ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 11: ಉತ್ತಮ ಪಡೆದ ವಾರವೇ ಬಿಗ್ ಬಾಸ್​ನಿಂದ ಎಲಿಮಿನೇಟ್ ಆದ ಚೈತ್ರಾ ಕುಂದಾಪುರ

ಶೋ ಆರಂಭವಾದ ಮೊದಲ ವಾರದಿಂದ ಚೈತ್ರಾ ಪ್ರತಿ ವಾರ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿ ಆಗುತ್ತಲೇ ಇದ್ದರು. ಇದಕ್ಕಾಗಿ ಪ್ರತಿ ವಾರ ನಾಮಿನೇಟ್ ಕೂಡ ಆಗಿದ್ದರು. ಕಳೆದ ಎರಡು-ಮೂರು ವಾರಗಳಿಂದ ಸತತವಾಗಿ ಡೇಂಜರ್ಝೋನ್ನಲ್ಲಿ ಹೆಚ್ಚು ಕಾಣಿಸಿಕೊಂಡರು.

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಅಂತಿಮ ಹಂತಕ್ಕೆ ಕಾಲಿಟ್ಟಿದೆ. ಇನ್ನೇನು ಎರಡು ವಾರಗಳಲ್ಲಿ ಶೋ ಮುಕ್ತಾಯಗೊಳ್ಳಲಿದೆ. ಉಳಿದಿರುವ ಎರಡು ವಾರ ಮನೆಯೊಳಗಿನ ಸ್ಪರ್ಧಿಗಳಿಗೆ ಬಹಳ ಮಹತ್ವದ್ದಾಗಿದೆ. ಈಗಾಗಲೇ ಫಿನಾಲೆ ಮೊದಲ ಸ್ಪರ್ಧಿಯಾಗಿ ಹನುಮಂತ ಪ್ರವೇಶ ಪಡೆದಿದ್ದಾರೆ. ಆ ಮೂಲಕ ಮನೆಯ ಅಲ್ಟಿಮೇಟ್ ಕ್ಯಾಪ್ಟನ್ ಆಗಿದ್ದಾರೆ. ಇದರ ಮಧ್ಯೆ ಹದಿನೈದನೇ ವಾರಕ್ಕೆ ಚೈತ್ರಾ ಕುಂದಾಪುರ ಬಿಗ್ ಬಾಸ್ ಪ್ರಯಾಣ ಕೊನೆಗೊಳಿಸಿದ್ದಾರೆ.
ಈ ವಾರ ಮನೆಯಿಂದ ಹೊರಹೋಗಲು ಐದು ಮಂದಿ ನಾಮಿನೇಟ್ ಆಗಿದ್ದರು. ತ್ರಿವಿಕ್ರಮ್, ಭವ್ಯಾ ಗೌಡ, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ ಹಾಗೂ ಧನರಾಜ್ ಆಚಾರ್ ನಾಮಿನೇಟ್ ಆಗಿದ್ದರು. ಇವರಲ್ಲಿ ಭವ್ಯಾ ಶನಿವಾರದ ಎಪಿಸೋಡ್​ನಲ್ಲಿ ಸೇವ್ ಆಗಿದ್ದರು. ಭಾನುವಾರ ತ್ರಿವಿಕ್ರಮ್, ಧನರಾಜ್ ಹಾಗೂ ಮೋಕ್ಷಿತಾ ಸೇವ್ ಆಗಿದ್ದಾರೆ. ಕೊನೆಯದಾಗಿ ಚೈತ್ರಾ ಕುಂದಾಪುರ ಮನೆಯಿಂದ ಆಚೆ ಬಂದಿದ್ದಾರೆ.
ಶೋ ಆರಂಭವಾದ ಮೊದಲ ವಾರದಿಂದ ಚೈತ್ರಾ ಪ್ರತಿ ವಾರ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿ ಆಗುತ್ತಲೇ ಇದ್ದರು. ಇದಕ್ಕಾಗಿ ಪ್ರತಿ ವಾರ ನಾಮಿನೇಟ್ ಕೂಡ ಆಗಿದ್ದರು. ಕಳೆದ ಎರಡು-ಮೂರು ವಾರಗಳಿಂದ ಸತತವಾಗಿ ಡೇಂಜರ್​ಝೋನ್​ನಲ್ಲಿ ಹೆಚ್ಚು ಕಾಣಿಸಿಕೊಂಡರು. ಆದರೆ, ಮನೆಯವರು ಬಂದ ಬಳಿಕ ಗೇರ್ ಹಾಕಿದ್ದರು. ಇದಕ್ಕಾಗಿ ಉತ್ತಮ ಕೂಡ ಪಡೆದುಕೊಂಡರು. ಆದರೆ, ಅಂತಿಮವಾಗಿ ಇದೀಗ ಎಲಿಮಿನೇಟ್ ಆಗಿ ಆಚೆ ಬಂದಿದ್ದಾರೆ.
ಚೈತ್ರಾ ಕುಂದಾಪುರ ಅವರಿಗೆ ಟಾಸ್ಕ್ ಆಡಲು ಹೆಚ್ಚಿನ ಅವಕಾಶ ಸಿಗಲಿಲ್ಲ. ಹೆಚ್ಚಿನ ಟಾಸ್ಕ್​ನಲ್ಲಿ ಇವರು ಉಸ್ತುವಾರಿಯಾಗಿಯೇ ಕಾಣಿಸಿಕೊಂಡಿದ್ದರು. ಸಿಕ್ಕ ಕೆಲ ಅವಕಾಶವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಂಡಿಲ್ಲ. ಎರಡು-ಮೂರು ಬಾರಿ ಕ್ಯಾಪ್ಟನ್ಸಿ ಟಾಸ್ಕ್ ಆಡಿದರೂ ಮನೆಯ ನಾಯಕಿ ಆಗಲು ಸಾಧ್ಯವಾಗಲಿಲ್ಲ. ಇಷ್ಟು ದಿನ ಮಾತಿನಿಂದಲೇ ಸ್ಪರ್ಧಿಗಳಿಗೆ ಚಾಟಿ ಬೀಸುತ್ತಿದ್ದ ಚೈತ್ರಾ ಅವರ ಬಿಗ್ ಬಾಸ್ ಪ್ರಯಾಣ ಇದೀಗ ಕೊನೆಯಾಗಿದೆ.
BBK 11: ಕೊನೆ ಕ್ಷಣದಲ್ಲಿ ಎಡವುತ್ತಿರುವ ಉಗ್ರಂ ಮಂಜುಗೆ ಮತ್ತೊಂದು ಬಿಗ್ ಶಾಕ್