ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
TV Serials
Puttakkana Makkalu: ವೀಕ್ಷಕರಿಗೆ ಮತ್ತೊಮ್ಮೆ ಶಾಕ್ ಕೊಟ್ಟ ಪುಟ್ಟಕ್ಕನ ಮಕ್ಕಳು: ಸೀರಿಯಲ್​ನಿಂದ ಹೊರಬಂದ ಮತ್ತೊಬ್ಬ ನಟಿ

ಪುಟ್ಟಕ್ಕನ ಮಕ್ಕಳು ಸೀರಿಯಲ್​ನಿಂದ ಹೊರಬಂದ ಮತ್ತೊಬ್ಬ ನಟಿ

ಪುಟ್ಟಕ್ಕನ ಮಕ್ಕಳು ರೇಟಿಂಗ್ ಪಾತಾಳಕ್ಕೆ ಕುಸಿದ ಬಳಿಕ ನಿರ್ದೇಶಕರು ಧಾರಾವಾಹಿಯನ್ನು ಮೇಲಕ್ಕೆತ್ತಲು ನಾನಾ ಟ್ವಿಸ್ಟ್ ನೀಡಿ ಪ್ರಯತ್ನ ಪಟ್ಟರು, ಆದರೆ ಅದು ಯಾವುದೂ ಸಾಧ್ಯವಾಗುತ್ತಿಲ್ಲ. ಮೊದಲೇ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿರುವ ಈ ಧಾರಾವಾಹಿಯಿಂದ ಈಗ ಮತ್ತೊಬ್ಬ ನಟಿ ಹೊರಬಂದಿದ್ದಾರೆ.

Bhagya Lakshmi Serial: ಮಗಳಿಗೆ ಪಾಠ ಕಲಿಸಲು ಕಟುವಾದ ಭಾಗ್ಯ: ಕೋಪಗೊಂಡ ತನ್ವಿ

ಮಗಳಿಗೆ ಪಾಠ ಕಲಿಸಲು ಕಟುವಾದ ಭಾಗ್ಯ: ಕೋಪಗೊಂಡ ತನ್ವಿ

ತನ್ವಿಗೆ ಅಮ್ಮನ ಕಷ್ಟಗಳ ಬಗ್ಗೆ ಯೋಚನೆಯೇ ಇಲ್ಲ. ಆಕೆಗೆ ತನ್ನ ಗೆಳೆಯರ ಜೊತೆಗೆ ಮಜಾ ಮಾಡುವುದು ಎಂದರೆ ಬಹಳಷ್ಟು ಇಷ್ಟ. ಆದರೆ ಭಾಗ್ಯಗೆ ಬಹಳ ಕಷ್ಟವಾಗುತ್ತದೆ. ಕೊನೆಗೆ ನಿಮ್ಮ ಅಜ್ಜಿಯ ಬಳಿ ಒಂದು ಮಾತು ಹೇಳುತ್ತೇನೆ. ಅವರು ಒಪ್ಪಿದರೆ ನೀನು ಹೋಗಬಹುದು ಎಂದು ಭಾಗ್ಯ ಹೇಳಿದಾಗ ತನ್ವಿಗೆ ಸಿಟ್ಟು ಬರುತ್ತೆ.

Kannada Serial TRP: ಕರಿಮಣಿ ಅಲ್ಲ: ಕರ್ನಾಟಕದ ನಂಬರ್ ಒನ್ ಧಾರಾವಾಹಿ ಇದುವೇ ನೋಡಿ

ಕರಿಮಣಿ ಅಲ್ಲ: ಕರ್ನಾಟಕದ ನಂಬರ್ ಒನ್ ಧಾರಾವಾಹಿ ಇದುವೇ ನೋಡಿ

ಇದೀಗ 10ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ ಹೊರಬಿದ್ದಿದೆ. ಇತ್ತೀಚೆಗಷ್ಟೇ ಆರಂಭವಾದ ನಾ ನಿನ್ನ ಬಿಡಲಾರೆ, ಅಣ್ಣಯ್ಯ ಹಾಗೂ ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿಗಳು ಟಿಆರ್‌ಪಿಯಲ್ಲಿ ಮುಂದಿವೆ. ಹೊಸ ಧಾರಾವಾಹಿ ಆದ ಕಾರಣ ಆರಂಭದಲ್ಲಿ ಧಾರಾವಾಹಿಗಳಿಗೆ ಉತ್ತಮ ವೀಕ್ಷಕರಿರುತ್ತಾರೆ. ಆದರೆ, ಮುಂದಿನ ದಿನಗಳಲ್ಲಿ ಸೀರಿಯಲ್ ಹೇಗೆ ಸಾಗುತ್ತೆ ಎಂಬುದು ಮುಖ್ಯ. ಆದರೆ, ನಂಬರ್ ಒನ್ ಸೀರಿಯಲ್ ಯಾವುದು ಗೊತ್ತೇ?.

