ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಪೂಜಾ-ಕಿಶನ್ ಮದುವೆಯ ಬಳಿಕ ಸದ್ಯ ಭಾಗ್ಯ ಹಾಗೂ ಆದೀಶ್ವರ್ ಕಾಮತ್ ನಡುವಣ ಲವ್ ಟ್ರ್ಯಾಕ್ ಶುರುವಾಗಿದೆ. ಆದೀಗೆ ಭಾಗ್ಯ ಮೇಲೆ ಲವ್ ಆದಂತಿದೆ. ಭಾಗ್ಯಾಳ ಗುಣ-ನಡತೆ, ಆಕೆಯ ಮಾತು ಆದೀಗೆ ತುಂಬಾ ಇಷ್ಟವಾಗಿದೆ. ಅಷ್ಟೇ ಅಲ್ಲದೆ ಭಾಗ್ಯ ಮಾಡಿದ ಅಡುಗೆಗೂ ಆದೀ ಮನಸೋತಿದ್ದಾನೆ. ದೇವಸ್ಥಾನದಲ್ಲಿ ಭಾಗ್ಯಾಗೆ ಅವಮಾನ ಮಾಡಿದ ಅರ್ಚಕನನ್ನೂ ಆದೀ ತರಾಟೆಗೆ ತೆಗೆದುಕೊಂಡಿದ್ದಾನೆ. ಇದನ್ನೆಲ್ಲ ಗಮನಿಸುತ್ತಿರುವ ಕುಸುಮಾ ಇವರಿಬ್ಬರ ಪ್ರೀತಿಗೆ ಸೇತುವೆಯಾಗುವ ಸಾಧ್ಯತೆ ಕಾಣುತ್ತಿದೆ.
ಹೌದು, ಭಾಗ್ಯಾಳ ಸ್ವಾಭಿಮಾನ - ನಿಷ್ಕಲ್ಮಶ ಮನಸ್ಸು ಆದೀಗೆ ಅರ್ಥವಾಗಿ ಈಗ ಆತನಿಗೆ ಭಾಗ್ಯ ಮೇಲೆ ಲವ್ ಆಗಿದೆ. ಭಾಗ್ಯ ರಾಮ್ದಾಸ್ ಮನೆಗೆ ತಂಗಿ ಪೂಜಾಳನ್ನು ನೋಡಲು ಬಂದಿದ್ದಾಗ ಆಕೆಯ ಬ್ಯಾಗ್ನಲ್ಲಿದ್ದ ಹಣದ ಕಟ್ಟು ಕಳೆದು ಹೋಗಿದೆ. ಪೂಜಾಳಿಗೆ ಫೋನ್ ಮಾಡಿ ಹಣ ಕಳೆದು ಹೋದ ವಿಚಾರ ಭಾಗ್ಯ ಹೇಳಿದ್ದಾಳೆ.. ಒಂದು ಬಾರಿ ಮನೆಯಲ್ಲಿ ಹುಡುಕು ಎಂದು ಹೇಳಿದ್ದಾಳೆ. ಆಗ ಆದೀಶ್ವರ್ ನಾನು ಕೂಡ ಹುಡುಕುತ್ತೇನೆ ಎಂದು ಪೂಜಾ ಜೊತೆ ಸೇರಿ ಮನೆಯಿಡಿ ಹುಡುಕಿದ್ದಾರೆ. ಕೊನೆಗೂ ಆ ಹಣ ಸಿಕ್ಕಿದೆ. ಮರುದಿನ ಸ್ವತಃ ಆದೀಯೆ ಭಾಗ್ಯ ಮನೆಗೆ ಬಂದು ಆ ಹಣದ ಕಟ್ಟನ್ನು ಕೊಟ್ಟಿದ್ದಾನೆ. ಬಳಿಕ ನಾವು ದೇವಸ್ಥಾನಕ್ಕೆ ಹೋಗುತ್ತ ಇದ್ದೇವೆ ನೀವು ಕೂಡ ಬನ್ನಿ ಎಂದು ಭಾಗ್ಯ ಹೇಳಿದ್ದಾಳೆ.
