ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 19: ಬಿಗ್ ಬಾಸ್ ಆರಂಭಕ್ಕೆ ಕೌಂಟ್ಡೌನ್ ಶುರು: ಮೊದಲ ಟೀಸರ್ ಔಟ್

ಸಲ್ಮಾನ್ ಖಾನ್ ಅವರ ಹಿಂದಿ ಬಿಗ್ ಬಾಸ್ ಶೋನ ಪ್ರೋಮೋ ಬಿಡುಗಡೆ ಆಗಿದೆ. ಈ ಸೀಸನ್‌ಗಾಗಿ ತಯಾರಕರು ಮತ್ತೊಮ್ಮೆ ಎಲ್ಲವನ್ನೂ ಹೊಸದಾಗಿ ಮಾಡಿದ್ದಾರೆ, ಅಂದರೆ ಈ ಬಾರಿಯ ಹಿಂದಿ ಬಿಗ್ ಬಾಸ್ನ ಲೋಗೋದ ಬಣ್ಣವನ್ನು ಬದಲಾಯಿಸಿದ್ದಾರೆ. ಇದರ ಜೊತೆಗೆ ಅನೇಕ ವಿಶೇಷತೆಗಳು ಇರಲಿವೆಯಂತೆ.

Bigg Boss 19 Logo

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಸೆಪ್ಟೆಂಬರ್ ಅಂತ್ಯದಲ್ಲಿ ಶುರುವಾಗಲಿದ್ದು, ಈಗಾಗಲೇ ಕಿಚ್ಚ ಸುದೀಪ್ ಅವರ ಪ್ರಮೋ ಶೂಟ್ ಕೂಡ ನಡೆಸಲಾಗಿದೆ. ಕೆಲವೇ ದಿನಗಳಲ್ಲಿ ಈ ಪ್ರೊಮೋ ಹೊರಬೀಳಲಿದೆ. ಇದಕ್ಕೂ ಮುನ್ನ ಸಲ್ಮಾನ್ ಖಾನ್ ಅವರ ಹಿಂದಿ ಬಿಗ್ ಬಾಸ್ ಶೋನ ಪ್ರೋಮೋ ಬಿಡುಗಡೆ ಆಗಿದೆ. ಈ ಸೀಸನ್‌ಗಾಗಿ ತಯಾರಕರು ಮತ್ತೊಮ್ಮೆ ಎಲ್ಲವನ್ನೂ ಹೊಸದಾಗಿ ಮಾಡಿದ್ದಾರೆ, ಅಂದರೆ ಈ ಬಾರಿಯ ಹಿಂದಿ ಬಿಗ್​ ಬಾಸ್​ನ ಲೋಗೋದ ಬಣ್ಣವನ್ನು ಬದಲಾಯಿಸಿದ್ದಾರೆ. ಇದರ ಜೊತೆಗೆ ಅನೇಕ ವಿಶೇಷತೆಗಳು ಇರಲಿವೆಯಂತೆ.

ಬಿಗ್ ಬಾಸ್ 19 ಅನ್ನು ತಯಾರಕರು ಇದುವರೆಗಿನ ಅತಿ ಉದ್ದದ ಸೀಸನ್ ಮಾಡಲಿದ್ದಾರೆ ಎಂದು ಈಗಾಗಲೇ ವರದಿಯಾಗಿದೆ. ಈ ಬಾರಿ ಈ ಕಾರ್ಯಕ್ರಮ ಐದು ತಿಂಗಳುಗಳ ಕಾಲ ನಡೆಯಲಿದೆ. ಆಗಸ್ಟ್ ಕೊನೆಯ ವಾರಾಂತ್ಯದಲ್ಲಿ ಅಂದರೆ ಆಗಸ್ಟ್ 29 ಮತ್ತು ಆಗಸ್ಟ್ 30 ಶೋ ರಂದು ಪ್ರಾರಂಭವಾಗಲಿದೆ ಎಂದು ಮೂಲಗಳು ಹೇಳಿವೆ.

