ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗಿ ಸುಮಾರು ಒಂದೂವರೆ ವಾರ ಆಗಿದೆ. ಮೂರನೇ ವಾರದಲ್ಲಿ ಮೊದಲ ಫಿನಾಲೆ ಇರುವ ಕಾರಣ ಸ್ಪರ್ಧಿಗಳು ತಾನು ಎಲ್ಲ ಕಡೆ ಗುರಿತಿಸಬೇಕೆಂದು ಮುನ್ನುಗ್ಗುತ್ತಿದ್ದಾರೆ. ಇದಕ್ಕಾಗಿ ಕೆಲವರು ರೂಲ್ಸ್ ಬ್ರೇಕ್ ಮಾಡಿ ಬೇಕಂತಲೇ ಜಗಳ ಆಡುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಇವುಗಳ ಮಧ್ಯೆ ಮೊದಲ ದಿನ ದೊಡ್ಮನೆಯಿಂದ ಎಲಿಮಿನೇಟ್ ಆಗಿ ವೀಕೆಂಡ್ನಲ್ಲಿ ಪುನಃ ಮನೆ ಸೇರಿದ ರಕ್ಷಿತಾ ಶೆಟ್ಟಿ ಯಾವುದೇ ಡಬಲ್ ಗೇಮ್ ಆಡದೆ ವೀಕ್ಷಕರಿಗೆ ಹತ್ತಿರವಾಗುತ್ತಿದ್ದಾರೆ.
ತಮ್ಮ ಮುಗ್ಧತೆ ಹಾಗೂ ಮಾತಿನಿಂದ ಪ್ರೇಕ್ಷರನ್ನು ರಕ್ಷಿತಾ ನಗಿಸುತ್ತಿದ್ದಾರೆ. ಒಂದು ವಾರದಲ್ಲೇ ಇವರಿಗೆ ಅಪಾರ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಆರಂಭದಲ್ಲಿ ಇವರನ್ನು ಎಲಿಮಿನೇಟ್ ಮಾಡಿದಾಗ ಸಾಮಾಜಿಕ ಜಾಲತಾಣಗಳಲ್ಲಿ ಬಿಗ್ ಬಾಸ್ ವಿರುದ್ಧ ಹಾಗೂ ಮನೆಯ ಒಂಟಿ ಸದಸ್ಯರ ವಿರುದ್ಧ ಫ್ಯಾನ್ಸ್ ಕೋಪಗೊಂಡಿದ್ದರು.
ರಕ್ಷಿತಾಗೆ ಅವಮಾನ ಮಾಡಲಾಗಿದೆ.. ಈರೀತಿ ಎಲಿಮಿನೇಷನ್ ಮಾಡಕೂಡದು ಎಂದು ಹೇಳಿದ್ದರು. ಕರ್ದು ಅವಮಾನ ಮಾಡೋದು ಎಷ್ಟು ಸರಿ.. ಮನೆಯೊಳಗೆ ಕಾಲಿಟ್ಟು ಒಂದು ಗಂಟೆ ಕೂಡ ಆಗಿಲ್ಲ.. ಆಗಲೇ ಅವರನ್ನು ಎಲಿಮಿನೇಟ್ ಮಾಡ್ತೀರಿ ಎಂದಾದರೆ ಅದರನ್ನು ಕರೆಸಿದ್ದು ಯಾಕೆ? ಎಂದು ಫ್ಯಾನ್ಸ್ ಪ್ರಶ್ನೆ ಹಾಕಿದ್ದರು. ಬಳಿಕ ಅವರು ವೀಕೆಂಡ್ನಲ್ಲಿ ಪುನಃ ಮನೆ ಸೇರಿದಾಗ ಅಭಿಮಾನಿಗಳು ಖುಷಿ ಪಟ್ಟರು.
