ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mahanati Season 2: ಮಹಾನಟಿ ಎರಡನೇ ಸೀಸನ್​ಗೆ ಆಯ್ಕೆ ಆದ ಸ್ಪರ್ಧಿಗಳು ಯಾರೆಲ್ಲ: ಇಲ್ಲಿದೆ ಲಿಸ್ಟ್

Mahanati Season 2: ಮಹಾನಟಿ ಶೋನ ಎರಡನೇ ಸೀಸನ್ ಫೈನಲ್ ರೌಂಡ್ನಲ್ಲಿ ಒಟ್ಟಾರೆಯಾಗಿ 16 ಸ್ಪರ್ಧಿಗಳು ಆಯ್ಕೆ ಆಗಿದ್ದಾರೆ. ಕಲೆಯನ್ನು ಹೊರಹಾಕಲಾಗದೆ, ಸರಿಯಾದ ವೇದಿಕೆ ಸಿಗದೇ ಒದ್ದಾಡುತ್ತಿರುವ ಅನೇಕ ಕಲಾವಿದರಿಗೆ ಈ ಶೋ ದಾರಿದೀಪವಾಗಲಿದೆ.

Mahanati Season 2

‘ಮಹಾನಟಿ’ (Mahanati Season 2) ಕನ್ನಡದ ಒಂದು ವಿಶಿಷ್ಟ ರಿಯಾಲಿಟಿ ಶೋ ಆಗಿದ್ದು, ಮಹತ್ವಾಕಾಂಕ್ಷಿ ನಟಿಯರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಕರ್ನಾಟಕದ ಮುಂದಿನ ದೊಡ್ಡ ತಾರೆಯಾಗಿ ಮಿಂಚುವ ಅವಕಾಶಕ್ಕಾಗಿ ಸ್ಪರ್ಧಿಸಲು ಒಂದು ವೇದಿಕೆಯಾಗಿದೆ. ಝೀ ಕನ್ನಡ ಇಂತಹ ಒಂದು ಅದ್ಭುತ ಶೋ ಅನ್ನು ಆಯೋಜಿಸುತ್ತಿದೆ. ಈ ಹಿಂದೆ ಮೊದಲ ಸೀಸನ್ ಅದ್ಧೂರಿಯಾಗಿ ನಡೆದಿತ್ತು. ಇದೀಗ ಮೊದಲ ಸೀಸನ್​ನ ಯಶಸ್ಸಿನ ನಂತರ ವಾಹಿನಿ ಎರಡನೇ ಸೀಸನ್ ಶುರುಮಾಡಿದೆ.

ಇತ್ತೀಚೆಗಷ್ಟೆ ರಾಜ್ಯಾದ್ಯಂತ ಆಡಿಷನ್ ಕೂಡ ನಡೆಲಾಗಿತ್ತು. ಈ ಆಡಿಷನ್ ಮೂಲಕ ಆಯ್ಕೆ ಆದವರ ಪೈಕಿ ಒಂದಷ್ಟು ಮಂದಿಯನ್ನು ಈ ಶೋಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಬಳಿಕ ಫೈನಲ್ ರೌಂಡ್​ನಲ್ಲಿ ಒಟ್ಟಾರೆಯಾಗಿ 16 ಸ್ಪರ್ಧಿಗಳು ಆಯ್ಕೆ ಆಗಿದ್ದಾರೆ. ಕಲೆಯನ್ನು ಹೊರಹಾಕಲಾಗದೆ, ಸರಿಯಾದ ವೇದಿಕೆ ಸಿಗದೇ ಒದ್ದಾಡುತ್ತಿರುವ ಅನೇಕ ಕಲಾವಿದರಿಗೆ ಈ ಶೋ ದಾರಿದೀಪವಾಗಲಿದೆ.