ಅದಕ್ಕೆ ಆದೀಶ್ವರ್, ನಾನು ಸಾಮಾನ್ಯವಾಗಿ ದೇವಸ್ಥಾನಕ್ಕಾಗಿ ಹೋಗುವುದಿಲ್ಲ.. ಆದರೆ, ಈ ಸಲ ನೀವು ಕರೆಯುತ್ತಿದ್ದೀರಿ ಅಂತ ಬರ್ತಾ ಇದ್ದೇನೆ ಎಂದು ಭಾಗ್ಯ-ಕುಸುಮಾ ಜೊತೆ ದೇವಸ್ಥಾನಕ್ಕೆ ತೆರಳಿದ್ದಾನೆ. ಅಲ್ಲಿ ಅರ್ಚಕರು ಭಾಗ್ಯಾಗೆ ಕುಂಕುಮವನ್ನು ಮೊದಲಿಗೆ ತಾಳಿಗೆ ಹಚ್ಚುಕೊಳ್ಳಿ ಎಂದು ಹೇಳಿದ್ದಾರೆ.. ಆದರೆ, ಭಾಗ್ಯ ಕೊರಳಲ್ಲಿ ತಾಳಿ ಇರುವುದಿಲ್ಲ.. ಗಂಡ ಇರಬೇಕಾದರೆನೇ ತಾಳಿ ಬಿಚ್ಚಿಟ್ಟಿದ್ದೀಯಾ?, ಅದೇನು ಸಂಸ್ಕಾರನೊ ಏನೋ ಎಂದು ಭಾಗ್ಯಾಗೆ ಹೇಳಿದ್ದಾರೆ.
ಇದರಿಂದ ಕೆರಳಿದ ಆದೀಶ್ವರ್, ಒಂದು ತಾಳಿ ಇಲ್ಲ ಅಂದ ಮಾತ್ರಕ್ಕೆ ಸಂಸ್ಕಾರ ಇಲ್ಲ ಅಂತಾನಾ?, ದೇವರ ಮೇಲೆ ಇಷ್ಟು ಭಯ-ಭಕ್ತಿ ಇರೋರು ತಾಳಿ ತೆಗೆದು ಇಟ್ಟಿದ್ದಾರೆ ಅಂದ್ರೆ ಏನೋ ದೊಡ್ಡದಾಗಿ ಆಗಿರಬೇಕು ಅಲ್ವಾ.. ಮರದಲ್ಲಿ ಒಂದು ಹಣ್ಣು ಹಾಲಾಗಿ ಕೆಳೆಗೆ ಬಿದ್ದಿದೆ ಅಂದ್ರೆ ಆ ಮರನೇ ಹಾಳಾಗಿದೆ ಅಂತ ಅಲ್ಲ.. ಹಣ್ಣು ಹಾಲಾಗಿದ್ರೆ ಅದಕ್ಕೆ ಹಕ್ಕಿನೂ ಕಾರಣ ಆಗಿರಬಹುದು ಅಲ್ವಾ.. ಅಥವಾ ಯಾರಾದ್ರು ಕಲ್ಲು ಹೊಡೆದಿರಬಹುದು ಅಲ್ವಾ.. ಅದೆಲ್ಲ ತಿಳಿಯದೆ ಮರವನ್ನು ದೋಷಿಸಿದ್ರೆ ನಾವು ದಡ್ಡರಾಗುತ್ತೇವೆ.. ನೀವು ಹೀಗೆಲ್ಲ ಮಾತಾಡೋದು ಸರಿ ಅಲ್ಲ ಎಂದು ಅರ್ಚಕರಲ್ಲಿ ಹೇಳಿದ್ದಾನೆ.
ಆದೀಯ ಮಾತಿನಿಂದ ಅರ್ಚಕ ತನ್ನ ತಪ್ಪನ್ನು ತಿದ್ದಿಕೊಂಡು ಭಾಗ್ಯ ಬಳಿ ಕ್ಷಮೆ ಕೇಳಿದ್ದಾನೆ. ಹೀಗೆ ಆದೀಶ್ವರ್, ಭಾಗ್ಯ ಪರವಾಗಿ ಮಾತನಾಡುವುದನ್ನು ದೂರದಲ್ಲಿ ನಿಂತು ಕುಸುಮಾ ನೋಡಿದ್ದಾಳೆ. ಬಳಿಕ ಕುಸುಮಾ ಭಾಗ್ಯ ಬಳಿ ಬಂದು.. ನಾನು ಎಲ್ಲ ಕೇಳಿಸಿಕೊಂಡೆ, ಒಳ್ಳೆ ಒಳ್ಳೆಯದಾಯಿತು.. ಆದೀ ಅವರೆ ನೀವು ಯಾವತ್ತೂ ದೇವಸ್ಥಾನಕ್ಕೆ ಬರದವರು ಇವತ್ತೇ ಯಾಕೆ ಬಂದ್ರಿ ಹೇಳಿ.. ಎಲ್ಲ ಸಮಸ್ಯೆಗಳನ್ನು ದೇವರು ತಾನಾಗಿಯೇ ಬಂದು ಬಗೆಹರಿಸಲು ಆಗಲ್ಲ ಅಂತ ಕೆಲವು ಸಲ ನಿಮ್ಮಂತವರನ್ನು ಮಾತಾಡೋಕೆ ಕಳಿಹಿಸುತ್ತಾನೆ ಎಂದು ಆದೀಯನ್ನು ಹೊಗಳಿದ್ದಾರೆ.