Rakshak Bullet: ಬಿಬಿಎಂಪಿ ಜೊತೆ ಬೀದಿಗಳಲ್ಲಿ ಕಸ ಗುಡಿಸಿದ ರಕ್ಷಕ್ ಬುಲೆಟ್

ಬಿಬಿಎಂಪಿ ಜೊತೆ ಬೀದಿಗಳಲ್ಲಿ ಕಸ ಗುಡಿಸಿದ ರಕ್ಷಕ್ ಬುಲೆಟ್

ಈ ವಾರ ರಕ್ಷಕ್ ಬಹುಮುಖ್ಯ ಟಾಸ್ಕ್ ಒಂದನ್ನ ನಿರ್ವಹಿಸಿದ್ದಾರೆ. ಭರ್ಜರಿ ಬ್ಯಾಚುಲರ್ಸ್‌ ಶೋನಲ್ಲಿ ಈ ವಾರ ದುಡಿಮೆಯ ಕಾಣಿಕೆ ಎಂಬ ಟಾಸ್ಕ್‌ ಅನ್ನು ಬ್ಯಾಚುಲರ್ಸ್‌ಗೆ ನೀಡಲಾಗಿದೆ. ಇದರಲ್ಲಿ ರಕ್ಷಕ್‌ ಬುಲೆಟ್ ಕೈಯಲ್ಲಿ ಪೊರಕೆ ಹಿಡಿದು ಕಸ ಹೊಡೆದಿದ್ದಾರೆ.

Ugramm Manju: ಗೌತಮಿ ಜೊತೆ ಸೇರಿ ಬದಲಾದ ಉಗ್ರಂ ಮಂಜು: ತನ್ನಿಷ್ಟವನ್ನ ತ್ಯಜಿಸಿದ ನಟ

ಗೌತಮಿ ಜೊತೆ ಸೇರಿ ಬದಲಾದ ಉಗ್ರಂ ಮಂಜು: ತನ್ನಿಷ್ಟವನ್ನ ತ್ಯಜಿಸಿದ ನಟ

ಬಿಗ್ ಬಾಸ್ ಬರುವುದಕ್ಕೂ ಮುನ್ನ ಲೈಫ್ ಅನ್ನು ಅಷ್ಟೊಂದು ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ. ಬೇಕಾಬಿಟ್ಟಿ ಹಣ ಖರ್ಚು, ಕುಡಿತದ ಚಟಕ್ಕೆ ಒಳಗಾಗಿದ್ದರು. ಇದನ್ನು ಸ್ವತಃ ಅವರೇ ದೊಡ್ಮನೆಯೊಳಗೆ ಹೇಳಿದ್ದರು. ಆದರೀಗ ಮಂಜು ಸಂಪೂರ್ಣವಾಗಿ ಬದಲಾಗಿದ್ದಾರೆ. ಬಿಗ್ ಬಾಸ್ನಿಂದ ಹೊರಬಂದ ಬಳಿಕ ಮಂಜು ಹೊಸ ಜೀವನ ಶುರುಮಾಡಿದ್ದಾರೆ.

Bhagya Lakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಗೆ KGF ಸ್ಟಾರ್ ಜೂ. ರಾಕಿ ಭಾಯ್ ಎಂಟ್ರಿ: ಭಾಗ್ಯ ಲಕ್ ಬದಲಾಗುತ್ತಾ?

ಭಾಗ್ಯಲಕ್ಷ್ಮೀ ಧಾರಾವಾಹಿಗೆ KGF ಸ್ಟಾರ್ ಜೂ. ರಾಕಿ ಭಾಯ್ ಎಂಟ್ರಿ

ರೆಸಾರ್ಟ್ ಮ್ಯಾನೇಜರ್ ಭಾಗ್ಯಾಳನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಸದ್ಯ ಹೊಸ ಕೆಲಸಕ್ಕೆ ಮತ್ತೆ ಅಲಿಯಬೇಕಾಗಿ ಬಂದಿದೆ. ಆದರೆ, ಇದರಲ್ಲೊಂದು ಟ್ವಿಸ್ಟ್ ಸಿಕ್ಕಿದೆ. ಭಾಗ್ಯಲಕ್ಷ್ಮೀ ಧಾರಾವಾಹಿಗೆ ಜೂನಿಯರ್ ರಾಕಿ ಭಾಯ್ ಎಂಟ್ರಿ ಕೊಟ್ಟು ಭಾಗ್ಯಾಳನ್ನು ಭೇಟಿಯಾಗಿದ್ದಾನೆ.

