ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

The Devil: ಇಂದೇ ರಿಲೀಸ್‌ ಆಗ್ತಿದೆ ಇದ್ರೆ ನೆಮ್ದಿಯಾಗ್ ಇರ್ಬೇಕ್ ಸಾಂಗ್‌; "ಡೆವಿಲ್‌" ಬಿಡುಗಡೆ ಯಾವಾಗ?

ಕೊನೆಗೂ ಇದ್ರೆ ನೆಮ್ಮದಿಯಾಗಿರ್ಬೇಕು ಸಾಂಗ್‌ ರಿಲೀಸ್‌ ಆಗುತ್ತಿದೆ. ಈ ಕುರಿತು ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರು ಸ್ವತಃ ಹಂಚಿಕೊಂಡಿದ್ದಾರೆ. ಇಂದು ಬೆಳಗ್ಗೆ 10.5ಕ್ಕೆ ಸರಿಗಮ ಯೂಟ್ಯೂಬ್‌ ಚಾನಲ್‌ನಲ್ಲಿ ಹಾಡು ಬಿಡುಗಡೆಯಾಗುತ್ತಿರುವುದಾಗಿ ವಿಜಯಲಕ್ಷ್ಮೀ ದರ್ಶನ್‌ ತಮ್ಮ ಇನ್‌ಸ್ಟಾಗ್ರಾಂ ಮೂಲಕ ತಿಳಿಸಿದ್ದಾರೆ.

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಆರೋಪದ ಮೇಲೆ ಜಾಮೀನಿನ ಮೇಲೆ ಹೊರಗಿದ್ದ ನಟ ದರ್ಶನ್‌ (Actor Darshan) ಮತ್ತೆ ಜೈಲು ಪಾಲಾಗಿದ್ದಾರೆ. ಹೈಕೋರ್ಟ್‌ ನೀಡಿದ್ದ ಜಾಮೀನನ್ನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್‌ ಮತ್ತೆ ಜೈಲಿಗೆ ಕಳಿಸುವಂತೆ ಆದೇಶ ನೀಡಿತ್ತು. ದರ್ಶನ್‌ ಇದೀಗ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇದರ ಮಧ್ಯೆ, ದರ್ಶನ್‌ ನಟನೆಯ ಬಹು ನಿರೀಕ್ಷಿತ ಚಿತ್ರ ಡೆವಿಲ್‌ (The Devil) ಸಿನಿಮಾದ ಇದ್ರೆ ನೆಮ್ಮದಿಯಾಗಿರ್ಬೇಕು ಎನ್ನುವ ಸಾಂಗ್‌ ಸ್ವಾತಂತ್ರ್ಯ ದಿನಾಚರಣೆಯ ದಿನವೇ ರಿಲೀಸ್‌ ಆಗಬೇಕಿತ್ತು. ಆದರೆ ದರ್ಶನ್‌ ಮತ್ತೆ ಜೈಲುಪಾಲಾದ್ದರಿಂದ ಚಿತ್ರತಂಡ ಅದನ್ನು ಮುಂದೂಡಿತ್ತು. ಆದರೆ ಸಾಂಗ್‌ ರಿಲೀಸ್‌ಗೆ ಇದೀಗ ದಿನಾಂಕ ಫಿಕ್ಸ್‌ ಆಗಿದೆ.

