ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಬಿಗ್ ಬಾಸ್ ಎಪಿಸೋಡ್ ಎಷ್ಟು ದಿನ ಪ್ರಸಾರವಾಗಲಿದೆ?: ಕಲರ್ಸ್​ನ ಮಹತ್ವದ ನಿರ್ಧಾರ ಏನು?

ಬುಧವಾರದ ಸಂಚಿಕೆ ಅಂದರೆ ಇಂದಿನ ಎಪಿಸೋಡ್ ಎಂದಿನಂತೆ ನಿಗಧಿತ ಸಮಯದಲ್ಲಿ ಪ್ರಸಾರವಾಗಲಿದೆ. ಬುಧವಾರ ಪ್ರಸಾರ ಆಗುವುದು ಮಂಗಳವಾರದ ಸಂಚಿಕೆ. ಗುರುವಾರ ಅಂದರೆ ನಾಳೆ ಪ್ರಸಾರ ಆಗಬೇಕಿರುವುದು ಇಂದಿನ ಎಪಿಸೋಡ್. ಮಂಗಳವಾರ ಸಂಜೆಯೇ ಸ್ಪರ್ಧಿಗಳು ಆಚೆ ಬಂದಿರುವಾ ಕಾರಣ ಇಲ್ಲಿ ಕಲರ್ಸ್ ಹಾಗೂ ಆಯೋಜಕರು ಗುರುವಾರದ ಸಂಚಿಕೆಗೆ ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದು.

BBK 12

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss kannada 12) ದಿಢೀರ್ ಸ್ಥಗಿತಗೊಂಡಿರುವುದು ಅಭಿಮಾನಿಗಳಿಗೆ ಒಂದುಕಡೆ ಬೇಸರ ಮೂಡಿಸಿದರೆ ಅತ್ತ ಸ್ಪರ್ಧಿಗಳಿಗೆ ಹಾಗೂ ಬಿಗ್ ಬಾಸ್ ತಂಡಕ್ಕೆ ಟೆನ್ಶನ್ ಮೂಡಿದೆ. ಅದೆಷ್ಟೋ ಕೆಲಸಗಾರರು ಮನೆಯಿಂದ ಹೊರಬಂದಿದ್ದಾರೆ. ಮತ್ತೊಂದೆಡೆ ತಮ್ಮ ಎಲ್ಲ ಕೆಲಸ- ಕಾರ್ಯ ಬಿಟ್ಟು ಬಿಗ್ ಬಾಸ್​ಗೆ ಬಂದ ಸ್ಪರ್ಧಿಗಳಿಗೂ ಇನ್ನೇನು ಮಾಡೋದು ಎಂಬ ಭಯ ಶುರುವಾಗಿದೆ. ಆಯೋಜಕರು ಇಂದೇ ಕೋರ್ಟ್ ಮೊರೆ ಹೋಗಲಿದ್ದಾರೆ. ಆದರೆ, ಈ ಸಮಸ್ಯೆ ಎರಡು ಮೂರು ದಿನಗಳಲ್ಲಿ ಸರಿ ಹೋಗುತ್ತ ಅಥವಾ ವಾರಗಳ ಬೇಕಾಗುತ್ತ ಎಂಬುದು ತಿಳಿದಿಲ್ಲ. ಇದರ ಮಧ್ಯೆ ಬಿಗ್ ಬಾಸ್ ಎಪಿಸೋಡ್ ಟೆಲಿಕಾಸ್ಟ್ ಆಗುತ್ತ ಎಂಬ ಅನುಮಾನ ವೀಕ್ಷಕರಿಗಿದೆ.

ಮಾಹಿತಿಗಳ ಪ್ರಕಾರ, ಬುಧವಾರದ ಸಂಚಿಕೆ ಅಂದರೆ ಇಂದಿನ ಎಪಿಸೋಡ್ ಎಂದಿನಂತೆ ನಿಗಧಿತ ಸಮಯದಲ್ಲಿ ಪ್ರಸಾರವಾಗಲಿದೆ. ಬುಧವಾರ ಪ್ರಸಾರ ಆಗುವುದು ಮಂಗಳವಾರದ ಸಂಚಿಕೆ. ಗುರುವಾರ ಅಂದರೆ ನಾಳೆ ಪ್ರಸಾರ ಆಗಬೇಕಿರುವುದು ಇಂದಿನ ಎಪಿಸೋಡ್. ಮಂಗಳವಾರ ಸಂಜೆಯೇ ಸ್ಪರ್ಧಿಗಳು ಆಚೆ ಬಂದಿರುವಾ ಕಾರಣ ಇಲ್ಲಿ ಕಲರ್ಸ್ ಹಾಗೂ ಆಯೋಜಕರು ಗುರುವಾರದ ಸಂಚಿಕೆಗೆ ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದು. ಅದೇನೆಂದರೆ ಮಂಗಳವಾರ ಮನೆಯೊಳಗೆ ನಡೆದ ಘಟನೆಯನ್ನೇ ವಿಸ್ತಾರವಾಗಿ ಎರಡು ದಿನ ಪ್ರಸಾರ ಮಾಡಲಿದೆ.

