ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಶುರುವಾಗಿ ಒಂದು ವಾರ ಕೂಡ ಆಗಿಲ್ಲ, ಅದಾಗಲೇ ದೊಡ್ಮನೆ ಹೊತ್ತಿ ಉರಿಯುತ್ತಿದೆ. ನಿನ್ನೆಯ ವರೆಗೆ ಎದುರಾಳಿ ತಂಡದ ವಿರುದ್ಧ ನಡೆಯುತ್ತಿದ್ದ ಜಗಳ ಇದೀಗ ತಮ್ಮ-ತಮ್ಮ ತಂಡಗಳ ನಡುವೆಯೇ ಶುರುವಾಗಿದೆ. ಇದಕ್ಕೆಲ್ಲ ಕಾರಣವಾಗಿದ್ದು ಒಂದು ಟಾಸ್ಕ್. ಉಸ್ತುವಾರಿಗಳು ಮಾಡಿದ ಎಡವಟ್ಟಿನಿಂದ ಒಂಟಿ ಸದಸ್ಯರ ಮಧ್ಯೆ ಜಗಳ ಶುರುವಾಗಿದೆ. ಈ ಪೈಕಿ ಇಷ್ಟು ದಿನ ಯಾವುದೇ ಅನಗತ್ಯ ವಿಷಯಕ್ಕೆ ತಲೆಹಾಕದೆ ಸೈಲೆಂಟ್ ಆಗಿದ್ದ ಕಾಕ್ರೋಚ್ ಸುಧಿ ಇದೇ ಮೊದಲ ಬಾರಿ ತಾಳ್ಮೆ ಕಳೆದುಕೊಂಡಿದ್ದಾರೆ. ಅದುಕೂಡ ತನ್ನ ಬೆಸ್ಟ್ ಫ್ರೆಂಡ್ ಧನುಷ್ ವಿರುದ್ಧ.
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಜಂಟಿ ಹಾಗೂ ಒಂಟಿ ಎಂಬ ಎರಡು ತಂಡಗಳನ್ನು ರಚಿಸಿರುವುದು ಗೊತ್ತೇ ಇದೆ. ಎರಡೂ ತಂಡಗಳ ಮಧ್ಯೆ ಕಾಲ ಕಾಲಕ್ಕೆ ಟಾಸ್ಕ್ ನಡೆಯುತ್ತದೆ. ಈಗ ಮೂರನೇ ವಾರದಲ್ಲಿ ನಡೆಯುವ ಫಿನಾಲೆಗೆ ಫೈನಲಿಸ್ಟ್ ಆಯ್ಕೆ ಮಾಡಲು ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್ಗೆ ಅಶ್ವಿನಿ ಗೌಡ, ಗಿಲ್ಲಿ ನಟ ಹಾಗೂ ಕಾವ್ಯಾ ಶೈವ ಅವರು ಉಸ್ತುವಾರಿ ಆಗಿದ್ದರು. ಉಸ್ತುವಾರಿ ಮಾಡುವಾಗ ನಡೆದ ತಪ್ಪಿನಿಂದ ಇಡೀ ಮನೆ ಅಲ್ಲೋಲ ಕಲ್ಲೋಲ ಆಗಿದೆ.
ಟಾಸ್ಕ್ ನಡೆಯುವ ವೇಳೆ ಉಸ್ತುವಾರಿಗಳು ಸರಿಯಾಗಿ ನಿಯಮವನ್ನು ಅರ್ಥಮಾಡಿಕೊಳ್ಳದೆ ಎಡವಟ್ಟು ಮಾಡಿದ್ದಾರೆ. ಧನುಷ್ ವಿನ್ನರ್ ಎಂದು ಘೋಷಿಸಿಬಿಟ್ಟಿದ್ದಾರೆ. ಈ ಬಗ್ಗೆ ಬಿಗ್ ಬಾಸ್ ಕೂಡ ಪ್ರಶ್ನೆ ಮಾಡಿದರು. ಆ ಬಳಿಕ ಉಸ್ತುವಾರಿಗಳು ಗೊಂದಲಕ್ಕೆ ಸಿಲುಕಿದರು. ನಿಯಮ ಉಲ್ಲಂಘನೆ ಆಗಿರೋದು ಸ್ಪಷ್ಟವಾಗಿತ್ತು. ಮುಂದೇನು ಮಾಡಬೇಕು ಎಂಬುದು ತಿಳಿಯದೇ ಎಲ್ಲರೂ ಕಂಗಾಲಾದರು. ಆಗ ಧನುಷ್ ಹಾಗೂ ಸುಧಿ ಮಧ್ಯೆ ಕಿರಿಕ್ ಆಗಿದೆ.
