Actor Darshan: ಒಂದೇ ಜೈಲಿನಲ್ಲಿರುವ ಪ್ರಜ್ವಲ್, ದರ್ಶನ್ ಭೇಟಿಯಾಗ್ತಾರಾ? ಕಾನೂನು ಏನು ಹೇಳುತ್ತೆ?
ಮಹಿಳೆ ಮೇಲೆ ನಿರಂತರ ಅತ್ಯಾಚಾರ ಪ್ರಕರಣದ ಅಪರಾಧಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಹಾಗೂ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಈ ಇಬ್ಬರೂ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇವರಿಬ್ಬರು ಜೈಲಿನಲ್ಲಿ ಭೇಟಿಯಾಗಬಹುದೇ ಎನ್ನುವ ಕುರಿತು ಕರ್ನಾಟಕ ಹೈಕೋರ್ಟ್‌ನ ವಕೀಲೆ ಸಹನಾ ಗೋಪಾಲ್ ಹೇಳಿರುವುದೇನು ? ಇಲ್ಲಿದೆ ಮಾಹಿತಿ.


ಬೆಂಗಳೂರು: ಅತ್ಯಾಚಾರ (physical abuse case) ಹಾಗೂ ಕೊಲೆ ಪ್ರಕರಣದಲ್ಲಿ (Renukaswamy Murder Case) ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ನಟ ದರ್ಶನ್ ಅವರಿಬ್ಬರೂ ಜೈಲಿನಲ್ಲಿ ಮುಖಾಮುಖಿಯಾಗಬಹುದು. ಅದು ಯಾವ ಕ್ಷಣ, ಹೇಗೆ ಎಂದು ಹೇಳಲು ಸಾಧ್ಯವಿಲ್ಲ. ಅವರಿಬ್ಬರೂ ಒಂದೇ ಜೈಲಿನಲ್ಲಿದ್ದಾರೆ. ಇಬ್ಬರು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಪರಸ್ಪರ ಭೇಟಿಯಾಗಿ ಮಾತನಾಡಬಹುದು ಎಂಬುದಾಗಿ ಕರ್ನಾಟಕ ಹೈಕೋರ್ಟ್‌ನ ವಕೀಲೆ ಸಹನಾ ಗೋಪಾಲ್ ತಿಳಿಸಿದ್ದಾರೆ.
ವಿಶ್ವವಾಣಿ ಜೊತೆ ಮಾತನಾಡಿರುವ ಇವರು, ಮಹಿಳೆ ಮೇಲೆ ನಿರಂತರ ಅತ್ಯಾಚಾರ ಪ್ರಕರಣದ ಅಪರಾಧಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಆರೋಪಿ ನಟ ದರ್ಶನ್ ಈ ಇಬ್ಬರೂ ಈಗ ಒಂದೇ ಜೈಲಿನಲ್ಲಿದ್ದಾರೆ. ಪರಪ್ಪನ ಅಗ್ರಹಾರದಲ್ಲಿರುವ ಇವರು ನಾಲ್ಕು ಗೋಡೆಗಳ ಮಧ್ಯೆ ಇದ್ದಾರೆ. ಹೀಗಾಗಿ ಯಾವಾಗ ಬೇಕಾದರೂ ಮುಖಾಮುಖಿಯಾಗಬಹುದು ಎಂದಿದ್ದಾರೆ.
ಪ್ರಜ್ವಲ್ ರೇವಣ್ಣ ಅವರಿಗೆ ಈಗಾಗಲೇ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಹೀಗಾಗಿ ಜೈಲಿನಲ್ಲಿ ಅವರಿಗೆ ಸೂಕ್ತ ಕೆಲಸವನ್ನು ನೀಡಲಾಗಿದೆ. ಆದರೆ ನಟ ದರ್ಶನ್ ಇನ್ನೂ ವಿಚಾರಣೆಯಲ್ಲಿದ್ದಾರೆ. ಅವರಿಗೆ ಸೂಕ್ತ ಶಿಕ್ಷೆ, ಕೆಲಸಗಳನ್ನು ವಹಿಸಲಾಗಿಲ್ಲ. ಅವರಿಬ್ಬರೂ ಸಮಯ ಸಿಕ್ಕಾಗ ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ಭೇಟಿ ಮಾಡಬಹುದು. ಪ್ರಜ್ವಲ್ ಅವರಿಗೆ ಜೈಲು ಉಡುಪನ್ನು ನೀಡಲಾಗಿದೆ. ಆದರೆ ದರ್ಶನ್ ಅವರಿಗೆ ನೀಡಿಲ್ಲ. ಅವರು ಸಿವಿಲ್ ಡ್ರೆಸ್ ನಲ್ಲಿ ಓಡಾಡಬಹುದು. ಯಾಕೆಂದರೆ ಅವರ ಶಿಕ್ಷೆ ಪ್ರಕಟವಾಗಿಲ್ಲ. ದರ್ಶನ್ ಅವರ ದಿನಚರಿ ಜೈಲಿನಲ್ಲಿ ಸಾಮಾನ್ಯವಾಗಿರುತ್ತದೆ. ಎಲ್ಲವೂ ನಾಲ್ಕು ಗೋಡೆಯ ಮಧ್ಯೆಯೇ ಇರುತ್ತದೆ ಎಂದರು.
ಇದನ್ನೂ ಓದಿ: Actor Darshan: ನಟ ದರ್ಶನ್ ಜೈಲಲ್ಲಿ ಹೇಗೆ ಇರಬೇಕಾಗುತ್ತದೆ? ಪೆರೋಲ್ ಮೇಲೆ ಬಂದು ನಟಿಸಬಹುದಾ?
ಜೈಲಿನಲ್ಲಿ ಕೈದಿಗಳಿಗೆ ಈಗ ಎಲ್ಲ ಸ್ವಾತಂತ್ರ್ಯವೂ ಇದೆ. ಬೇಕಾದ ಚಟುವಟಿಕೆಗಳನ್ನೂ ನಡೆಸಲಾಗುತ್ತದೆ. ಹೊರಗೆ ಇರುವಷ್ಟೇ ಸ್ವಾತಂತ್ರ್ಯ ಒಳಗೆ ಇದ್ದರೂ ಕೂಡ ಅಲ್ಲಿಂದ ಹೊರಬರಬೇಕು ಎನ್ನುವ ತುಡಿತ ಅವರಲ್ಲಿ ಇರುತ್ತದೆ ಎಂದು ಸಹನಾ ಹೇಳಿದರು.
ದರ್ಶನ್ ಅವರು ನ್ಯಾಯಾಲಯದ ಅನುಮತಿ ಪಡೆದು ಪರೋಲ್ ನಲ್ಲಿ ಒಂದು ದಿನದ ಮಟ್ಟಿಗೆ ಹೊರಗೆ ಬರಬಹುದು. ಅದು ಅವರ ಉಪಸ್ಥಿತಿ ಅನಿವಾರ್ಯ ಎಂದಾದರೆ ಮಾತ್ರ ಕಳುಹಿಸಲಾಗುತ್ತದೆ ಎಂದು ಸಹನಾ ಅವರು ತಿಳಿಸಿದ್ದಾರೆ.