Kantara Chapter 1 collection: ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಕಾಂತಾರ ಚಾಪ್ಟರ್ 1! ಕಾಂತಾರ, ಕೆಜಿಎಫ್ ದಾಖಲೆ ಉಡೀಸ್
Rishab Shetty: ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಾಪ್ಟರ್ 1 ಸಿನಿಮಾ ಭಾರತದಲ್ಲಿ ಎಂಟು ದಿನಗಳಲ್ಲಿ ಸುಮಾರು 350 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವಿಶ್ವದಾದ್ಯಂತ ಸುಮಾರು 509 ಕೋಟಿ ಗಳಿಕೆ ಮಾಡಿದೆ. ಹಿಂದಿನ ‘ಕಾಂತಾರ’ ಮತ್ತು ‘ಕೆಜಿಎಫ್ 1’ ಸಿನಿಮಾದ ಕಲೆಕ್ಷನ್ ದಾಖಲೆಗಳನ್ನು ಮುರಿದಿದೆ.

-

ಬೆಂಗಳೂರು: ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ, ರಿಷಬ್ ಶೆಟ್ಟಿ (Rishab Shetty) ಅಭಿನಯದ ʼಕಾಂತಾರ ಚಾಪ್ಟರ್ 1' ಗ್ಲೋಬಲ್ ಹಿಟ್ ಆಗಿದೆ. ರಾಜ್ಯ, ದೇಶೀಯ ಹಾಗೂ ಅಂತಾರಾಷ್ಟ್ರೀಯ ಗಲ್ಲಾಫೆಟ್ಟಿಗೆಯಲ್ಲಿ ದಾಖಲೆಗಳ ಮೇಲೆ ದಾಖಲೆಗನ್ನು ಉಡೀಸ್ ಮಾಡುತ್ತಲೇ ಸಾಗಿದೆ. ಬಿಡುಗಡೆಯಾದ ಅಕ್ಟೋಬರ್ 2 ದಿನಾಂಕದಿಂದ ಇಲ್ಲಿಯವರೆಗೆ ವಿಶ್ವಾದ್ಯಂತ ₹ 509 ಕೋಟಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ ಭರ್ಜರಿ ಯಶಸ್ಸನ್ನು ಸಾಧಿಸಿದೆ. ಬಿಡುಗಡೆ ಆದ ಎಂಟು ದಿನಗಳಲ್ಲಿ 2022ರ ‘ಕಾಂತಾರ’ ಮತ್ತು ‘ಕೆಜಿಎಫ್ 1’ ಸಿನಿಮಾದ ಕಲೆಕ್ಷನ್ ದಾಖಲೆಗಳನ್ನು ಮುರಿದಿದೆ.
ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆ ಆದ ಎಂಟು ದಿನಗಳಲ್ಲಿ ಭಾರತದಲ್ಲಿ 330 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತವನ್ನು ಗಳಿಕೆ ಮಾಡಿದೆ. ವಾರದ ದಿನಗಳಲ್ಲಿಯೂ ಸಹ ಸಿನಿಮಾದ ಕಲೆಕ್ಷನ್ನಲ್ಲಿ ಕುಸಿತ ಉಂಟಾಗಿಲ್ಲ. ಕಳೆದ ಸೋಮವಾರದಂದು 31.5 ಕೋಟಿ, ಮಂಗಳವಾರದಂದು 33.50 ಕೋಟಿ ಗಳಿಕೆ ಮಾಡಿದ್ದ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬುಧವಾರ ಕಲೆಕ್ಷನ್ನಲ್ಲಿ ತುಸು ಕಡಿಮೆ ಅಂದರೆ 25 ಕೋಟಿ ಮಾಡಿತ್ತು. ನಿನ್ನೆ ಗುರುವಾರದಂದು ಸಿನಿಮಾ 20.50 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಆದರೆ ಶುಕ್ರವಾರದಿಂದ ಮತ್ತೆ ಸಿನಿಮಾದ ಕಲೆಕ್ಷನ್ ಹೆಚ್ಚಾಗುವ ಸೂಚನೆಗಳಿವೆ. ವೀಕೆಂಡ್ನಲ್ಲಿ ಮತ್ತೆ ಸಿನಿಮಾದ ಕಲೆಕ್ಷನ್ ಏರಿಕೆ ಆಗುವುದು ಪಕ್ಕಾ ಅನಿಸಿದೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾ ಒಂದೇ ವಾರಕ್ಕೆ 2022 ರಲ್ಲಿ ಬಿಡುಗಡೆ ಆಗಿದ್ದ ‘ಕಾಂತಾರ’ ಮತ್ತು ಕನ್ನಡದ ಮೊದಲ ಬಾಕ್ಸ್ ಆಫೀಸ್ ಬ್ಲಾಕ್ ಬಸ್ಟರ್ ಸಿನಿಮಾ ‘ಕೆಜಿಎಫ್ 1’ ದಾಖಲೆಗಳನ್ನು ಹಿಂದಿಕ್ಕಿದೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಭಾರತದಲ್ಲಿ ಎಂಟು ದಿನಗಳಲ್ಲಿ ಸುಮಾರು 350 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವಿಶ್ವದಾದ್ಯಂತ ಸುಮಾರು 509 ಕೋಟಿ ಗಳಿಕೆ ಮಾಡಿದೆ.
ಇದನ್ನೂ ಓದಿ: 'ಕಾಂತಾರ: ಚಾಪ್ಟರ್ 1' ಚಿತ್ರದಲ್ಲಿ ಚಾನ್ಸ್ ನೀಡುವಂತೆ ಮನವಿ ಮಾಡಿದ್ದ ದಾದಾಸಾಹೇಬ್ ಫಾಲ್ಕೆ ಪುರಸ್ಕೃತ ನಟ ಮೋಹನ್‌ಲಾಲ್
2022ರ ‘ಕಾಂತಾರ’ ಸಿನಿಮಾ ವಿಶ್ವದಾದ್ಯಂತ 450 ಕೋಟಿ ಗಳಿಕೆ ಮಾಡಿತ್ತು. 2018 ರಲ್ಲಿ ಬಿಡುಗಡೆ ಆಗಿದ್ದ ‘ಕೆಜಿಎಫ್ 1’ ಸಿನಿಮಾ 250 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇದೀಗ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಕೇವಲ ಒಂದು ವಾರದಲ್ಲಿ ಎರಡೂ ಸಿನಿಮಾಗಳ ದಾಖಲೆಗಳನ್ನು ಅಳಿಸಿ ಹಾಕಿದೆ. ಮಾತ್ರವಲ್ಲದೆ ರಜನೀಕಾಂತ್ರ ‘ಕೂಲಿ’ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನೂ ಸಹ ಹಿಂದಿಕ್ಕಿ ಮುಂದೆ ನುಗ್ಗುತ್ತಿದೆ. ಕಾಂತಾರ ಚಾಪ್ಟರ್ 1 ಸಿನಿಮಾಕ್ಕೆ ಸುಮಾರು 125 ಕೋಟಿ ರೂಪಾಯಿ ಬಜೆಟ್ ಅನ್ನು ಹೊಂಬಾಳೆ ಫಿಲಮ್ಸ್ ಹಾಕಿದೆ. ಸುಮಾರು 800 ಕೋಟಿಗೂ ಹೆಚ್ಚಿನ ಮೊತ್ತವನ್ನು ಗಳಿಕೆ ಮಾಡುವ ಅಂದಾಜಿದೆ.