ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ (Bhagya Lakshmi Serial) ಭಾಗ್ಯ ಹಾಗೂ ಆದೀಶ್ವರ್ ನಡುವಿನ ಎಪಿಸೋಡ್ ಕುತೂಹಲ ಮೂಡಿಸುತ್ತಿದ್ದರೆ ಇದೀಗ ಮತ್ತೊಂದೆಡೆ ತಾಂಡವ್ ಹಾಗೂ ಶ್ರೇಷ್ಠಾ ನಡುವಣ ಜಗಳ ರೋಚಕತೆ ಸೃಷ್ಟಿಸಿದೆ. ಯಾಕೆಂದರೆ ಶ್ರೇಷ್ಠಾಗೆ ಈಗ ತಾಂಡವ್ ಮೇಲೆ ಅನುಮಾನ ಮೂಡಲು ಶುರುವಾಗಿದೆ. ಪದೇ ಪದೇ ತಾಂಡವ್-ಭಾಗ್ಯ ಮುಖಾಮುಖಿ ಆಗುತ್ತಿರುವುದನ್ನು ಶ್ರೇಷ್ಠಾಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅಷ್ಟೇ ಅಲ್ಲದೆ ಶ್ರೇಷ್ಠಾ ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡಿರುವುದು ತಾಂಡವ್ಗೆ ಕೋಪ ತರಿಸಿದೆ. ಇದೆಲ್ಲ ಈಗ ದೊಡ್ಡ ಜಗಳಕ್ಕೆ ಕಾರಣವಾಗಿದೆ.
ತಾಂಡವ್ ಎಷ್ಟೇ ದೂರ ಹೋದರೂ ಭಾಗ್ಯ ಒಂದಲ್ಲ ಒಂದು ವಿಚಾರದಲ್ಲಿ ತಾಂಡವ್ ಎದುರು ಬರುತ್ತಿದ್ದಾಳೆ. ಆದೀಶ್ವರ್ ಭಾಗ್ಯಾಗೆ ಹತ್ತಿರವಾಗಿರುವ ಕಾರಣ ಹಾಗೂ ತಾಂಡವ್ಗೆ ಕೂಡ ಆದೀ ಕ್ಲೋಸ್ ಆಗಿರುವ ಕಾರಣ ಭಾಗ್ಯಾ-ತಾಂಡವ್ ಭೇಟಿ ಆಗಾಗ್ಗೆ ನಡೆಯುತ್ತಿದೆ. ಇದು ಶ್ರೇಷ್ಠಾಗೆ ತಿಳಿದಿದೆ. ಇದರಿಂದ ಶ್ರೇಷ್ಠಾ ಕೆರಳಿ ಕೆಂಡವಾಗಿದ್ದಾಳೆ. ಇಬ್ಬರ ನಡುವೆ ಪ್ರತಿದಿನ ಜಗಳ ನಡೆಯುತ್ತಲೇ ಇದೆ.
ತಾಂಡವ್ ಆಫೀಸ್‌ನಲ್ಲಿ ಕೆಲಸ ಮಾಡುವ ಆದೀಶ್ವರ್‌ಗೆ ಭಾಗ್ಯ ಕಂಡರೆ ಸಿಕ್ಕಾಪಟ್ಟೆ ಗೌರವ, ಅಭಿಮಾನ. ಭಾಗ್ಯಳನ್ನು ಎಲ್ಲರೂ ಹೊಗಳ್ತಾರೆ ಅಂತ ತಾಂಡವ್‌ಗೆ ಸಿಟ್ಟು. ಇನ್ನೊಂದು ಕಡೆ ಶ್ರೇಷ್ಠಗೆ ಅನುಮಾನ. ಭಾಗ್ಯ ಹಾಗೂ ತಾಂಡವ್ ಮುಖಾಮುಖಿ ಆಗ್ತಿರೋದು ನೋಡಿ ಶ್ರೇಷ್ಠಗೆ ಚಿಂತೆ ಶುರು ಆಗಿದೆ. ಯಾವಾಗ ನೋಡಿದರೂ ಕೂಡ ನನ್ನನ್ನು ಅಸಡ್ಡೆಯಿಂದ ಕಾಣುವ ತಾಂಡವ್ ಮನಸ್ಸು ಬದಲಾಯಿಸಿ ಭಾಗ್ಯಳ ಜೊತೆ ಮತ್ತೆ ಸಂಸಾರ ಮಾಡ್ತಾನೆ ಎನ್ನುವ ಚಿಂತೆ ಅವಳಿಗೆ ಶುರುವಾಗಿದೆ.
