ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟ ಒಟ್ಟು 19 ಸ್ಪರ್ಧಿಗಳು: ಯಾರೆಲ್ಲ?, ಇಲ್ಲಿದೆ ಪಟ್ಟಿ

Bigg Boss Kannada season 12 Contestant List: ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ನಾಳೆಯಿಂದ ಬಿಗ್ ಬಾಸ್ ಮನೆಯಲ್ಲಿ ಅಸಲಿ ಆಟ ಶುರುವಾಗಲಿದೆ. ಹಾಗಾದರೆ, ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಹೋದ 18 ಸ್ಪರ್ಧಿಗಳು ಯಾರು?, ಇಲ್ಲಿದೆ ನೋಡಿ ಸಂಪೂರ್ಣ ಪಟ್ಟಿ.

BBK 12 Full Contestant

ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಕಿಚ್ಚ ಸುದೀಪ್ ಅವರ ನೇತೃತ್ವದಲ್ಲಿ ಈ ಬಾರಿ ದೊಡ್ಮನೆಯೊಳಗೆ ಒಟ್ಟು 18 ಘಟಾನುಘಟಿ ಸ್ಪರ್ಧಿಗಳು ಪ್ರವೇಶಿಸಿದ್ದಾರೆ. ಸತತ 5 ಗಂಟೆಗಳ ಕಾಲ ನಡೆದ ಗ್ರ್ಯಾಂಡ್ ಓಪನಿಂದ ಎಪಿಸೋಡ್​ನಲ್ಲಿ ಸುದೀಪ್ ಎಲ್ಲ ಸ್ಪರ್ಧಿಗಳು ಪ್ರೀತಿಯಿಂದ ಸ್ವಾಗತಿಸಿ ದೊಡ್ಮನೆಯೊಳಗೆ ಕಳುಹಿಸಿಕೊಟ್ಟರು. ನಾಳೆಯಿಂದ ಬಿಗ್ ಬಾಸ್ ಮನೆಯಲ್ಲಿ ಅಸಲಿ ಆಟ ಶುರುವಾಗಲಿದೆ. ಹಾಗಾದರೆ, ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಹೋದ 18 ಸ್ಪರ್ಧಿಗಳು ಯಾರು?, ಇಲ್ಲಿದೆ ನೋಡಿ ಸಂಪೂರ್ಣ ಪಟ್ಟಿ.

ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಗಳ ಪಟ್ಟಿ:

ಕಾಕ್ರೋಚ್ ಸುಧಿ

ದೊಡ್ಮನೆಯೊಳಗೆ ಮೊದಲ ಸ್ಪರ್ಧಿಯಾಗಿ ಕಾಕ್ರೋಚ್ ಸುಧಿ ಎಂಟ್ರಿ ಕೊಟ್ಟಿದ್ದಾರೆ. ಇವರ ನಿಜವಾದ ಹೆಸರು ಸುಧೀರ್ ಬಾಲರಾಜ್. ಇವರು ಶಿವರಾಜ್ ಕುಮಾರ್ ನಟನೆಯ ಟಗರು ಸಿನಿಮಾದಲ್ಲಿ ಕಾಕ್ರೊಚ್ ಪಾತ್ರದಲ್ಲಿ ನಟಿಸಿದ್ದರು. ಹೀಗಾಗಿ ಇವರು ಕಾಕ್ರೋಚ್ ಸುಧಿ ಎಂದೇ ಜನಪ್ರಿಯರಾಗಿದ್ದಾರೆ.

ಸ್ಪಂದನಾ ಸೋಮಣ್ಣ

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕರಿಮಣಿ ಸೀರಿಯಲ್ ನಲ್ಲಿ ಸಾಹಿತ್ಯ ಪಾತ್ರದ ಮೂಲಕ ಮಿಂಚಿದ ಸ್ಪಂದನ, ತಮ್ಮ ಪಾತ್ರಕ್ಕೆ ಜೀವ ತುಂಬಿದ್ದರು. ಸಾಹಿತ್ಯ ಮತ್ತು ಕರ್ಣನ ಜೋಡಿಯನ್ನು ಜನರು ಇಷ್ಟಪಟ್ಟಿದ್ದರು.