ಕೊನೆಗೂ ಇದ್ರೆ ನೆಮ್ಮದಿಯಾಗಿರ್ಬೇಕು ಸಾಂಗ್‌ ರಿಲೀಸ್‌ ಆಗುತ್ತಿದೆ. ಈ ಕುರಿತು ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರು ಸ್ವತಃ ಹಂಚಿಕೊಂಡಿದ್ದಾರೆ. ಇಂದು ಬೆಳಗ್ಗೆ 10.5ಕ್ಕೆ ಸರಿಗಮ ಯೂಟ್ಯೂಬ್‌ ಚಾನಲ್‌ನಲ್ಲಿ ಹಾಡು ಬಿಡುಗಡೆಯಾಗುತ್ತಿರುವುದಾಗಿ ವಿಜಯಲಕ್ಷ್ಮೀ ದರ್ಶನ್‌ ತಮ್ಮ ಇನ್‌ಸ್ಟಾಗ್ರಾಂ ಮೂಲಕ ತಿಳಿಸಿದ್ದಾರೆ. ದಿ ಡೆವಿಲ್‌ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಇದು ದರ್ಶನ್ ಅವರೊಂದಿಗಿನ ಅವರ ಮೊದಲ ಸಹಯೋಗವನ್ನು ಗುರುತಿಸುತ್ತದೆ. ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಅವರ ಪ್ರಭಾವಶಾಲಿ ಸಂಗೀತಗಳಿಗೆ ಹೆಸರುವಾಸಿಯಾದ ಅಜನೀಶ್, ಇದೀಗ ಡೆವಿಲ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಕುತೂಹಲಕಾರಿಯಾಗಿ, ಚಿತ್ರದ ಆಡಿಯೋ ಹಕ್ಕುಗಳನ್ನು ಯೋಜನೆಯ ಪ್ರಾರಂಭದ ಸಮಯದಲ್ಲಿಯೇ ಸರಿಗಮ ಮ್ಯೂಸಿಕ್ ಲೇಬಲ್ ಪಡೆದುಕೊಂಡಿದೆ.

ಈ ಸುದ್ದಿಯನ್ನೂ ಓದಿ: Actor Darshan: ಒಂದೇ ಜೈಲಿನಲ್ಲಿರುವ ಪ್ರಜ್ವಲ್‌, ದರ್ಶನ್‌ ಭೇಟಿಯಾಗ್ತಾರಾ? ಕಾನೂನು ಏನು ಹೇಳುತ್ತೆ?

ದರ್ಶನ್‌ ಪರ ವಿಜಯಲಕ್ಷ್ಮಿ ಅವರು ಚಿತ್ರದ ಪ್ರಚಾರ ನೋಡಿಕೊಳ್ಳುತ್ತಾರೆ. ಈ ಹಿಂದೆ ಪೋಸ್ಟ್‌ ಮೂಲಕ ಪ್ರಸಕ್ತ ವಿದ್ಯಮಾನ ಏನೇ ಇದ್ದರು, ನನ್ನ ನಂಬಿ‌ ಕನಸು ಕಂಡಿರುವ ನಿರ್ದೇಶಕರ ಹಾಗೂ ನನ್ನ ಮೇಲೆ ಕೊಟ್ಯಂತರ ಹಣ ಹೂಡಿರುವ ನಿರ್ಮಾಪಕರ ಬೆಂಬಲವಾಗಿ ನಿಲ್ಲಬೇಕಾದ್ದು ನನ್ನ ಆದ್ಯ ಕರ್ತವ್ಯ . ಹಾಗಾಗಿ ನನ್ನ ʼದಿ ಡೆವಿಲ್ʼ ಚಿತ್ರದ ಎಲ್ಲ ಕೆಲಸ ಕಾರ್ಯಗಳು ಯಾವುದೆ ಅಡೆತಡೆ ಇಲ್ಲದೆ ಸಾಗಲಿ ಎಂಬುದು ನನ್ನ ಆಶಯ. ಹಾಗಾಗಿ ಅದಕ್ಕೆ ನನ್ನ ಸಂಪೂರ್ಣಸಹಕಾರವಿದೆ ಎಂದು ಈ ಮೂಲಕ ತಿಳಿಸುತ್ತಿದ್ದೇನೆ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ ಡೆವಿಲ್‌ ಚಿತ್ರಕ್ಕೆ ಸಂಬಂಧಿಸಿದಂತೆ ಏನೇ ಅಪ್‌ಡೇಟ್‌ ಇದ್ದರೂ ಅದನ್ನು ಅಭಿಮಾನಿಗಳಿಗೆ ನಾನು ನೀಡುತ್ತೇನೆ ಎಂದು ಹೇಳಿದ್ದರು. ಇದೀಗ ಅವರೇ ಚಿತ್ರದ ಬೆಳವಣಿಗೆಯ ಕುರಿತು ತಿಳಿಸಿದ್ದಾರೆ.