Chaithra Kundapura: ಬಾಯ್ಸ್ vs ಗರ್ಲ್ಸ್ ನಲ್ಲಿ ನಾಗವಲ್ಲಿಯಾಗಿ ಬದಲಾದ ಚೈತ್ರಾ ಕುಂದಾಪುರ

ಬಾಯ್ಸ್ vs ಗರ್ಲ್ಸ್ ನಲ್ಲಿ ನಾಗವಲ್ಲಿಯಾಗಿ ಬದಲಾದ ಚೈತ್ರಾ ಕುಂದಾಪುರ

ಫೈರ್‌ಬ್ರ್ಯಾಂಡ್‌ ಎಂದೇ ಖ್ಯಾತಿ ಪಡೆದಿರುವ ಚೈತ್ರಾ ಕುಂದಾಪುರ ಈ ವಾರ ಬಾಯ್ಸ್ vs ಗರ್ಲ್ಸ್ ನಲ್ಲಿ ಹೊಸ ರೂಪ ತಾಳಿದ್ದಾರೆ. ಚೈತ್ರಾ ಅವರು ನಾಗವಲ್ಲಿ ಲುಕ್ನಲ್ಲಿ ಗಮನ ಸೆಳೆದಿದ್ದಾರೆ. ಈ ಎಪಿಸೋಡ್ ವೀಕೆಂಡ್ನಲ್ಲಿ ಪ್ರಸಾರ ಕಾಣಲಿದ್ದು ಧೂಳೆಬ್ಬಿಸುವುದು ಖಚಿತ.

Rajath Kishan: ಹೆಂಡತಿಯ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿದ ರಜತ್: ಬಿಗ್ ಬಾಸ್ ಸ್ಪರ್ಧಿಗಳು ಭಾಗಿ

ಹೆಂಡತಿಯ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿದ ರಜತ್

ರಜತ್ ಕಿಶನ್ ಅವರು ಪತ್ನಿ ಅಕ್ಷಿತಾ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸಿದ್ದಾರೆ. ಈ ಸಂಭ್ರಮದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ಕೂಡ ಭಾಗಿಯಾಗಿ‌ ಅಕ್ಷಿತಾಗೆ ಶುಭಕೋರಿದ್ದಾರೆ. ಬರ್ತ್‌ಡೇ ಪಾರ್ಟಿಗೆ ಭವ್ಯಾ ಗೌಡ, ವಿನಯ್ ಗೌಡ, ಮೋಕ್ಷಿತಾ ಪೈ, ಧನರಾಜ್ ಆಚಾರ್, ಶಿಶಿರ್‌ ಶಾಸ್ತ್ರಿ, ಉಗ್ರಂ ಮಂಜು, ನಿವೇದಿತಾ ಗೌಡ ಹಾಜರಾಗಿ ಅಕ್ಷಿತಾಗೆ ವಿಶಸ್ ತಿಳಿಸಿದರು.

Eshani: ಉರಿಬಿಸಿಲಿನಲ್ಲಿ ಬಿಕಿನಿ ಧರಿಸಿ ಫೋಟೋ ಶೂಟ್ ಮಾಡಿಸಿದ ಬಿಗ್ ಬಾಸ್ ಖ್ಯಾತಿಯ ಇಶಾನಿ

ಉರಿಬಿಸಿಲಿನಲ್ಲಿ ಬಿಕಿನಿ ಧರಿಸಿ ಫೋಟೋ ಶೂಟ್ ಮಾಡಿಸಿದ ಇಶಾನಿ

ಬಿಗ್ ಬಾಸ್ ಕನ್ನಡ ಸೀಸನ್ 10ರ ಮೂಲಕ ಕನ್ನಡಿಗರಿಗೆ ಹೆಚ್ಚು ಪರಿಚಿತರಾದ ಇಶಾನಿ ಇದೀಗ ತಮ್ಮ ಸಮ್ಮರ್ ಟ್ರಿಪ್‌ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪಿಂಕ್ ಕಲರ್ ಬಿಕಿನಿ ಧರಿಸಿ ಸಖತ್ ಹಾಟ್ ಆಗಿ ಫೋಟೋವನ್ನು ಇಶಾನಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Bhagya Lakshmi Serial: ನನ್ನ ಮುಂದೆ ತಪ್ಪಾಯಿತು ಅಂತ ಕೇಳ್ಕೊ ಎಂದ ತಾಂಡವ್​ಗೆ ಭಾಗ್ಯ ಹೇಳಿದ್ದೇನು ಗೊತ್ತೇ?

