಚ್ಚಿಟ್ಟ ಖ್ಯಾತ ನಟಿ!

Casting Couch: ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ಸಸ್ ಆಗಿ ಬಹುದೊಡ್ಡ ವೃತ್ತಿ ಜೀವನ ಕಂಡುಕೊಂಡವರಿಗಿಂತಲೂ ಸರಿಯಾದ ಅವಕಾಶ ಸಿಗದೆ ತಮ್ಮ ವೃತ್ತಿ ಜೀವನವನ್ನು ಬದಲಾಯಿಸಿ ಕೊಂಡವರೆ ಅಧಿಕ ಮಂದಿ ಇದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಕೆಲವೊಮ್ಮೆ ಅವಕಾಶ ಉತ್ತಮವಾಗಿ ಸಿಕ್ಕರೂ ಲೈಂಗಿಕ ಕಿರುಕುಳ, ಹಣಕಾಸಿನ ಬೇಡಿಕೆ ಇತ್ಯಾದಿ ಸಮಸ್ಯೆ ಎದುರಿಸುತ್ತಾರೆ. ಬಾಲಿವುಡ್ ಖ್ಯಾತ ನಟಿ ಡಾಲಿ ಸಿಂಗ್ ಅವರು ಕೂಡ ಇಂತಹದ್ದೆ ಕಿರುಕುಳವನ್ನು ಅನುಭವಿಸಿದ್ದು ಅದನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ನವದೆಹಲಿ: ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ಸಸ್ ಆಗಿ ಬಹುದೊಡ್ಡ ವೃತ್ತಿ ಜೀವನ ಕಂಡುಕೊಂಡ ವರಿಗಿಂತಲೂ ಸರಿಯಾದ ಅವಕಾಶ ಸಿಗದೆ ತಮ್ಮ ವೃತ್ತಿ ಜೀವನವನ್ನು ಬದಲಾಯಿಸಿಕೊಂಡವರೆ ಅಧಿಕ ಮಂದಿ ಇದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಕೆಲವೊಮ್ಮೆಅವಕಾಶ ಉತ್ತಮವಾಗಿ ಸಿಕ್ಕರೂ ಲೈಂಗಿಕ ಕಿರುಕುಳ, ಹಣಕಾಸಿನ ಬೇಡಿಕೆ ಇತ್ಯಾದಿ ಸಮಸ್ಯೆ ಎದುರಿಸುತ್ತಾರೆ. ಸಿನಿಮಾ ನಟಿಯಾಗ ಬೇಕು ಎನ್ನುವ ಅನೇಕರು ಈ ಕಿರುಕುಳಕ್ಕೆ ಅಂಜಿಯೇ ಈ ಕ್ಷೇತ್ರ ತೊರೆದಿದ್ದಾರೆ. ಆದರೆ ಇನ್ನು ಕೆಲವು ನಟಿಯರು ತಮಗೆ ಈ ಹಿಂದೆ ಆದ ಕಹಿ ಅನುಭವವನ್ನು ಹಂಚಿಕೊಂಡವರು ಇದ್ದಾರೆ. ಅಂತೆಯೇ ಬಾಲಿವುಡ್ ಖ್ಯಾತ ನಟಿ ಡಾಲಿ ಸಿಂಗ್ (Dolly Singh) ಅವರು ಕೂಡ ಇಂತಹದ್ದೆ ಕಿರುಕುಳವನ್ನು ಅನುಭವಿಸಿದ್ದು ಅದನ್ನು ಇತ್ತೀಚಿನ ಸಂದರ್ಶನ ಒಂದರಲ್ಲಿ ತಿಳಿಸಿದ್ದಾರೆ. ಸಾವಿರಾರು ಕನಸ್ಸು ಹೊತ್ತು ದೆಹಲಿಯಲ್ಲಿ ಅವಕಾಶಕ್ಕಾಗಿ ಅಲೆಯುತ್ತಿದ್ದಾಗ ನಿರ್ಮಾಪಕ ರೊಬ್ಬರು ತನ್ನ ಜೊತೆ ಅಸಭ್ಯವಾಗಿ ನಡೆದುಕೊಂಡ ವಿಚಾರವನ್ನು ಹೊರಹಾಕಿದ್ದಾರೆ.

ನಟಿ ಡಾಲಿ ಸಿಂಗ್ ಅವರು ಇತ್ತೀಚೆಗಷ್ಟೇ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿ, 19ವರ್ಷ ವಯಸ್ಸಿನಲ್ಲಿಯೇ ಸಿನಿಮಾ ಇಂಡಸ್ಟ್ರಿಯ ಕರಾಳ‌ಮುಖ ನನಗೆ ಪರಿಚಯವಾಯ್ತು. ಆಗಿನ್ನು ನಾನು ಸಿನಿಮಾ ಮಾಡಿರಲಿಲ್ಲ. ಅವಕಾಶಕ್ಕಾಗಿ ದೆಹಲಿಯಲ್ಲಿ ಅಲೆಯುತ್ತಿದ್ದ ದಿನಗಳು ಬಹಳ ಕಷ್ಟಕರ ವಾಗಿತ್ತು. ಆಗ ನನಗೆ ಕಾಸ್ಟಿಂಗ್ ಡೈರೆಕ್ಟರ್‌ ಒಬ್ಬರ ಪರಿಚಯವಾಯಿತು. ನಾನು ಅವರಿಗೆ ಕರೆ ಮಾಡಿದ್ದೇ, ಆಗ ಅವರ ಮಾತುಗಳು ತುಂಬಾ ವಿಚಿತ್ರವಾಗಿತ್ತು ಎಂದು ನನಗೆ ಅನಿಸತೊಡಗಿತು. ಅವರ ಜೊತೆ ಮಾತನಾಡಲು ಆಸಕ್ತಿ ಇಲ್ಲದಿದ್ದರೂ ಅವಕಾಶಕ್ಕಾಗಿ ನಾನು ಅವರೊಂದಿಗೆ ಮಾತ ನಾಡಲೇ ಬೇಕಿತ್ತು. ಇಲ್ಲದಿದ್ದರೆ ನನಗೆ ಕೆಲಸದಲ್ಲಿ ಆಸಕ್ತಿ ಇಲ್ಲ ಎನ್ನುವ ಭಾವನೆ ಅವರಿಗೆ ಬರಬಹುದು ಎಂಬ ಕಾರಣಕ್ಕೆ ನಾನು ಅಂಜುತ್ತಿದ್ದೆ ಎಂದು ಹೇಳಿದರು.

ಬಳಿಕ ಮಾತನಾಡಿ, ಅವರು ನನಗೆ ನಿರ್ಮಾಪಕರನ್ನು ಭೇಟಿ ಮಾಡಿಸುತ್ತೇನೆ ಬನ್ನಿ ಎಂದು ನನ್ನ ಹೊಟೇಲ್‌ಗೆ ಕರೆದರು. ನಾನು ಕೂಡ ತುಂಬಾ ಖುಷಿಯಲ್ಲಿ ಅವರೊಂದಿಗೆ ಹೋದೆ. ಅಲ್ಲಿಗೆ ನಿರ್ಮಾಪಕರು ಕೂಡ ಬಂದರು. ಬಂದ ಕೂಡಲೆ ಮದ್ಯ ಸೇವನೆ ಮಾಡಲು ಪ್ರಾರಂಭಿಸಿದರು. ನಾನು ಅವರನ್ನು ನೋಡಿ ನನ್ನಷ್ಟಕ್ಕೆ ಕುಳಿತುಬಿಟ್ಟೆ... ಬಳಿಕ ಆ ನಿರ್ಮಾಪಕರು ಅಲ್ಲಿಂದ ಕಾರಿನಲ್ಲಿ ಹೊರಡಬೇಕು ಎಂದು ಕಾಸ್ಟಿಂಗ್ ಡೈರೆಕ್ಟರ್ ಬಳಿ ಹೇಳಿದರು.