ಬೆಳಗ್ಗೆ ಎದ್ದ ತಕ್ಷಣ ಇಬ್ಬರ ನಡುವೆ ಜಗಳ ಶುರುವಾಗುತ್ತಿದೆ. ತಾಂಡವ್ ಹೊರಗಡೆ ಹೋಗಿ ಫೋನ್ನಲ್ಲಿ ಮಾತನಾಡಿದರೆ, ಇವನು ಭಾಗ್ಯ ಜೊತೆನೇ ಮಾತನಾಡುತ್ತಿರಬಹುದು ಎಂದು ಶ್ರೇಷ್ಠಾ ಅನುಮಾನ ಮೂಡಿದೆ. ಇದಕ್ಕಾಗಿ ತಾಂಡವ್ನ ಫೋನ್ ಚೆಕ್ ಮಾಡಿದ್ದಾಳೆ. ಅಲ್ಲದೆ ಭಾಗ್ಯಾಗೆ ಕಾಲ್ ಮಾಡಿ ನನ್ನ-ನನ್ನ ಗಂಡನ ವಿಚಾರಕ್ಕೆ ಬರಬೇಡ ಎಂದು ಹೇಳಿ ಮನಬಂದಂತೆ ಬೈದಿದ್ದಾಳೆ. ಜೊತೆಗೆ ಭಾಗ್ಯ ಮಕ್ಕಳಿಗೂ ಬೈದಿದ್ದಾಳೆ. ಶ್ರೇಷ್ಠಾ ಕಾಲ್ ಮಾಡಿ ಭಾಗ್ಯಾಗೆ ಬೈದಿರುವ ಬಗ್ಗೆಯೂ ಮನೆಯಲ್ಲಿ ಜಗಳ ನಡೆದಿದೆ.
ನಾನು ಭಾಗ್ಯಾಗೆ ಕಾಲ್ ಮಾಡಿ ಬೈದಿದ್ದಕ್ಕೆ ನಿನಗೆ ಖುಷಿ ಆಗುತ್ತದೆ ಅಂದುಕೊಂಡ್ರೆ ನೀನು ನನಗೇ ಬೈಯುತ್ತಿದ್ದಿ ಅಲ್ವಾ ಎಂದು ಶ್ರೇಷ್ಠಾ ತಾಂಡವ್ ಮೇಲೆ ಕೋಪ ಮಾಡಿಕೊಂಡಿದ್ದಾಳೆ. ಆದರೆ, ತಾಂಡವ್, ನಾನು ಭಾಗ್ಯಾಗೆ ಬೈದಿದ್ದಕ್ಕೆ ಕೋಪಗೊಂಡಿಲ್ಲ.. ನನ್ನ ಮಕ್ಕಳ ಬಗ್ಗೆಯೂ ಮಾತನಾಡಿದ್ದೀಯಾ.. ಅವರ ಬಗ್ಗೆ ಮಾತನಾಡುವ ಹಕ್ಕು ನಿನಗಿಲ್ಲ ಎಂದು ಇಬ್ಬರ ಮಧ್ಯೆ ಜೋರು ಜಗಳವಾಗಿದೆ.
ಇನ್ನು ಆದೀ ಹಾಗೂ ತಾಂಡವ್ಗೆ ಕೈ ತಪ್ಪುತ್ತಿದ್ದ ದೊಡ್ಡ ಪ್ರಾಜೆಕ್ಟ್ ಒಂದು ಭಾಗ್ಯಾಳ ಕೃಪೆಯಿಂದ ಪುನಃ ಸಿಕ್ಕಿದೆ. ಕೋಟಿ ಕೋಟಿ ಪ್ರಾಜೆಕ್ಟ್ ಭಾಗ್ಯ ಇಲ್ಲದಿದ್ದರೆ ಇವರಿಗೆ ಸಿಗುತ್ತಿರಲಿಲ್ಲ. ಇಷ್ಟೆಲ್ಲ ಸಹಾಯ ಮಾಡಿರುವ ಭಾಗ್ಯಾಗೆ ಏನಾದರು ದೊಡ್ಡದು ಗಿಫ್ಟ್ ನೀಡಬೇಕು ಎಂದು ಆದೀ ಮುಂದಾಗಿದ್ದಾನೆ. ಈ ಬಗ್ಗೆ ತಾಂಡವ್ ಬಳಿ ಚರ್ಚೆ ಕೂಡ ಮಾಡಿದ್ದಾನೆ. ನಾನು ಭಾಗ್ಯಾಗೆ ಏನಾದರು ವ್ಯಾಲ್ಯುವೆಬಲ್ ಗಿಫ್ಟ್ ಕೊಡಬೇಕು ಅಂದುಕೊಂಡಿದ್ದೇನೆ.. ಅವಳಿಂದಲೇ ನಮ್ಮ ಪ್ರಾಜೆಕ್ಟ್ ಅಪ್ರೂವ್ ಆಗಿರೋದು ಅಲ್ವಾ ಎಂದು ತಾಂಡವ್ಗೆ ಕಾಲ್ ಮಾಡಿ ಹೇಳುತ್ತಾನೆ. ತಾಂಡವ್ಗೆ ಕೋಪ ಬಂದರೂ ಅದನ್ನು ತೋರಿಸದೆ, ಹೌದು ಹೌದು.. ಅವಳಿಗೆ ಒಂದು ಸ್ವೀಟ್ ಬಾಕ್ಸ್ ತೆಗೊಂಡು ಹೋಗಿ ಕೊಡೋಣ ಎಂದಾಗ ಆದೀ ನಗುತ್ತಾನೆ.. ಹಾಗಾದರೆ ಒಂದು 50 ಸಾವಿರ ಕೊಡೋಣ ಎನ್ನುತ್ತಾನೆ.
