ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್ 2ಗೆ (Bharjari Bachelors Season 2) ತೆರೆಬಿದ್ದಿದೆ. ಭಾನುವಾರ ಫೈನಲ್ ನಡೆದಿದ್ದು, ಸುನೀಲ್ ವಿನ್ನರ್ ಪಟ್ಟ ಸಿಕ್ಕಿದೆ. ತೀರ್ಪುಗಾರರಾದ ರವಿಚಂದ್ರನ್ ‘ಸುನೀಲ್ ವಿನ್ನರ್’ ಎಂದು ಘೋಷಿಸಿದರು. ಡ್ರೋನ್ ಪ್ರತಾಪ್ ಹಾಗೂ ಗಗನಾ ಜೋಡಿಗೆ ಎರಡನೇ ರನ್ನರ್ ಅಪ್ ಸ್ಥಾನ ಸಿಕ್ಕಿದೆ. ರಕ್ಷಕ್ ಮತ್ತು ರಮೋಲಾ ಜೋಡಿಗೆ ಮೊದಲ ರನ್ನರ್ ಅಪ್ ಸ್ಥಾನ ಸಿಕ್ಕಿದೆ. ಈ ಸೀಸನ್ನಲ್ಲಿ ಪ್ರತಾಪ್-ಗಗನಾ ಜೋಡಿ ವಿನ್ ಆಗುತ್ತಾರೆ ಎಂದೇ ನಂಬಲಾಗಿತ್ತು. ಆದರೆ, ಎರಡನೇ ರನ್ನರ್ ಅಪ್ಗೆ ತೃಪ್ತಿಪಡಬೇಕಾಯಿತು.
ಪ್ರತಾಪ್ಗೆ 3 ಲಕ್ಷ ರೂಪಾಯಿ ಸಿಕ್ಕಿದೆ. ಈ ಹಿಂದೆ ರಿಯಾಲಿಟಿ ಶೋನಲ್ಲಿ ಸಿಕ್ಕ ಒಂದಿಷ್ಟು ಹಣವನ್ನು ಪ್ರತಾಪ್ ದಾನ ಮಾಡಿರುವುದನ್ನು ನಾವು ಕೇಳಿದ್ದೇವೆ. ಇದೀಗ ಭರ್ಜರಿ ಬ್ಯಾಚುಲರ್ಸ್ನಲ್ಲಿ ಸಿಕ್ಕ ಅರ್ಧ ಹಣವನ್ನು ಇವರು ತಮ್ಮ ಪಾರ್ಟ್ನರ್ ಗಗನಾ ಅವರಿಗೆ ನೀಡಿದ್ದಾರೆ.
ಶೋ ಆರಂಭವಾದ ಮೊದಲ ಸುತ್ತಿನಲ್ಲೇ ಱಂಪ್ ವಾಕ್ ಮಾಡಿ ಎಲ್ಲರ ಗಮನ ಸೆಳೆದಿದ್ದ ಪ್ರತಾಪ್ ಬಳಿಕ ಮೈ ಚಳಿ ಬಿಟ್ಟು ಸಖತ್ ಸ್ಟೆಪ್ ಹಾಕಿದ್ದರು. ಬಳಿಕ ಕಿರುತೆರೆ ಇತಿಹಾಸದಲ್ಲೇ ಈ ವರೆಗೆ ಯಾರೂ ಮಾಡಿದ ಸಾಧನೆಯೊಂದನ್ನ ಪ್ರತಾಪ್ ಮಾಡಿದ್ದರು. ಅದೇನೆಂದರೆ ಈ ಶೋನಲ್ಲಿ ಪ್ರತಾಪ್ ಅವರು 1000 ಅಡಿ ಎತ್ತರದಲ್ಲಿ ಹಾರುವ ಹೆಲಿಕ್ಯಾಪ್ಟರ್ ತಂದು ಗಗನಾಗೆ ಸರ್ಪ್ರೈಸ್ ಕೊಟ್ಟಿದ್ದರು.
Bhagya Lakshmi Serial: ಮತ್ತಷ್ಟು ಹತ್ತಿರವಾದ ಭಾಗ್ಯ-ಆದೀ: ಸಾಥ್ ಕೊಡ್ತಾಳ ಕುಸುಮಾ?
ಸದ್ಯ ಇಡೀ ಶೋನಲ್ಲಿ ತನ್ನ ಸಪೋರ್ಟ್ ಆಗಿದ್ದ ಗಗನಾಗೆ ಪ್ರತಾಪ್ ತಾವು ಗೆದ್ದ ಅರ್ಧ ಹಣ ನೀಡಿದ್ದಾರೆ. ಈ ಬಗ್ಗೆ ಮಾತನಾಡಿ, 2ನೇ ರನ್ನರ್ ಅಪ್ ಆಗಿರುವುದಕ್ಕೆ ನನಗಂತೂ ಬಹಳ ಖುಷಿಯಾಗುತ್ತಿದೆ. ಇಡೀ ಝೀ ಕನ್ನಡ ವಾಹಿನಿಯ ತಂಡಕ್ಕೆ ಥ್ಯಾಂಕ್ಸ್, ಒಟ್ಟಿನಲ್ಲಿ ಜನಗಳ ಮನಸ್ಸು ಗೆದ್ದಿದ್ದೇನೆ ಅದಕ್ಕೆ ತುಂಬಾ ಖುಷಿಯಾಗುತ್ತಿದೆ. ಇದರಲ್ಲಿ ಅರ್ಧ ಅಮೌಂಟ್ ಸಮವಾಗಿ ನಾನು ಅದನ್ನು ಗಗನಾಗೆ ಅವರಿಗೆ ಕೊಡ್ತೀನಿ. ನನ್ನಷ್ಟೇ ಗಗನಾ ಅವರದ್ದು ಎಫರ್ಟ್ ಇದೆ ಎಂಬ ಡ್ರೋನ್ ಪ್ರತಾಪ್ ಅವರ ಈ ಮಾತು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.