ಭಾಗ್ಯಾಗೆ 'ನನ್ನ ಮುಂದೆ ತಪ್ಪಾಯಿತು ಅಂತ ಕೇಳ್ಕೊ' ಎಂದ ತಾಂಡವ್​

ತಾಂಡವ್, ನನ್ನ ಮುಂದೆ ಬಂದು ಕೈ ಮುಗಿದು ಬೇಡ್ಕೊ.. ತಪ್ಪಾಯ್ತು ಅಂತ ಎಂದು ಹೇಳುತ್ತಾನೆ. ಇವರ ಮಾತಿನಿಂದ ತಾಳ್ಮೆ ಕಳೆದುಕೊಂಡ ಭಾಗ್ಯಾ, ನಾನು ಮುಂದೆ ಕೈಮುಗಿದು ಬೇಡ್ಕೋಬೇಕಾ?.. ನನ್ನ ಕೈಯಲ್ಲಿ ಏನಾಗುತ್ತೆ ಅಂತ ಮಾಡಿ ತೋರಿಸ್ತೀನಿ.. ಯಾವಗ ನೋಡಿದ್ರು ಇನ್ನೊಬ್ಬರ ಜೀವನ ನೋಡಿ ಆಡಿ ನಗೋದೇ ನಿಮ್ಮ ಕೆಲಸ ಎಂದು ಹೇಳಿ ಅಲ್ಲಿಂದ ಹೊರಡುತ್ತಾಳೆ.

Karna Serial: ಭವ್ಯಾ, ಮೋಕ್ಷಿತಾ, ರಂಜನಿಯೂ ಅಲ್ಲ: ಕಿರಣ್ ರಾಜ್ ಕರ್ಣ ಧಾರಾವಾಹಿಯ ನಾಯಕಿ ಯಾರು..?

ಕಿರಣ್ ರಾಜ್ ಕರ್ಣ ಧಾರಾವಾಹಿಯ ನಾಯಕಿ ಯಾರು..?

ಪ್ರೊಮೋ ಬಿಡುಗಡೆ ಆದಾಗಿನಿಂದ ಕರ್ಣ ಧಾರಾವಾಹಿಗೆ ನಾಯಕಿ ಯಾರು?, ಕಿರಣ್ ರಾಜ್ಗೆ ಜೋಡಿ ಯಾರು? ಎಂಬ ಕುರಿತು ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಸದ್ಯ ಟ್ರೆಂಡಿಂಗ್ನಲ್ಲಿರುವ ನಾಯಕಿಯರೆಂದರೆ ಭವ್ಯಾ ಗೌಡ ಹಾಗೂ ಮೋಕ್ಷಿತಾ ಪೈ. ಆದರೆ, ಈ ಧಾರಾವಾಹಿಗೆ ನಾಯಕಿಯರು ಇವರಲ್ವಂತೆ.

Rajath Kishan: ಶರ್ಟ್ ಮೇಲೆ D BOSS ಹೆಸರು: ಲಾಂಗ್ ಹಿಡಿದು ರೀಲ್ಸ್ ಮಾಡಿದ ರಜತ್ ವಿರುದ್ಧ ಬೈಗುಳಗಳ ಸುರಿಮಳೆ

ಲಾಂಗ್ ಹಿಡಿದು ರೀಲ್ಸ್ ಮಾಡಿದ ರಜತ್ ವಿರುದ್ಧ ಬೈಗುಳಗಳ ಸುರಿಮಳೆ

ರಜತ್ ಡಿ ಬಾಸ್ ಎಂದು ಬರೆದಿರುವ ಶರ್ಟ್ ಅನ್ನು ತೊಟ್ಟು ಕೈಯಲ್ಲಿ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದಾರೆ. ಇವರಿಗೆ ವಿನಯ್ ಗೌಡ ಕೂಡ ಸಾಥ್ ನೀಡಿದ್ದಾರೆ. ಕೈಯಲ್ಲಿ ಲಾಂಗು, ಕಣ್ಣಿಗೆ ಕೂಲಿಂಗ್ ಹಾಕಿಕೊಂಡು ದರ್ಶನ್ ಅವರ ಅಭಿನಯದ ಮೆಜೆಸ್ಟಿಕ್ ಸಿನಿಮಾದ ಹಾಡಿಗೆ ಸ್ಲೋ ಮೋಷನ್ ವಾಕ್ ಮಾಡಿದ್ದಾರೆ.