ರಕ್ಷಿತಾ ಶೆಟ್ಟಿ

ಕರಾವಳಿಯ ಕುವರಿ ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಸ್ಪರ್ಧಿಯಾಗಿದ್ದಾರೆ. ಬಲೆ ಬಲೆ ಎನ್ನುತ್ತ ವ್ಲಾಗ್ ಮಾಡುವ ಇವರಿಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಫಾಲೋವರ್ಸ್ ಇದ್ದಾರೆ. ಕನ್ನಡ ಹಾಗೂ ತುಳು ಎರಡೂ ಭಾಷೆಯಲ್ಲಿ ಇವರು ವ್ಲಾಗ್ ಮಾಡಿ ಫೇಮಸ್ ಆಗಿದ್ದಾರೆ.

ಅಭಿಷೇಕ್ ಶ್ರೀಕಾಂತ್

ಅಭಿಷೇಕ್ ಶ್ರೀಕಾಂತ್ ಅವರನ್ನು ಕಿಚ್ಚ ಸುದೀಪ್ ಗ್ರ್ಯಾಂಡ್ ಆಗಿ ವೆಲ್ಕಂ ಮಾಡಿ ಮನೆಯೊಳಗೆ ಕಳುಹಿಸಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ವಧು ಸೀರಿಯಲ್ ನಲ್ಲಿ ಸಾರ್ಥಕ್ ಪಾತ್ರದ ಮೂಲಕ ಮಿಂಚಿದ ಅಭಿಷೇಕ್ ಶ್ರೀಕಾಂತ್, ತಮ್ಮ ಪಾತ್ರಕ್ಕೆ ಜೀವ ತುಂಬಿದ್ದರು. ಇವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಅಪಾರ ಅಭಿಮಾನಿ ಬಳಗವಿದೆ.

ಗಿಲ್ಲಿ ನಟ

ಕನ್ನಡ ಕಿರಿತೆರೆಯಲ್ಲಿ ಗಿಲ್ಲಿ ನಟ ಎಂದೇ ಫೇಮಸ್ ಆಗಿರುವ ಇವರ ನಿಜವಾದ ನಾಮ ನಟರಾಜ್. ಇವರು ತಮ್ಮ ಶಾರ್ಟ್ ಫಿಲಿಂಗಳು ಮತ್ತು ಕಾಮಿಡಿ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯರಾದವರು. ಕಾಮಿಡಿ ಕಿಲಾಡಿಗಳು ಸೀಸನ್ 4 ನಲ್ಲಿ ರನ್ನರ್-ಅಪ್ ಆಗಿದ್ದರು, ಹಾಗೂ ಭರ್ಜರಿ ಬ್ಯಾಚುಲರ್ಸ್ ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿ ಮಿಂಚಿದ್ದರು.

ಕಾವ್ಯ ಶೈವ

ಕೆಂಡಸಂಪಿಗೆ ಧಾರಾವಾಹಿಯಲ್ಲಿ ನಟಿಸಿ ಬಳಿಕ ಇತ್ತೀಚೆಗಷ್ಟೆ ಬಿಡುಗಡೆ ಆದ ಕೊತ್ತಲವಾಡಿ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದ ಕಾವ್ಯ ಶೈವ ಬಿಗ್ ಬಾಸ್ ಅರಮನೆಯೊಳಗೆ ಹೋಗಿದ್ದಾರೆ.

ಅಶ್ವಿನಿ ಎಸ್. ಎಸ್

ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಸದ್ದು ಮಾಡಿದ ಮುದ್ದುಲಕ್ಷ್ಮಿ ಧಾರಾವಾಹಿಯ ನಟಿ ಅಶ್ವಿನಿ ಅವರು ಬಿಗ್​​ಬಾಸ್ ಮನೆಗೆ ಬಂದಿದ್ದಾರೆ, ಅಶ್ವಿನಿ ಅವರು ಬಹಳ ಕಷ್ಟಪಟ್ಟು ನಟಿ ಆಗಿದ್ದು, ಅವರು ಈಗಲೂ ಇಂಡಿಪೆಂಡೆಂಟ್ ಜೀವನ ನಡೆಸುತ್ತಿದ್ದಾರೆ.

