ಬೆಂಗಳೂರು, ಅಕ್ಟೋಬರ್ 12: ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಸುವರ್ಣ ಯುಗ ಆರಂಭವಾಗುವ ಎಲ್ಲ ಲಕ್ಷಣ ಗೋಚರವಾಗುತ್ತಿದೆ. ಸದ್ದಿಲ್ಲದೆ ಬಂದ ʼಸು ಫ್ರಮ್ ಸೋʼ (Su From So) ಬಾಕ್ಸ್ ಆಫೀಸ್‌ನಲ್ಲಿ ಸುದ್ದಿ ಮಾಡಿದರೆ, ಇದೀಗ ಭಾರಿ ಕುತೂಹಲದೊಂದಿಗೆ ರಿಲೀಸ್ ಆದ ʼಕಾಂತಾರ ಚಾಪ್ಟರ್ 1' (Kantara Chapter 1) ನಿರೀಕ್ಷೆಯನ್ನೂ ಮೀರಿ ಕಲೆಕ್ಷನ್ ಮಾಡಿ ಹೊಸ ಇತಿಹಾಸ ಬರೆಯುತ್ತಿದೆ. ಬಿಡುಗಡೆಯಾದ 10 ದಿನಕ್ಕೆ ಜಾಗತಿಕವಾಗಿ 500 ಕೋಟಿ ರೂ. ಕ್ಲಬ್ ಸೇರಿ ದಾಖಲೆ ಸೃಷ್ಟಿಸಿದೆ. ಇದೀಗ 11ನೇ ದಿನದ (ಅಕ್ಟೋಬರ್ 12) ಕಲೆಕ್ಷನ್ ರಿಪೋರ್ಟ್ ಹೊರ ಬಂದಿದ್ದು, ದೇಶದ ಒಟ್ಟು ಗಳಿಕೆ 400 ಕೋಟಿ ರೂ. ಮೀರಿದೆ (Kantara Chapter 1 Box Office Collection). ಜತೆಗೆ ಟಾಲಿವುಡ್‌ನ ಪ್ರಭಾಸ್ ಅಭಿನಯದ ʼಸಲಾರ್: ಪಾರ್ಟ್ 1 ಸೀಸ್‌ಫೈರ್ʼ ಮತ್ತು ʼಬಾಹುಬಲಿ 1ʼ ಚಿತ್ರಗಳ ಕಲೆಕ್ಷನ್ ಹಿಂದಿಕ್ಕಿದೆ.
2ನೇ ಭಾನುವಾರ ರಿಷಬ್ ಶೆಟ್ಟಿ ಚಿತ್ರ ʼಕಾಂತಾರ ಚಾಪ್ಟರ್ 1' ಬರೋಬ್ಬರಿ 36.94 ಕೋಟಿ ರೂ. ದೋಚಿಕೊಂಡಿದೆ. ಆ ಮೂಲಕ ದೇಶದ ಗಳಿಕೆ 435.59 ಕೋಟಿ ರೂ. ದಾಟಿದ್ದು, ಜಾಗತಿಕವಾಗಿ 600 ಕೋಟಿ ರೂ. ಗುಡ್ಡೆ ಹಾಕಿದೆ ಎಂದು ವರದಿಯೊಂದು ತಿಳಿಸಿದೆ. ಕನ್ನಡ ಮತ್ತು ಹಿಂದಿಯಲ್ಲಿ 100 ಕೋಟಿ ರೂ. ಕ್ಲಬ್ ಸೇರಿದೆ. ಇನ್ನು ತೆಲುಗಿನಲ್ಲಿ 72 ಕೋಟಿ ರೂ., ತಮಿಳು ಮತ್ತು ಮಲಯಾಳಂ ಕಲೆಕ್ಷನ್ 60 ಕೋಟಿ ರೂ.ಗಿಂತ ಹೆಚ್ಚು ಬಾಚಿಕೊಂಡಿದೆ.