Bhagya Lakshmi Serial: ಮುಗಿಯದ ಸಂಕಷ್ಟ: ಜೋಕರ್ ವೇಷದ ಕೆಲಸವನ್ನೂ ಕಳೆದುಕೊಂಡ ಭಾಗ್ಯ

ಮುಗಿಯದ ಸಂಕಷ್ಟ: ಜೋಕರ್ ವೇಷದ ಕೆಲಸವನ್ನೂ ಕಳೆದುಕೊಂಡ ಭಾಗ್ಯ

ಭಾಗ್ಯಾ ಕೆಲಸ ಕಳೆದುಕೊಂಡಿದ್ದಾಳೆ. ನೀನು ಇಷ್ಟು ದಿನ ಇಲ್ಲಿ ಇದ್ದಿದ್ದೆ ನಮಗೆ ಸಮಸ್ಯೆ ಆಗ್ತಾ ಇತ್ತು.. ಇನ್ಮುಂದೆ ನೀವು ಇಲ್ಲಿ ಕೆಲಸ ಮಾಡ್ತಾ ಇಲ್ಲ ಎಂದು ರೆಸಾರ್ಟ್ ಮ್ಯಾನೇಜರ್ ಹೇಳಿದ್ದಾರೆ. ಈ ಮೂಲಕ ಭಾಗ್ಯಾ ಈಗಿರುವ ಕೆಲಸ ಕೂಡ ಕಳೆದುಕೊಂಡಿದ್ದಾರೆ.

Bhavya Gowda: ಪ್ರಭುದೇವರನ್ನು ಭೇಟಿಯಾದ ಭವ್ಯಾ ಗೌಡ: ಕಾದಿದೆ ದೊಡ್ಡ ಸರ್ಪ್ರೈಸ್?

ಪ್ರಭುದೇವರನ್ನು ಭೇಟಿಯಾದ ಭವ್ಯಾ ಗೌಡ: ಕಾದಿದೆ ದೊಡ್ಡ ಸರ್ಪ್ರೈಸ್?

ಭವ್ಯಾ ಗೌಡ ಯಾವುದೇ ಸೀರಿಯಲ್ನಲ್ಲಿ ನಟಿಸುತ್ತಿಲ್ಲ. ಸಿನಿಮಾ ಆಫರ್ ಬಂದರೂ ಅದಕ್ಕೆ ಒಪ್ಪಿಗೆ ನೀಡಿದ ಬಗ್ಗೆ ಅಪ್ಡೇಟ್ ಇಲ್ಲ. ಬಿಬಿಕೆ 11ನ ಕೆಲ ಸ್ಪರ್ಧಿಗಳು ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವೆಲ್ಲದರ ಮಧ್ಯೆ ಭವ್ಯಾ ಗೌಡ ಒಂದು ಫೋಟೋ ಹಂಚಿಕೊಂಡಿದ್ದು ಸಂಚಲನ ಸೃಷ್ಟಿಸಿದೆ.

Chandan Shetty: ಚಂದನ್ ಶೆಟ್ಟಿ ನನಗೆ ಅಣ್ಣ ಇದ್ದಂತೆ: ಮದುವೆ ಗಾಸಿಪ್​ಗೆ ತೆರೆ ಎಳೆದ ಸಂಜನಾ

ಚಂದನ್ ಶೆಟ್ಟಿ ನನಗೆ ಅಣ್ಣ ಇದ್ದಂತೆ: ಮದುವೆ ಗಾಸಿಪ್​ಗೆ ತೆರೆ ಎಳೆದ ಸಂಜನಾ

ಚಂದನ್ ಶೆಟ್ಟಿ ಸೂತ್ರಧಾರಿ ಚಿತ್ರದ ಮೂಲಕ ಕಂಬ್ಯಾಕ್ ಮಾಕೋಕೆ ಸಜ್ಜಾಗಿದ್ದಾರೆ. ಈ ಸಿನಿಮಾದಲ್ಲಿ ಚಂದನ್ ಶೆಟ್ಟಿಗೆ ನಾಯಕಿಯಾಗಿ ಸಲಗ ಖ್ಯಾತಿಯ ಸಂಜನಾ‌ ಹಾಗೂ ಅಪೂರ್ವ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಬಿಡುಗಡೆ ಕುರಿತು ಪತ್ರಿಕಾಗೋಷ್ಠಿ ಕರೆಯಲಾಗಿತ್ತು. ಇದೇ ವೇದಿಕೆಯಲ್ಲಿ ಚಂದನ್ ಹಾಗೂ ಸಂಜನಾ ಮದುವೆ ವದಂತಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Shishir Shastry: ಮುಖಕ್ಕೆ ಹೊಡೀತೀನಿ: ಐಶ್ವರ್ಯಾ ಎದುರೇ ಶಿಶಿರ್​ಗೆ ವಾರ್ನ್ ಮಾಡಿದ ಪ್ರಥಮ್