ಸದ್ಯ ಮಹಾ ಮನರಂಜನೆಯ ಕಲರ್‌ಫುಲ್ ಪ್ರಯಾಣಕ್ಕೆ ಕೈಗನ್ನಡಿ ಹಿಡಿದಂತೆ ಇರುವ ಹೊಸ ಲೋಗೋವನ್ನು ಜೀಯೊ ಹಾಟ್‌ಸ್ಟಾರ್‌ ಲೋಕಾರ್ಪಣೆ ಮಾಡಿದ್ದು ಬಿಗ್ ಬಾಸ್ ಹೊಸ ಸೀಸನ್‌ಗೆ ದಿನಗಣನೆ ಆರಂಭವಾಗಿದೆ ಎಂಬ ಸಂದೇಶವನ್ನು ರವಾನೆ ಮಾಡಿದೆ. ಈ ಬಾರಿ ಬಿಗ್ ಬಾಸ್‌ನ ಥೀಮ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಇರಲಿದ್ದು ಟೆಕ್ನಾಲಜಿಯೇ ಈ ಬಾರಿಯ ಬೆನ್ನೆಲುಬು ಎನ್ನುವ ಮಾತು ಕೂಡ ಸದ್ಯ ಇದೇ ವೇಳೆ ಕೇಳಿ ಬರುತ್ತಿದೆ.

ತಯಾರಕರು ಈ ಸೀಸನ್ ಅನ್ನು ಡಿಜಿಟಲಲ್​ಗೆ ಹೆಚ್ಚು ಒತ್ತು ನೀಡಿದ್ದಾರೆ. ಇದರರ್ಥ ಕಾರ್ಯಕ್ರಮವು ಟಿವಿ ಮತ್ತು ಒಟಿಟಿಯಲ್ಲಿ ಏಕಕಾಲದಲ್ಲಿ ಪ್ರಸಾರವಾಗಲಿದೆ. ಆದಾಗ್ಯೂ, ಹೊಸ ಕಂತುಗಳು ಮೊದಲು ಒಟಿಟಿ ಪ್ಲಾಟ್‌ಫಾರ್ಮ್ ಜಿಯೋಹಾಟ್‌ಸ್ಟಾರ್‌ನಲ್ಲಿ ಬರುತ್ತವೆ, ಒಂದೂವರೆ ಗಂಟೆಗಳ ನಂತರ ಅದೇ ಕಂತು ಕಲರ್ಸ್ ಟಿವಿಯಲ್ಲಿ ಕಾಣಿಸಿಕೊಳ್ಳುತ್ತದೆ.

ಮತ್ತೊಂದು ವಿಶೇಷತೆ ಎಂದರೆ ಬಿಗ್ ಬಾಸ್ 19 ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳಾಗಿ ಈ ಬಾರಿ ಯಾವುದೇ ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಅಥವಾ ಯೂಟ್ಯೂಬರ್ ಕಾಣಿಸುವುದಿಲ್ಲ ಎಂದು ಹೇಳಲಾಗುತ್ತಿದೆ. ಅಂದರೆ, ಬರುವ ಎಲ್ಲಾ ಸ್ಪರ್ಧಿಗಳು ದೂರದರ್ಶನ ಮತ್ತು ಬಾಲಿವುಡ್‌ನಿಂದ ಬಂದವರಾಗಿರುತ್ತಾರೆ.

Lahari Mahesh: ಡಾರ್ಲಿಂಗ್ ಕೃಷ್ಣ ಹೊಸ ಸಿನಿಮಾದಲ್ಲಿ ಸರಿಗಮಪ ಲಹರಿ ಹಾಡು: ಎಲ್ಲವೂ ಅರ್ಜುನ್ ಜನ್ಯ ಕೃಪೆ