ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ (Bigg Boss Kannada 12) ಆರಂಭದಲ್ಲೇ ದೊಡ್ಡ ವಿಘ್ನವಾಗಿದೆ. ಶುರುವಾದ 9ನೇ ದಿನಕ್ಕೆ ಶೋ ಸ್ಥಗಿತಗೊಂಡಿದೆ. ನೋಟಿಸ್ ಕೊಟ್ಟರೂ ಅದನ್ನು ಜಾಲಿವುಡ್ ಆಡಳಿತ ಮಂಡಳಿ ನಿರಾಕರಿಸಿದ ಕಾರಣ ಈಗ ಇದಕ್ಕೆ ಬಿಗ್ ಬಾಸ್ ಆಯೋಜಕರು ಬೆಲೆ ತೆತ್ತಂತಾಗಿದೆ. ಕೋಟಿ-ಕೋಟಿ ಖರ್ಚು ಮಾಡಿ ಶೋ ಶುರುಮಾಡಿದ ಎರಡು ವಾರದೊಳಗೆ ಈರೀತಿ ಆಗಿರುವುದು ದೊಡ್ಡ ಹಿನ್ನಡೆ ಆಗಿದೆ. ತಮ್ಮ ಪ್ರಾಜೆಕ್ಟ್ಗನ್ನೆಲ್ಲ ಬಿಟ್ಟು ಬಂದ ಸ್ಪರ್ಧಿಗಳಿಗೂ ಇದು ದೊಡ್ಡ ಹೊಡೆತವಾಗಿದೆ. ಹಾಗಾದರೆ ಬಿಗ್ ಬಾಸ್ ದಿಢೀರ್ ಹೀಗೆ ಸ್ಥಗಿತಗೊಳ್ಳಲಿ ಅಸಲಿ ಕಾರಣ ಏನು?.
ಜಾಲಿವುಡ್ ಸ್ಟುಡಿಯೋಸ್ ಹಾಗೂ ಬಿಗ್ ಬಾಸ್ ತಂಡ ಮಾಡಿರುವ ಉಲ್ಲಂಘನೆ ಏನು..?
- ಒಳಾಂಗಣ ಶೋ ಮಾಡುತ್ತಿರುವುದಕ್ಕೆ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದಿಲ್ಲ
- ವಾಯು ಕಾಯ್ದೆ ಹಾಗೂ ಜಲ ಕಾಯ್ದೆ ಅಡಿಯಲ್ಲಿ ಯಾವುದೇ ಅನುಮತಿ ಪಡೆದಿಲ್ಲ
- ತ್ಯಾಜ್ಯ ಸಂಸ್ಕರಣೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮಕೈಗೊಂಡಿಲ್ಲ
- ಜನರೇಟರ್ ಸೆಟ್ಗಳ ಅಳವಡಿಕೆಗೆ ಅನುಮತಿ ಪಡೆದಿರಲಿಲ್ಲ
- 2024 ರಲ್ಲೇ ವೆಲ್ಸ್ ಸ್ಟುಡಿಯೋಸ್ ಆ್ಯಂಡ್ ಎಂಟರ್ಟೈನ್ಮೆಂಟ್ ಸಂಸ್ಥೆ ನಿಯಮ ಪಾಲಿಸಿರಲಿಲ್ಲ
- ಯಾವುದೇ ನಕ್ಷೆ ಇಲ್ಲದೇ, ಪರವಾನಗಿ ಇಲ್ಲದೇ ಜಾಲಿವುಡ್ ನಡೆಸುತ್ತಿರುವ ಆರೋಪ ಕೂಡ ಕೇಳಿ ಬಂದಿದೆ
- ವಿದ್ಯುತ್ ಸಂಪರ್ಕ ಕಡಿತಗೊಳಿಸೋದಾಗಿಯೂ ನೋಟಿಸ್ ನೀಡಿದ್ದರು ಆದ್ರೆ ಇದಕ್ಕೆ ಜಾಲಿವುಡ್ ಉತ್ತರ ನೀಡದ ಕಾರಣ, ಜಾಲಿವುಡ್ ತಪ್ಪಿಗೆ ಬಿಗ್ ಬಾಸ್ ಶೋ ನಿಲ್ಲುವಂತೆ ಆಗಿದೆ.