ಮುಖಕ್ಕೆ ಹೊಡೀತೀನಿ: ಐಶ್ವರ್ಯಾ ಎದುರೇ ಶಿಶಿರ್​ಗೆ ವಾರ್ನ್ ಮಾಡಿದ ಪ್ರಥಮ್

ಐಶ್ವರ್ಯಾ ಸಿಂಧೋಗಿ, ಶಿಶಿರ್ ಶಾಸ್ತ್ರೀಗೆ ಸಂಬಂಧ ಪಟ್ಟ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಒಳ್ಳೆ ಹುಡ್ಗ ಪ್ರಥಮ್ ಕೂಡ ಇದ್ದಾರೆ. ಇದರಲ್ಲಿ ಪ್ರಥಮ್ ಅವರು ಐಶ್ವರ್ಯಾ ಎದರೇ ಶಿಶಿರ್ಗೆ ವಾರ್ನ್ ಮಾಡಿದ್ದಾರೆ. ಹಾಗಂತ ಇದು ಕೋಪದಲ್ಲಲ್ಲ. ತಮಾಷೆಯಾಗಿ ರೇಗಿಸುತ್ತ ಶಿಶಿರ್ಗೆ ಪ್ರಥಮ್ ವಾರ್ನ್ ಮಾಡಿದ್ದಾರೆ.

Bhagya Lakshmi Serial: ಭಾಗ್ಯಾಳ ಗುಟ್ಟು ರಟ್ಟು ಮಾಡಿದ ತಾಂಡವ್: ಮನೆಯವರಿಗೆ ಗೊತ್ತಾಯಿತು ಎಲ್ಲ ಸತ್ಯ

ಭಾಗ್ಯಾಳ ಗುಟ್ಟು ರಟ್ಟು ಮಾಡಿದ ತಾಂಡವ್: ಮನೆಯವರಿಗೆ ಗೊತ್ತಾಯಿತು ಸತ್ಯ

ತಾಂಡವ್, ಭಾಗ್ಯ ಮನೆಗೆ ಬಂದು, ಮನೆಯ ಹೊರಗಡೆ ನಿಂತು ಜೋರಾಗಿ ಅರಚುತ್ತಾ ಎಲ್ಲ ಸತ್ಯವನ್ನು ಬಹಿರಂಗ ಪಡಿಸಿದ್ದಾನೆ. ಭಾಗ್ಯ ಕಂಡ ಕಂಡಲ್ಲಿ ಕುಣಿದು ಕೆಲಸ ಮಾಡಿ ಹಣ ಸಂಪಾದಿಸಿ, ನಮ್ಮ ಮರ್ಯಾದೆ ತೆಗೆಯುತ್ತಿದ್ದಾಳೆ.. ತಾನು ಬೀದಿ ಬೀದಿ ಅಲಿದಿದ್ದು ಸಾಕು ಅಂತ ಈಗ ತನ್ನ ಮಗನನ್ನು ಬೀದಿಗೆ ಹಾಕಿದ್ದಾಳೆ ಎಂದು ಹೇಳುತ್ತಾನೆ.

Chaithra Kundapura: ವೇದಿಕೆ ಮೇಲೆ ಚೈತ್ರಾಳನ್ನು ಎತ್ತಿ ಗರಗರನೆ ತಿರುಗಿಸಿದ ರಜತ್ ಕಿಶನ್: ವಿಡಿಯೋ ನೋಡಿ

ವೇದಿಕೆ ಮೇಲೆ ಚೈತ್ರಾಳನ್ನು ಎತ್ತಿ ಗರಗರನೆ ತಿರುಗಿಸಿದ ರಜತ್

ಬಿಗ್ ಬಾಸ್ ಮನೆಯೊಳಗೆ ಸಖತ್ ಸೌಂಡ್ ಮಾಡುತ್ತಿದ್ದ ಚೈತ್ರಾ- ರಜತ್ ಹೊರಬಂದ ಬಳಿಕ ಮತ್ತೊಮ್ಮೆ ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋ ಮೂಲಕ ಮನರಂಜನೆ ನೀಡುತ್ತಿದ್ದಾರೆ. ರಜತ್- ಚೈತ್ರಾ ಕುಂದಾಪುರ ತುಂಟ ತುಂಟ ಸಾಂಗ್ಗೆ ಡ್ಯಾನ್ಸ್ ಮಾಡಿ ಸಖತ್ ಮಿಂಚಿದ್ದಾರೆ.