ಸುಧಿ ಅವರು ತಮಗೆ ಆಟದಲ್ಲಿ ಮತ್ತೆ ಅವಕಾಶ ನೀಡಬೇಕು ಎಂದು ವಾದಿಸಿದ್ದಾರೆ. ಆದರೆ, ಉಸ್ತುವಾರಿಗಳು ಇದಕ್ಕೆ ಸಿದ್ಧರಿಲ್ಲ. ಅತ್ತ ಧನುಷ್ ಕೂಡ ಈ ಬಗ್ಗೆ ಬೇಸರ ಹೊರಹಾಕಿದರು. ಸುಧಿಗೆ ಮತ್ತೆ ಅವಕಾಶ ನೀಡಿದರೆ ನನಗೆ ಮೋಸ ಆಗುತ್ತದೆ ಎಂದು ವಾದ ಮುಂದಿಟ್ಟರು. ಇದರ ಮಧ್ಯೆ ಚಂದ್ರಪ್ರಭ ಕೂಡ ಈ ಜಗಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಧನುಷ್ ಬಿಟ್ಟು ಉಳಿದ ಮೂರು ಜನ ಈ ಟಾಸ್ಕ್ ಆಡೋಕ್ಕೆ ಆಗುತ್ತ ಕೇಳಿ ಎಂದು ಸುಧಿ ಉಸ್ತುವಾರಿ ಬಳಿ ಹೇಳಿದ್ದಾರೆ. ಆದರೆ, ಇದಕ್ಕೆ ಉಸ್ತುವಾರಿಗಳು ಒಪ್ಪಲಿಲ್ಲ.
ಇದರಿಂದ ಸುಧಿ ಕೋಪಗೊಂಡಿದ್ದಾರೆ. ಇದಕ್ಕೆಲ್ಲ ಮೈನ್ ಕಾರಣ ಧನು. ಸುಮ್ನೆ ಕಿರುಚಿಕೊಳ್ಳುತ್ತ ಇದ್ದೀರಿ ಓ ಅಂತ.. ಆಗಲ್ಲ ಅಂದ್ರೆ ಹೇಳಿ.. ನಮ್ಗೆ ಕೇಳಿಸ್ತಾ ಇಲ್ಲ ಬಿಗ್ ಬಾಸ್.. ನಮ್ಗೆ ಕೆಲ್ಸ ಗೊತ್ತಿಲ್ಲ.. ಸೈಡ್ನಲ್ಲಿ ನಿತ್ಕೊಂಡು ನೋಡ್ತಾ ಇರ್ತೀವಿ ಅಂತ ಹೇಳಿ ಎಂದು ಸುಧಿ ಸಿಟ್ಟಾಗಿದ್ದಾರೆ. ಎಸ್ಎಸ್ಎಲ್ಸಿ ಆದ ತಕ್ಷಣ ಯುನಿಫಾರ್ಮ್ ಬಿಚ್ಚಿಟ್ಟು ಕಲರ್ ಡ್ರೆಸ್ ಹಾಕ್ಕೊಂಡು ಬಂದುಬಿಡೋದು ಅಲ್ಲ ಎಂದು ಹೇಳಿದ್ದಾರೆ. ಅತ್ತ ಚಂದ್ರಪ್ರಭ ಕೂಡ ಧನುಷ್ ಮೇಲೆ ಕೋಪಗೊಂಡು, ಅವರಿಗೆ ಅವರೇ ಹೀರೋ ಅಂತ ಅಂದುಕೊಂಡಿದ್ದಾರೆ.. ನಾವೆಲ್ಲ ಹಾಗಿದ್ರೆ ಇಲ್ಲಿ ಏಕೆ ಬಂದಿದ್ದೇವೆ ಎಂದಿದ್ದಾರೆ. ಅಲ್ಲದೆ ಇಬ್ಬರೂ ಕೈ-ಕೈ ತೋರಿಸಿಕೊಂಡು ಮಾತನಾಡಿದ್ದಾರೆ.
ಅಂತಿಮವಾಗಿ ಬಿಗ್ ಬಾಸ್ ಕೋಪದಲ್ಲಿ ಈ ಟಾಸ್ಕ್ ಅನ್ನೇ ರದ್ದು ಮಾಡಿದ್ದಾರೆ. ಒಂದು ಟಾಸ್ಕ್ ಕ್ರಿಯೇಟ್ ಮಾಡಲು ಎಷ್ಟು ಶ್ರಮವಹಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಕಳೆದ ಸೀಸನ್ನಲ್ಲಿ ಕೂಡ ಸುದೀಪ್ ಅವರು ಟಾಸ್ಕ್ ರದ್ದಾದರೆ ಅದಕ್ಕೆ ಪಟ್ಟ ಶ್ರಮ ಎಲ್ಲ ವೇಸ್ಟ್.. ಆ ಟಾಸ್ಕ್ಗೆ ನೀವು ಅವಮಾನ ಮಾಡಿದಂತೆ ಎಂದು ಹೇಳಿದ್ದರು. ಇದೀಗ ಮೊದಲ ವಾರದಲ್ಲೇ ಒಂದು ಟಾಸ್ಕ್ ರದ್ದಾಗಿದೆ. ಈ ಕುರಿತು ಕಿಚ್ಚ ಸುದೀಪ್ ವೀಕೆಂಡ್ನಲ್ಲಿ ಗರಂ ಆಗುವುದು ಖಚಿತ.
BBK 12: ಬಿಗ್ ಬಾಸ್ನಲ್ಲಿ ಭರ್ಜರಿ ಕಂಟೆಂಟ್ ಕೊಡುತ್ತಿರುವ ಗಿಲ್ಲಿ ನಟ: ಅಶ್ವಿನಿ ಗೌಡ ಸುಸ್ತು