ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vaishnavi Gowda: ಟ್ರೋಲರ್ಸ್​ಗೆ ವೈಷ್ಣವಿ ಗೌಡ ಖಡಕ್ ತಿರುಗೇಟು: ಕಾಲುಂಗುರ ಕಾಣುವಂತೆ ಫೋಟೋ ಶೂಟ್

ವೈಷ್ಣವಿ ಗೌಡ ಅವರಿಗೆ ಟ್ರೋಲರ್ಗಳ ಹಾವಳಿ ಕಮ್ಮಿ ಆಗಿಲ್ಲ.. ಅದಕ್ಕೆ ಈ ಬಾರಿ ವೈಷ್ಣವಿ ವಿಭಿನ್ನವಾಗಿ ಫೋಟೋ ಶೂಟ್ ಮಾಡಿಸಿ ಟ್ರೋಲರ್ಸ್ಗೆ ತಿರುಗೇಟು ಕೊಟ್ಟಿದ್ದಾರೆ. ವೈಷ್ಣವಿ ಗೌಡ ಬಿಳಿ ಬಣ್ಣದ ಗೌನ್ ಧರಿಸಿ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ.

Vaishnavi Gowda

ಅಗ್ನಿಸಾಕ್ಷಿ, ಸೀತಾ ರಾಮ ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದ ನಟಿ ವೈಷ್ಣವಿ ಗೌಡ (Vaishnavi Gowda,) ಇತ್ತೀಚೆಗಷ್ಟೆ ಹಸೆಮಣೆ ಏರಿದ್ದರು. ಏಪ್ರಿಲ್ 14ರಂದು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ವೈಶು, ಅನುಕೂಲ್ ಮಿಶ್ರಾ ಜೊತೆಗೆ ಜೂನ್ 4 ರಂದು ಬೆಂಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿ ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಳಿಕ ಈ ಜೋಡಿ ಉತ್ತರಾಖಂಡ ಋಷಿಕೇಶ್, ಮನಾಲಿಗೆ ಹನಿಮೂನ್ ಹೋಗಿದ್ದರು.

ಹನಿಮೂನ್ ಫೋಟೋವನ್ನು ವೈಷ್ಣವಿ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಸಂದರ್ಭ ವೈಷ್ಣವಿ ಅವರ ಕೊರಳಿನಲ್ಲಿ ತಾಳಿ ಇರಲಿಲ್ಲ. ಇದನ್ನು ಗಮನಿಸಿದ ಟ್ರೋಲರ್ಸ್, ಮದುವೆ ಬಳಿಕ ನೀವು ಯಾಕೆ ತಾಳಿ ಹಾಕ್ಲಿಲ್ಲ. ತಾಳಿ ಹಾಕದೇ ನಮ್ಮ ಸಂಪ್ರದಾಯಕ್ಕೆ ಗೌರವ ಕೊಡಲ್ವಾ? ಮದುವೆ ಯಾಕ್ ಬೇಕಿತ್ತು, ತಾಳಿ ಹಾಕದೇ ಇದ್ದಮೇಲೆ ಎಂದು ಕಾಮೆಂಟ್ ಕೆಲವರು ಕಾಮೆಂಟ್ ಮಾಡಿದ್ದರು. ಇದು ಮಟ್ಟದಲ್ಲಿ ಸುದ್ದಿಯಾಯಿತು.

ಬಳಿಕ ಸ್ವತಃ ವೈಷ್ಣವಿ ಅವರೇ ಇದರ ಬಗ್ಗೆ ಕ್ಲಾರಿಫಿಕೇಷನ್ ಕೊಟ್ಟಿದ್ದರು. ‘‘ನಮ್ಮ ಸಂಪ್ರದಾಯಕ್ಕೆ ಗೌರವ ಕೊಡೋದಿಲ್ವಾ? ತಾಳಿ ಬೇಡ ಅಂದ್ರೆ ಯಾಕೆ ಮದುವೆ ಆದ್ರಿ ಅಂತ ಕೆಲವರು ಕೇಳಿದ್ದಾರೆ. ಹುಡುಗನ ಮನೆಯಲ್ಲಿ ಯಾವ ಪದ್ಧತಿ ಇದೆಯೋ ಅದನ್ನೇ ಹುಡುಗಿ ಕೂಡ ಅನುಸರಿಸುತ್ತಾಳೆ. ಅದೇ ಪದ್ಧತಿ ರೂಢಿಯಲ್ಲಿದೆ. ಹೀಗಾಗಿ ಹುಡುಗನ ಪದ್ಧತಿಯಂತೆ ನಮ್ಮ ಮದುವೆ ಆಯ್ತು. ತಾಳಿ ಹಾಕಿಲ್ಲ ಅಂತ ಕೆಲವರು ಕೇಳಿದ್ದೀರಾ. ನನ್ನ ಅತ್ತೆ ಕೂಡ ಇದುವರೆಗೂ ತಾಳಿ ಹಾಕಿಲ್ಲ. ತಾಳಿ ಹಾಕುವ ಪದ್ಧತಿ ನಮ್ಮಲ್ಲಿ ಇಲ್ಲ’’ ಎಂದು ವೈಷ್ಣವಿ ಗೌಡ ಹೇಳಿದ್ದರು.