Gauthami Jadav: ಬಿಗ್ ಬಾಸ್ ಬಳಿಕ ಮೊದಲ ಬಾರಿ ಫೋಟೋ ಶೂಟ್​ನಲ್ಲಿ ಮಿಂಚಿದ ಗೌತಮಿ ಜಾಧವ್

ಬಿಗ್ ಬಾಸ್ ಬಳಿಕ ಮೊದಲ ಬಾರಿ ಫೋಟೋ ಶೂಟ್​ನಲ್ಲಿ ಮಿಂಚಿದ ಗೌತಮಿ

ಗೌತಮಿ ಜಾಧವ್ ಫೋಟೋ ಶೂಟ್ ಮಾಡಿಕೊಂಡಿದ್ದು, ದೊಡ್ಡ ಅಪ್ಡೇಟ್ನ ಸೂಚನೆ ಕೊಟ್ಟಿದ್ದಾರೆ. ಕೆಂಪು ಬಣ್ಣದ ಡ್ರೆಸ್ನಲ್ಲಿ ಗೌತಮಿ ಜಾಧವ್ ರಾಣಿಯಂತೆ ಕಂಗೊಳಿಸಿದ್ದಾರೆ. ಈ ಫೋಟೋಕ್ಕೆ ಸಾಕಷ್ಟು ಕಮೆಂಟ್ಗಳು ಬರುತ್ತಿದ್ದು, ದೇವ ಲೋಕದ ಅಪ್ಸರೆ ಎಂದು ಕೆಲವರು ಹೇಳಿದ್ದಾರೆ.

Puneeth Rajkumar: ಅಪ್ಪು ಸಮಾಧಿಗೆ ಭೇಟಿ ನೀಡಿ ಕೈ ಮುಗಿದ ಭವ್ಯಾ ಗೌಡ-ಅನುಷಾ ರೈ

ಅಪ್ಪು ಸಮಾಧಿಗೆ ಭೇಟಿ ನೀಡಿ ಕೈ ಮುಗಿದ ಭವ್ಯಾ ಗೌಡ-ಅನುಷಾ ರೈ

ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳು ಕೂಡ ಅಪ್ಪು ಸಮಾಧಿಗೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಭವ್ಯಾ ಗೌಡ ಮತ್ತು ಅನುಷಾ ರೈ ಜೊತೆಯಾಗಿ ಬಂದು ಅಪ್ಪು ಸಮಾಧಿಗೆ ಕೈ ಮುಗಿದು ನಮನ ಸಲ್ಲಿಸಿದ್ದಾರೆ. ಬಿಬಿಕೆ 11ನ ರಂಜಿತ್ ಕೂಡ ತನ್ನ ಭಾವಿ ಪತ್ನಿ ಜೊತೆ ಬಂದಿದ್ದರು.

Bhagya Lakshmi Serial: ಭಾಗ್ಯಾಳಿಗೆ ಗೊತ್ತಾಯಿತು ಗುಂಡಣ್ಣ ಶೂ ಪಾಲೀಶ್ ಮಾಡುವ ವಿಚಾರ: ರೊಚ್ಚಿಗೆದ್ದ ತಾಂಡವ್

ಭಾಗ್ಯಾಳಿಗೆ ಗೊತ್ತಾಯಿತು ಗುಂಡಣ್ಣ ಶೂ ಪಾಲೀಶ್ ಮಾಡುವ ವಿಚಾರ

ತಾಂಡವ್, ಗುಂಡಣ್ಣನಿಗೆ ಬೈಯುತ್ತಾ ಇರುತ್ತಾನೆ. ಭಾಗ್ಯಾ ಬಂದು, ನಾನೇನು ಕಮ್ಮಿ ಮಾಡಿದ್ದೆ ನಿನ್ಗೆ.. ಯಾರು ಹೇಳಿದ್ದು ನಿನ್ಗೆ ಇದೆಲ್ಲ ಮಾಡೋಕೆ ಎಂದು ಕೇಳಿದ್ದಾಳೆ. ಅದಕ್ಕೆ ತಾಂಡವ್, ನಿನ್ನ ಪುಟ್ಗೋಸಿ ಕೆಲ್ಸದಲ್ಲಿ ಏನೂ ಮಾಡೋಕೆ ಆಗಲ್ಲ ಅಂತ ತಾನೆ ಇವನ್ನ ಶೋ ಪಾಲೀಶ್ ಮಾಡೋಕೆ ಕಳ್ಸಿದ್ದು ಎಂದು ಹೇಳುತ್ತಾನೆ.

