ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗಿ ಒಂದು ವಾರ ಆಗುತ್ತ ಬರುತ್ತಿದೆ. ಇಂದು ಕಿಚ್ಚನ ಮೊದಲ ಪಂಚಾಯಿತಿ ನಡೆಯಲಿದೆ. ವಾರದ ಕತೆ ಕಿಚ್ಚನ ಜೊತೆ (Varada Kathe Kichchana Jothe) ಎಪಿಸೋಡ್ ಸಾಕಷ್ಟು ಕುತೂಹಲ ಮೂಡಿಸಿದೆ. ಸಾಮಾನ್ಯವಾಗಿ ಸೈಲೆಂಟ್ ಆಗಿ ಇರುತ್ತಿದ್ದ ಬಿಗ್ ಬಾಸ್ನ ಮೊದಲ ವಾರ ಈ ಬಾರಿ ಮಾತ್ರ ರಣರಂಗವಾಗಿತ್ತು. ಹೆಚ್ಚಿನ ಜಗಳದಲ್ಲಿ ಗಿಲ್ಲಿ ನಟ ಎದ್ದು ಕಾಣುತ್ತಿದ್ದರು. ಅಶ್ವಿನಿ ಗೌಡ ಹಾಗೂ ಗಿಲ್ಲಿ ನಡುವಣ ಜಗಳ ಇನ್ನೂ ತಣ್ಣಗಾಗಿಲ್ಲ. ಮೊದಲ ವಾರದಲ್ಲಿ ಅನೇಕ ಸಂಗತಿಗಳು ನಡೆದಿದ್ದು, ಈ ಕುರಿತು ವಾರದ ಕತೆಯಲ್ಲಿ ಚರ್ಚೆ ನಡೆಯಲಿದೆ.
ಮೊದಲನೆಯದಾಗಿ ಸುದೀಪ್ ಅವರು ಅಶ್ವಿನಿ ಹಾಗೂ ಗಿಲ್ಲಿ ನಟನ ವಿಚಾರ ತೆಗೆದುಕೊಳ್ಳುವುದು ಕನ್ಫರ್ಮ್. ಇವರಿಬ್ಬರ ಮಧ್ಯದ ಜಗಳ ಏಕವಚನದ ವರೆಗೆ ತಲುಪಿತ್ತು. ಟಾಯ್ಲೆಟ್ ಕ್ಲೀನಿಂಗ್ ವೇಳೆ ಗಿಲ್ಲಿ ಅಶ್ವಿನಿ ಅವರನ್ನು ಸಾಕಷ್ಟು ಗೋಳುಹೊಯ್ದಿದ್ದರು. ಅಲ್ಲದೆ ಹಾಲ್ನಲ್ಲಿ ಕೂತು ಮಾತನಾಡುವಾಗ ಕೂಡ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು.
ಇನ್ನು ಟಾಸ್ಕ್ ರದ್ದಾದ ವಿಚಾರ ವಾರದ ಕತೆಯಲ್ಲಿ ಚರ್ಚೆ ಆಗಲಿದೆ. ಈ ಕುರಿತು ಸುದೀಪ್ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಳ್ಳುವುದು ಖಚಿತ. ಒಂದು ಟಾಸ್ಕ್ ಕ್ರಿಯೇಟ್ ಮಾಡಲು ಅದರ ಹಿಂದೆ ಎಷ್ಟು ಶ್ರಮವಹಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಕಳೆದ ಸೀಸನ್ನಲ್ಲಿ ಕೂಡ ಸುದೀಪ್ ಅವರು ಟಾಸ್ಕ್ ರದ್ದಾದರೆ ಅದಕ್ಕೆ ಪಟ್ಟ ಶ್ರಮ ಎಲ್ಲ ವೇಸ್ಟ್.. ಆ ಟಾಸ್ಕ್ಗೆ ನೀವು ಅವಮಾನ ಮಾಡಿದಂತೆ ಎಂದು ಹೇಳಿದ್ದರು. ಇದೀಗ ಮೊದಲ ವಾರದಲ್ಲೇ ಒಂದು ಟಾಸ್ಕ್ ರದ್ದಾಗಿದೆ. ಈ ಕುರಿತು ಕಿಚ್ಚ ಸುದೀಪ್ ಗರಂ ಆಗುವುದು ಖಚಿತ. ಧನುಷ್-ಕಾಕ್ರೋಚ್ ಸುಧಿ ವಿಚಾರವೂ ಚರ್ಚೆಯಾಗಲಿದೆ.
BBK 12: ಮೊದಲ ವಾರವೇ ಬಿಗ್ ಬಾಸ್ ಮನೆಯಲ್ಲಿ 8 ಮಂದಿ ನಾಮಿನೇಟ್: ಯಾರೆಲ್ಲ?
ಮಲ್ಲಮ್ಮನ ಬಗ್ಗೆಯೂ ಸುದೀಪ್ ಮಾತನಾಡಲಿದ್ದಾರೆ. ಮಲ್ಲಮ್ಮ ಮೊದಲ ದಿನ ಗ್ರೋಸರಿ ಟಾಸ್ಕ್ ಮಾಡುವಾಗ ಎಡವಿದ್ದರು. ಇದರಿಂದ ಬಿಗ್ ಬಾಸ್ ಕೂಡ ಕನ್ಫ್ಯೂಸ್ ಆಗಿದ್ದರು. ಸದ್ಯ ನಿಧಾನವಾಗಿ ತಮ್ಮ ಆಟ ಶುರುಮಾಡಿರುವ ಮಲ್ಲಮ್ಮ, ಪ್ಯಾಂಟ್ ಹಾಕಿಕೊಂಡು ಟಾಸ್ಕ್ ಆಡಿದ್ದಾರೆ. ಅಲ್ಲದೆ ಮೂರನೇ ವಾರ ನಡೆಯಲಿರುವ ಮೊದಲ ಫಿನಾಲೆಯ ಕಂಟೆಂಡರ್ ಕೂಡ ಆಗಿದ್ದಾರೆ. ಮಲ್ಲಮ್ಮನ ಪರಿಶ್ರಮವನ್ನು ಸುದೀಪ್ ಕೊಂಡಾಡಬಹುದು. ಇದರ ಜೊತೆಗೆ ಎಲಿಮಿನೇಷನ್ ಟ್ವಿಸ್ಟ್ ಕೂಡ ಇರುವ ಸಾಧ್ಯತೆ ಇದೆ. ಮೊದಲ ದಿನವೇ ಎಲಿಮಿನೇಟ್ ಆದ ರಕ್ಷಿತಾ ಶೆಟ್ಟಿ ಪುನಃ ಬಂದರೂ ಅಚ್ಚರಿ ಪಡಬೇಕಿಲ್ಲ.