ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕರಿಮಣಿ ಧಾರಾವಾಹಿಗೆ (Karimani Serial) ಶುಭಂ ಬೋರ್ಡ್ ಬೀದ್ದಿದೆ. ಯಾವುದೇ ದೊಡ್ಡ ಸೂಚನೆ ನೀಡದೆ ಧಾರಾವಾಹಿಯನ್ನು ಅಂತ್ಯ ಮಾಡಲಾಗಿದೆ. 2024 ಫೆಬ್ರವರಿಯಲ್ಲಿ ಕರಿಮಣಿ ಧಾರಾವಾಹಿ ಶುರುವಾಗಿತ್ತು. ಒಟ್ಟು 413 ಎಪಿಸೋಡ್‌ಗಳನ್ನು ಪ್ರಸಾರ ಮಾಡುವ ಮೂಲಕ ಕೊನೆಗೊಳಿಸಲಾಗಿದೆ. ಒಂದು ವರ್ಷಗಳಿಗೂ ಅಧಿಕ ಕಾಲ ವೀಕ್ಷಕರನ್ನು ರಂಜಿಸಿರುವ ಈ ಧಾರಾವಾಹಿ ಅಂತ್ಯವಾಗಿದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ಏಕಾಏಕಿ ಕರಿಮಣಿ ಧಾರಾವಾಹಿಯನ್ನ ಮುಗಿಸಿದ್ಯಾಕೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಕೊನೆಯ ದಿನದ ಚಿತ್ರೀಕರಣದ ಫೋಟೋಗಳು ಕೂಡ ಇತ್ತೀಚೆಗಷ್ಟೆ ವೈರಲ್ ಆಗಿತ್ತು. ಕರ್ಣನನ್ನ ಕೊಲೆ ಮಾಡೋದಕ್ಕೆ ಸಾಕು ತಾಯಿ ಅರುಂಧತಿ ಪ್ರಯತ್ನಿಸಿದ್ದಳು. ಆದರೆ, ಪವಾಡಸದೃಶ್ಯ ರೀತಿಯಲ್ಲಿ ಕರ್ಣ ಬದುಕಿಬಿಟ್ಟ. ಕರ್ಣ ಬದುಕಿದ ವಿಚಾರ ಗೊತ್ತಾದ್ಮೇಲೆ ಮನೆಯವರನ್ನೆಲ್ಲಾ ಅರುಂಧತಿ ಕಿಡ್ನ್ಯಾಪ್ ಮಾಡಿದಳು. ಆದರೆ, ಎಲ್ಲರನ್ನ ಕಟ್ಟಿಹಾಕಿದ ಸ್ಥಳಕ್ಕೆ ಕರ್ಣ ಬಂದು ಬಿಡಿಸಿದ. ಕರ್ಣನನ್ನ ಅರುಂಧತಿ ಗನ್‌ನಲ್ಲಿ ಶೂಟ್ ಮಾಡಬೇಕು ಅನ್ನುವಷ್ಟರಲ್ಲಿ ರಾಜೇಂದ್ರ ಪ್ರಸಾದ್ ಬಂದು ಅರುಂಧತಿಗೆ ದೊಣ್ಣೆಯಲ್ಲಿ ಹೊಡೆಯುತ್ತಾರೆ.
ರಾಜೇಂದ್ರ ಪ್ರಸಾದ್ ಹೊಡೆದ ಏಟಿಗೆ ಅರುಂಧತಿಯ ತಲೆಗೆ ಬಲವಾದ ಪೆಟ್ಟು ಬಿತ್ತು. ಪರಿಣಾಮ, ಅರುಂಧತಿಗೆ ಮೆಮರಿ ಲಾಸ್ ಆಗಿದ್ದು, ಬೇರೆ ದಾರಿಯಿಲ್ಲದೆ ದೇವಸ್ಥಾನದಲ್ಲಿ ಭಿಕ್ಷುಕಿಯಾಗಿಬಿಟ್ಟಳು. ಇಲ್ಲಿಗೆ ಅರುಂಧತಿ ಪಾರ್ಟ್ ಮುಗಿಯಿತು. ಇತ್ತ ಭರತ್ ಹಾಗೂ ಸಿಂಚನ ಮದುವೆ ಫಿಕ್ಸ್ ಆದರೆ, ಅತ್ತ ಕರ್ಣನಿಗೆ ಸಾಹಿತ್ಯ ಪ್ರಪೋಸ್ ಮಾಡಿದಳು. ಕೋಮಾದಲ್ಲಿದ್ದ ಸಾಹಿತ್ಯ ತಂದೆಗೆ ಪ್ರಜ್ಞೆ ವಾಪಸ್ ಬಂರುವ ಮೂಲಕ ಕರಿಮಣಿ ಧಾರಾವಾಹಿಗೆ ಕೊನೆ ಹಾಡಲಾಗಿದೆ.
Bharjari Bachelors Winner: ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್ 2 ವಿನ್ನರ್ ಸುನೀಲ್ಗೆ ಸಿಕ್ಕ ಹಣವೆಷ್ಟು ಗೊತ್ತೇ?
ಕಲರ್ಸ್ ಕನ್ನಡ ವಾಹಿನಿಯ ಧಾರಾವಾಹಿಗಳಲ್ಲಿ ಹೋಲಿಕೆ ಮಾಡಿದರೆ, ಕರಿಮಣಿ ಟಿಆರ್‌ಪಿ ಕಡಿಮೆ ಅಗಿತ್ತು. ಹೀಗಾಗಿಯೋ ಏನೋ ಈ ಸೀರಿಯಲ್ ಅಂತ್ಯ ಮಾಡಲಾಗಿದೆ. ಈ ಬಗ್ಗೆ ವಾಹಿನಿಯಾಗಲೀ, ಧಾರಾವಾಹಿ ತಂಡವಾಗಲೀ ಪ್ರತಿಕ್ರಿಯೆ ಮಾಡಿಲ್ಲ. ಈ ಧಾರಾವಾಹಿಯಲ್ಲಿ ಕರ್ಣ ಆಗಿ ನವ ಪ್ರತಿಭೆ ಅಶ್ವಿನ್ ಯಾದವ್, ಸಾಹಿತ್ಯ ಆಗಿ ನಟಿ ಸ್ಪಂದನಾ ಸೋಮಣ್ಣ ನಟಿಸುತ್ತಿದ್ದಾರೆ. ಇವರ ಜೊತೆಗೆ ಅಶ್ವಿನ್ ಎಚ್, ಪ್ರಥಮಾ ಪ್ರಸಾದ್, ಅನುಷಾ ಹೆಗಡೆ, ಶ್ರೀಕಾಂತ್ ಮುಂತಾದವರು ನಟಿಸಿದ್ದಾರೆ.