ಭಾಗ್ಯಾಳ ಜೀವನದಲ್ಲಿ ಏನೆಲ್ಲ ಆಗಿದೆ ಅಂತ ನಿಮಗೆ ಗೊತ್ತೊ-ಗೊತ್ತಿಲ್ವೋ ನನಗೆ ಗೊತ್ತಿಲ್ಲ.. ಆದ್ರೆ ಈ ಸಮಯದಲ್ಲಿ ಭಾಗ್ಯ ಪರವಾಗಿ ನಿಂತು ಮಾತನಾಡೋದು ಮುಖ್ಯ ಆಗಿತ್ತು.. ಆ ಕೆಲಸವನ್ನು ನೀವು ಮಾಡಿದ್ರಿ ತುಂಬಾ ಖುಷಿ ಆಯಿತು ಎಂದು ಹೇಳಿದ್ದಾರೆ.. ಬಳಿಕ ಮರಕ್ಕೆ ತಾಯ್ತಾ ಕಟ್ಟುವ ವೇಳೆ ಆದೀಶ್ವರ್ ಅಲ್ಲಿರುವವರಿಗೆ ಸಹಾಯ ಮಾಡುತ್ತಾರೆ. ಇದನ್ನು ನೋಡಿ ಭಾಗ್ಯಾಗೆ ಖುಷಿ ಆಗುತ್ತದೆ.. ಅತ್ತ ಕುಸುಮಾ ಕೂಡ, ಎಷ್ಟು ದೊಡ್ಡ ಮನೆಯಿಂದ ಬಂದವರು ಇವರು, ಆದ್ರೂ ಒಂದುಚೂರು ಅಹಂಕಾರ ಇಲ್ಲ ಎಂದು ಹೇಳಿದ್ದಾರೆ.
ಸದ್ಯ ಭಾಗ್ಯಾಗೂ ಆದೀಯ ನಡವಳಿಕೆ ಇಷ್ಟವಾಗಿದೆ.. ಕುಸುಮಾ ಕೂಡ ಆದೀಶ್ವರ್ನನ್ನು ಹೊಗಳುತ್ತಿದ್ದಾರೆ. ಮೂವರು ಕೂಡ ದೇವರ ಪ್ರಸಾದವನ್ನು ಹಂಚಿ ತಿಂದಿದ್ದಾರೆ. ಮುಂದೆ ಆದೀಶ್ವರ್, ಭಾಗ್ಯಾಗೋಸ್ಕರ ಏನೆಲ್ಲ ಮಾಡುತ್ತಾನೆ ಎಂಬುದು ನೋಡಬೇಕಿದೆ. ಮತ್ತೊಂದೆಡೆ ಅತ್ತ ರಾಮ್ದಾಸ್ ಮನೆಯಲ್ಲಿ ಪೂಜಾಗೆ ಕನ್ನಿಕಾ-ಮೀನಾಕ್ಷಿ ಹಿಂಸೆ ನೀಡುತ್ತಿದ್ದಾರೆ. ಪೂಜಾಳ ತಲೆಗೆ ಕನ್ನಿಕಾ ತಣ್ಣೀರು ಸುರಿದ ಪರಿಣಾಮ ಆಕೆಗೆ ಜ್ವರ ಬಂದಿದೆ. ಹೀಗಾದರು ಕನ್ನಿಕಾ-ಮೀನಾಕ್ಷಿ ಆಕೆ ನಾಟಕವಾಡುತ್ತ ಇದ್ದಾಳೆ ಎಂದು ಮತ್ತೆ ತೊಂದರೆ ಕೊಡುತ್ತಿದ್ದಾರೆ. ಈ ಎಲ್ಲ ವಿಚಾರ ಆದೀಶ್ವರ್-ಕಿಶನ್ಗೆ ಗೊತ್ತಾಗುತ್ತ ನೋಡಬೇಕು.
Naavu Nammavaru Show: ಹೊಸ ರಿಯಾಲಿಟಿ ಶೋಗೆ ಅಮೂಲ್ಯ ಎಂಟ್ರಿ: 8 ವರ್ಷಗಳ ಬಳಿಕ ತೆರೆಮೇಲೆ ಚೆಲುವಿನ ಚಿತ್ತಾರ ಚೆಲುವೆ