ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಎರಡನೇ ವಾರಕ್ಕೆ ಕಾಲಿಟ್ಟಿದೆ. ಆರ್ಜೆ ಅಮಿತ್ ಹಾಗೂ ಕರಿಬಸಪ್ಪ ಎಲಿಮಿನೇಟ್ ಆದ ಬಳಿಕ ಸದ್ಯ ಮನೆಯಲ್ಲಿ 17 ಮಂದಿ ಇದ್ದಾರೆ. ಮೊದಲ ವಾರ ಮನೆಯ ಸದಸ್ಯರು ಅನೇಕ ತಪ್ಪುಗಳನ್ನು ಮಾಡಿದ್ದರು. ವೀಕೆಂಡ್ನಲ್ಲಿ ಸುದೀಪ್ ಬಂದು ಸ್ಪರ್ಧಿಗಳಿಗೆ ತಮ್ಮ ತಪ್ಪನ್ನು ಮನವರಿಕೆ ಮಾಡಿದ್ದಾರೆ. ಇದೀಗ ಎರಡನೇ ವಾರ ಮನೆ ಹೇಗಿರುತ್ತದೆ ಎಂಬುದು ನೋಡಲು ವೀಕ್ಷಕರು ಕಾದುಕುಳಿತಿದ್ದಾರೆ. ಹೀಗಿರುವಾಗ ಕಲರ್ಸ್ ಒಂದು ಪ್ರೋಮೋ ಬಿಡುಗಡೆ ಮಾಡಿದೆ.
ದೊಡ್ಮನೆಯಲ್ಲಿ ಮೂರನೇ ವಾರಕ್ಕೆ ಮೊದಲ ಫಿನಾಲೆ ನಡೆಯಲಿದೆ ಎಂದು ಈಗಾಗಲೇ ಬಿಗ್ ಬಾಸ್ ಹೇಳಿದ್ದಾರೆ. ಇದಕ್ಕೆ ಮೊದಲ ಫಿನಾಲೆ ಕಂಟೆಂಡರ್ ಆಗಿ ಮೊದಲ ವಾರದಲ್ಲಿ ಆಯ್ಕೆ ಆಗಿರುವುದು ಏಕೈಕ ಕಂಟೆಸ್ಟೆಂಟ್ ಕಾಕ್ರೋಚ್ ಸುಧಿ. ಸದ್ಯ ಇವರಿಗೆ ಮಹಾ ಅಧಿಕಾರವೊಂದು ಬಿಗ್ ಬಾಸ್ ನೀಡಿದ್ದಾರೆ. ದೊಡ್ಮನೆಯಲ್ಲಿ ಕಾಕ್ರೋಚ್ ಸುಧಿ ಈಗ ಅಸುರಾಧಿಪತಿ ಆಗಿದ್ದಾರೆ.
ಮನೆಯ ಮೊಟ್ಟ ಮೊದಲ ಫೈನಲಿಸ್ಟ್ ಆಗಿರುವ ಸುಧಿ ಇನ್ನುಮುಂದೆ ಅಸುರ ಸರ್ವೋಚ್ಚ ಅಧಿಪತಿ ಎಂದು ಬಿಗ್ ಬಾಸ್ ಹೇಳಿದ್ದಾರೆ. ಇವರು ಹೇಳಿದಂತೆ ಇಡೀ ಮನೆ ಕೇಳಬೇಕು.. ಎದುರು ಮಾತನಾಡಿದರೆ ತಮಗೆ ಇಷ್ಟ ಬಂದ ಶಿಕ್ಷೆ ಕೊಡಬಹುದು. ಕಾಕ್ರೋಚ್ ಮನೆಯಲ್ಲಿ ತಮ್ಮದೇ ಆದ ಕೆಲವು ರೂಲ್ಸ್ ಕೂಡ ಮಾಡಿದ್ದಾರೆ. ನಾನು ಬರುವಾಗ ಎಲ್ಲರೂ ಎದ್ದು ನಿಂತುಕೊಳ್ಳಬೇಕು ಎಂದು ಆದೇಶಿಸಿದ್ದಾರೆ. ಆಗ ಗಿಲ್ಲಿ ನಟ ನಾವೆಲ್ಲಾದ್ರು ಟಾಯ್ಲೆಟ್ನಲ್ಲಿದ್ರೆ ಏನು ಮಾಡೋದು ಎಂದು ಮರುಪ್ರಶ್ನೆ ಹಾಕಿದ್ದಾರೆ. ಅದಕ್ಕೆ ಗಿಲ್ಲಿಯನ್ನು ತಕ್ಷಣವೇ ಕರೆದುಕೊಂಡು ಹೋಗಿ ಸ್ವಿಮ್ಮಿಂಗ್ ಪೂಲ್ಗೆ ಹಾಕಿ ಎಂದಿದ್ದಾರೆ.
BBK 12: ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರವೇ ನಡೆಯಿತು ಡಬಲ್ ಎಲಿಮಿನೇಷನ್
ಅತ್ತ ಜಾನ್ವಿ ನಾನು ಈ ಮನೆಯ ಮಹಾರಾಣಿ ಎಂದಿದ್ದಾರೆ. ಇವರನ್ನು ಕೂಡ ಸ್ವಿಮ್ಮಿಂಗ್ ಪೂಲ್ಗೆ ಬಿಸಾಕಿ ಎಂದು ಸುಧಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ನಾವೆಲ್ಲರೂ ಸೇರಿ ರಾಕ್ಷಸರನ್ನು ಸಂಹಾರ ಮಾಡೋಣ ಎಂದು ಹೇಳಿದ ಜಾನ್ವಿ ಮತ್ತು ಅಶ್ವಿನಿ ಗೌಡ ಅವರಿಗೆ ಒಂದು ಹೊತ್ತು ಊಟ ಕೊಡಬೇಡಿ ಎಂದು ಕಾಕ್ರೋಚ್ ಖಡಕ್ ಆಗಿ ಹೇಳಿದ್ದಾರೆ. ಸದ್ಯ ಈ ವಾರ ಕಾಕ್ರೋಚ್ ಅಸುರಾಧಿಪತಿಯಾಗಿ ಆರ್ಭಟಿಸಲಿದ್ದಾರೆ. ಇದು ಯಾವ ಹಂತಕ್ಕೊರಗೆ ತಲುಪುತ್ತೆ ಎಂಬುದು ನೋಡಬೇಕಿದೆ.