Shishir-Aishwarya: ವೀಡಿಯೊ ಆಯ್ತು ಈಗ ಜೊತೆಯಾಗಿ ಫೋಟೋಶೂಟ್ ಮಾಡಿಸಿಕೊಂಡ ಶಿಶಿರ್-ಐಶ್ವರ್ಯಾ

ವೀಡಿಯೊ ಆಯ್ತು ಈಗ ಫೋಟೋಶೂಟ್ ಮಾಡಿಸಿಕೊಂಡ ಶಿಶಿರ್-ಐಶ್ವರ್ಯಾ

ಮೊನ್ನೆಯಷ್ಟೆ ಹೋಳಿ ಹಬ್ಬದ ದಿನ ಐಶ್ವರ್ಯಾ ಸಿಂಧೋಗಿ, ಶಿಶಿರ್ ಶಾಸ್ತ್ರೀ ಜೋಡಿ ಭರ್ಜರಿ ಆಗಿ ವೀಡಿಯೊ ಶೂಟ್ ಮಾಡಿಸಿಕೊಂಡಿದ್ದರು. ಇದೀಗ ಈ ಜೋಡಿ ಇದೇ ಡ್ರೆಸ್ನಲ್ಲಿ ಫೋಟೋಶೂಟ್ ಕೂಡ ಮಾಡಿಸಿಕೊಂಡಿದೆ. ಈ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.

Srujan Lokesh: ಸಂಬಂಧ ಕಲ್ಪಿಸ್ತಾರೆ.. ನನಗೇನು ಹೆಂಡತಿ-ಮಕ್ಕಳು ಇಲ್ವಾ: ಕೋಪಗೊಂಡ ಸೃಜನ್ ಲೋಕೇಶ್

ಸಂಬಂಧ ಕಲ್ಪಿಸ್ತಾರೆ.. ನನಗೇನು ಹೆಂಡತಿ-ಮಕ್ಕಳು ಇಲ್ವಾ: ಸೃಜನ್ ಲೋಕೇಶ್

ನನ್ನ ಬಗ್ಗೆ ವಿವಾದಗಳು ಬಂದಾಗ ನಾನು ಅದನ್ನು ಕಡೆಗಣಿಸುತ್ತೇನೆ ಯಾಕೆಂದರೆ ನಾನೇನೋ ಮಾಡಿದಾಗ ನನ್ನ ಸ್ನೇಹಿತನಾಗಿ ಹೇಳಿದರೆ ಕೇಳಿಸಿಕೊಳ್ಳುತ್ತೇನೆ. ಆದರೆ ಪರಿಚಯನೇ ಇಲ್ಲದೇ ಇದ್ದವರು ಕಮೆಂಟ್‌ ಮಾಡಿದಾಗ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ, ನಾನ್ಯಾಕೆ ಗೊತ್ತಿಲ್ಲದವರಿಗೆ ಪ್ರಾಮುಖ್ಯತೆ ಕೊಡಲಿ ಎಂದು ಸೃಜನ್ ಲೋಕೇಶ್ ಖಡಕ್ ಆಗಿ ಹೇಳಿದ್ದಾರೆ.

Kiran Raj: ಹೊಸ ಸೀರಿಯಲ್ ಬೆನ್ನಲ್ಲೇ ಹೊಸ ಸಿನಿಮಾ ಅನೌನ್ಸ್ ಮಾಡಿದ ಕಿರಣ್ ರಾಜ್

ಹೊಸ ಸೀರಿಯಲ್ ಬೆನ್ನಲ್ಲೇ ಹೊಸ ಸಿನಿಮಾ ಅನೌನ್ಸ್ ಮಾಡಿದ ಕಿರಣ್ ರಾಜ್

Kiran Raj New Movie and Serial: ಕಿರಣ್ ಸದ್ಯ ಕರ್ಣ ಹೊಸ ಧಾರಾವಾಹಿಯೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಖಷಿಯ ಜೊತೆಗೆ ಕಿರಣ್ ರಾಜ್ ಮತ್ತೊಂದು ಹ್ಯಾಪಿ ನ್ಯೂಸ್ ಕೂಡ ನೀಡಿದ್ದಾರೆ. ಕರ್ಣ ಧಾರಾವಾಹಿಯ ಬೆನ್ನಲ್ಲೇ ಹೊಸ ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ.