ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBH 19: ಬಿಗ್ ಬಾಸ್ ಆರಂಭಕ್ಕೂ ಮುನ್ನ ಹೊರಬಿತ್ತು ಇಂಟ್ರೆಸ್ಟಿಂಗ್ ಮಾಹಿತಿ: ಮನೆಯೊಳಗೆ ಎಐ ರೋಬೋ

ಈ ಸಲ ದೊಡ್ಮನೆಗೆ ವಿಶೇಷವಾಗಿ ಒಬ್ಬರು ಸ್ಪರ್ಧಿಯಾಗಿ ಎಂಟ್ರಿ ಕೊಡಲಿದ್ದಾರೆ ಎನ್ನುವ ಬಗ್ಗೆ ಗುಲ್ಲಾಗಿದೆ. ಬಿಗ್‌ ಬಾಸ್‌ನಲ್ಲಿ ಪ್ರತಿಸಲ ಒಂದಲ್ಲ ಒಂದು ಟ್ವಿಸ್ಟ್‌ ಇದ್ದೇ ಇರುತ್ತದೆ. ಈ ಬಾರಿಯೂ ಅಂಥಹದ್ದೇ ಒಂದು ಟ್ವಿಸ್ಟ್‌ ಇರಲಿದೆ ಎನ್ನಲಾಗಿದೆ. ಈ ಬಾರಿ 16 ಮಂದಿ ಸ್ಪರ್ಧಿಗಳ ಜತೆ ಹಬುಬ್‌ ಡಾಲ್‌ ಎಂಬ ಎಐ ರೋಬೋಟ್‌ ಕೂಡ ಮನೆಯೊಳಗೆ ಪ್ರವೇಶಿಸಲಿದೆ ಎನ್ನಲಾಗುತ್ತಿದೆ.

Habubu doll bigg boss

ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ (Bigg Boss Kannada 12) ವೇದಿಕೆ ಸಿದ್ಧವಾಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ದಿನಾಂಕ ಕೂಡ ರಿವೀಲ್ ಆಗಲಿದೆ. ಕನ್ನಡದ ಜೊತೆಗೆ ಇತರೆ ಭಾಷೆಗಳಲ್ಲಿ ಕೂಡ ಬಿಗ್ ಬಾಸ್ ಶುರುವಾಗುತ್ತಿದ್ದು, ತೆಲುಗಿನ ಪ್ರೊಮೋ ಕೂಡ ಔಟ್ ಆಗಿದೆ. ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ ಅವರು ಮುನ್ನಡೆಸಲಿದ್ದಾರೆ. ಕನ್ನಡದಲ್ಲಿ ಕಿಚ್ಚ ಸುದೀಪ್ ನಿರೂಪಕರಾಗಿ ಮುಂದುವರೆಯಲಿದ್ದಾರೆ. ಕನ್ನಡ-ತೆಲುಗು ಜೊತೆಗೆ ಹಿಂದಿಯಲ್ಲೂ ಬಿಗ್ ಬಾಸ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಸಲ್ಮಾನ್‌ ಖಾನ್‌ ನಡೆಸಿಕೊಡುವ ಹಿಂದಿ ಬಿಗ್‌ ಬಾಸ್‌ 19ನೇ ಸೀಸನ್‌ ಬಗ್ಗೆ ಇದೀಗ ಇಂಟ್ರೆಸ್ಟಿಂಗ್ ಮಾಹಿತಿ ಹೊರಬಿದ್ದಿದೆ.

ಈ ಸಲ ದೊಡ್ಮನೆಗೆ ವಿಶೇಷವಾಗಿ ಒಬ್ಬರು ಸ್ಪರ್ಧಿಯಾಗಿ ಎಂಟ್ರಿ ಕೊಡಲಿದ್ದಾರೆ ಎನ್ನುವ ಬಗ್ಗೆ ಗುಲ್ಲಾಗಿದೆ. ಬಿಗ್‌ ಬಾಸ್‌ನಲ್ಲಿ ಪ್ರತಿಸಲ ಒಂದಲ್ಲ ಒಂದು ಟ್ವಿಸ್ಟ್‌ ಇದ್ದೇ ಇರುತ್ತದೆ. ಈ ಬಾರಿಯೂ ಅಂಥಹದ್ದೇ ಒಂದು ಟ್ವಿಸ್ಟ್‌ ಇರಲಿದೆ ಎನ್ನಲಾಗಿದೆ. ಈ ಬಾರಿ 16 ಮಂದಿ ಸ್ಪರ್ಧಿಗಳ ಜತೆ ಹಬುಬ್‌ ಡಾಲ್‌ (Habubu doll ) ಎಂಬ ಎಐ ರೋಬೋಟ್‌ ಕೂಡ ಮನೆಯೊಳಗೆ ಪ್ರವೇಶಿಸಲಿದೆ ಎನ್ನಲಾಗುತ್ತಿದೆ.

ಹಬುಬ್‌ ಒಂದು ಎಐ ರೋಬೋಟ್‌ ಆಗಿದ್ದು, ಇದು ಯುಎಇಯ ಮೊದಲ ಕೃತಕ ಬುದ್ಧಿಮತ್ತೆ (AI) ರೋಬೋಟ್ ಗೊಂಬೆ ಆಗಿದೆ. ಈ ಡಾಲ್ ಸಾಮಾನ್ಯರಂತೆ ಸಂವಹನ ಮಾಡುತ್ತದೆ ಮತ್ತು ಭಾವನಾತ್ಮಕವಾಗಿ ಸ್ಪಂದಿಸುತ್ತದೆ ಎನ್ನಲಾಗಿದೆ. ಬಿಗ್ ಬಾಸ್ ಮನೆಗೆ ಬರುವ ಈ ಡಾಲ್ ಹಿಂದಿ ಸೇರಿ 7 ಭಾಷೆಗಳನ್ನು ಮಾತನಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆಯಂತೆ.

Bhagya Lakshmi Serial: ತುಲಾಭಾರಕ್ಕಾಗಿ ಊಟ-ತಿಂಡಿ ಬಿಟ್ಟು ಕೂತ ಕಿಶನ್: ಮೀನಾಕ್ಷಿ ಪ್ಲ್ಯಾನ್ ವರ್ಕ್ ಆಗುತ್ತ?

ಕಳೆದ ಹಿಂದಿ ಬಿಗ್ ಬಾಸ್‌ ಸೀಸನ್​ನಲ್ಲಿ ಮನೆಯೊಳಗೆ ಕತ್ತೆಯನ್ನು ಬಿಡಲಾಗಿತ್ತು. ಈ ಮೂಲಕ ವಿಶಿಷ್ಠವಾದ ಪ್ರಯತ್ನವನ್ನು ಕೂಡ ಮಾಡಲಾಗಿತ್ತು. ಈ ಹಿನ್ನೆಲೆ ಈ ಬಾರಿ ವರದಿಯಾದಂತೆ ಎಐ ರೋಬೋಟ್ ಕಳಿಹಿಸಿದರು ಅಚ್ಚರಿ ಇಲ್ಲ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. ಇಂತಹ ಒಂದು ಪ್ರಯತ್ನ ಕನ್ನಡ ಬಿಗ್ ಬಾಸ್​ನಲ್ಲೂ ನಡೆದರೆ ನೋಡುಗರಿಗೆ ಸಖತ್ ಮಜಾ ಇರುವುದರಲ್ಲಿ ಅನುಮಾನವಿಲ್ಲ.