ನಟಿ ಆಗೋ ಕನಸು ಹೊತ್ತಿರುವ ವಿವಿಧ ಜಿಲ್ಲೆಗಳಿಂದ 24 ಮಂದಿ ಮೆಗಾ ಆಡಿಷನ್​ ಕೊಟ್ಟಿದ್ದರು. ಅವರಲ್ಲಿ ಒಟ್ಟು 16 ಸ್ಪರ್ಧಿಗಳು ಮಹಾನಟಿ ಸೀಸನ್ 2ಕ್ಕೆ ಆಯ್ಕೆ ಆಗಿದ್ದಾರೆ. ಇದರಲ್ಲಿ ಸಿಂಚನಾ. ಆರ್​ ಮೈಸೂರು, ವರ್ಷಾ ಡಿಗ್ರಜೆ ಚಿಕ್ಕೋಡಿ, ಪೂಜಾ ರಮೇಶ್​ ಬೆಂಗಳೂರು, ವಂಶಿ ರತ್ನ ಕುಮಾರ್​ ದಕ್ಷಿಣ ಕನ್ನಡ, ಖುಷಿ ಬೆಳಗಾವಿ, ಶ್ರೀಯ ಅಗಮ್ಯ ಮೈಸೂರು, ತನಿಷ್ಕ ಮೂರ್ತಿ ಮೈಸೂರು, ಬೆಂಗಳೂರಿನ ಭೂಮಿಕ ಟಿ, ಬೀದರ್​ನ ದಿವ್ಯಾಂಜಲಿ, ಚಿಕ್ಕಮಗಳೂರಿನ ಸೌಗಂಧಿಕ, ತೀರ್ಥಹಳ್ಳಿಯ ಮಾನ್ಯ ರಮೇಶ್​, ಬೆಂಗಳೂರಿನ ನಿವಿಕ್ಷ, ಮೈಸೂರಿನ ಪ್ರೇರಣ ವಿ ಪಾಟೀಲ್​, ದಾವಣಗೆರೆಯ ವರ್ಷ ಕೆ.ಪಿ, ಸುಳ್ಯದ ಸಾಯಿಶ್ರುತಿ, ತುಮಕೂರಿನ ದೀಪಿಕಾ ಆಯ್ಕೆ ಆಗಿರೋ ಪ್ರತಿಭೆಗಳು.

Karna Serial: ಕರ್ಣ ಧಾರಾವಾಹಿ ಪ್ರಸಾರವಾಗದ ಬಗ್ಗೆ ನಮ್ರತಾ ಗೌಡ ಹೇಳಿದ್ದೇನು?

ಮುಂದಿನ ವಾರದಿಂದ ಹೊಸ ಹೊಸ ಕಾನ್ಸೆಪ್ಟ್​ಗಳ ಮೂಲಕ ತಮ್ಮ ಪ್ರತಿಭೆಯನ್ನ ಅನಾವರಣ ಮಾಡಲಿದ್ದಾರೆ ಸ್ಪರ್ಧಿಗಳು. ಪ್ರೇಮಾ ಅವರು ಮಹಾನಟಿ ಮೊದಲ ಸೀಸನ್​ಗೆ ಕೂಡ ಜಡ್ಜ್ ಸ್ಥಾನದಲ್ಲಿ ಇದ್ದರು. ಈಗ ಈ ರಿಯಾಲಿಟಿ ಶೋನ ಎರಡನೇ ಸೀಸನ್​ಗೂ ಜಡ್ಜ್ ಸ್ಥಾನ ನೀಡಲಾಗಿದೆ. ರಮೇಶ್ ಅರವಿಂದ್, ಪ್ರೇಮಾ ಜೊತೆಗೆ ತರುಣ್ ಸುಧೀರ್ ಹಾಗೂ ನಿಶ್ವಿಕಾ ನಾಯ್ಡು ಕೂಡ ಜಡ್ಜ್ ಸ್ಥಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅನುಶ್ರೀ ನಿರೂಪಕಿಯಾಗಿದ್ದಾರೆ.