Shehnaaz Gill: ಆರಾಮವಾಗಿ ಕುಳಿತುಕೊಳ್ಳಲು ಸಾಧ್ಯವಾಗದ ಬಟ್ಟೆಗಳನ್ನು ಏಕೆ ಧರಿಸುತ್ತೀರಿ? ನಟಿ ಶೆಹ್ನಾಜ್ ಗಿಲ್‍ಗೆ ನೆಟ್ಟಿಗರ ಪ್ರಶ್ನೆ
Viral Video: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಶೆಹ್ನಾಜ್ ಗಿಲ್ ತನ್ನ ಉಡುಪನ್ನು ಸರಿ ಹೊಂದಿಸುತ್ತಿರುವುದನ್ನು ಕಾಣಬಹುದು. ಇದು ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ. ಅನೇಕರು ಅವರನ್ನು ಅಂತಹ ಉಡುಪನ್ನು ಧರಿಸಿದ್ದು ಯಾಕೆಂದು ಪ್ರಶ್ನಿಸಿದ್ದಾರೆ.


ಮುಂಬೈ: ಹನಿಸಿಂಗ್ (Honey Singh) ಅವರ ವಾಚ್ ಬ್ರ್ಯಾಂಡ್ ಬಿಡುಗಡೆಗಾಗಿ ನಡೆದ ಕಾರ್ಯಕ್ರಮವೊಂದರಲ್ಲಿ ನಟಿ ಶೆಹ್ನಾಜ್ ಗಿಲ್ (Shehnaaz Gill) ಭಾಗವಹಿಸಿದ್ದು, ಈ ವೇಳೆ ಅವರು ಧರಿಸಿದ್ದ ಉಡುಗೆಗೆ ಬಗ್ಗೆ ಚರ್ಚೆ ಆರಂಭವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಫ್ಯಾಷನ್ ಆಯ್ಕೆಗಳ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊ ವೈರಲ್ (Viral Video) ಆಗುತ್ತಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ ಶೆಹ್ನಾಜ್ ಗಿಲ್ ತನ್ನ ಉಡುಪನ್ನು ಸರಿಹೊಂದಿಸುತ್ತಿರುವುದನ್ನು ಕಾಣಬಹುದು. ಇದು ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ. ಅನೇಕರು ಅವರನ್ನು ಅಂತಹ ಅನಾನುಕೂಲ ಉಡುಪನ್ನು ಧರಿಸಿದ್ದಕ್ಕಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ವೈರಲ್ ವಿಡಿಯೊದಲ್ಲಿ, ಶೆಹನಾಜ್ ತನ್ನ ಉಡುಪನ್ನು ಚಿತ್ರೀಕರಣ ಮಾಡದಂತೆ ಕ್ಯಾಮೆರಾ ಮ್ಯಾನ್‌ಗೆ ವಿನಂತಿಸಿ ಬಳಿಕ ಅದನ್ನು ಸರಿ ಮಾಡುತ್ತಿರುವುದು ಕಂಡುಬಂದಿದೆ. ಇದೀಗ ಸೋಶಿಯಲ್ ಮೀಡಿಯಾ ಬಳಕೆದಾರರು ನಟಿಯ ನಡೆಯನ್ನು ಪ್ರಶ್ನಿಸುತ್ತಿದ್ದಾರೆ.
