ಬಿಗ್ ಬಾಸ್ ತೆಲುಗು 9ನೇ ಸೀಸನ್ (Bigg Boss Telugu) ಶುರುವಾಗಿ ಸುಮಾರು ಮೂರು ವಾರ ಆಗಿದೆ. ಒಟ್ಟು ಒಂಬತ್ತು ಸೆಲೆಬ್ರಿಟಿಗಳು ಮತ್ತು ಆರು ಸಾಮಾನ್ಯ ಜನರೊಂದಿಗೆ ಶುರುವಾದ ಶೋನಲ್ಲಿ ಇಬ್ಬರು ಈಗಾಗಲೇ ಹೊರನಡೆದಿದ್ದಾರೆ. ಸೆಲೆಬ್ರಿಟಿಗಳಿಂದ ಶ್ರಷ್ಟಿ ವರ್ಮಾ ಮತ್ತು ಸಾಮಾನ್ಯರಿಂದ ಮನೀಶ್ ಮರ್ಯಾದಾ ಎಲಿಮಿನೇಟ್ ಆಗಿದ್ದಾರೆ. ಪ್ರತಿ ಸೀಸನ್‌ನಲ್ಲಿ, ಸೆಲೆಬ್ರಿಟಿಗಳು ಉತ್ಸುಕರಾಗುತ್ತಿದ್ದರು.. ಸಾಮಾನ್ಯರು ಮೌನವಾಗಿರುತ್ತಿದ್ದರು. ಆದರೆ ಈ ಸೀಸನ್‌ನಲ್ಲಿ ಎಲ್ಲವೂ ಉಲ್ಟಾ ಆಗಿದೆ. ಸೆಲೆಬ್ರಿಟಿ ರೇಂಜ್‌ನಲ್ಲಿ ಸಾಮಾನ್ಯರ ಜಗಳವೇ ಬಿಗ್ ಬಾಸ್ ಮನೆಯೊಳಗೆ ಜೋರಾಗಿ ನಡೆಯುತ್ತಿದೆ.
ಇವರ ಮಧ್ಯೆ ಸ್ಯಾಂಡಲ್ವುಡ್ ನಟಿ ಸಂಜನಾ ಗಲ್ರಾನಿ ಕೂಡ ಸ್ಪರ್ಧಿಯಾಗಿ ತೆಲುಗು ಬಿಗ್ ಬಾಸ್ ಮನೆಯಲ್ಲಿದ್ದಾರೆ. ಇವರು ಎಂಟ್ರಿ ಕೊಟ್ಟ ಮೊದಲ ದಿನದಿಂದಲೇ ಅಬ್ಬರಿಸುತ್ತಿದ್ದಾರೆ. ಎಲ್ಲರ ಬಾಯಲ್ಲೂ ತನ್ನ ಹೆಸರು ಬರುವಂತೆ ಮಾಡಿದ್ದಾರೆ. ಸಂಜನಾ ಬಿಗ್ ಬಾಸ್ ತೆಲುಗು ಸೀಸನ್ 9 ರ ಮನೆಯಲ್ಲಿ ಅತ್ಯಂತ ಬಲಿಷ್ಠ ಸ್ಪರ್ಧಿಗಳಲ್ಲಿ ಒಬ್ಬರಾಗುತ್ತಿದ್ದಾರೆ. ಆರಂಭಿಕ ದಿನಗಳಲ್ಲಿ, ಅವರು ಹೊರಹೋಗುವ ಅಂಚಿನಲ್ಲಿದ್ದರು.
ಆದಾಗ್ಯೂ, ಸಂಜನಾ ಟಾಸ್ಕ್‌ಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ವೀಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ಕಾರ್ಯಕ್ರಮದ ನಿರೂಪಕ ನಾಗಾರ್ಜುನ ಕೂಡ ಸಂಜನಾ ಆಟವನ್ನು ಹಾಡಿಹೊಗಳಿದ್ದಾರೆ. ಕಳೆದ ಕೆಲವು ದಿನಗಳಿಂದ, ಸಂಜನಾ ಅವರ ಜನಪ್ರಿಯತೆ ಗಗನಕ್ಕೇರುತ್ತಿದೆ ಮತ್ತು ಅಭಿಮಾನಿಗಳಿಂದ ಭರ್ಜರಿ ಬೆಂಬಲ ಸಿಗುತ್ತಿದೆ.
BBK 12: ಬಿಗ್ ಬಾಸ್ ವೀಕ್ಷಕರಿಗೆ ಸಿಕ್ಕಿತು ಬಂಪರ್ ಸುದ್ದಿ: 24 ಗಂಟೆ ಲೈವ್ ವೀಕ್ಷಿಸಬಹುದು
ಸಂಜನಾ ನಾಮಿನೇಟ್ ಆದರೂ ಈವರೆಗೆ ಎಲಿಮಿನೇಷನ್ನ ಹತ್ತಿರವೂ ಸುಳಿದಿಲ್ಲ. ಮತ್ತೊಂದು ವಿಶೇಷ ಎಂದರೆ ಬಿಗ್ ಬಾಸ್ ಕನ್ನಡ ಸೀಸನ್ 1ರಲ್ಲಿ ಸ್ಪರ್ಧಿಯಾಗಿದ್ದ ಸಂಜನಾ ಕೇವಲ 14 ದಿನಗಳಿಗೆ ಎಲಿಮಿನೇಟ್ ಆಗಿದ್ದರು. ಆದರೆ ಈಗ ಎಲ್ಲವೂ ಬದಲಾಗಿ ತೆಲುಗು ಬಿಗ್ ಬಾಸ್ ಶೋನಲ್ಲಿ ಅವರೇ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ, ಸಂಜನಾ ಬಿಗ್ ಬಾಸ್ ತೆಲುಗು 9 ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಪರ್ಧಿಗಳಲ್ಲಿ ಒಬ್ಬರು. ಸದ್ಯ ಸಂಜನಾ ಎಷ್ಟು ದಿನ ಮನೆಯಲ್ಲಿ ಉಳಿಯುತ್ತಾಳೆಂದು ಕಾದು ನೋಡಬೇಕಿದೆ.