ಬಿಗ್ ಬಾಸ್ ಕನ್ನಡ ಸೀಸನ್ 12ರ (Bigg Boss Kannada 12) ಮೊದಲ ಪಂಚಾಯಿತಿಗೆ ಕ್ಷಣಗಣೆ ಆರಂಭವಾಗಿದೆ. ಬಹಳಷ್ಟು ಟ್ವಿಸ್ಟ್-ಟರ್ನ್ ಮೂಲಕ ಸಾಗಿದ ಮೊದಲ ವಾರದ ಬಗ್ಗೆ ಸುದೀಪ್ ಏನು ಹೇಳಬಹುದು?, ಯಾರಿಗೆ ಚಪ್ಪಾಳೆ ನೀಡಬಹುದು?, ಯಾರಿಗೆ ತಮ್ಮ ಸೈಲ್ನಲ್ಲೇ ಖಡಕ್ ವಾರ್ನಿಂಗ್ ನೀಡಬಹುದು ಎಂಬುದು ಕುತೂಹಲ ಮೂಡಿಸಿದೆ. ಇದೀಗ ಕಲರ್ಸ್ ಇಂದಿನ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ನ ಒಂದು ಸಣ್ಣ ಝಲಕ್ ಬಿಡುಗಡೆ ಮಾಡಿದ್ದು, ಸುದೀಪ್ ಸ್ಪರ್ಧಿಗಳ ಮೇಲೆ ಸಖತ್ ಕೋಪ ಮಾಡಿಕೊಂಡಿದ್ದಾರೆ.
ಅವತ್ತು ಇಲ್ಲಿ 12 ಜನ ಒಂಟಿಗೆ ಲಾಯಕ್ಕಿಲ್ಲ ಅಂತ ಆಯ್ಕೆ ಮಾಡಿದ್ದರು.. ಈ ವಾರ ಎಲ್ಲ ನೋಡಿದಮೇಲೆ ನನಗನಿಸಿದ್ದು ಅವರ ಜಡ್ಜ್ಮೆಂಟ್ ಎಷ್ಟು ಕರೆಕ್ಟ್ ಇದೆ ಅಂತ.. ನಿಮ್ಮ ಆಟಗಳಲ್ಲಿ ಸ್ಟ್ರಾಟರ್ಜಿ ಇತ್ತ.. ತಲೆ ಇತ್ತ.. ಸುಮ್ನೆ ಒಂದು ಹಿಂಟ್ ಕೊಡ್ತಾ ಇದ್ದೇನೆ.. ನಿಮ್ಮಲ್ಲಿ ಶೇ. 50 ರಷ್ಟು ಸ್ಪರ್ಧಿಗಳು ಕೂಡ ರಿಪ್ಲೇಸ್ಮೆಂಟ್ಗೆ ಒಂದು ಬ್ಯಾಚ್ ರೆಡಿ ಇಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಅಲ್ಲದೆ 11 ಸೀಸನ್ ಬೇರೆ.. ಈ ಸೀಸನ್ ನನ್ ಮಗಂದ್ ಬೇರೆ.. ಎಂದು ಮೊದಲ ವಾರವೇ ಸ್ಪರ್ಧಿಗಳ ನಡವಳಿಕೆಯಿಂದ ಕಿಚ್ಚ ಬೇಸರಗೊಂಡಿದ್ದಾರೆ. ಅಲ್ಲದೆ ವಾರದ ಕಿಚ್ಚನ ಚಪ್ಪಾಳೆ ಕುರಿತು ಕೂಡ ಒಂದು ತುಣುಕು ತೋರಿಸಲಾಗಿದೆ.
ಟಾಸ್ಕ್ ರದ್ದಾದ ಬಗ್ಗೆ ಕಿಚ್ಚ ಕ್ಲಾಸ್ ಸಾಧ್ಯತೆ:
ಟಾಸ್ಕ್ ರದ್ದಾದ ವಿಚಾರ ವಾರದ ಕತೆಯಲ್ಲಿ ಚರ್ಚೆ ಆಗಲಿದೆ. ಈ ಕುರಿತು ಸುದೀಪ್ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಳ್ಳುವುದು ಖಚಿತ. ಒಂದು ಟಾಸ್ಕ್ ಕ್ರಿಯೇಟ್ ಮಾಡಲು ಅದರ ಹಿಂದೆ ಎಷ್ಟು ಶ್ರಮವಹಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಕಳೆದ ಸೀಸನ್ನಲ್ಲಿ ಕೂಡ ಸುದೀಪ್ ಅವರು ಟಾಸ್ಕ್ ರದ್ದಾದರೆ ಅದಕ್ಕೆ ಪಟ್ಟ ಶ್ರಮ ಎಲ್ಲ ವೇಸ್ಟ್.. ಆ ಟಾಸ್ಕ್ಗೆ ನೀವು ಅವಮಾನ ಮಾಡಿದಂತೆ ಎಂದು ಹೇಳಿದ್ದರು. ಇದೀಗ ಮೊದಲ ವಾರದಲ್ಲೇ ಒಂದು ಟಾಸ್ಕ್ ರದ್ದಾಗಿದೆ. ಈ ಕುರಿತು ಕಿಚ್ಚ ಸುದೀಪ್ ಗರಂ ಆಗುವುದು ಖಚಿತ. ಧನುಷ್-ಕಾಕ್ರೋಚ್ ಸುಧಿ ವಿಚಾರವೂ ಚರ್ಚೆಯಾಗಲಿದೆ.
BBK 12: ಇಂದು ಕಿಚ್ಚನ ಮೊದಲ ಪಂಚಾಯಿತಿ: ಬಿಸಿ ಬಿಸಿ ಚರ್ಚೆಯಾಗಲಿದೆ ಈ ವಿಚಾರ