ಆದರೀಗ ಮನೆಯೊಳಗೆ ರಕ್ಷಿತಾಗೆ ಮತ್ತೆ ಅವಮಾನ ಆಗಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಇದು ಆಗಿರುವುದು ಅಶ್ವಿನಿ ಗೌಡ ಅವರಿಂದ. ಮನೆಯೊಳಗೆ ಸದ್ಯ ಒಂಟಿ-ಜಂಟಿ ಎಂಬ ಎರಡು ಗುಂಪು ಇದೆ. ಪುನಃ ಮನೆಯೊಳಗೆ ಬಂದ ನಂತರ ರಕ್ಷಿತಾ ಅವರು ಒಂಟಿ ತಂಡ ಸೇರಿದ್ದಾರೆ. ನಿನ್ನೆಯ ಎಪಿಸೋಡ್ನಲ್ಲಿ ಒಂಟಿ ತಂಡದ ಸದಸ್ಯರು ರೂಮ್ ಒಳಗೆ ಡಿಸ್ಕಸ್ ಮಾಡಲು ಮುಂದಾದಾಗ ಆ ಹೊತ್ತಿಗೆ ರಕ್ಷಿತಾ ಹೊರಗಡೆ ಇದ್ದರು. ಈ ಸಂದರ್ಭ ಅಶ್ವಿನಿ ಗೌಡ, ‘‘ಅದು ಕಾರ್ಟೂರ್ ಯಾವುದು.. ಅದು ಒಂಟಿಯಲ್ಲಿದೆಯಾ?, ಜಂಟಿಯಲ್ಲಿದೆಯಾ? ಈ ಕಾರ್ಟೂನ್ ಯಾವುದರಲ್ಲಿದೆ ಗೊತ್ತಾಗುತ್ತಿಲ್ಲ’’ ಎಂದು ರಕ್ಷಿತಾ ಅವರನ್ನು ತೋರಿಸಿ ಇತರೆ ಸ್ಪರ್ಧಿಗಳ ಜೊತೆ ಕೇಳಿದ್ದಾರೆ.
ರಕ್ಷಿತಾ ಶೆಟ್ಟಿಯನ್ನು ಕಾರ್ಟೂನ್ ಎಂದು ಕರೆದ ಅಶ್ವಿನಿಯ ವಿಡಿಯೋ:
ಇದಕ್ಕೆ ಜಾನ್ವಿ ಅವರು, ‘‘ಅವರು ಒಂಟಿನೇ ಆದ್ರೆ ಅವರಿಗೆ ಏನೂ ಅರ್ಥ ಆಗಿತ್ತಿಲ್ಲ’’ ಎಂದಿದ್ದಾರೆ. ಆಗ ಅಶ್ವಿನಿ ಅವರು ರಕ್ಷಿತಾ ಅವರನ್ನು ಚಪ್ಪಾಳೆ ತಟ್ಟಿ ಕರೆದಿದ್ದಾರೆ. ಇದು ರಕ್ಷಿತಾ ಅಭಿಮಾನಿಗಳಿಗೆ ಕೋಪ ತರಿಸಿದೆ. ‘‘ರಕ್ಷಿತಾ ಅವರಿಗೆ ಅಶ್ವಿನಿ ಅವರು ಕಾರ್ಟೂನ್ ಎಂದು ಕರೆದಿದ್ದು ಸರಿ ಇಲ್ಲ.. ರಕ್ಷಿತಾ ಅವರಿಗೆ ಅವರದ್ದೆ ಆದ ಒಂದು ಘನತೆ ಗೌರವ ಇದೆ. ಕಾರ್ಟೂನ್ ಅನ್ನುವ ಪದ ಯೂಸ್ ಮಾಡಬಾರದು’’ ಎಂದು ಹೇಳುತ್ತಿದ್ದಾರೆ.
BBK 12: ಮೊದಲ ವಾರ ಎಲಿಮಿನೇಟ್ ಆದ ಆರ್ಜೆ ಅಮಿತ್ಗೆ ಸಿಕ್ಕಿದ್ದು ಎಷ್ಟು ಹಣ?