‘‘ತಾಳಿ ಹಾಕೋದು ಅವರ ಪದ್ಧತಿಯಲ್ಲಿ ಇಲ್ಲ, ಅದು ನಮಗೆ ಮುಖ್ಯ ಅಲ್ಲ ಎಂದರು. ಮೂಗು ಚುಚ್ಚಿಸಿರಬೇಕು, ಕೈಯಲ್ಲಿ ಗಾಜಿನ ಬಳೆ ಇರಬೇಕು, ಕೈಯಲ್ಲಿ ಒಂದು ದಾರ ಇರಬೇಕು, ಕಾಲುಂಗುರ ಹಾಕಿರಬೇಕು. ನಮ್ಮ ಸಂಪ್ರದಾಯ, ಸಂಸ್ಕೃತಿ ಬಗ್ಗೆ ನನಗೆ ಗೌರವವಿದೆ. ಆದರೆ ಅವರ ಮನೆಯಲ್ಲಿ ಈ ಪದ್ಧತಿ ಇಲ್ಲ ಎಂದು ಹಾಕುತ್ತಿಲ್ಲ ಅಷ್ಟೇ’’ ಎಂದು ವೈಷ್ಣವಿ ಗೌಡ ಹೇಳಿ ಟ್ರೋಲರ್​​ಗಳ ಬಾಯಿ ಮುಚ್ಚಿಸಿದ್ದರು.

Bigg Boss 19: ಬಿಗ್ ಬಾಸ್​ಗೆ 19 ಸ್ಪರ್ಧಿಗಳ ಫೈನಲ್ ಲಿಸ್ಟ್ ರೆಡಿ, ಈ ಬಾರಿ ಓರ್ವ ರಾಜಕಾರಣಿ ಕೂಡ ಎಂಟ್ರಿ

ಆದರೆ, ಇನ್ನೂ ಟ್ರೋಲರ್​ಗಳ ಹಾವಳಿ ಕಮ್ಮಿ ಆಗಿಲ್ಲ.. ಅದಕ್ಕೆ ಈ ಬಾರಿ ವೈಷ್ಣವಿ ವಿಭಿನ್ನವಾಗಿ ಫೋಟೋ ಶೂಟ್ ಮಾಡಿಸಿ ಟ್ರೋಲರ್ಸ್​ಗೆ ತಿರುಗೇಟು ಕೊಟ್ಟಿದ್ದಾರೆ. ವೈಷ್ಣವಿ ಗೌಡ ಬಿಳಿ ಬಣ್ಣದ ಗೌನ್ ಧರಿಸಿ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ. ಈ ಲುಕ್​ನಲ್ಲಿ ವೈಷ್ಣವಿ ಸುಂದರವಾಗಿ ಕಾಣಿಸುತ್ತಿದ್ದು, ಜನ ಬಿಳಿ ಚಿಟ್ಟೆ ಎಂದು ಹಾಡಿ ಹೊಗಳಿದ್ದಾರೆ.

ಜೊತೆಗೆ ಈ ಫೋಟೊದಲ್ಲಿ ಕಾಲುಂಗುರವೇ ಹೆಚ್ಚು ಹೈಲೈಟ್ ಆಗಿದೆ. ತಮ್ಮ ಕಾಲುಂಗುರವನ್ನು ತೋರಿಸಲೇ ಆ ರೀತಿಯಾಗಿ ಫೋಟೊ ತೆಗೆಸಿದಂತಿದೆ. ಮತ್ತೆ ಮತ್ತೆ ಜನ ಅದೇ ರೀತಿ ನೆಗೆಟಿವ್ ಕಾಮೆಂಟ್ ಮಾಡೋದಕ್ಕೆ ಎನ್ನುವಂತೆ ಇದೀಗ ವೈಶು ತಮ್ಮ ಹೊಸ ಫೋಟೊ ಶೂಟಲ್ಲಿ ಕಾಲುಂಗುರ ಕಾಣುವಂತೆ ಪೋಸ್ ಕೊಟ್ಟಿದ್ದಾರೆ.