ಚಂದ್ರಪ್ರಭ

ಕಲರ್ಸ್​ನ ಗಿಚ್ಚಿ-ಗಿಲಿಗಿಲಿ ಶೋನಲ್ಲಿ ಮಿಂಚಿ, ಗೆದ್ದ ಚಂದ್ರಪ್ರಭಾ ಕೂಡ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಶೋನಲ್ಲಿ ಮಾತ್ರವೇ ನಾನು ಡಬಲ್ ಮೀನಿಂಗ್, ನಿಜವಾಗಿ ನಾನು ಬಹಳ ಮೃದು ಸ್ವಭಾವದ ವ್ಯಕ್ತಿ ಎಂದು ಹೇಳಿ ಒಳಗೆ ಎಂಟ್ರಿ ಕೊಟ್ಟಿದ್ದಾರೆ.

ಜಾಹ್ನವಿ

ನ್ಯೂಸ್ ಫಸ್ಟ್ ಚಾನೆಲ್​ನಲ್ಲಿ ನ್ಯೂಸ್ ಆಂಕರ್ ಆಗಿದ್ದ ಜಾಹ್ನವಿ ಬಳಿಕ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋಗೆ ಕಾಲಿಟ್ಟರು. ಗಿಚ್ಚಿ ಗಿಲಿಗಿಲಿ ಶೋನಲ್ಲಿ ರನ್ನರ್ ಅಪ್ ಆದರು.

ಧನುಷ್ ಗೌಡ

ಗೀತಾ ಹಾಗೂ ನೂರು ಜನ್ಮಕೂ ಸೀರಿಯಲ್‌ನಲ್ಲಿ ಅಭಿನಯಿಸಿದವರು ಧನುಷ್ ಗೌಡ, ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇವರು ಇದೀಗ ದೊಡ್ಮನೆಯೊಳಗೆ ಕಾಲಿಟ್ಟಿದ್ದಾರೆ.

ಅಶ್ವಿನಿ ಗೌಡ

ಕನ್ನಡ ಸಿನಿಮಾ ಹಾಗೂ ಕಿರುತೆರೆಯಲ್ಲಿ ಖ್ಯಾತಿ ಪಡೆದಿರುವ ಅಶ್ವಿನಿ ಗೌಡ, ಕರವೇ ಮಹಿಳಾ ಘಟಕದ ಅಧ್ಯಕ್ಷೆಯೂ ಹೌದು. ಇವರು ಸಹ ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾರೆ.

ಮಂಜು ಭಾಷಿಣಿ

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನೆಗೆಟಿವ್‌ ಶೇಡ್‌ನ ಬಡ್ಡಿ ಬಂಗಾರಮ್ಮ ಪಾತ್ರದ ಮೂಲಕ ಜನಪ್ರಿಯರಾಗಿರುವ ಮಂಜು ಭಾಷಿಣಿ, ಸಿಲ್ಲಿ ಲಲ್ಲಿಯ ಸಮಾಜ ಸೇವಕಿ ಲಲಿತಾಂಬಾ ಪಾತ್ರಕ್ಕಾಗಿ ಇನ್ನೂ ಹೆಚ್ಚು ಪ್ರೀತಿಯನ್ನ ಗಳಿಸಿದ್ದರು.

ಡಾಗ್ ಸತೀಶ್

ತಮ್ಮ ಬಳಿ 50 ಕೋಟಿ ರೂಪಾಯಿ ಶ್ವಾನ ಇದೆ ಎಂದು ಹೇಳಿ ಸಖತ್ ವೈರಲ್ ಆಗಿ, ಇಡಿ ದಾಳಿಗೆ ಒಳಗಾಗಿದ್ದ ಡಾಗ್ ಸತೀಶ್ ಸಹ ಬಿಗ್ ಬಾಸ್ ಮನೆಗೆ ತೆರಳಿದ್ದಾರೆ.

