ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಭಾಗವಹಿಸಿದ್ದ ಸ್ಪರ್ಧಿಗಳ ಪೈಕಿ ಈಗ ಹೆಚ್ಚಿನವರು ಬ್ಯುಸಿಯಾಗಿದ್ದಾರೆ. ಭವ್ಯಾ ಗೌಡ, ತ್ರಿವಿಕ್ರಮ್, ಐಶ್ವರ್ಯಾ, ಶಿಶಿರ್ ಸೇರಿದಂತೆ ಕೆಲವರು ಸೀರಿಯಲ್ನಲ್ಲಿ ತೊಡಗಿಸಿಕೊಂಡಿದ್ದರೆ ಉಗ್ರಂ ಮಂಜು, ರಜತ್ ಕಿಶನ್ ಸೇರಿದಂತೆ ಇನ್ನೂ ಕೆಲವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ, ಅನುಷಾ ರೈ ಬಗ್ಗೆ ಮಾತ್ರ ಯಾವುದೇ ಅಪ್ಡೇಟ್ ಇರಲಿಲ್ಲ. ವಿದೇಶಿ ಪ್ರವಾಸ, ಕೆಲ ಕಾರ್ಯಕ್ರಮಗಳಲ್ಲಿ ಅಟೆಂಡ್ ಆಗಿದ್ದು ಬಿಟ್ಟರೆ ಹೊಸ ಸಿನಿಮಾ ಅಥವಾ ಧಾರಾವಾಹಿಯಲ್ಲಿ ಎಲ್ಲೂ ಕಾಣಿಸಲಿಲ್ಲ.
ಆದರೀಗ ಅನುಷಾ ರೈ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇವರ ಹೊಸ ಸಿನಿಮಾವೊಂದು ಸೆಟ್ಟೇರಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಲಕ್ಷ್ಮಿ ನರಸಿಂಹಸ್ವಾಮಿ ಸನ್ನಿಧಿಯಲ್ಲಿ ಈ ಹೊಸ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ. ಇದರ ವಿಡಿಯೋವನ್ನು ಅನುಷಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ವಿಶೇಷ ಎಂದರೆ ಈ ಚಿತ್ರದ ನಾಯಕ ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್.
ನನ್ನ ಮುಂದಿನ.. ಹೊಸ ಆರಂಭ.. ನಿಮ್ಮೆಲ್ಲರ ಆಶೀರ್ವಾದ ಹಾಗೂ ಸಪೋರ್ಟ್ ನಮಗೆ ಬೇಕು ಎಂದು ಇನ್ಸ್ಟಾದಲ್ಲಿ ಅನುಷಾ ಬರೆದುಕೊಂಡಿದ್ದಾರೆ.
ಯುವ ಪ್ರತಿಭೆ ರುದ್ರೇಶ್ ನಿರ್ದೇಶನದಲ್ಲಿ ಈ ಸಿನಿಮಾ ಸೆಟ್ಟೇರಿದ್ದು, ಮನೋರಂಜನ್, ಅನುಷಾ ರೈ ಜೊತೆ ಬೃಂದಾ ಆಚಾರ್ಯ ಕೂಡ ಇದರಲ್ಲಿದ್ದಾರೆ. ಇದರಲ್ಲಿ ಅನುಷಾ ರೈ ಸ್ಪೆಷಲ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರಂತೆ. ಒಂದೊಳ್ಳೆ ಕಂಟೆಂಟ್‌ಗೆ ಕಮರ್ಷಿಯಲ್ ಟಚ್ ಕೊಟ್ಟು ರುದ್ರೇಶ್ ಕಥೆ ಎಣೆದಿದ್ದಾರೆ.
ಈ ಹಿಂದೆ ಸಾಹೇಬ, ಬೃಹಸ್ಪತಿ, ಮುಗಿಲ್‌ಪೇಟೆ, ಪ್ರಾರಂಭ ಸಿನಿಮಾಗಳನ್ನು ಮಾಡಿದ್ದ ಮನೋರಂಜನ್ ರವಿಚಂದ್ರನ್ ಈ ಬಾರಿ ಕಂಟೆಂಟ್ ಇರುವಂತಹ ಕಥೆಗೆ ಕೈಹಾಕಿದ್ದಾರಂತೆ. ಸದ್ದಿಲ್ಲದೇ ಪ್ರಾರಂಭವಾಗಿರುವ ಈ ಹೊಸ ಸಿನಿಮಾಗೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಇದು ಮನೋರಂಜನ್ ರವಿಚಂದ್ರನ್ ನಟನೆಯ ಐದನೇ ಸಿನಿಮಾ. ವೈಎಸ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಶ್ರೀನಿವಾಸ್ ಎಂಬುವವರು ಈ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಜೆಸ್ಸಿ ಗಿಫ್ಟ್ ಅವರ ಸಂಗೀತ ಈ ಸಿನಿಮಾಕ್ಕಿದೆ. ಛಾಯಾಗ್ರಹಣವನ್ನು ಸೆಲ್ವಂ ಮಾಡಲಿದ್ದಾರೆ.
ಬಿಗ್ ಬಾಸ್ 19 ಟ್ರೇಲರ್ ಬಿಡುಗಡೆ: ಈ ಬಾರಿ ಹಿಂದೆಂದೂ ಕಂಡು- ಕೇಳರಿಯದ ಕಾನ್ಸೆಪ್ಟ್
ಮುಂದಿನ ವಾರದಿಂದ ಶೂಟಿಂಗ್‌ಗೆ ಕಿಕ್ ಸ್ಟಾರ್ಟ್ ಸಿಗಲಿದ್ದು, ಮೊದಲ ಹಂತದ ಚಿತ್ರೀಕರಣವನ್ನು ಚಿತ್ರತಂಡ ಬೆಂಗಳೂರಿನಲ್ಲಿ ನಡೆಸಲು ಯೋಜನೆ ಹಾಕಿಕೊಂಡಿದೆ. ಆ ಬಳಿಕ ಬಾದಾಮಿಯತ್ತ ಇಡೀ ಟೀಂ ಹೆಜ್ಜೆ ಹಾಕಲಿದೆ.