ಬಿಗ್ ಬಾಸ್ ಆಯೋಜಕರ ಮುಂದಿನ ನಡೆ ಏನು..?
- ಇಂದು ಕೋರ್ಟ್ ಮೊರೆ ಹೋಗಿ ಸ್ಥಗಿತ ಆದೇಶ ತೆರವು ಮಾಡಿಸುವ ಸಾಧ್ಯತೆ
- ತುರ್ತು ಅರ್ಜಿ ವಿಚಾರಣೆ ನಡೆಸುವಂತೆ ಮನವಿ ಮಾಡುವ ಸಾಧ್ಯತೆ
- ಪರಿಸರ ವಿಚಾರ ಆಗಿರುವುದರಿಂದ ಕೋರ್ಟ್ ವಿಚಾರ ಗಂಭೀರವಾಗಿ ಪರಿಗಣಿಸಬಹುದು
- ಈಗಾಗಲೇ ಶೋ ಸೆಟ್, ಸ್ಪರ್ಧಾಳುಗಳ ವೆಚ್ಚ, ಖರ್ಚಿನ ವಿಚಾರದಲ್ಲಿ ಕೋಟ್ಯಾಂತರ ರೂ. ವ್ಯಯಿಸಲಾಗಿದೆ. ಇದೇ ವಿಚಾರ ಇಟ್ಟುಕೊಂಡು ಕೋರ್ಟ್ಗೆ ಮನವಿ ಮಾಡುವ ಸಾಧ್ಯತೆ
- ಆಗಿರುವ ತಪ್ಪನ್ನ ಸರಿಪಡಿಸಿಕೊಳ್ಳುತ್ತೇವೆ ಎಂದು ಹೇಳುವ ಸಾಧ್ಯತೆ
- ನಿಯಮ ಮೀರಿದ್ದಕ್ಕಾಗಿ ದಂಡ ಕಟ್ಟುವ ಬಗ್ಗೆಯೂ ವಾದ ಮಾಡುವ ಸಾಧ್ಯತೆ
ಸ್ಪರ್ಧಿಗಳು ರೆಸಾರ್ಟ್ಗೆ ಶಿಫ್ಟ್
ನಿನ್ನೆ (ಅ. 07) ಸಂಜೆ ವೇಳೆಗೆ ಸ್ವತಃ ತಹಶೀಲ್ದಾರ್ ತೇಜಸ್ವಿನಿಯವರು ಮುಂದೆ ನಿಂತು ಸ್ಪರ್ಧಿಗಳನ್ನು ಹೊರಗೆ ಕರೆತಂದರು. ಆರಂಭದಲ್ಲಿ ಇವರನ್ನು ಅಲ್ಲೇ ಪಕ್ಕದಲ್ಲಿದ್ದ ಥಿಯೇಟರ್ಗೆ ಶಿಫ್ಟ್ ಮಾಡಲಾಯಿತು. ಬಳಿಕ ಎಲ್ಲ ಮಾಹಿತಿಯನ್ನ ವಿವರಿಸಿದ ನಂತರ ಎಲ್ಲ ಸ್ಪರ್ಧಿಗಳನ್ನ ಇನ್ನೋವಾ ಕಾರಿನ ಮೂಲಕ ರಾಮನಗರ ತಾಲೂಕಿನ ಬಿಡದಿ ಪಕ್ಕದಲ್ಲಿರುವ ಈಗಲ್ ಟನ್ ರೆಸಾರ್ಟ್ಗೆ ಶಿಫ್ಟ್ ಮಾಡಲಾಯಿತು. ಈ ರೆಸಾರ್ಟ್ನಲ್ಲಿ 12 ರೂಮ್ ಬುಕ್ ಮಾಡಲಾಗಿದೆ ಎಂಬ ಮಾಹಿತಿ ಇದೆ.
Bigg Boss Kannada 12: ಬಿಗ್ ಬಾಸ್ ಶೂಟಿಂಗ್ ಸ್ಥಗಿತ, ಕೋರ್ಟ್ ಮೊರೆ ಹೋಗಲು ಆಯೋಜಕರ ನಿರ್ಧಾರ