ಬಿಗ್ ಬಾಸ್ ಕನ್ನಡ ಸೀಸನ್ 12ರ (Bigg Boss Kannada season 12) ಕುರಿತು ಒಂದೊಂದೆ ದೊಡ್ಡ ಅಪ್ಡೇಟ್ ಹೊರಬೀಳುತ್ತಿದೆ. ಸದ್ಯದಲ್ಲೇ ಬಿಬಿಕೆ 12 ಸೀಸನ್ ಶುರುವಾಗಲಿದೆ. ಅಷ್ಟೇ ಅಲ್ಲದೆ ಈ ಬಾರಿ ನಿರೂಪಕರಾಗಿ ಕಿಚ್ಚ ಸುದೀಪ್ ಅವರೇ ಮುಂದುವರೆಯಲಿದ್ದಾರೆ. ಈ ಬಾರಿ ಶೋ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆಯಲಿದೆ ಎನ್ನಲಾಗಿದೆ. ಇಲ್ಲಿ ಹೊಸ ಮನೆ ನಿರ್ಮಾಣ ಮಾಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಇದರ ಜೊತೆಗೆ ದೊಡ್ಮನೆಗೆ ಈ ಬಾರಿ ಯಾರೆಲ್ಲ ಹೋಗಬಹುದು ಎಂಬ ಗಾಸಿಪ್ ಕೂಡ ಹರಿದಾಡುತ್ತಿದೆ.
ಕಳೆದ ಎರಡು-ಮೂರು ತಿಂಗಳುಗಳಲ್ಲಿ ಅನೇಕ ಧಾರಾವಾಹಿಗಳು ಮುಕ್ತಾಯಗೊಂಡಿವೆ. ಕಲರ್ಸ್ನ ಲಕ್ಷ್ಮೀ ಬಾರಮ್ಮ, ವಧು, ನೂರು ಜನ್ಮಕೂ ಹೀಗೆ ಪ್ರಮುಖ ಧಾರಾವಾಹಿ ಕೊನೆಯಾಗಿದೆ. ಜೊತೆಗೆ ಇನ್ನೆರಡು-ಮೂರು ವಾರಗಳಲ್ಲಿ ಕರಿಮಣಿ ಕೂಡ ಮುಕ್ತಾಯವಾಗಲಿದೆ. ಅತ್ತ ಝೀ ಕನ್ನಡದಲ್ಲಿ ಸೀತಾ ರಾಮ ಧಾರಾವಾಹಿ ಕೊನೆಯಾಯಿತು. ಸ್ಟಾರ್ ಸುವರ್ಣದಲ್ಲಿ ನೀನಾದೆ ನಾ ಅಂತ್ಯವಾಯಿತು. ಹೀಗೆ ಬಿಗ್ ಬಾಸ್ಗು ಮುನ್ನ ಅನೇಕ ಧಾರಾವಾಹಿ ಶುಭಂ ಬೋರ್ಡ್ ಹಾಕಿದೆ.
ಸದ್ಯ ಈ ಧಾರಾವಾಹಿ ಮುಕ್ತಾಯದ ಬಳಿಕ ಇದರಲ್ಲಿ ನಟಿಸಿದ ಕೆಲ ಸ್ಟಾರ್ಗಳು ಬಿಗ್ ಬಾಸ್ಗೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಯಾರೆಲ್ಲ ಎಂಬುದನ್ನು ನೋಡುವುದಾದರೆ, ಇದರಲ್ಲಿ ಮೊದಲ ಹೆಸರು ಗಗನ್ ಚಿನ್ನಪ್ಪ. ಸೀತಾ ರಾಮ ಸೀರಿಯಲ್‌ನಲ್ಲಿ ನಟಿಸಿದ್ದ ಇವರು ಸ್ಮಾರ್ಟ್ & ಹ್ಯಾಂಡ್ಸಮ್ ಆಗಿದ್ದಾರೆ. ಇವರು ದೊಡ್ಮನೆಯೊಳಗೆ ಕಾಲಿಡಬಹುದು ಎಂಬ ಗುಸು-ಗುಸು ಇದೆ. ಜೊತೆಗೆ ಇದೇ ಧಾರಾವಾಹಿಯಲ್ಲಿ ವಿಲನ್ ಪಾತ್ರ ಮಾಡಿದ ದಿವಂಗತ ನಟ ಲೋಕೇಶ್ - ಗಿರಿಜಾ ಲೋಕೇಶ್ ದಂಪತಿಯ ಪುತ್ರಿ ಪೂಜಾ ಲೋಕೇಶ್ ಕೂಡ ಮನೆಯೊಳಗೆ ಕಾಲಿಡಬಹುದು.
Karimani Serial: ಕಿರುತೆರೆ ವೀಕ್ಷಕರಿಗೆ ಶಾಕ್: ಕರಿಮಣಿ ಧಾರಾವಾಹಿ ದಿಢೀರ್ ಮುಕ್ತಾಯ
ನೂರು ಜನ್ಮಕೂ, ಗೀತಾ ಸೀರಿಯಲ್‌ನಲ್ಲೂ ನಟಿಸಿದ್ದ ಧನುಷ್ ಗೌಡ ಈ ಬಾರಿ ಬಿಗ್ ಬಾಸ್ ಸ್ಪರ್ಧಿಯಾಗಬಹುದು. ಪರ್ವ, ಹೂಮಳೆ, ನಮ್ಮನೆ ಯುವರಾಣಿ, ಬೃಂದಾವನ, ನೂರು ಜನ್ಮಕೂ ಧಾರಾವಾಹಿಗಳಲ್ಲಿ ನಟಿಸಿರುವ ನಟಿ ಅನುಪಲ್ಲವಿ. ಟ್ರೋಲರ್ಸ್‌ಗೆ ನೇರವಾಗಿ ತಿರುಗೇಟು ಕೊಡುವ ಅನುಪಲ್ಲವಿ ಬಿಗ್ ಬಾಸ್ಗೆ ಬಂದರೆ ಚೆನ್ನ ಎಂಬುದು ವೀಕ್ಷಕರ ಅಭಿಪ್ರಾಯ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನೀನಾದೆ ನಾ ಹೀರೋ ದಿಲೀಪ್ ಶೆಟ್ಟಿ ಬಿಗ್ ಬಾಸ್ ಮನೆಗೆ ಬರಬಹುದು. ಹಾಗೆಯೆ ವಧು ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡವರು ಸೋನಿ ಮುಲೇವಾಮ, ಅಭಿಷೇಕ್ ಶ್ರೀಕಾಂತ್, ಕರಿಮಣಿ ಧಾರಾವಾಹಿಯ ಅಶ್ವಿನ್ ಯಾದವ್ ಹಾಗೂ ನಾಯಕಿ ಸ್ಪಂದನಾ ಸೋಮಣ್ಣಗೆ ಸ್ಪರ್ಧಿಸಬಹುದು ಎನ್ನಲಾಗಿದೆ.