ಈ ಸುದ್ದಿಯನ್ನೂ ಓದಿ: Rishab Shetty: ಅಂದು ರಿಷಬ್ ಶೆಟ್ಟಿ ತಲೆಗೆ ಹೊಡೆದಿದ್ರಂತೆ ಆ ನಿರ್ದೇಶಕ!
ಅಕ್ಟೋಬರ್ 2ರಂದು ವಿವಿಧ ಭಾಷೆಗಳಲ್ಲಿ, ಸುಮಾರು 30 ದೇಶಗಳಲ್ಲಿ ʼಕಾಂತಾರ ಚಾಪ್ಟರ್ 1' ರಿಲೀಸ್ ಆಗಿದೆ. ಚಿತ್ರ ಭಾರತದಲ್ಲಿ ಮೊದಲ ವಾರ 337.4 ಕೋಟಿ ರೂ. ಗಳಿಸಿದೆ. ಇನ್ನು 9ನೇ ದಿನ 22.25 ಕೋಟಿ ರೂ., 10ನೇ ದಿನ 39 ಕೋಟಿ ರೂ. ಮತ್ತು 11ನೇ ದಿನ 36 ಕೋಟಿ ರೂ. ಗಳಿಸಿದೆ. ಆಮೂಲಕ ಒಟ್ಟು ಕಲೆಕ್ಷನ್ 435.59 ಕೋಟಿ ರೂ.ಗೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.
ದಾಖಲೆಗಳೆಲ್ಲ ಉಡೀಸ್
ಭಾರತದಲ್ಲಿ ʼಸಲಾರ್: ಪಾರ್ಟ್ 1ʼ 406.45 ಕೋಟಿ ರೂ. ಗಳಿಸಿದ್ದರೆ, ʼಬಾಹುಬಲಿ 1ʼ ಚಿತ್ರ 420 ಕೋಟಿ ರೂ. ದೋಚಿಕೊಂಡಿತ್ತು. ಇದೀಗ ʼಕಾಂತಾರ ಚಾಪ್ಟರ್ 1' ಇವೆಲ್ಲವನ್ನೂ ಮೀರಿ ಮುನ್ನುಗ್ಗುತ್ತಿದೆ.
ʼಕಾಂತಾರ ಚಾಪ್ಟರ್ 1' ಸಕ್ಸಸ್ ಟ್ರೈಲರ್ ಔಟ್ ಇಲ್ಲಿದೆ:
ಸಕ್ಸಸ್ ಟ್ರೈಲರ್ ಔಟ್
2022ರಲ್ಲಿ ತೆರೆಕಂಡ ʼಕಾಂತಾರʼ ಚಿತ್ರದ ಪ್ರೀಕ್ವೆಲ್ ಇದಾಗಿದ್ದು, ಹೊಂಬಾಳೆ ಫಿಲ್ಮ್ಸ್ ಅದ್ಧೂರಿಯಾಗಿ ನಿರ್ಮಿಸಿದೆ. ರಿಷಬ್ ಶೆಟ್ಟಿ ಅವರ ಅಭಿನಯಕ್ಕೆ ಮತ್ತೊಂದು ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಬರಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇನ್ನು ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದು, ಸಹಜಾಭಿನಯದ ಮೂಲಕ ಗಮನ ಸೆಳೆದಿದ್ದಾರೆ. ಬಾಲಿವುಡ್ ನಟ ಗುಲ್ಶನ್ ದೇವಯ್ಯ, ಮಲಯಾಲಂ ನಟ ಜಯರಾಮ್ ಅವರಿಗೂ ಉತ್ತಮ ಪಾತ್ರ ಸಿಕ್ಕಿದ್ದು, ಅವರ ನಟನೆಗೂ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಚಿತ್ರತಂಡ ಭಾರಿ ಯಶಸ್ಸು ಪಡೆದ ಬೆನ್ನಲ್ಲೇ ಸಕ್ಸಸ್ ಟ್ರೈಲರ್ ಹೊರತಂದಿದ್ದು, ಮತ್ತಷ್ಟು ಕುತೂಹಲ ಹುಟ್ಟು ಹಾಕಿದೆ.