ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಮೊದಲ ವಾರ ಎಲಿಮಿನೇಟ್ ಆದ ಆರ್​ಜೆ ಅಮಿತ್​ಗೆ ಸಿಕ್ಕಿದ್ದು ಎಷ್ಟು ಹಣ?

ಬಿಗ್ ಬಾಸ್ ಕನ್ನಡ ಸೀಸನ್ 12ರ ಮೊದಲ ವಾರವೇ ಡಬಲ್ ಎಲಿಮಿನೇಷನ್ ನಡೆಯಿತು. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಖಾಸಗಿ ಚಾನೆಲ್ ಒಂದಕ್ಕೆ ತಮ್ಮ ಸಂಭಾವನೆ ಬಗ್ಗೆ ಮಾತನಾಡಿದ ಆರ್ಜೆ ಅಮಿತ್ ಹಾಗೂ ಕರಿಬಸಪ್ಪ ಮಾತನಾಡಿದ್ದಾರೆ.

Karibasappa

ಬಿಗ್ ಬಾಸ್ ಕನ್ನಡ ಸೀಸನ್ 12ರ (Bigg boss Kannada 12) ಮೊದಲ ವಾರವೇ ಡಬಲ್ ಎಲಿಮಿನೇಷನ್ ನಡೆಯಿತು. ಜಂಟಿ ಆಗಿ ಮನೆಯೊಳಗೆ ಕಾಲಿಟ್ಟ ಆರ್​ಜೆ ಅಮಿತ್ ಹಾಗೂ ಬಾಡಿಬಿಲ್ಡರ್ ಕರಿಬಸಪ್ಪ ಅವರು ಅತಿ ಕಡಿಮೆ ವೋಟ್ ಪಡೆದು ಹೊರಬಂದರು. ಆರ್‌ಜೆ ಅಮಿತ್​ಗೆ ದೊಡ್ಡ ಅಭಿಮಾನಿ ಬಳಗ ಇರಲಿಲ್ಲ. ಅಲ್ಲದೆ ಇವರು ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ಫ್ಯಾನ್ಸ್ ಕೆಂಗಣ್ಣಿಗೆ ಕೂಡ ಗುರಿಯಾಗಿದ್ದರು. ಈ ಹಿಂದೆ ಅವರು "ಬಿಗ್‌ಬಾಸ್‌ ಒಂದು ಕ್ರಿಂಜ್‌ ಶೋ" ಎನ್ನುವ ಮೂಲಕ ಪ್ರೇಕ್ಷಕರ ಕೋಪಕ್ಕೆ ಗುರಿಯಾಗಿದ್ದರು.

ಅತ್ತ ಕರಿಬಸಪ್ಪ 15ನೇ ಸ್ಪರ್ಧಿಯಾಗಿ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದರು. ಆದರೆ, ಇವರು ಮೊದಲ ವಾರ ಅಷ್ಟೇನು ಕಾಣಿಸಿಕೊಂಡಿಲ್ಲ. ಕರಿಬಸಪ್ಪ ಅವರು ಬಿಗ್‌ ಬಾಸ್‌ ಮನೆಯಲ್ಲಿ ಒಂದಿಷ್ಟು ಫಿಲಾಸಫಿ ಹೇಳಿದ್ದರಷ್ಟೆ. ಆದರೆ, ಅದೆಲ್ಲ ತಮಾಷೆಯಂತಿತ್ತು.. ಕೇಳುಗರಿಗೆ ಹಾಗೂ ನೋಡುಗರಿಗೆ ಅದು ಇರಿಟೇಟ್ ಆಗುವಂತಿತ್ತಂತೆ. ಇದೇ ಅವರಿಗೆ ಮುಳುವಾಗಿರಬಹುದು. ಬಿಗ್ ಬಾಸ್ ಮನೆಯಲ್ಲಿ ಒಂದೇ ವಾರ ಇದ್ದ ಇವರಿಬ್ಬರಿಗೆ ಎಷ್ಟು ಸಂಭಾವನೆ ಸಿಕ್ಕಿರಬಹುದು ಎಂಬ ಕುತೂಹಲದ ಪ್ರಶ್ನೆ ವೀಕ್ಷಕರ ಮನದಲ್ಲಿ ಇದೆ.

ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಖಾಸಗಿ ಚಾನೆಲ್ ಒಂದಕ್ಕೆ ತಮ್ಮ ಸಂಭಾವನೆ ಬಗ್ಗೆ ಮಾತನಾಡಿದ ಆರ್​ಜೆ ಅಮಿತ್, ಕೇವಲ ಒಂದು ವಾರ ಇದ್ದಿದ್ದರಿಂದ ದೊಡ್ಡ ಮೊತ್ತದ ಸಂಭಾವನೆ ಸಿಕ್ಕಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಸಂಭಾವನೆ ಸಾಧಾರಣ ಆಗಿದೆ. ಓಕೆ, ಅಷ್ಟೇನೂ ಜಾಸ್ತಿ ಇಲ್ಲ ಎಂದು ಆರ್​ಜೆ ಅಮಿತ್ ಅವರು ಹೇಳಿದ್ದಾರೆ. ಒಂದು ವೇಳೆ ಮತ್ತೆ ವೈಲ್ಡ್ ಕಾರ್ಡ್ ಮೂಲಕ ಅವಕಾಶ ಸಿಕ್ಕರೆ ಬಿಗ್ ಬಾಸ್ ಮನೆ ಪ್ರವೇಶಿಸಲು ಸಿದ್ಧ ಎಂದು ಹೇಳಿದ್ದಾರೆ.

BBK 12: ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ-ಅಶ್ವಿನಿ ನಡುವೆ ವಾರ್: ಮೂಕವಿಸ್ಮಿತರಾದ ಮನೆಮಂದಿ

ಇನ್ನು ಸಂಭಾವನೆ ಬಗ್ಗೆ ಕರಿಬಸಪ್ಪ ಕೂಡ ಮಾತನಾಡಿದ್ದು, ಆ ರೀತಿಯ ಸಂಭಾವನೆ ಏನೂ ಇಲ್ಲ. ನನಗೆ ಅವಕಾಶ ಕೊಟ್ಟಿದ್ದೇ ದೊಡ್ಡದು. ಅದೇ ನನ್ನ ಪುಣ್ಯ ಎಂದು ಹೇಳಿದ್ದಾರೆ. ವೈಲ್ಡ್ ಕಾರ್ಡ್ ಸಾಧ್ಯತೆ ಬಗ್ಗೆ ಅವರು ಉತ್ತರಿಸಿದ್ದಾರೆ. ಮತ್ತೆ ಕರೆದರೆ ಖಂಡಿತವಾಗಿ ಹೋಗುತ್ತೇನೆ. ನಾಳೆ ಏನಾಗುತ್ತದೆ ಎಂಬುದು ಗೊತ್ತಿಲ್ಲ. ಚಾನ್ಸ್ ಸಿಕ್ಕರೆ, ಹಳೇ ರೀತಿ ಅಲ್ಲ ಬೇರೆ ರೀತಿ ಭಾಗವಹಿಸುತ್ತೇನೆ ಎಂದಿದ್ದಾರೆ ಕರಿಬಸಪ್ಪ.