ಬಿಗ್ ಬಾಸ್ (Bigg Boss Kannada 12) ಮನೆಯಲ್ಲಿ ಒಂಟಿ ಹಾಗೂ ಜಂಟಿಗಳ ನಡುವಣ ಜಗಳ ತಾರಕಕ್ಕೇರಿದೆ. ಮೊದಲ ವಾರ ಕೊಂಚ ಸೈಲೆಂಟ್ ಆಗಿದ್ದ ಮನೆ ಇದೀಗ ಎರಡನೇ ವಾರದ ಎರಡು ದಿನವೂ ಗಲಾಟೆಯಿಂದ ಕೂಡಿದೆ. ಮೊದಲ ದಿನ ಕೂಡ ದೊಡ್ಮನೆ ಹೊತ್ತಿ ಉರಿದಿತ್ತು. ದೊಡ್ಮನೆಯಲ್ಲಿ ಗಾಂಚಾಲಿ ಪದ ದೊಡ್ಡ ಮಟ್ಟದ ಸದ್ದು ಮಾಡಿತು. ಇದೀಗ ಒಂಟಿ-ಜಂಟಿ ಜಗಳ ಎರಡನೇ ದಿನವೂ ಮುಂದುವರೆದಿದೆ. ಈ ಕುರಿತ ಪ್ರೋಮೋವನ್ನು ಕಲರ್ಸ್ ಕನ್ನಡ ಬಿಡುಗಡೆ ಮಾಡಿದೆ.
ಕಳೆದ ವಾರಾಂತ್ಯದಲ್ಲಿ ಜಂಟಿಗಳು ಕೆಲವು ನಿಯಮಗಳನ್ನು ಉಲ್ಲಂಘಿಸಿದರು. ಬಿಗ್ ಬಾಸ್ ನಿಯಮ ಏನೆಂದರೆ, ಜಂಟಿಗಳು ನಿಯಮವನ್ನು ಉಲ್ಲಂಘನೆ ಮಾದಂತೆ ಒಂಟಿಗಳು ನೋಡಿಕೊಳ್ಳಬೇಕು. ಆದರೆ, ಜಂಟಿಗಳ ತಪ್ಪನ್ನು ಒಂಟಿಗಳು ನೋಡಿಲ್ಲ.. ಅದಕ್ಕಾಗಿ ಒಂಟಿಗಳಿಗೆ ಬಿಗ್ ಬಾಸ್ ಶಿಕ್ಷೆ ನೀಡಿದ್ದಾರೆ. ಮುಂದಿನ ಆದೇಶದ ತನಕ ಒಂಟಿಗಳು ಬೆಡ್ ರೂಮ್ ಬಳಸುವಂತಿಲ್ಲ ಎಂದು ಬಿಗ್ ಬಾಸ್ ಆದೇಶಿಸಿದ್ದಾರೆ. ಎರಡೂ ಗುಂಪುಗಳ ಮಧ್ಯೆ ಜಗಳ ಆಗಿದೆ.
ಮಾತಿನ ಭರದಲ್ಲಿ ಜಾಹ್ನವಿ ಅವರು ಜಂಟಿಗಳ ಮೇಲೆ ಗಾಂಚಲಿ ಎಂಬ ಪದ ಬಳಕೆ ಮಾಡಿದ್ದಾರೆ. ಇದು ಜಂಟಿಗಳ ಕೋಪ ನೆತ್ತಿಗೇರಿಸಿದೆ. ಗಾಂಚಲಿ ಎಂಬುದು ಕೆಟ್ಟ ಪದ ಎಂದು ಮಂಜು ಭಾಷಿಣಿ ಹೇಳಿದರು. ಆದರೆ ಅದು ಒಂದು ಸಾಮಾನ್ಯ ಪದ ಎಂದು ಜಾಹ್ನವಿ ಅವರು ವಾದಿಸಿದರು. ಈ ಬಿಸಿ ಇನ್ನೂ ತಣ್ಣಗಾಗಿಲ್ಲ.. ಹೀಗಿರುವಾಗ ದೊಡ್ಮನೆಯಲ್ಲಿ ಮತ್ತೊಂದು ಜಗಳ ನಡೆದಿದೆ.
ಅಶ್ವಿನಿ ಗೌಡ ಹಾಗೂ ಅಶ್ವಿನಿ ಎಸ್ಎನ್ ನಡುವೆ ಜಗಳ:
ಒಂಟಿ ತಂಡದ ಅಶ್ವಿನಿ ಗೌಡ ಅವರು ಜಂಟಿ ತಂಡದ ಸದಸ್ಯೆ ಅಶ್ವಿನಿ ಎಸ್ ಎನ್ ಅವರ ನೀರಿನ ಬಾಟಲಿಯನ್ನು ತೆಗೆದುಕೊಂಡು ಹೋಗಿದ್ದಾರೆ. ಅದನ್ನು ತೆಗೆದುಕೊಳ್ಳಲು ಅಶ್ವಿನಿ ಎಸ್ಎನ್ ಅವರು ಅಶ್ವಿನಿ ಗೌಡ ಅವರ ಕೈಹಿಡಿದಿದ್ದಾರೆ. ಅಶ್ವಿನಿ ಗೌಡ ಅವರು ಇದು ಮ್ಯಾನ್ ಹ್ಯಾಡ್ಲಿಂಗ್ ಎಂದರು. ಇಲ್ಲಿಂದ ಇವರಿಬ್ಬರ ಜಗಳ ತಾರಕಕ್ಕೇರಿದೆ. ಅಶ್ವಿನಿ ಗೌಡ ಅವರು ತಾಕತ್ ಇದ್ದರೆ ಟಚ್ ಮಾಡಿ ಎಂದಿದ್ದಾರೆ. ಯೋಗ್ಯತೆ ಇದ್ರೆ ಆಟ ಆಡಬೇಕು ಬದಲಾಗಿ ಹೀಗೆಲ್ಲ ಮಾಡೋದು ಅಲ್ಲ ಎಂದು ಅಶ್ವಿನಿ ಗೌಡ ಹೇಳಿದರೆ, ಯೋಗ್ಯತೆ ಇರೋದಕ್ಕೆ ಇಲ್ಲಿ ಇರೋದು ಎಂದು ಅಶ್ವಿನಿ ಎಸ್ಎನ್ ತಿರುಗೇಟು ಕೊಟ್ಟಿದ್ದಾರೆ.
ಇಷ್ಟೆಲ್ಲ ಜಗಳ ಆಗುತ್ತಿದ್ದರೂ ಇತರೆ ಯಾರೆಏ ಸ್ಪರ್ಧಿಗಳು ಇದನ್ನು ಬಿಡಿಸಲು ಅಥವಾ ಮಧ್ಯೆ ಪ್ರವೇಶಿಸಲು ಬಂದಿಲ್ಲ. ಒಟ್ಟಾರೆ ದೊಡ್ಮನೆಯಲ್ಲಿ ಎರಡನೇ ವಾರಕ್ಕೆ ಜಗಳಗಳ ಕಾವು ಏರುತ್ತಿದೆ. ಇದು ಎಲ್ಲಿಗೆ ಹೋಗಿ ಮುಟ್ಟುತ್ತೊ ನೋಡಬೇಕಿದೆ.