ಇದನ್ನೂ ಓದಿ:Varna Movie: ಟೀಸರ್‌ನಲ್ಲೇ ಕುತೂಹಲ ಮೂಡಿಸಿದೆ ಅರ್ಜುನ್ ಯೋಗಿ ನಟನೆಯ ʼವರ್ಣʼ

ಕೂಡಲೇ ಕಾರು ಬಂತು.. ನನ್ನನ್ನು ಕಾರಿನಲ್ಲಿ ಕುಳಿತುಕೊಳ್ಳುವಂತೆ ಹೇಳಿದರು. ನನ್ನ ಪಕ್ಕದಲ್ಲಿ ಆ ನಿರ್ಮಾಪಕರು ಇದ್ದರು. ನಾನು ಸಿನಿಮಾ ವಿಚಾರ ಮಾತನಾಡುತ್ತಾರೆ ಎಂದು ನಿರೀಕ್ಷಿಸುತ್ತಿದ್ದೆ. ಆದರೆ ಆ ವ್ಯಕ್ತಿ ಹಠಾತ್ತನೇ ನನಗೆ ಲಿಪ್ ಕಿಸ್ ಮಾಡಿದ, ನನ್ನ ಶರ್ಟ್‌ ಒಳಗಡೆ ಕೈ ಹಾಕಲು ಕೂಡ ಪ್ರಯತ್ನ ಮಾಡಿದ ಇದರಿಂದ ನಾನು ಆಘಾತಕ್ಕೆ ಒಳಗಾದೆ ಎಂದರು.

ಅಲ್ಲಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂದೇ ತೋಚದಾಯ್ತು. ಧೈರ್ಯ ಮಾಡಿ ನನಗೆ ಮೆಟ್ರೋ ಸ್ಟೇಶನ್ ಬಳಿ ಡ್ರಾಪ್ ಮಾಡಿ ಎಂದು ಬಿಟ್ಟೆ.. ಅಂತೆಯೇ ಸ್ವಲ್ಪ ದೂರಕ್ಕೆ ಮೆಟ್ರೋ ಸ್ಟೇಷನ್ ಸ್ಟಾಪ್ ಇದ್ದ ಕಾರಣ ಅಲ್ಲಿ ನನಗೆ ಡ್ರಾಪ್ ಮಾಡಿದರು. ಬಳಿಕ ನಾಳೆ ಸಿನಿಮಾ ವಿಚಾರ ಮಾತನಾಡೋಣ ಎಂದು ಕಾಸ್ಟಿಂಗ್ ಡೈರೆಕ್ಟರ್ ಹೇಳಿದರು. ಅದಕ್ಕೆ ನಾನು ಪ್ರತಿಕ್ರಿಯೆ ಮಾಡದೆ ಅಲ್ಲಿಂದ ವೇಗವಾಗಿ ಹೊರಟು ಬಿಟ್ಟೆ. ಈ ಕೆಟ್ಟ ಅನುಭವದ ಬಗ್ಗೆ ನನಗೆ ಈಗಲೂ ಭಯವಿದೆ ಎಂದು ಅವರು ತಮ್ಮ ನೋವನ್ನು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಬಾಲಿವುಡ್‌ನ ನಟಿ ಡಾಲಿ ಸಿಂಗ್ ಅವರು ಥ್ಯಾಂಕ್ ಯೂ ಫಾರ್ ಕಮಿಂಗ್ (Thank You for Coming) ಡಬಲ್ ಎಕ್ಸ್ ಎಲ್ (Double XL) ಇನ್ನು ಅನೇಕ ಸಿನಿಮಾಗಳಲ್ಲಿ ಹಾಗೂ ಭಾಗ್ ಬಿನ್ನಿ ಭಾಗ್ ನಂತಹ ವೆಬ್ ಸೀರಿಸ್ ನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಸದ್ಯ ಅವರು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ಕೂಡ ಪ್ರಸಿದ್ಧರಾಗಿದ್ದಾರೆ.