ಈ ಬಾರಿಯ ನಾಮಿನೇಷನ್ನಲ್ಲಿ ಎಲ್ಲರ ಗಮನ ಸೆಳೆದಿದ್ದು ಮಲ್ಲಮ್ಮ. ಟಾಸ್ಕ್ ಬರಲಿ ಅಥವಾ ಸುಮ್ಮನೆ ನಿಂತುಕೊಳ್ಳಲಿ ಈ ಮೊದಲ ವಾರದಲ್ಲಿ ಮಲ್ಲಮ್ಮ (Mallamma Bigg Boss) ಫುಲ್ ಮಿಂಚಿದ್ದಾರೆ. ಟಾಸ್ಕ್ನಲ್ಲಿ ಪ್ಯಾಂಟ್ ಹಾಕಿ ಯುವಕರೂ ನಾಚುವಂತೆ ಆಟವಾಡಿದ್ದಾರೆ. ಸ್ವತಃ ಬಿಗ್ ಬಾಸ್ ಅವರಿಗೇ ಮಲ್ಲಮ್ಮನ ಮಾತು ಕೇಳಿ ಸುಸ್ತಾಗಿದೆ. ನಾಮಿನೇಷನ್ನಲ್ಲೂ ಮಲ್ಲಮ್ಮ ಎಲ್ಲರ ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದಾರೆ.
ತಮಾಷೆ ಎಂದರೆ ನಾಮಿನೇಷನ್ ಅಂದ್ರೆ ಏನು ಅಂತ ಗೊತ್ತಿಲ್ಲದ ಮಲ್ಲಮ್ಮ ಅವರು ಗಿಲ್ಲಿ ನಟನ ಹೆಸರು ಹೇಳಿದ್ದು ಫುಲ್ ಕಾಮಿಡಿ ಆಗಿದೆ. ನಾನು ಗಿಲ್ಲಿ ಅವರನ್ನು ನಾಮಿನೇಟ್ ಮಾಡುತ್ತೇನೆ.. ಅವರು ತುಂಬಾ ತರ್ಲೆ ಮಾಡ್ತಾರೆ.. ಬೇರೆ ಏನೂ ಮಾಡಲ್ಲ.. ಅವರು ಇಷ್ಟ ಇಲ್ಲ ನಮ್ಗೆ ಎಂದು ಹೇಳಿದ್ದಾರೆ.
ಗಿಲ್ಲಿಯನ್ನು ನಾಮಿನೇಟ್ ಮಾಡಿದ ಬಳಿಕ ನಾಮಿನೇಷನ್ ಅಂದ್ರೆ ಏನು ಅಂತ ಎಲ್ಲ ಪ್ರೊಸೆಸ್ ಮುಗಿದ ಬಳಿಕ ಗಿಲ್ಲಿ ನಟನನ್ನೇ ಮಲ್ಲಮ್ಮ ಕೇಳಿದ್ದಾರೆ. ಬಳಿಕ ಗಿಲ್ಲಿ ಮಲ್ಲಮ್ಮಗೆ ಹೇಳಿಕೊಟ್ಟಿದ್ದಾರೆ. ಮಲ್ಲಮ್ಮ, ಗಿಲ್ಲಿ ಅಂತ ಹೆಸರು ಹೇಳುತ್ತಿದ್ದಂತೆ, ಗಿಲ್ಲಿ ನಕ್ಕಿದ್ದಾನೆ. ಬಳಿಕ ನೀನು ನಾಮಿನೇಷನ್ ಮಾಡಿದೆ ಅಂದರೆ ನನ್ನನ್ನು ಇಲ್ಲಿಂದ ಮನೆಗೆ ಕಳಿಸುತ್ತಾರೆ ಎಂದು ಮಲ್ಲಮ್ಮಗೆ ಅರ್ಥೈಸಿ ಕಣ್ಣೀರಿಟ್ಟಿದ್ದಾರೆ. ಇದನ್ನ ಕೇಳಿ ಹೌದಾ..! ಎಂದು ಮಲ್ಲಮ್ಮ ಶಾಕ್ ಆಗಿದ್ದಾರೆ.
BBK 12: ಇಂದು ಕಿಚ್ಚನ ಮೊದಲ ಪಂಚಾಯಿತಿ: ಬಿಸಿ ಬಿಸಿ ಚರ್ಚೆಯಾಗಲಿದೆ ಈ ವಿಚಾರ
ಈ ವಾರ ಮನೆಯಿಂದ ಹೊರಹೋಗಲು ಒಟ್ಟು 8 ಮಂದಿ ನಾಮಿನೇಟ್ ಆಗಿದ್ದಾರೆ. ಧನುಷ್, ಮಲ್ಲಮ್ಮ, ಆರ್ಜೆ ಅಮಿತ್, ಕರಿಬಸಪ್ಪ, ಕಾವ್ಯಾ ಶೈವ, ಗಿಲ್ಲಿ ನಟ, ಅಶ್ವಿನಿ, ಅಭಿಷೇಕ್ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಯಾರು ಮನೆಯಿಂದ ಹೊರಹೋಗುತ್ತಾರೆ?, ಒಂದು ಎಲಿಮಿನೇಷನ್ ಇದೆಯಾ ಅಥವಾ ಬಿಗ್ ಬಾಸ್ ಹೇಳಿದಂತೆ ಗ್ರೂಪ್ ಎಲಿಮಿನೇಷನ್ ಇದೆಯಾ? ಎಂಬುದು ಇಂದಿನ ಕಿಚ್ಚನ ಪಂಚಾಯಿತಿಯಲ್ಲಿ ತಿಳಿಯಬೇಕಿದೆ.