ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rashmika Mandanna: ಹಾರರ್ ಪಾತ್ರದಲ್ಲಿ ನಟಿ ರಶ್ಮಿಕಾ! ಯಾವ ಸಿನಿಮಾ ಗೊತ್ತೆ?

Rashmika Mandanna: ಖ್ಯಾತ ಸ್ಟಾರ್‌ ನಟರ ಜೊತೆ ಸಿನಿಮಾ ಮಾಡಿರುವ ರಶ್ಮಿಕಾ ಮಂದಣ್ಣ ಸದ್ಯ ರಾಘವ ಲಾರೆನ್ಸ್ ನಿರ್ದೇಶನದ ಸಿನಿಮಾ ವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಟಾಕ್ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿಯೇ ಇದೆ. ನಟಿ ರಶ್ಮಿಕಾ ಮಂದಣ್ಣ ಅವರು ರಾಘವ ಲಾರೆನ್ಸ್ ನಿರ್ದೇಶನದ ಬಹುನಿರೀಕ್ಷಿತ 'ಕಾಂಚನಾ 4' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದು ಈ ಚಿತ್ರದಲ್ಲಿ ಅವರು ದೆವ್ವದ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸಿನಿರಂಗದಲ್ಲಿ ಅತ್ಯಂತ ಬೇಡಿ ಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ತೆಲುಗು, ತಮಿಳು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ರಶ್ಮಿಕಾ ಎಲ್ಲೇ ಹೊದ್ರು ಸಕ್ಸಸ್ ಗಿಟ್ಟಿಸಿಕೊಂಡಿಯೇ ಬರುತ್ತಾರೆ. ಖ್ಯಾತ ಸ್ಟಾರ್‌ ನಟರ ಜೊತೆ ಸಿನಿಮಾ ಮಾಡಿರುವ ರಶ್ಮಿಕಾ ಮಂದಣ್ಣ ಸದ್ಯ ರಾಘವ ಲಾರೆನ್ಸ್ ನಿರ್ದೇಶನದ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಟಾಕ್ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿಯೇ ಇದೆ. ನಟಿ ರಶ್ಮಿಕಾ ಮಂದಣ್ಣ ಅವರು ರಾಘವ ಲಾರೆನ್ಸ್ ನಿರ್ದೇಶನದ ಬಹುನಿರೀಕ್ಷಿತ 'ಕಾಂಚನಾ 4' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದು, ಈ ಚಿತ್ರದಲ್ಲಿ ಅವರು ದೆವ್ವದ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

​ರಾಘವ ಲಾರೆನ್ಸ್ ಅವರ 'ಮುನಿ' ಮತ್ತು 'ಕಾಂಚನಾ' ಸಿನಿಮಾಗಳು ಪ್ರೇಕ್ಷಕರ ಮನ ಗೆದ್ದು ನೆನಪಿನಲ್ಲಿ ಉಳಿಯುವಂತೆ ಮಾಡಿದೆ. ದೆವ್ವದ ಕಥೆಗಳೊಂದಿಗೆ ಹಾಸ್ಯವನ್ನು ಬೆರೆಸಿ ತಯಾರಾಗುವ ಈ ಚಿತ್ರಗಳು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿವೆ. ಈಗಾಗಲೇ ವೀಕ್ಷಕರಿಗೆ ಈ ಚಿತ್ರಗಳು ಬಹಳಷ್ಟು ಇಷ್ಟವಾಗಿದೆ.‌ ಈಗ ಈ ಸರಣಿಯ ಮುಂದಿನ ಭಾಗಕ್ಕೆ ರಶ್ಮಿಕಾ ಸೇರಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗ್ತಾ ಇದ್ದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

​ಮೂಲಗಳ ಪ್ರಕಾರ, ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ನಟಿಸುವುದು ಪಕ್ಕಾ ಆಗಿದೆ. ಅವರಿಗೆ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನೀಡಲಾಗಿದೆ. ಅವರು ದೆವ್ವದ ಪಾತ್ರವನ್ನು ನಿರ್ವಹಿ ಸಲಿದ್ದಾರೆ ಎಂದು ಕೂಡ ಹೇಳಲಾಗ್ತ ಇದೆ. ಜೊತೆಗೆ, ನಟಿ ಪೂಜಾ ಹೆಗ್ಡೆ ಮತ್ತು ನೋರಾ ಫತೇಹಿ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ ಎನ್ನುವ ಮಾಹಿತಿ ಕೂಡ ವೈರಲ್ ಆಗಿದೆ. ​ಹಿಂದಿನ ಕಾಂಚನಾ ಚಿತ್ರಗಳಲ್ಲಿ ನಟಿಸಿದ್ದ ಕೋವೈ ಸರಳಾ, ದೇವದರ್ಶಿನಿ ಮತ್ತು ಶ್ರೀಮಾನ್ ಅವರಂತಹ ನಟರು ಈ ಚಿತ್ರದಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಸದ್ಯಕ್ಕೆ ಈ ಬಗ್ಗೆ ನಿರ್ಮಾಪ ಕರು ಯಾವುದೇ ಅಧಿಕೃತ ಮಾಹಿತಿ ಹೇಳಿಲ್ಲ. ಆದರೂ, ಈ ಚಿತ್ರದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ ಎನ್ನಲಾಗುತ್ತಿದೆ

ಇದನ್ನು ಓದಿ:Elumale Movie: ಏಳುಮಲೆ ಟ್ರೇಲರ್ ರಿಲೀಸ್; ಸಾಥ್ ಕೊಟ್ಟ ಡಾಲಿ-ನವೀನ್ ಶಂಕರ್, ಶರಣ್!

ರಶ್ಮಿಕಾ ಮಂದಣ್ಣ ಅವರು ಸದ್ಯ 'ಥಾಮ', 'ದಿ ಗರ್ಲ್‌ಫ್ರೆಂಡ್' ಮತ್ತು ಅಲ್ಲು ಅರ್ಜುನ್ ಅವ ರೊಂದಿಗೆ 'ಪುಷ್ಪ 3' ಚಿತ್ರದಲ್ಲಿ ನಿರತರಾಗಿದ್ದಾರೆ. ಅದೇ ರೀತಿ, ರಾಘವ ಲಾರೆನ್ಸ್ ಕೂಡ 'ಬೆಂಜ್' ಮತ್ತು 'ಬುಲೆಟ್' ಚಿತ್ರಗಳ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಕಾಂಚನಾ 4' ಚಿತ್ರದಲ್ಲಿ ರಶ್ಮೀಕಾ ನಟಿಸುವುದು ಪಕ್ಕಾವಾದರೆ ಲಾರೆನ್ಸ್ ಅವರ ವಿಶಿಷ್ಟ ಕಥಾಹಂದರ ಮತ್ತು ರಶ್ಮಿಕಾ ಅವರ ಹೊಸ ಪಾತ್ರವು ಈ ಚಿತ್ರ ದೊಡ್ಡ ಮಟ್ಟದ ಯಶಸ್ಸು ಗಳಿಸುವ ಸಾಧ್ಯತೆಗಳಿವೆ. ಸದ್ಯ ಈ ಬಗ್ಗೆ ಅಭಿ ಮಾನಿಗಳಲ್ಲಿ ಕೂಡ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ.