ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBM 7: ಬಿಗ್ ಬಾಸ್ ಮಲಯಾಳಂನಲ್ಲಿ ಬಿಗ್ ಟ್ವಿಸ್ಟ್: ಹಿಂದೆಂದೂ ಕಂಡು ಕೇಳರಿಯದ ಟಾಸ್ಕ್

ಹಿರಿಯ ನಟ ಮೋಹನ್ ಲಾಲ್ ನೇತೃತ್ವದಲ್ಲಿ ಮಲಯಾಳಂ ಭಾಷೆಯಲ್ಲಿ ಬಿಗ್ ಬಾಸ್ ಮಲಯಾಳಂ ಸೀಸನ್ 7 ಪ್ರಾರಂಭವಾಯಿತು. ಇದೀಗ ಈ ಶೋ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಇದಕ್ಕೆ ಕಾರಣ ವೀಕೆಂಡ್ನಲ್ಲಿ ಬಂದ ಮೋಹನ್ ಲಾಲ್ ಬಹುದೊಡ್ಡ ಘೋಷಣೆ ಮಾಡಿರುವುದು.

Malayalam Bigg Boss

ರಿಯಾಲಿಟಿ ಶೋ ಬಿಗ್ ಬಾಸ್ (Bigg Boss) ಟಿವಿ ಜಗತ್ತಿನಲ್ಲಿ ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿದೆ. ಇದೀಗ ಬಿಗ್ ಬಾಸ್ ಫೀವರ್ ಶುರುವಾಗಿದೆ. ಒಂದೊಂದೆ ಭಾಷೆಯಲ್ಲಿ ಈ ಅತಿ ದೊಡ್ಡ ರಿಯಾಲಿಟಿ ಶೋಗೆ ಚಾಲನೆ ಸಿಗುತ್ತಿದೆ. ಎರಡು ವಾರಗಳಹಿಂದೆ ಹಿರಿಯ ನಟ ಮೋಹನ್ ಲಾಲ್ ನೇತೃತ್ವದಲ್ಲಿ ಮಲಯಾಳಂ ಭಾಷೆಯಲ್ಲಿ ಬಿಗ್ ಬಾಸ್ ಮಲಯಾಳಂ ಸೀಸನ್ 7 ಪ್ರಾರಂಭವಾಯಿತು. ಇದೀಗ ಈ ಶೋ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಇದಕ್ಕೆ ಕಾರಣ ವೀಕೆಂಡ್​ನಲ್ಲಿ ಬಂದ ಮೋಹನ್​ ಲಾಲ್ ಬಹುದೊಡ್ಡ ಘೋಷಣೆ ಮಾಡಿರುವುದು.

ಹೌದು, ಈ ಶೋನಲ್ಲಿ ಒಟ್ಟು 19 ಸ್ಪರ್ಧಿಗಳು ಮನೆಯೊಳಗೆ ಹೋದರು. ಇದರಲ್ಲಿ ಅಪ್ಪಾನಿ ಶರತ್, ಸಾರಿಕಾ, ರೇಣು ಸುಧಿ, ಶೈತ್ಯ, ನವೀನ್, ಅಧಿಲಾ ನೂರಾ, ಶಾನವಾಸ್ ಶಾನು, ಜಿಸೆಲ್ ಥಕ್ರಾಲ್, ಮುನ್ಷಿ ರಂಜಿತ್, ರೇನಾ ಫಾತಿಮಾ, ಅಭಿಲಾಷ್, ಬಿನ್ನಿ ನೋಬಿನ್, ಆರ್ ಜೆ ಬಿನ್ಸಿ, ಒನಿಲ್ ಸಾಬು, ಅಕ್ಬರ್ ಖಾನ್, ಕಲಾಭವನ್ ಸರಿಗಾ, ಆರ್ಯನ್ ಕಥುರಿಯಾ, ಅನೀಸೋಲ್ ಇದ್ದಾರೆ. ಈ ಪೈಕಿ ಆರ್ ಜೆ ಬಿನ್ಸಿ ಹಾಗೂ ಮುನ್ಷಿ ರಂಜಿತ್ ಎಲಿಮಿನೇಟ್ ಆಗಿದ್ದಾರೆ.

