ಬಿಗ್ ಬಾಸ್ ಕನ್ನಡ ಸೀಸನ್ 12 ಗ್ರ್ಯಾಂಡ್ ಓಪನಿಂಗ್ ಶುರುವಾಗಿದೆ. ಇಷ್ಟು ದಿನ ಬಿಗ್ ಬಾಸ್ ಮನೆಗೆ ಯಾರೆಲ್ಲ ಸ್ಪರ್ಧಿಗಳು ಎಂಟ್ರಿ ಕೊಡಲಿದ್ದಾರೆ ಎಂದು ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದರು. ಆದರೆ ಈಗ ಒಂದೊಂದೆ ಹೆಸರು ರಿವೀಲ್ ಆಗುತ್ತಿದೆ. ದೊಡ್ಮನೆಯೊಳಗೆ ಸ್ಪರ್ಧಿಯಾಗಿ ಸ್ಪಂದನಾ ಸೋಮಣ್ಣ ಎಂಟ್ರಿ ಕೊಟ್ಟಿದ್ದಾರೆ.
ಸ್ಪಂದನಾ ಅವರನ್ನು ಕಿಚ್ಚ ಸುದೀಪ್ ಗ್ರ್ಯಾಂಡ್ ಆಗಿ ವೆಲ್ಕಂ ಮಾಡಿ ಮನೆಯೊಳಗೆ ಕಳುಹಿಸಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕರಿಮಣಿ ಸೀರಿಯಲ್ ನಲ್ಲಿ ಸಾಹಿತ್ಯ ಪಾತ್ರದ ಮೂಲಕ ಮಿಂಚಿದ ಸ್ಪಂದನ, ತಮ್ಮ ಪಾತ್ರಕ್ಕೆ ಜೀವ ತುಂಬಿದ್ದರು. ಸಾಹಿತ್ಯ ಮತ್ತು ಕರ್ಣನ ಜೋಡಿಯನ್ನು ಜನರು ಇಷ್ಟಪಟ್ಟಿದ್ದರು. ಇವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಅಪಾರ ಅಭಿಮಾನಿ ಬಳಗವಿದೆ.
ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಸ್ಪಂದನಾ ನಾನು ನನ್ನ ಕನಸು ಎಂಬ ಕನ್ನಡ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ತೆಲುಗಿನ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಜೊತೆಗೆ ತೆಲುಗಿನ ನಚ್ಚಾವೆ ವೆಬ್ ಸೀರೀಸ್ ಹಾಗೂ ಹಿಂದಿಯ ಸುನ್ ಲೆ ನಾ ಎಂಬ ಆಲ್ಬಂ ಸಾಂಗ್‌ನಲ್ಲಿ ಹಾಗೂ ಕನ್ನಡ ಸಿನಿಮಾಗಳಲ್ಲೂ ಇವರು ನಟಿಸಿದ್ದಾರೆ.