ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Earthquake Alert: ವಿಜಯಪುರ ಜಿಲ್ಲೆಯ ಎರಡು ಕಡೆ ಭೂಮಿ ಕಂಪನ; 2.6 ತೀವ್ರತೆ ದಾಖಲು

Earthquake Alert: ಮೊದಲನೆಯ ಕಂಪನ ವಿಜಯಪುರ ಜಿಲ್ಲೆಯ ಟಿಕೋಟಾ ತಾಲೂಕಿನ ಹೊನ್ವಾಡ್ ಗ್ರಾಮ ಪಂಚಾಯಿತಿಯ ಪೂರ್ವ ಈಶಾನ್ಯದ 2.9 ಕಿ.ಮೀ ದೂರದಲ್ಲಿ ಬೆಳಗ್ಗೆ 11.41 ಕ್ಕೆ ಸಂಭವಿಸಿದೆ ಮತ್ತು ಎರಡನೆಯ ಕಂಪನ ಬಸವನ ಬಾಗೇವಾಡಿ ತಾಲೂಕಿನ ಮಂಗೋಲಿ ಗ್ರಾಮ ಪಂಚಾಯಿತಿನಲ್ಲಿ ದಾಖಲಾಗಿದೆ.

ವಿಜಯಪುರ ಜಿಲ್ಲೆಯ ಎರಡು ಕಡೆ ಕಂಪಿಸಿದ ಭೂಮಿ!

Prabhakara R Prabhakara R Aug 4, 2025 7:49 PM

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಸೋಮವಾರ ಎರಡು ಕಡೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 2.6 ತೀವ್ರತೆ ದಾಖಲಾಗಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದ್ದು, ಮೊದಲನೆಯದ ಕಂಪನ (Earthquake Alert) ಟಿಕೋಟಾ ತಾಲೂಕಿನ ಹೊನ್ವಾಡ್ ಗ್ರಾಮ ಪಂಚಾಯಿತಿಯ ಪೂರ್ವ ಈಶಾನ್ಯದ 2.9 ಕಿ.ಮೀ ದೂರದಲ್ಲಿ ಬೆಳಗ್ಗೆ 11.41 ಕ್ಕೆ ಸಂಭವಿಸಿದೆ ಮತ್ತು ಎರಡನೆಯದು ಬಸವನ ಬಾಗೇವಾಡಿ ತಾಲೂಕಿನ ಮಂಗೋಲಿ ಗ್ರಾಮ ಪಂಚಾಯಿತಿನಲ್ಲಿ ಕೇಂದ್ರೀಕೃತವಾಗಿದೆ.

ಭೂಕಂಪದ ಘಟನೆಯು 10 ಕಿ.ಮೀ ಆಳದಲ್ಲಿ ಸಂಭವಿಸಿದೆ. "ಸೆಸ್ಮಿಕ್ ತೀವ್ರತೆಯ ನಕ್ಷೆಯ ಪ್ರಕಾರ, ಭೂಕಂಪನದ ತೀವ್ರತೆಯು ತುಂಬಾ ಕಡಿಮೆಯಾಗಿದೆ ಮತ್ತು ಭೂಕಂಪ ಕೇಂದ್ರಬಿಂದುವಿನಿಂದ 20-30 ಕಿ.ಮೀ ರೇಡಿಯಲ್ ದೂರದವರೆಗೆ ಅನುಭಕ್ಕೆ ಬರಬಹುದಾಗಿದೆ. ತೀವ್ರತೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಈ ರೀತಿಯ ಭೂಕಂಪಗಳು ಸ್ಥಳೀಯ ಸಮುದಾಯಕ್ಕೆ ಯಾವುದೇ ಹಾನಿಯನ್ನುಂಟುಮಾಡುವುದಿಲ್ಲ. ಆದರೂ ಸ್ಥಳೀಯರು ಕಂಪನಗಳು ಅನುಭವಿಸಬಹುದು" ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.



ಭೂಕಂಪನ ಕೇಂದ್ರಬಿಂದು ಭೂಕಂಪ ವಲಯ -3 ರಲ್ಲಿದೆ ಮತ್ತು ಭೂಕಂಪ-ಟೆಕ್ಟೋನಿಕ್ ನಕ್ಷೆಯ ಪ್ರಕಾರ ಈ ಪ್ರದೇಶವು ರಚನಾತ್ಮಕ ಅಡಚಣೆಗಳಿಂದ ಮುಕ್ತವಾಗಿದೆ. ಈ ಭೂ ಕಂಪನದ ಪ್ರಮಾಣ ಮತ್ತು ತೀವ್ರತೆಗಳು ತುಂಬಾ ಕಡಿಮೆ ಇರುವುದರಿಂದ ಜನರು ಭಯಭೀತರಾಗುವ ಅಗತ್ಯವಿಲ್ಲ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.

ಈ ಸುದ್ದಿಯನ್ನೂ ಓದಿ | Self Harming: ಜಾನಪದ ಗಾಯಕಿಯ ಮಗ, 7ನೇ ತರಗತಿ ವಿದ್ಯಾರ್ಥಿ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ

ಬೈಕ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ದಂಪತಿ ದುರ್ಮರಣ

ಬಳ್ಳಾರಿ: ಬಳ್ಳಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿ ಮೃತಪಟ್ಟಿರುವ ಘಟನೆ (Bellary Accident) ಜಿಲ್ಲೆಯ ಕುಡದರಾಳ ಬಳಿ ನಡೆದಿದೆ. ಮೃತರನ್ನು ನಾಗಭೂಷಣ ರೆಡ್ಡಿ (36) ಮತ್ತು ಸಂಧ್ಯಾ (32) ಎಂದು ಗುರುತಿಸಲಾಗಿದೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಕುಡದರಾಳ ಗ್ರಾಮದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಿರುಗುಪ್ಪ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತಿಯನ್ನು ಪತ್ನಿ ನದಿಗೆ ತಳ್ಳಿದ ಕೇಸ್‌; ಬಾಲ್ಯವಿವಾಹವಾಗಿದ್ದ ತಾತಪ್ಪ ಅರೆಸ್ಟ್‌

ರಾಯಚೂರು: ಪತಿಯನ್ನು ಪತ್ನಿಯೇ ನದಿಗೆ ತಳ್ಳಿದ ಪ್ರಕರಣಕ್ಕೆ ಸಂಬಂಧಿಸಿ ಬಾಲ್ಯವಿವಾಹ ಆರೋಪದಲ್ಲಿ ತಾತಪ್ಪನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ರಾಯಚೂರಿನ ಗುರ್ಜಾಪುರ ಬ್ಯಾರೇಜ್ ಬಳಿ ಪತ್ನಿಯೇ ಪತಿಯನ್ನು ಕೃಷ್ಣಾ ನದಿಗೆ ತಳ್ಳಿದ ಆರೋಪ ಕೇಳಿಬಂದಿತ್ತು. ಬಳಿಕ ಪತಿ ತಾತಪ್ಪ ಮೇಲೆ ಪೋಕ್ಸೊ ಹಾಗೂ ಬಾಲ್ಯ ವಿವಾಹ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ತಲೆಮರೆಸಿಕೊಂಡಿದ್ದ ಆರೋಪಿ ತಾತಪ್ಪನನ್ನು ಇದೀಗ ರಾಯಚೂರಿನಲ್ಲಿ (Raichur News) ಪೊಲೀಸರು ಬಂಧಿಸಿದ್ದಾರೆ.

ಜು.21 ರಂದು ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ತಾತಪ್ಪನನ್ನು ರಿಮ್ಸ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಿರುವ ಪೊಲೀಸರು, ವಿಚಾರಣೆ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಿದ್ದಾರೆ.

ಇದನ್ನೂ ಓದಿ: Physical Assault: ವಿದ್ಯಾರ್ಥಿನಿಯನ್ನು ಹೊತ್ತೊಯ್ದು ಅತ್ಯಾಚಾರವೆಸಗಿದ ಪಿಜಿ ಮಾಲೀಕ

ಇನ್ನು ಅಪ್ರಾಪ್ತೆಯ ಶಿಕ್ಷಣಕ್ಕೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರಿ ಯೋಜನೆಗಳ ಅಡಿ ಕೂಡಲೇ ಕ್ರಮ ಕೈಗೊಳ್ಳಬೇಕು, ಆ ಬಗ್ಗೆ ಆಯೋಗಕ್ಕೆ ವರದಿ ಕೊಡಬೇಕು ಅಂತ ರಾಯಚೂರು ಹಾಗೂ ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಅಧಿಕಾರಿಗಳಿಗೆ ರಾಜ್ಯ ಮಕ್ಕಳ ರಕ್ಷಣಾ ಆಯೋಗ ಸದಸ್ಯ ಶಶಿಧರ್ ಕೋಸಂಬೆ ಸೂಚಿಸಿದ್ದಾರೆ.