BBT 9: ಬಿಗ್ ಬಾಸ್ ಬಗ್ಗೆ ಬಿಗ್ ಅಪ್ಡೇಟ್: ಈ ಬಾರಿ ಒಂದಲ್ಲ ಎರಡು ಬಿಗ್ ಬಾಸ್ ಮನೆ
ಇಲ್ಲ ನಾನು ಅವರಿಗೆ ಒಂದು 25 ಲಕ್ಷ ಕ್ಯಾಶ್ ಕೊಟ್ಟುಬಿಡೋಣ ಅಂತ ಅಂದುಕೊಂಡಿದ್ದೇನೆ ಅಂತ ಆದೀ ಹೇಳುತ್ತಾನೆ. ಇದು ತಾಂಡವ್ಗೆ ಆಘಾತ ತರಿಸಿದೆ. ಏನು ಲಕ್ಷದಲ್ಲ.. ಅಂತ ಚಿಕ್ಕ ಕೆಲಸಕ್ಕೆ ಇಷ್ಟೆಲ್ಲ ಬೇಡ ಎಂದು ಹೇಳುತ್ತಾ. ಆಗ ಆದೀ ಇಲ್ಲ ಇದನ್ನ ನಾನು ನನ್ನ ಶೇರ್ನಲ್ಲೇ ಕೊಡುತ್ತೇನೆ ಎನ್ನುತ್ತಾನೆ.
ಈ ವಿಚಾರ ಶ್ರೇಷ್ಠಾಗೂ ಗೊತ್ತಾಗಿದೆ. ಅಷ್ಟು ಹಣ ಭಾಗ್ಯ ಕೈ ಸೇರಿದರೆ ಮತ್ತೆ ಹವಳನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಯಾವುದೇ ಕಾರಣಕ್ಕೂ ಆ ಹಣ ಭಾಗ್ಯ ಕೈ ಸೇರಬಾರದು.. ಆರೀತಿ ಮಾಡು ಎಂದು ಶ್ರೇಷ್ಠಾ ತಾಂಡವ್ಗೆ ಹೇಳಿದ್ದಾಳೆ. ಸದ್ಯ ದಿನಕಳೆದಂತೆ ಶ್ರೇಷ್ಠಾ-ತಾಂಡವ್ ಜಗಳ ಹೆಚ್ಚಾಗುತ್ತಲೇ ಇದೆ.. ಇದೆಲ್ಲ ಭಾಗ್ಯ ವಿಚಾರಕ್ಕೆ.. ಅತ್ತ ಆದೀಶ್ವರ್-ಭಾಗ್ಯ ಹತ್ತಿರವಾಗುತ್ತಲೇ ಇದ್ದಾರೆ. ಭಾಗ್ಯಾಗೆ ಯಾವುದೇ ರೀತಿಯ ತೊಂದರೆ ಆಗದಂತೆ ಆದೀ ನೋಡಿಕೊಳ್ಳುವುದು ಖಚಿತ. ಹೀಗಿರುವಾಗ ತಾಂಡವ್-ಶ್ರೇಷ್ಠಾ ಏನು ಪ್ಲ್ಯಾನ್ ಮಾಡುತ್ತಾರೆ..?, ಇವರಿಬ್ಬರ ಜಗಳ ಯಾವ ಹಂತಕ್ಕೆ ಹೋಗುತ್ತದೆ ಎಂಬುದು ನೋಡಬೇಕಿದೆ.