ಕರಿ ಬಸಪ್ಪ

ಈ ಬಾರಿ ಬಿಗ್ ​​ಬಾಸ್ ಮನೆಗೆ ಬಾಡಿ ಬಿಲ್ಡರ್ ಕರಿಬಸಪ್ಪ ಮನೆಗೆ ಕಾಲಿಟ್ಟಿದ್ದಾರೆ. ದಾವಣಗೆರೆಯ ಕರಿಬಸಪ್ಪ, ಅಂತರಾಷ್ಟ್ರೀಯ ದೇಹದಾರ್ಡ್ಯ ಪಟು ಆಗಿ ಗುರುತಿಸಿಕೊಂಡಿದ್ದಾರೆ. ಇವರು ಪಾಕಿಸ್ತಾನಕ್ಕೆ ಹೋಗಿ ಪ್ರಶಸ್ತಿ ಗೆದ್ದು ಬಂದಿದ್ದರು.

ಧ್ರುವಂತ್

ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಮಂಗಳೂರು ಮೂಲದ ಧ್ರುವಂತ್ ಬಿಗ್​​ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ. ಇವರು ಸುಮಾರು ಎಂಟು ಧಾರಾವಾಹಿಗಳಲ್ಲಿ ನಟನಾಗಿ, ನಾಯಕನಾಗಿ ನಟಿಸಿದ್ದಾರೆ.

ಮಾಳು ನಿಪನಾಳ

ಹಳ್ಳಿನ ಸೊಗಡಿನ ಗಾಯಕ ಮಾಳು ನಿಪನಾಳ ಅವರು ಬಿಗ್​​ಬಾಸ್ ಮನೆ ಪ್ರವೇಶಿಸಿದ್ದಾರೆ. ಇವರ ನಾ ಡ್ರೈವರ, ನನ ಲವ್ವರ ಹಾಡಿ ಹಿಟ್ ಆಗಿತ್ತು.

ರಾಶಿಕಾ ಶೆಟ್ಟಿ

ಮನದ ಕಡಲು ಸಿನಿಮಾದ ನಾಯಕಿ ರಾಶಿಕಾ ಶೆಟ್ಟಿ ಬಿಗ್ ​​ಬಾಸ್ ಮನೆಗೆ ಬಂದಿದ್ದಾರೆ. ರಾಶಿಕಾ ಶೆಟ್ಟಿಗೆ ಕೋಪ, ಪ್ರೀತಿ, ಅಳು ಎಲ್ಲವೂ ಹೆಚ್ಚಂತೆ.

ಮಲ್ಲಮ್ಮ

ಹಳ್ಳಿಯಿಂದ ಬಿಗ್ ಮನೆಗೆ ಮೂರನೇ ಸ್ಪರ್ಧಿಯಾಗಿ ಸೋಶಿಯಲ್‌ ಮೀಡಿಯಾದ ವೈರಲ್‌ ಸ್ಟಾರ್‌ ಮಲ್ಲಮ್ಮ ಪ್ರವೇಶಿಸಿದ್ದಾರೆ. ಮಾತಿನ ಮಲ್ಲಿ ಎಂದೇ ಫೇಮಸ್‌ ಆಗಿರುವ ಮಲ್ಲಮ್ಮ ಉತ್ತರ ಕರ್ನಾಟಕದವರು.

ಆರ್​ಜೆ ಅಮಿತ್

ರೆಡಿಯೋ ಜಾಕಿ ಆಗಿ ಕಾರ್ಯನಿರ್ವಹಿಸುತ್ತಿರುವ ಆರ್​ಜೆ ಅಮಿತ್ ಬಿಗ್ ಬಾಸ್ ಮನೆಗೆ ಕೊನೆಯ ಸ್ಪರ್ಧಿಯಾಗಿ ಎಂಟ್ರಿಕೊಟ್ಟರು.