ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mahavatar Narsimha: ಬಾಕ್ಸ್‌ ಆಫೀಸ್‌ನಲ್ಲಿ ʼಮಹಾವತಾರ್‌ ನರಸಿಂಹʼ ದಾಖಲೆ; ಭಾರತದಲ್ಲಿ ಅತೀ ಹೆಚ್ಚು ಕಲೆಕ್ಷನ್‌ ಮಾಡಿದ ಆನಿಮೇಟೆಡ್‌ ಚಿತ್ರ

Mahavatar Narsimha Movie: ಹೊಂಬಾಳೆ ಫಿಲ್ಮ್ಸ್‌ ಪ್ರಸ್ತುತ ಪಡಿಸಿದ ʼಮಹಾವತಾರ್‌ ನರಸಿಂಹʼ ಚಿತ್ರ ಇದೀಗ ಬಾಕ್ಸ್‌ ಆಫೀಸ್‌ನಲ್ಲಿ 100 ಕೋಟಿ ರೂ. ಗಳಿಸಿದ್ದು, ಅತೀ ಹೆಚ್ಚು ಕಲೆಕ್ಷನ್‌ ಮಾಡಿದ ಭಾರತದ ಅನಿಮೇಷನ್‌ ಸಿನಿಮಾ ಎನಿಸಿಕೊಂಡಿದೆ. ಅಶ್ವಿನ್‌ ಕುಮಾರ್‌ ನಿರ್ದೇಶನದ ಈ ಚಿತ್ರ ಜಾಗತಿಕವಾಗಿ 100 ಕೋಟಿ ರೂ. ಕ್ಲಬ್‌ ಸೇರಿದೆ.

ಬಾಕ್ಸ್‌ ಆಫೀಸ್‌ನಲ್ಲಿ 100 ಕೋಟಿ ರೂ. ಗಳಿಸಿದ ʼಮಹಾವತಾರ್‌ ನರಸಿಂಹʼ

Ramesh B Ramesh B Aug 4, 2025 5:33 PM

ಬೆಂಗಳೂರು: ಕನ್ನಡದ ಹೆಮ್ಮೆಯ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌ (Hombale Films) ಮತ್ತೊಂದು ದಾಖಲೆ ಬರೆದಿದೆ. ಹೊಂಬಾಳೆ ಫಿಲ್ಮ್ಸ್‌ ಪ್ರಸ್ತುತ ಪಡಿಸಿದ ʼಮಹಾವತಾರ್‌ ನರಸಿಂಹʼ ಚಿತ್ರ (Mahavatar Narsimha Movie) ಇದೀಗ ಬಾಕ್ಸ್‌ ಆಫೀಸ್‌ನಲ್ಲಿ 100 ಕೋಟಿ ರೂ. ಗಳಿಸಿದ್ದು, ಅತೀ ಹೆಚ್ಚು ಕಲೆಕ್ಷನ್‌ ಮಾಡಿದ ಭಾರತದ ಅನಿಮೇಷನ್‌ ಸಿನಿಮಾ ಎನಿಸಿಕೊಂಡಿದೆ. 10 ದಿನಗಳಲ್ಲಿ ಭಾರತದಲ್ಲಿ ಸುಮಾರು 91.25 ಕೋಟಿ ರೂ. ದೋಚಿಕೊಂಡಿರುವ ಅಶ್ವಿನ್‌ ಕುಮಾರ್‌ ನಿರ್ದೇಶನದ ಈ ಚಿತ್ರ ಜಾಗತಿಕವಾಗಿ 100 ಕೋಟಿ ರೂ. ಕ್ಲಬ್‌ ಸೇರಿದೆ. ಪೌರಾಣಿಕ ಕಥೆಯನ್ನು ಆನಿಮೇಷನ್‌ ರೂಪದಲ್ಲಿ ಪ್ರಸ್ತುತಪಡಿಸಿದ ರೀತಿಗೆ ಪ್ರೇಕ್ಷಕರು ಫಿದಾ ಆಗಿದ್ದು, ವಿವಿಧ ಭಾಷೆಗಳಲ್ಲಿ ತೆರೆಕಂಡಿದೆ.

ದೇಶದಲ್ಲಿ ಅತೀ ಹೆಚ್ಚಿ ಕಲೆಕ್ಷನ್‌ ಮಾಡಿದ ಆನಿಮೇಟೆಡ್‌ ಚಿತ್ರ ಎನ್ನುವ ಹೆಗ್ಗಳಿಕೆಗೆ ʼಮಹಾವತಾರ್‌ ನರಸಿಂಹʼ ಪಾತ್ರವಾಗಿದ್ದು, ʼಸ್ಪೈಡರ್‌ ಮ್ಯಾನ್‌ʼ ಮತ್ತು ʼಕುಂಗ್‌ ಫು ಪಾಂಡʼ ಸಿನಿಮಾಗಳ ದಾಖಲೆ ಮುರಿದಿದೆ. ಜಾಗತಿಕವಾಗಿ ಇದು ಒಟ್ಟು 112 ಕೋಟಿ ಕಲೆಕ್ಷನ್‌ ಮಾಡಿದೆ ಎಂದು ಸಾನ್‌ಸಿಕ್‌ ವೆಬ್‌ಸೈಟ್‌ ವರದಿ ಮಾಡಿದೆ.



