ನವದೆಹಲಿ: ಹಿಂದಿ ಕಿರುತೆರೆಯ ‘ಮಹಾ ಭಾರತ’ ಸೀರಿಯಲ್ ನಲ್ಲಿ ಕರ್ಣನ ಪಾತ್ರ ಮಾಡಿ ಜನ ಪ್ರಿಯರಾಗಿದ್ದ ನಟ ಪಂಕಜ್ ಧೀರ್ (Actor Pankaj Dheer) ನಿಧನರಾಗಿದ್ದಾರೆ. ಇವರ ಅಗಲು ವಿಕೆಗೆ ಇಡೀ ಚಿತ್ರರಂಗವೇ ಕಂಬನಿ ಮಿಡಿದಿದೆ. ಪಂಕಜ್ ಧೀರ್ ಅಕ್ಟೋಬರ್ 15 ರಂದು ವಿಧಿವಶ ರಾಗಿದ್ದು ಮುಂಬೈನಲ್ಲಿ ನಡೆದ ಅವರ ಅಂತಿಮ ವಿಧಿವಿಧಾನಗಳಿಗೆ ಚಲನಚಿತ್ರ ಮತ್ತು ಕಿರುತೆರೆ ಉದ್ಯಮದ ಅನೇಕ ಗಣ್ಯರು ಹಾಜರಾಗಿ ಗೌರವ ಸಲ್ಲಿಸಿದರು. ಇನ್ನು ಅಪ್ಪನ ಅಗಲುವಿಕೆಗೆ ಪಂಕಜ್ ಧೀರ್ ಅವರ ಪುತ್ರ ನಿಖಿತಿನ್ ಧೀರ್ ತೀವ್ರ ದುಃಖದಲ್ಲಿ ಕಣ್ಣೀರಿಡುತ್ತಿದ್ದರು. ಈ ಸಂದರ್ಭದಲ್ಲಿ, ನಟ ಸಲ್ಮಾನ್ ಖಾನ್ (Salman Khan) ನಿಖಿತಿನ್ ಅವರನ್ನು ಬಿಗಿದಪ್ಪಿ ಸಾಂತ್ವನ ಹೇಳುತ್ತಿರುವ ದೃಶ್ಯ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಜನಪ್ರಿಯ ನಟ ಪಂಕಜ್ ಧೀರ್ ತಮ್ಮ 68 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಹಲವು ವರ್ಷ ಗಳಿಂದಲೂ ಕ್ಯಾನ್ಸರ್ ಸಮಸ್ಯೆ ಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗಷ್ಟೆ ಕ್ಯಾನ್ಸರ್ ಗಾಗಿ ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಪಂಕಜ್ ಅವರ ಹಠಾತ್ ಸಾವಿನ ಸುದ್ದಿ ಚಲನಚಿತ್ರೋದ್ಯಮದ ಸದಸ್ಯರು ಮತ್ತು ಅಭಿಮಾನಿಗಳ ಪಾಲಿಗೆ ನಿಜಕ್ಕೂ ಆಘಾತಕಾರಿ ಸುದ್ದಿಯಾಗಿದೆ..
ಇದನ್ನು ಓದಿ:Salman Khan: ಫ್ಯಾಷನ್ ಶೋ ಇವೆಂಟ್‌ನಲ್ಲಿ ಯಂಗ್ ಲುಕ್‌ನಲ್ಲಿ ಮಿಂಚಿದ ನಟ ಸಲ್ಮಾನ್ ಖಾನ್!
ಪಂಕಜ್ ಧೀರ್ ಅವರ ಅಂತ್ಯಕ್ರಿಯೆಯು ಮುಂಬೈನ ಸಾಂತಾ ಕ್ರೂಜ್‌ನಲ್ಲಿರುವ ಪವನ್ ಹನ್ಸ್ ಸ್ಮಶಾನದಲ್ಲಿ ನೆರವೇರಿದ್ದು ಅನೇಕ ಗಣ್ಯರು ನಟ ನಟಿಯರು ಪಾಲ್ಗೊಂಡಿದ್ದರು. ಹೇಮಾ ಮಾಲಿನಿ, ಸಿದ್ಧಾರ್ಥ್ ಮಲ್ಹೋತ್ರಾ, ಮುಖೇಶ್ ರಿಷಿ, ದೀಪಿಕಾ ಕಕ್ಕರ್ ಮತ್ತು ಶೋಯೆಬ್ ಇಬ್ರಾಹಿಂ ಸೇರಿ ದಂತೆ ಅನೇಕ ಕಲಾವಿದರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಅದೇ ರೀತಿ ನಟ ಸಲ್ಮಾನ್ ಖಾನ್ ಕೂಡ ಆಗಮಿಸಿದ್ದು ಪಂಕಜ್ ಧೀರ್ ಅವರ ಪುತ್ರ ನಿಖಿತಿನ್ ಧೀರ್ ತೀವ್ರ ದುಃಖದಲ್ಲಿ ಕಣ್ಣೀರಿಡುತ್ತಿದ್ದಾಗ ನಟ ಸಲ್ಮಾನ್ ಸಮಾಧಾನ ಪಡಿಸುತ್ತಿರುವ ದೃಶ್ಯ ನೆಟ್ಟಿಗರ ಹೃದಯ ಗೆದ್ದಿದೆ. ಸಲ್ಮಾನ್ ಖಾನ್ ಮತ್ತು ಪಂಕಜ್ ಧೀರ್ ಅವರ ಕುಟುಂಬಗಳ ನಡುವೆ ಉತ್ತಮ ಆತ್ಮಿಯ ಸಂಬಂಧ ವಿತ್ತು. ಈ ಇಬ್ಬರು ನಟರು ಸನಮ್ ಬೇವಾಫಾ ಮತ್ತು 'ತುಮ್ಕೋ ನಾ ಭೂಲ್ ಪಾಯೇಂಗೆ' ಚಿತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು.
ನಟ ಪಂಕಜ್ ಧೀರ್ ಹಿಂದಿ, ತೆಲುಗು, ಕನ್ನಡ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿ ದ್ದಾರೆ.1988 ರಲ್ಲಿ ಬಿ.ಆರ್. ಚೋಪ್ರಾ ಅವರ ಮಹಾಕಾವ್ಯ ಮಹಾಭಾರತ ಸೀರಿಯಲ್ ರೂಪದಲ್ಲಿ ಟಿವಿಯಲ್ಲಿ ಪ್ರಸಾರವಾಗಿತ್ತು. ಇದರಲ್ಲಿನ ಕರ್ಣನ ಪಾತ್ರದಲ್ಲಿ ನಟಿಸುವ ಮೂಲಕ ಬಹಳಷ್ಟು ಹೆಸರು ಪಡೆದಿದ್ದರು.ವಿಶೇಷವೆಂದರೆ ಅವರು ವಿಷ್ಣುವರ್ಧನ್ ಜೊತೆಗೆ ಎರಡು ಕನ್ನಡ ಸಿನಿಮಾ ಗಳಲ್ಲಿ ಕೂಡ ನಟಿಸಿದ್ದಾರೆ. ಜೊತೆಗೆ ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಸಹ ನಟಿಸಿದ್ದ ‘ವಿಷ್ಣು-ವಿಜಯ’ ಸಿನಿಮಾದಲ್ಲಿ ಪಂಕಜ್ ಧೀರ್ ಅಮಿತ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.