शहनाज गिल पर चढ़ा बोल्डनेस का खुमार, छोटी सी ड्रेस पहन हुईं अनकॉन्फर्टेबल, पैपराजी बोलीं- अरे भाई, रुक जाओ!#ShehnaazGill #BoldLook #UncomfortableMoment #ShehnaazViralVideo pic.twitter.com/b3rOYEXxAb
— Tadka Bollywood (@Onlinetadka) July 20, 2025
ಈ ಸುದ್ದಿಯನ್ನೂ ಓದಿ: Saiyaara Movie: ಐವಿ ಡ್ರಿಪ್ಸ್ ಹಾಕಿಕೊಂಡು ʼಸೈಯಾರʼ ಸಿನಿಮಾ ನೋಡಲು ಬಂದ ಅಭಿಮಾನಿ
ʼʼಆರಾಮವಾಗಿ ಕುಳಿತುಕೊಳ್ಳಲು ಸಾಧ್ಯವಾಗದ ಬಟ್ಟೆಗಳನ್ನು ನೀವು ಏಕೆ ಧರಿಸುತ್ತೀರಿ ಸಹೋದರಿ?ʼʼ ಎಂದು ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ. ʼʼನೀವು ತುಂಬಾ ನಾಚಿಕೆಪಡುವವರಾಗಿದ್ದರೆ ಅಂತಹ ಉಡುಗೆಯನ್ನು ಧರಿಸಿ ಬರಬಾರದಿತ್ತುʼʼ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಇಷ್ಟು ಚಿಕ್ಕ ಬಟ್ಟೆಗಳನ್ನು ಏಕೆ ಧರಿಸಿದ್ದಾರೆ? ಇಡೀ ಇಂಡಸ್ಟ್ರಿಗೆ ಅವಮಾನವಾಗಿದೆ. ಭಾರತದ ವಾತಾವರಣವನ್ನೇ ಕೆಡಿಸಿಬಿಟ್ಟಿದ್ದಾರೆ ಎಂದೆಲ್ಲ ಹಲವರು ಕಿಡಿಕಾರಿದ್ದಾರೆ.
ತನಗೆ ಕಂಫರ್ಟಬಲ್ ಆಗಿಲ್ಲ ಅನ್ನಿಸುತ್ತಿದ್ದರೆ, ಇಂಥ ಬಟ್ಟೆಗಳನ್ನು ಏಕೆ ಧರಿಸುತ್ತೀರಿ? ಎಂದು ಮಗದೊಬ್ಬ ಬಳಕೆದಾರ ಪ್ರಶ್ನಿಸಿದ್ದಾರೆ. ನಾನು ನಿಜವಾಗಿಯೂ ಶೆಹನಾಜ್ ಅವರನ್ನು ಇಷ್ಟಪಡುತ್ತೇನೆ. ಆದರೆ ಅವರ ಉಡುಗೆಯನ್ನು ಇಷ್ಟಪಡುವುದಿಲ್ಲ ಎಂದು ಮತ್ತೊಬ್ಬರು ಹೇಲಿದ್ದಾರೆ.
ನಟಿ ಇತ್ತೀಚೆಗೆ ಇದೇ ತರಹದ ಉಡುಪು ಧರಿಸಿದ್ದ ಹಲವು ಫೋಟೊಗಳನ್ನು ಹಂಚಿಕೊಂಡಿದ್ದರು. ಫೋಟೊಗಳಲ್ಲಿ ಅವರು ಸ್ಟ್ರಾಪಿ ಮಿನಿ ಡ್ರೆಸ್ ಧರಿಸಿರುವುದನ್ನು ಕಾಣಬಹುದು. ಅವರು ಸ್ಟ್ರಾಪಿ ತೋಳುಗಳನ್ನು ಹೊಂದಿರುವ ಮಿನಿ ಡ್ರೆಸ್ ಧರಿಸಿದ್ದರು ಮತ್ತು ಅದಕ್ಕೆ ಹೊಂದಿಕೆಯಾಗುವ ಹಿಮ್ಮಡಿ ಎತ್ತರದ ಚಪ್ಪಲಿ ಧರಿಸಿ ಆಕರ್ಷಕವಾಗಿ ಕಂಡಿದ್ದಾರೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ ಶೆಹನಾಜ್ ಕೊನೆಯದಾಗಿ ರಾಜ್‌ಕುಮಾರ್ ರಾವ್ ಮತ್ತು ತೃಪ್ತಿ ಡಿಮ್ರಿ ಅಭಿನಯದ ʼವಿಕ್ಕಿ ವಿದ್ಯಾ ಕಾ ವೋ ವಾಲಾʼ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ʼಕಿಸಿ ಕಾ ಭಾಯಿ ಕಿಸಿ ಕಿ ಜಾನ್ʼ ಚಿತ್ರದ ಮೂಲಕ ಅವರು ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು.