ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಬಿಗ್ ಬಾಸ್​ಗೆ ಕಾಲಿಟ್ಟ ಹ್ಯಾಂಡ್ಸಮ್ ಹಂಕ್ ಅಭಿಷೇಕ್ ಶ್ರೀಕಾಂತ್

ಅಭಿಷೇಕ್ ಶ್ರೀಕಾಂತ್ ಅವರನ್ನು ಕಿಚ್ಚ ಸುದೀಪ್ ಗ್ರ್ಯಾಂಡ್ ಆಗಿ ವೆಲ್ಕಂ ಮಾಡಿ ಬಿಗ್ ಬಾಸ್ ಕನ್ನಡ ಸೀಸನ್ 12 ಮನೆಯೊಳಗೆ ಕಳುಹಿಸಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ವಧು ಸೀರಿಯಲ್ ನಲ್ಲಿ ಸಾರ್ಥಕ್ ಪಾತ್ರದ ಮೂಲಕ ಮಿಂಚಿದ ಅಭಿಷೇಕ್ ಶ್ರೀಕಾಂತ್, ತಮ್ಮ ಪಾತ್ರಕ್ಕೆ ಜೀವ ತುಂಬಿದ್ದರು.

Bigg Boss abhishek shrikanth

ಬಿಗ್ ಬಾಸ್ ಕನ್ನಡ ಸೀಸನ್ 12 ಗ್ರ್ಯಾಂಡ್ ಓಪನಿಂಗ್ ನಡೆಯುತ್ತಿದೆ. ಕಿಚ್ಚ ಸುದೀಪ್ ನೇತೃತ್ವದಲ್ಲಿ ಈಗಾಗಲೇ ಕೆಲ ಸ್ಪರ್ಧಿಗಳನ್ನು ದೊಡ್ಮನೆಯೊಳಗೆ ಕಳುಹಿಸಲಾಗಿದೆ. ಕಾಕ್ರೋಚ್ ಸುಧಿ, ಗಿಲ್ಲಿ ನಟ, ಚಂದ್ರ ಪ್ರಭಾ, ಡಾಗ್ ಸತೀಶ್ ಸೇರಿದಂತೆ ಕೆಲ ಮಂದಿ ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಾಗಿದೆ. ಇದೀಗ ಮತ್ತೋರ್ವ ಸ್ಪರ್ಧಿಯಾಗಿ ಅಭಿಷೇಕ್ ಶ್ರೀಕಾಂತ್ ಎಂಟ್ರಿ ಕೊಟ್ಟಿದ್ದಾರೆ.

ಅಭಿಷೇಕ್ ಶ್ರೀಕಾಂತ್ ಅವರನ್ನು ಕಿಚ್ಚ ಸುದೀಪ್ ಗ್ರ್ಯಾಂಡ್ ಆಗಿ ವೆಲ್ಕಂ ಮಾಡಿ ಮನೆಯೊಳಗೆ ಕಳುಹಿಸಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ವಧು ಸೀರಿಯಲ್ ನಲ್ಲಿ ಸಾರ್ಥಕ್ ಪಾತ್ರದ ಮೂಲಕ ಮಿಂಚಿದ ಅಭಿಷೇಕ್ ಶ್ರೀಕಾಂತ್, ತಮ್ಮ ಪಾತ್ರಕ್ಕೆ ಜೀವ ತುಂಬಿದ್ದರು. ಇವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಅಪಾರ ಅಭಿಮಾನಿ ಬಳಗವಿದೆ.

ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಇವರು, ಪ್ರತಿಷ್ಠಿತ ಬಿಷಪ್ ಕಾಟನ್ ಬಾಯ್ಸ್ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ನಂತರ ಪಿಇಎಸ್ ಯೂನಿವರ್ಸಿಟಿಯಲ್ಲಿ ಇಂಜಿನಿಯರಿಂಗ್ ಮಾಡಿದ್ದಾರೆ. ವಸಿಷ್ಠ ಸಿಂಹ ನಟನೆಯ ತಲ್ವಾರ್ ಪೇಟೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟ ಅಭಿಷೇಕ್, ಮುಂದೆ ಕೆಟಿಎಂ ಹಾಗೂ ಡಾಲಿಯವರ ಕೋಟೆ ಸಿನಿಮಾಗಳಲ್ಲಿ ನಟಿಸಿದರು.

ಫಿಟ್ನೆಸ್‌ಗೆ ಹೆಚ್ಚು ಮಹತ್ವ ನೀಡುವ ಇರಿಗೆ ಬೈಕ್‌ಗಳೆಂದರೆ ಪಂಚಪ್ರಾಣವಂತೆ. ಆಗಾಗ ಸೋಲೋ ಟ್ರಿಪ್ ಮಾಡುತ್ತಿರುತ್ತಾರೆ. ಅಭಿಷೇಕ್ ಶ್ರೀಕಾಂತ್‌ಗೆ ಡ್ಯಾನ್ಸ್ ಅಂದರೆ ಸಿಕ್ಕಾಪಟ್ಟೆ ಪ್ರೀತಿ. ಸಮಯ ಸಿಕ್ಕಾಗೆಲ್ಲಾ ಡ್ಯಾನ್ಸ್ ಕ್ಲಾಸ್ ಅಟೆಂಡ್ ಮಾಡುವ ಇವರು, ಸೂಪರ್ ಡ್ಯಾನ್ಸರ್ ಕೂಡ ಹೌದು. ಈ ಹಿಂದೆ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗಿದ್ದ ಲಕ್ಷಣ ಸೀರಿಯಲ್‌ನಲ್ಲಿ ಅಭಿಷೇಕ್ ಮೌರ್ಯ ಎಂಬ ಪಾತ್ರ ಮಾಡಿದ್ದರು. ಈ ರೋಲ್ ಆರಂಭದಲ್ಲಿ ನೆಗೆಟಿವ್ ಆಗಿದ್ದರೂ, ಸಮಯ ಕಳೆದಂತೆ ಪಾಸಿಟಿವ್ ಆಗಿ ಬದಲಾಗಿತ್ತು. ಈ ಮೂಲಕ ಒಂದೇ ಸೀರಿಯಲ್‌ನಲ್ಲಿ ಎರಡು ರೀತಿಯ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಇದೀಗ ಇವರು ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿದ್ದಾರೆ.