ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kamal Sridevi Movie: ಸ್ಯಾಂಡಲ್‌ವುಡ್‌ನಲ್ಲಿ ಇನ್ನು ʼಕಮಲ್ ಶ್ರೀದೇವಿʼ ಹವಾ; ಟ್ರೈಲರ್ ಬಿಡುಗಡೆ: ಸೆಪ್ಟೆಂಬರ್ 19ಕ್ಕೆ ಚಿತ್ರ ರಿಲೀಸ್‌

Kamal Sridevi Trailer: ವಿಭಿನ್ನ ಪೋಸ್ಟರ್ ಹಾಗೂ ಟೀಸರ್‌ನಿಂದ ಗಮನ ಸೆಳೆದಿದ್ದ ಸ್ಯಾಂಡಲ್‌ವಿಡ್‌ ಚಿತ್ರ ʼಕಮಲ್ ಶ್ರೀದೇವಿʼಯ ಟ್ರೈಲರ್ ಬಿಡುಗಡೆಯಾಗಿದೆ. ಎನ್.ಚಲುವರಾಯ ಸ್ವಾಮಿ ಅರ್ಪಿಸುತ್ತಿರುವ ಈ ಚಿತ್ರವನ್ನು ಸ್ವರ್ಣಾಂಬಿಕ ಪಿಚ್ಚರ್ಸ್ ಬ್ಯಾನರ್ ಅಡಿಯಲ್ಲಿ ಬಿ.ಕೆ.ಧನಲಕ್ಷ್ಮೀ ನಿರ್ಮಿಸಿದ್ದಾರೆ. ನಟ ರಾಜವರ್ಧನ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

ಕಮಲ್ ಶ್ರೀದೇವಿ ಸಿನಿಮಾ

ಬೆಂಗಳೂರು: ವಿಭಿನ್ನ ಟೈಟಲ್‌, ಪೋಸ್ಟರ್ ಹಾಗೂ ಟೀಸರ್‌ನಿಂದ ವಿಶಿಷ್ಟವಾಗಿ ಗಮನ ಸೆಳೆದಿದ್ದ ʼಕಮಲ್ ಶ್ರೀದೇವಿʼ (Kamal Sridevi) ಸ್ಯಾಂಡಲ್‌ವುಡದದ ಚಿತ್ರದ ಟ್ರೈಲರ್ ಇದೀಗ ಬಿಡುಗಡೆಯಾಗಿದೆ. ಆ ಮೂಲಕ ಚಿತ್ರದ ಮೇಲಿನ ನಿರೀಕ್ಷೆಯನ್ನು ಹತ್ತು ಪಟ್ಟು ಹೆಚ್ಚಿಸಿದೆ. ತಾಂತ್ರಿಕ ಗುಣಮಟ್ಟ, ಪಾತ್ರಗಳ ವಿಶೇಷತೆ ಮೂಲಕ ʼಕಮಲ್ ಶ್ರೀದೇವಿʼ ಚಿತ್ರ ಸಂಚಲನ ಸೃಷ್ಟಿಸುವ ಸೂಚನೆ ನೀಡಿದೆ.

ಎನ್.ಚಲುವರಾಯ ಸ್ವಾಮಿ ಅರ್ಪಿಸುತ್ತಿರುವ ಈ ʼಕಮಲ್​ ಶ್ರೀದೇವಿʼ ಚಿತ್ರವನ್ನು ಸ್ವರ್ಣಾಂಬಿಕ ಪಿಚ್ಚರ್ಸ್ ಬ್ಯಾನರ್ ಅಡಿಯಲ್ಲಿ ಬಿ.ಕೆ.ಧನಲಕ್ಷ್ಮೀ ನಿರ್ಮಿಸಿದ್ದಾರೆ. ನಟ ರಾಜವರ್ಧನ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರದಲ್ಲಿ ಸಚಿನ್ ಚಲುವರಾಯ ಸ್ವಾಮಿ ನಾಯಕನಾಗಿ ಅಭಿನಯಿಸಿದ್ದು, ಅವರಿಗೆ ಜೋಡಿಯಾಗಿ ಸಂಗೀತಾ ಭಟ್‌ .ಕಾಣಿಸಿಕೊಂಡಿದ್ದಾರೆ. ಕಿಶೋರ್, ರಮೇಶ್ ಇಂದಿರಾ ಸೇರಿ ಪ್ರತಿಭಾವಂತ ತಾರಾಬಳಗವಿರೋ ಈ ಚಿತ್ರವನ್ನು ವಿ.ಎ. ಸುನೀಲ್ ಕುಮಾರ್ ನಿರ್ದೇಶಿಸಿದ್ದು, ಈ ಚಿತ್ರದ ಸಂಪೂರ್ಣ ಕ್ರಿಯೇಟಿವ್ ಜವಾಬ್ದಾರಿಯನ್ನ ಸಹ ನಿರ್ಮಾಪಕ ರಾಜವರ್ಧನ್ ಹೊತ್ತುಕೊಂಡಿದ್ದಾರೆ.



ಈ ಸಿನಿಮಾದ ಕುರಿತು ಅನಿಸಿಕೆ ಹಂಚಿಕೊಂಡ ಸಹನಿರ್ಮಾಪಕ ರಾಜವರ್ಧನ್ “ಈ ಸಿನಿಮಾದ ಮುಖ್ಯ ಭಾಗವೇ ನಟಿ ಸಂಗೀತಾ ಭಟ್ ಅವರ ಅದ್ಭುತ ಅಭಿನಯ. ಅವರ ಪಾತ್ರವನ್ನು ನೈಜವಾಗಿ ತೋರಿಸಲಾಗಿದೆ. ಎಲ್ಲ ಹೊಗಳಿಕೆಗೂ ಅವರು ಅರ್ಹರು. ಅವರ ಕಲಾಸ್ಫೂರ್ತಿಗೆ ನಾನು ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆʼʼ ಎಂದರು.

ಇದನ್ನು ಓದಿ:Daiva Movie: ಮಂಜುನಾಥ್ ಜಯರಾಜ್ ನಟನೆ, ನಿರ್ದೇಶನದ ʼದೈವʼ ಚಿತ್ರದ ಟೀಸರ್ ರಿಲೀಸ್‌

ʼಕಮಲ್ ಶ್ರೀದೇವಿʼ ಚಿತ್ರದ ಟ್ರೈಲರ್ ಕುತೂಹಲ ಮೂಡಿಸುತ್ತಿದ್ದು, ಸಂಗೀತಾ ಭಟ್ ನಟನೆ ಹೈಲೈಟ್‌ ಆಗಿದೆ. ಸಿನಿಮಾ ಸೆಪ್ಟೆಂಬರ್‌ 19ರಂದು ರಿಲೀಸ್ ಆಗಲಿದೆ.