ಈಗ ಶೋ ಮೂರನೇ ವಾರಕ್ಕೆ ಕಾಲಿಡುತ್ತಿದ್ದಂತೆ, ಹೊಸ ಟ್ವಿಸ್ಟ್‌ಗಳನ್ನು ನಿರೀಕ್ಷಿಸಬಹುದು ಎಂದು ಮೋಹನ್‌ ಲಾಲ್ ಹೇಳಿದ್ದಾರೆ. ಬರುವ ವಾರದ ಟಾಸ್ಕ್‌ಗಳಲ್ಲಿ ಹೊಸತನವನ್ನು ನಿರೀಕ್ಷಿಸಬಹುದು ಎಂದು ಮೋಹನ್‌ ಲಾಲ್ ಹೇಳಿದರು. ಬಿಗ್ ಬಾಸ್ ಇತಿಹಾಸದಲ್ಲಿ ಇದುವರೆಗೆ ಕಾಣದ ಟಾಸ್ಕ್‌ಗಳು ಇರಲಿವೆ ಎಂದೂ ಅವರು ಹೇಳಿದ್ದಾರೆ. ‘‘ಬಿಗ್ ಬಾಸ್ ಇತಿಹಾಸದಲ್ಲಿ ಇದುವರೆಗೆ ಕಾಣದ ತೀವ್ರ ಸ್ಪರ್ಧೆ ಮುಂದಿನ ವಾರದಿಂದ ಇರಲಿದೆ. ಮುಂದಿನ ವಾರದ ಟಾಸ್ಕ್‌ಗಳು ವಿಭಿನ್ನ ಮತ್ತು ಪ್ರಬಲವಾಗಿವೆ’’ ಎಂದು ಮೋಹನ್‌ ಲಾಲ್ ಹೇಳಿದರು. ಹೀಗಾಗಿ ಈ ವಾರ ಏನೆಲ್ಲ ಇರುತ್ತೆ ಎಂಬುದು ರೋಚಕತೆ ಸೃಷ್ಟಿಸಿದೆ.

BB 19: ಬಿಗ್ ಬಾಸ್ ಆರಂಭಕ್ಕೆ ಕೇವಲ ಆರು ದಿನ ಬಾಕಿ: ಕಾದು ಕುಳಿತ ವೀಕ್ಷಕರು

ಬಿಗ್ ಬಾಸ್ ಮಲಯಾಳಂ ಮೊದಲ ಬಾರಿಗೆ ತನ್ನದೇ ಆದ ಸ್ಥಳದಲ್ಲಿ ನಡೆಯುತ್ತಿದೆ. ಹಿಂದಿನ ಸೀಸನ್‌ಗಳಿಗಿಂತ ದೊಡ್ಡ ಮನೆಯನ್ನು ಈ ಬಾರಿ ನಿರ್ಮಿಸಲಾಗಿದೆ. ನೀವು ಬಿಗ್ ಬಾಸ್ ಮಲಯಾಳಂ 7 ಅನ್ನು ಟಿವಿ ಚಾನೆಲ್ ಏಷ್ಯಾನೆಟ್ ಮತ್ತು ಒಟಿಟಿ ಪ್ಲಾಟ್‌ಫಾರ್ಮ್ ಜಿಯೋ ಹಾಟ್‌ಸ್ಟಾರ್‌ನಲ್ಲಿ ಸುಲಭವಾಗಿ ವೀಕ್ಷಿಸಬಹುದು. ನೀವು ಈ ರಿಯಾಲಿಟಿ ಶೋ ಅನ್ನು ಆನ್‌ಲೈನ್‌ನಲ್ಲಿ ಯಾವುದೇ ಸಮಯದಲ್ಲಿ, ದಿನದ 24 ಗಂಟೆಗಳು, ವಾರದ ಏಳು ದಿನಗಳು ವೀಕ್ಷಿಸಬಹುದು.