ಬೆಂಗಳೂರು: ಸಚಿನ್ ಚೆಲುವರಾಯಸ್ವಾಮಿ ಮತ್ತು ಸಂಗೀತಾ ಭಟ್ ಅಭಿನಯದ 'ಕಮಲ್ ಶ್ರೀದೇವಿ' (Kamal Sridevi Movie) ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಸಿನಿಪ್ರಿಯರ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಈ ಚಿತ್ರವನ್ನು ಸುನೀಲ್ ಕುಮಾರ್ ನಿರ್ದೇಶನ ಮಾಡಿದ್ದು, ಶೀರ್ಷಿಕೆಯಿಂದಲೇ ಸಂಚಲನ ಉಂಟು ಮಾಡುತ್ತಿದೆ. ಚಿತ್ರದಲ್ಲಿ ರಮೇಶ್ ಇಂದಿರಾ, ಮಿತ್ರ ಮತ್ತು ಉಮೇಶ್ ಕೂಡ ನಟಿಸಿದ್ದಾರೆ. ಚಿತ್ರವನ್ನು ಸ್ವರ್ಣಾಂಬಿಕಾ ಪಿಕ್ಚರ್ಸ್ ಅಡಿಯಲ್ಲಿ ಬಿ.ಕೆ. ಧನಲಕ್ಷ್ಮಿ ನಿರ್ಮಿಸಿದ್ದಾರೆ.
ಸಚಿನ್ ಚೆಲುವರಾಯಸ್ವಾಮಿ, ಸಂಗೀತ ಭಟ್ ಮತ್ತು ಕಿಶೋರ್ ನಟಿಸಿರುವ ಈ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಹಿರಿಯ ನಟ ಉಮೇಶ್ ಟೀಸರ್ ಬಿಡುಗಡೆ ಮಾಡಿದ್ದು, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಚಿತ್ರದ ಟೀಸರ್ ನೋಡಿದವರು ರಿಯಲಿಸ್ಟಿಕ್ ಸ್ಟೋರಿ ಹಾಗೆ ಕಾಣಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದು, ಕ್ರೈಮ್ ಥ್ರಿಲ್ಲರ್ ಕಥಾಹಂದರವನ್ನೂ ಹೊಂದಿದೆ ಎನ್ನುವ ಸೂಚನೆ ಸಿಕ್ಕಿದೆ. ಟೀಸರ್‌ನಲ್ಲಿನ ಅದ್ಬುತ ದೃಶ್ಯಗಳು, ಹಿನ್ನೆಲೆ ಸಂಗೀತ ಮತ್ತು ಸಂಭಾಷಣೆಗಳು ಗಮನ ಸೆಳೆದಿವೆ.
ಇದನ್ನು ಓದಿ:Kandeelu Movie: ʼಕಂದೀಲುʼ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ನಿರೀಕ್ಷಿಸಿರಲಿಲ್ಲ: ನಿರ್ದೇಶಕಿ ಯಶೋದ ಪ್ರಕಾಶ್
ಟೀಸರ್ ನೋಡಿ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದ್ದು ನಟ ಸಚಿನ್ ಚೆಲುವರಾಯಸ್ವಾಮಿ ಮತ್ತು ಪ್ರತಿಭಾವಂತ ನಟಿ ಸಂಗೀತಾ ಭಟ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಹೊಸ ಲುಕ್ ಮತ್ತು ಸಚಿನ್ ಅವರ ನಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿನಿಮಾ ತಂಡ ಈಗಾಗಲೇ ಚಿತ್ರದ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಿದೆ. ಟೀಸರ್ ಕೊನೆಯಲ್ಲಿಯೇ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು, ಸೆಪ್ಟೆಂಬರ್ 19ರಂದು ಚಿತ್ರ ತೆರೆಗೆ ಬರಲಿದೆ.