ಈ ಸುದ್ದಿಯನ್ನೂ ಓದಿ: Mahavatar Narsimha Movie: ಆ್ಯನಿಮೇಷನ್‌ ಚಿತ್ರ ʼಮಹಾವತಾರ್‌ ನರಸಿಂಹʼಕ್ಕೆ ಶುಭ ಹಾರೈಸಿದ ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ

2ಡಿ ಮತ್ತು 3ಡಿ ಮಾದರಿಯಲ್ಲಿ ರಿಲೀಸ್‌

ʼಮಹಾವತಾರ್‌ ನರಸಿಂಹʼ 2ಡಿ ಮತ್ತು 3ಡಿ ಮಾದರಿಯಲ್ಲಿ ಕನ್ನಡ ಜತೆಗೆ ಹಿಂದಿ, ತೆಲುಗು, ತಮಿಳು, ಮಲಯಾಳಂನಲ್ಲಿ ರಿಲೀಸ್‌ ಆಗಿದೆ. ಈ ಪೈಕಿ ಅತೀ ಹೆಚ್ಚು ಕಲೆಕ್ಷನ್‌ ತೆಲುಗು ವರ್ಷನ್‌ನಲ್ಲಿ ಆಗಿದ್ದು, 2ನೇ ಸ್ಥಾನದಲ್ಲಿ ಹಿಂದಿ ಇದೆ.

ಮಕ್ಕಳಿಗೂ ಅಚ್ಚುಮೆಚ್ಚು

ಕ್ಲೀಮ್‌ ಪ್ರೊಡಕ್ಷನ್ಸ್‌ ನಿರ್ಮಾಣದ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್‌ ಪ್ರಸ್ತುತಪಡಿಸಿದೆ. ಪುರಾಣದಲ್ಲಿ ಬರುವ ವಿಷ್ಣುವಿನ ಅವತಾರವಾದ ನರಸಿಂಹನ ಕಥೆಯನ್ನು ಪ್ರೇಕ್ಷಕರಿಗೆ ಮನಮುಟ್ಟುವಂತೆ ತೆರೆಗೆ ತಂದಿದ್ದು ಗೆಲುವಿನಲ್ಲಿ ಪ್ರಧಾನ ಪಾತ್ರವಹಿಸಿದೆ. ಪ್ರಹ್ಲಾದ ಭಕ್ತಿ, ಹಿರಣ್ಯಕಶಿಪುವಿನ ಕ್ರೌರ್ಯ, ನರಸಿಂಹಾವತಾರದ ವೈಭವವನ್ನು ಅದ್ಧೂರಿಯಾಗಿ ಚಿತ್ರೀಕರಿಸಲಾಗಿದೆ. 2 ಗಂಟೆ 10 ನಿಮಿಷಗಳ ಈ ಚಿತ್ರ ಮಕ್ಕಳನ್ನೂ ಆಕರ್ಷಿಸಿದ್ದು, ದೇಶದೆಲ್ಲೆಡೆ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ. ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾ ಈಗಾಗಲೇ ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸುತ್ತಿದ್ದು, ಕೆಲವು ದಿನಗಳವರೆಗೆ ಇದೇ ರೀತಿಯ ಹವಾ ಮುಂದುವರಿಯಲಿದೆ. ರಾಜ್ಯಾದ್ಯಂತ ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ಬಿಡುಗಡೆಯಾಗಿದೆ.

2 ವರ್ಷಗಳ ಅಂತರದಲ್ಲಿ 7 ಚಿತ್ರಗಳ ಬಿಡುಗಡೆ

ಇದು ಆನಿಮೇಡೆಡ್‌ ಸರಣಿ ಚಿತ್ರವಾಗಿದ್ದು ʼಮಹಾವತಾರ್ ಪರಶುರಾಮ್ʼ (2027), ʼಮಹಾವತಾರ್ ರಘುನಂದನ್ʼ (2029), ʼಮಹಾವತಾರ್ ದ್ವಾರಕಾದೀಶ್‌ʼ (2031), ʼಮಹಾವತಾರ್ ಗೋಕುಲಾನಂದʼ (2033), ʼಮಹಾವತಾರ್ ಕಲ್ಕಿ ಪಾರ್ಟ್ 1ʼ (2035), ʼಮಹಾವತಾರ್ ಕಲ್ಕಿ ಪಾರ್ಟ್ 2ʼ (2037) ಹೀಗೆ ಇವು 2 ವರ್ಷಗಳ ಅಂತರದಲ್ಲಿ ಬಿಡುಗಡೆಯಾಗಲಿವೆ. ಈ ಸರಣಿಯ ಮುಂದುವರಿದ ಭಾಗವಾಗಿ 'ಮಹಾವತಾರ ಪರಶುರಾಮ' ಸೀರಿಸ್‌ ತಯಾರಿಸಲು ನಿರ್ಮಾಣ ಸಂಸ್ಥೆ ಯೋಜನೆ ಹಾಕಿಕೊಂಡಿದೆ.