ವರದಿಗಳ ಪ್ರಕಾರ, ಸೋಮವಾರ ಹಾಗೂ ಮಂಗಳವಾರ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ನಾಮಿನೇಷನ್ ಹಾಗೂ ಟಾಸ್ಕ್ ವಿಚಾರಕ್ಕೆ ಜೋರು ಜೋರು ಗಲಾಟೆ ನಡೆದಿದೆ. ಕಾಕ್ರೋಚ್ ಸುಧಿ ಅಸುರಾಧಿಪತಿ ಆದ್ಮೇಲೆ ಅಶ್ವಿನಿ ಗೌಡ ಹಾಗೂ ಜಾನ್ವಿ ಕೂಡ ತಿರುಗಿಬಿದ್ದಿದ್ದಾರೆ. ಕಾಕ್ರೋಚ್ ಸುಧಿ ಜಂಟಿಗಳ ಪರ ಸಾಫ್ಟ್ ಕಾರ್ನರ್ ಹೊಂದಿದ್ದಾರೆ. ಇದರಿಂದ ತೀವ್ರ ವಾಗ್ವಾದಗಳು ಬಿಗ್ ಬಾಸ್ ಮನೆಯಲ್ಲಿ ನಡೆದಿದೆ.

ಹೀಗಾಗಿ ಆಯೋಜಕರು ಸೋಮವಾಋದ ರಾತ್ರಿ ಫುಟೇಜ್ ಹಾಗೂ ಮಂಗಳವಾರದ ಫುಟೇಜ್‌ ಬಳಸಿಕೊಂಡು ಕನಿಷ್ಠ ಎರಡು ಅಥವಾ ಹೆಚ್ಚೆಂದರೆ ಮೂರು ಎಪಿಸೋಡ್‌ ಟೆಲಿಕಾಸ್ಟ್ ಮಾಡಲಿದೆ ಎನ್ನಲಾಗಿದೆ. ಈ ಹೊತ್ತಿಗೆ ಎಲ್ಲ ಸಮಸ್ಯೆ ಸರಿಯಾಗಿ ಪುನಃ ಬಿಗ್ ಬಾಸ್ ಆರಂಭಗೊಂಡರೆ ಆಯಿತು.. ಎಲ್ಲಾದರು ಸ್ಟಾರ್ಟ್ ಆಗಿಲ್ಲ ಎಂದಾದರೆ ಮತ್ತೆ ರಿಪೀಟ್ ಟೆಲಿಕಾಸ್ಟ್ ಮಾಡುವ ಸಾಧ್ಯತೆ ಇದೆ.

BBK 12: ಬಿಗ್ ಬಾಸ್ ಸ್ಪರ್ಧಿಗಳು ತಮ್ಮ ತಮ್ಮ ಮನೆಗೆ ಹೋಗುತ್ತಾರಾ?: ಶೋ ಪುನಃ ಯಾವಾಗ ಆರಂಭ?

ಬಿಗ್ ಬಾಸ್ ಕನ್ನಡ ಇದೇರೀತಿ ಮಧ್ಯದಲ್ಲಿ ದಿಢೀರ್ ಸ್ಥಗಿತಗೊಂಡಿದ್ದು ಇದೇ ಮೊದಲಲ್ಲ. ಈ ಹಿಂದೆ 2021ರಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 8ರ ಸಂದರ್ಭ ರಾಜ್ಯದಲ್ಲಿ ಕೊರೊನಾ ವೈರಸ್ ಹೆಚ್ಚಾದ ಪರಿಣಾಮ 70 ದಿನಗಳ ಬಳಿಕ ಶೋ ನಿಲ್ಲಿಸಲಾಯಿತು. ಸ್ಪರ್ಧಿಗಳನ್ನು ಹೊರಗೆ ಕಳುಹಿಸಲಾಗಿತ್ತು. ಬಳಿಕ ಕೊರನಾ ಹಾವಳಿ ಕಡಿಮೆ ಆದ ನಂತರ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದು ಒಂದೂವರೆ ತಿಂಗಳ ನಂತರ ಮತ್ತೆ ಶೋ ಆರಂಭಿಸಲಾಗಿತ್ತು. ಈಗ ಕೂಡ ಅದೇ ರೀತಿ ಆಗಲಿದೆ.