ಕಲರ್ಸ್ ಕನ್ನಡದಲ್ಲಿ (Colors Kannada) ಒಂದರ ಹಿಂದೆ ಒಂದರಂತೆ ಹೊಸ ಹೊಸ ಕಾರ್ಯಕ್ರಮ ಬರುತ್ತಿವೆ. ಇತ್ತೀಚೆಗಷ್ಟೆ ವಧು, ಲಕ್ಷ್ಮೀ ಬಾರಮ್ಮ, ಮಜಾ ಟಾಕೀಸ್, ಬಾಯ್ಸ್ vs ಗರ್ಲ್ಸ್ ಶೋಗಳು ಮುಕ್ತಾಯಕಂಡಿತು. ಇದರ ಬೆನ್ನಲ್ಲೆ ಕಲರ್ಸ್ ಹೊಸ ಹೊಸ ಧಾರಾವಾಹಿ, ಶೋನೊಂದಿಗೆ ಬರಲು ರೆಡಿಯಾಗೊದೆ. ಮೊನ್ನೆಯಷ್ಟೆ ನಂದಗೋಕುಲ ಎಂಬ ಹೊಸ ಧಾರಾವಾಹಿ ಪ್ರಾರಂಭವಾಯಿತು. ಸೆಪ್ಟೆಂಬರ್ನಿಂದ ಬಿಗ್ ಬಾಸ್ ಕನ್ನಡ ಸೀಸನ್ 12 ಕೂಡ ಪ್ರಾರಂಭವಾಗಲಿದೆ. ಇದೀಗ ಆಗಸ್ಟ್ 4 ರಿಂದ ಪ್ರೇಮ ಕಾವ್ಯ ಎಂಬ ಹೊಸ ಧಾರಾವಾಹಿ ಶುರುವಾಗಲಿದೆ.
ಇಬ್ಬರು ಸಹೋದರರು ಹಾಗೂ ಇಬ್ಬರು ಸಹೋದರಿಯರ ನಡುವಿನ ಪ್ರೇಮ್ ಕಹಾನಿಯೇ ಪ್ರೇಮ್ ಕಾವ್ಯ ಧಾರಾವಾಹಿ ಕಥೆ. ಈ ಸೀರಿಯಲ್‌ನಲ್ಲಿ ಪ್ರೇಮ ಪಾತ್ರದಲ್ಲಿ ಪ್ರಿಯಾ ಜೆ ಆಚಾರ್, ಕಾವ್ಯ ಪಾತ್ರದಲ್ಲಿ ವೈಷ್ಣವಿ ನಟಿಸುತ್ತಿದ್ದಾರೆ. ಈ ಹಿಂದೆ ಪ್ರಿಯಾ ಜೆ ಆಚಾರ್ ಗಟ್ಟಿಮೇಳ, ಕಾವೇರಿ ಕನ್ನಡ ಮೀಡಿಯಂ ಮುಂತಾದ ಸೀರಿಯಲ್‌ಗಳಲ್ಲಿ ಅಭಿನಯಿಸಿದ್ದರು. ಇನ್ನೂ ವೈಷ್ಣವಿ ಮಿಥುನ ರಾಶಿ ಸೀರಿಯಲ್ ನಾಯಕಿಯಾಗಿದ್ದರು. ಹಾಗೇ ರಾಘವೇಂದ್ರ ಮತ್ತು ವಿಕಾಸ್ ನಾಯಕರಾಗಿ ನಟಿಸುತ್ತಿದ್ದಾರೆ. ಈ ಹಿಂದೆ ನಮ್ಮನೆ ಯುವರಾಣಿ ಸೀರಿಯಲ್‌ನಲ್ಲಿ ರಾಘವೇಂದ್ರ ಹೀರೋ ಆಗಿದ್ದರು. ಕೆಂಡಸಂಪಿಗೆ ಸೀರಿಯಲ್‌ನಲ್ಲಿ ವಿಕಾಸ್ ಅಭಿನಯಿಸಿದ್ದರು.
ಆಗಸ್ಟ್ 4 ಸೋಮವಾರದಿಂದ ಸಂಜೆ 6.30ಕ್ಕೆ ಪ್ರೇಮ ಕಾವ್ಯ ಪ್ರಸಾರ ಆರಂಭವಾಗಲಿದೆ. ಈ ಧಾರಾವಾಹಿಯನ್ನ ರವೀನ್ ಕುಮಾರ್ ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಕಾವೇರಿ ಕನ್ನಡ ಮೀಡಿಯಂ ಬಳಿಕ ಪ್ರಿಯಾ ಆಚಾರ್ ಮತ್ತೆ ಲಂಗಾ ದಾವಣಿಯಲ್ಲಿ ಮಿಂಚಿದ್ದಾರೆ. ಮೃಧು ಸ್ವಭಾವದ ಯುವಕನಾಗಿ ವಿಕಾಸ್ ಕಾಣಿಸಿಕೊಂಡಿದ್ದಾರೆ. ಆತನಿಗೆ ಚೈತ್ರಾ ಜೋಡಿಯಾಗಿದ್ದಾರೆ. ತಮಿಳಿನ ಸಿಂಧು ಭೈರವಿ ಧಾರಾವಾಹಿ ರೀಮೆಕ್ ಪ್ರೇಮ ಕಾವ್ಯ ಧಾರಾವಾಹಿ ಎನ್ನಲಾಗುತ್ತಿದೆ.
ಈ ಧಾರಾವಾಹಿಯ ಪಾತ್ರದ ಬಗ್ಗೆ ಮಾತನಾಡಿದ ಪ್ರಿಯ ಜೆ.ಆಚಾರ್, "ನಾನು ಈ ಧಾರಾವಾಹಿಯಲ್ಲಿ ಪ್ರೇಮ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. ತಂದೆ, ತಾಯಿ ಹಾಗೂ ತಂಗಿ ಇದೇ ನನ್ನ ಒಂದು ಪುಟ್ಟ ಪ್ರಪಂಚ. ನಾನು ಹೆಚ್ಚು ವಿದ್ಯಾವಂತೆಯಲ್ಲ. ಆದರೆ ತಂಗಿಗೆ ತಾನು ಸೈಂಟಿಸ್ಟ್ ಆಗಬೇಕೆಂಬ ಅಭಿಲಾಷೆ. ಅವಳ ಕನಸಿಗೆ ಸಹಕಾರ ನೀಡುತ್ತಿರುತ್ತೇನೆ. ಜೊತೆಗೆ, ಬಾಲ್ಯದ ಗೆಳೆಯ ರಾಮ್ನನ್ನು ಪ್ರೀತಿಸುತ್ತಿರುತ್ತೇನೆ" ಎಂದು ಹೇಳಿದರು.
Bhagya Lakshmi Serial: ಪೂಜಾಗೆ ವಿಪರೀತ ಜ್ವರ: ಆದರೂ ನಿಲ್ಲುತ್ತಿಲ್ಲ ಮೀನಾಕ್ಷಿ-ಕನ್ನಿಕಾ ಹಿಂಸೆ